AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs SRH Highlights IPL 2023: ಪ್ಲೇ ಆಫ್​ಗೆ ಎಂಟ್ರಿಕೊಟ್ಟ ಗುಜರಾತ್; ಟೂರ್ನಿಯಿಂದ ಹೊರಬಿದ್ದ ಹೈದರಾಬಾದ್

Gujarat Titans vs Sunrisers Hyderabad IPL 2023 Highlights in Kannada: ಇಂದು ಅಹಮದಾಬಾದ್​ನ ನಮೋ ಸ್ಟೇಡಿಯಂನಲ್ಲಿ ನಡೆದ 62ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಹೈದರಾಬಾದ್ ತಂಡವನ್ನು 34 ರನ್​​ಗಳಿಂದ ಮಣಿಸಿ ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ.

GT vs SRH Highlights IPL 2023: ಪ್ಲೇ ಆಫ್​ಗೆ ಎಂಟ್ರಿಕೊಟ್ಟ ಗುಜರಾತ್; ಟೂರ್ನಿಯಿಂದ ಹೊರಬಿದ್ದ ಹೈದರಾಬಾದ್
ಗುಜರಾತ್- ಹೈದರಾಬಾದ್ ಮುಖಾಮುಖಿ
ಪೃಥ್ವಿಶಂಕರ
|

Updated on:May 15, 2023 | 11:28 PM

Share

ಇಂದು ಅಹಮದಾಬಾದ್​ನ ನಮೋ ಸ್ಟೇಡಿಯಂನಲ್ಲಿ ನಡೆದ 62ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಹೈದರಾಬಾದ್ ತಂಡವನ್ನು 34 ರನ್​​ಗಳಿಂದ ಮಣಿಸಿ ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಈ ಪಂದ್ಯದಲ್ಲಿ ಹೈದರಾಬಾದ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿತು. ಇಂದು ಹೊಸ ಜೆರ್ಸಿಯೊಂದಿಗೆ ಬಂದ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತು. ತಂಡದ ಪರ ಶುಭ್​​ಮನ್ ಗಿಲ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿ ಮಿಂಚಿದರು. 189 ರನ್‌ಗಳ ಗುರಿ ಬೆನ್ನತ್ತಿದ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು.

LIVE NEWS & UPDATES

The liveblog has ended.
  • 15 May 2023 11:27 PM (IST)

    ಪ್ಲೇಆಫ್​ಗೆ ಗುಜರಾತ್

    ಕಳೆದ ಬಾರಿಯ ಚಾಂಪಿಯನ್ ಗುಜರಾತ್ ಟೈಟಾನ್ಸ್ ಈ ಬಾರಿಯೂ ಮೊದಲ ತಂಡವಾಗಿ ಪ್ಲೇಆಫ್ ಅನ್ನು ಖಚಿತಪಡಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 34 ರನ್‌ಗಳಿಂದ ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

  • 15 May 2023 11:23 PM (IST)

    ಭುವಿ ಔಟ್

    ಕ್ಲಾಸೆನ್ ಜೊತೆ ಹೋರಾಟ ನೀಡಿದ ಭುವಿ 19ನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು

    ಹೈದರಾಬಾದ್ ತಂಡದ ಪರ ಮಾರ್ಕರ್ಡೆ 12 ರನ್ ಹಾಗೂ ಫಾರೂಕಿ 1 ರನ್ ಗಳಿಸಿ ಆಡುತ್ತಿದ್ದಾರೆ.

    ಹೈದರಾಬಾದ್ ಗೆಲುವಿಗೆ 6 ಎಸೆತಗಳಲ್ಲಿ 42 ರನ್ ಅಗತ್ಯವಿದೆ.

    19 ಓವರ್‌ಗಳ ನಂತರ ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ – 147/9

  • 15 May 2023 11:17 PM (IST)

    18 ಓವರ್‌ ಅಂತ್ಯ

    ಹೈದರಾಬಾದ್ ತಂಡದ ಪರ ಭುವನೇಶ್ವರ್ 17 ಹಾಗೂ ಮಾರ್ಕಂಡೆ 1 ರನ್ ಗಳಿಸಿ ಆಡುತ್ತಿದ್ದಾರೆ. ಹೈದರಾಬಾದ್ ಗೆಲುವಿಗೆ 12 ಎಸೆತಗಳಲ್ಲಿ 53 ರನ್ ಅಗತ್ಯವಿದೆ. 18 ಓವರ್‌ಗಳ ನಂತರ ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ – 136/8

  • 15 May 2023 11:17 PM (IST)

    ಕ್ಲಾಸೆನ್ ಏಕಾಂಗಿ ಹೋರಾಟ ಅಂತ್ಯ

    ಹೆನ್ರಿಕ್ ಕ್ಲಾಸೆನ್ ಔಟಾಗಿದ್ದಾರೆ. ಮೊಹಮ್ಮದ್ ಶಮಿ ಬೌಲಿಂಗ್​​ನಲ್ಲಿ ಡೇವಿಡ್ ಮಿಲ್ಲರ್ ಕ್ಯಾಚ್ ನೀಡಿ ಕ್ಲಾಸೆನ್ ಔಟಾದರು. ಇದರೊಂದಿಗೆ ಹೈದರಾಬಾದ್ ತಂಡದ ಎಂಟನೇ ವಿಕೆಟ್ ಪತನಗೊಂಡಿದೆ.

    ಹೆನ್ರಿಕ್ ಕ್ಲಾಸೆನ್ – 64 ರನ್, 44 ಎಸೆತಗಳು 4×4 3×6

  • 15 May 2023 11:04 PM (IST)

    ತೆವಾಟಿಯಾ ದುಬಾರಿ

    16ನೇ ಓವರ್ ಬೌಲ್ ಮಾಡಿದ ತೇವಾಟಿಯಾ 12 ರನ್ ಬಿಟ್ಟುಕೊಟ್ಟರು

    ಈ ಓವರ್​ನಲ್ಲಿ 2 ಬೌಂಡರಿ ಬಿಟ್ಟುಕೊಟ್ಟರು

    16 ಓವರ್ ಅಂತ್ಯಕ್ಕೆ 123/7

  • 15 May 2023 11:02 PM (IST)

    ಕ್ಲಾಸೆನ್ ಅರ್ಧಶತಕ

    14ನೇ ಓವರ್​ನ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ಕ್ಲಾಸೆನ್ ಅರ್ಧಶತಕ ಪೂರೈಸಿದರು.

    ಕ್ಲಾಸೆನ್ ಏಕಾಂಗಿ ಹೋರಾಟ ಮುಂದುವರೆಸಿದ್ದು, ಹೈದರಾಬಾದ್ ಗೆಲುವು ಇವರ ಆಟದ ಮೇಲೆ ನಿಂತಿದೆ.

    14 ಓವರ್‌ಗಳ ನಂತರ ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ – 104/7

  • 15 May 2023 10:51 PM (IST)

    ಹೈದರಾಬಾದ್ ಶತಕ ಪೂರ್ಣ

    ರಶೀದ್ ಬೌಲ್ ಮಾಡಿದ 14ನೇ ಓವರ್​ನ 2ನೇ ಎಸೆತವನ್ನು ಭುವಿ ಬೌಂಡರಿಗಟ್ಟಿದರು. ಇದರೊಂದಿಗೆ ಹೈದರಾಬಾದ್ ಶತಕ ಪೂರೈಸಿದೆ.

  • 15 May 2023 10:50 PM (IST)

    ಕ್ಲಾಸೆನ್ ಸಿಕ್ಸ್

    ನೂರ್ ಅಹ್ಮದ್ ಬೌಲ್ ಮಾಡಿದ 13ನೇ ಓವರ್​ನ ಮೊದಲ ಎಸೆತದಲ್ಲಿ ಕ್ಲಾಸೆನ್ ಸ್ಕ್ವೇರ್ ಲೆಗ್​ನಲ್ಲಿ ಸಿಕ್ಸರ್​ಗಟ್ಟಿದರು. ಆ ನಂತರದ ಎಸೆತದಲ್ಲೂ ಬೌಂಡರಿ ಬಂತು.

  • 15 May 2023 10:44 PM (IST)

    11 ಓವರ್‌ ಅಂತ್ಯ

    ಹೈದರಾಬಾದ್ ತಂಡದ ಪರ ಭುವನೇಶ್ವರ್ 5 ಹಾಗೂ ಕ್ಲಾಸೆನ್ 39 ರನ್ ಗಳಿಸಿ ಆಡುತ್ತಿದ್ದಾರೆ. 11 ಓವರ್‌ಗಳ ನಂತರ ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ – 80/7

  • 15 May 2023 10:43 PM (IST)

    ಯಾನ್ಸನ್ ಔಟ್

    ಒಂಬತ್ತನೇ ಓವರ್‌ನ ಕೊನೆಯ ಎಸೆತದಲ್ಲಿ ಮಾರ್ಕೊ ಯಾನ್ಸನ್ ಔಟಾದರು. ಮೋಹಿತ್ ಶರ್ಮಾ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಪಾಂಡ್ಯ ಯಾನ್ಸನ್ ಕ್ಯಾಚ್ ಹಿಡಿದರು.

    ಮಾರ್ಕೊ ಜಾನ್ಸನ್ – 3 ರನ್, 6 ಎಸೆತಗಳು

  • 15 May 2023 10:20 PM (IST)

    ಮೋಹಿತ್ ಶರ್ಮಾಗೆ 2ನೇ ವಿಕೆಟ್‌

    ಮೋಹಿತ್ ಶರ್ಮಾ ಎಸೆದ ಮೊದಲ ಓವರ್​ನಲ್ಲೇ ಹೈದರಾಬಾದ್ 2 ವಿಕೆಟ್ ಕಳೆದುಕೊಂಡಿತ್ತು. ಸನ್ವೀರ್ 7 ರನ್ ಮತ್ತು ಅಬ್ದುಲ್ ಸಮಲ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 7 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ – 50/6

  • 15 May 2023 10:14 PM (IST)

    ಸನ್ವೀರ್ ಸಿಂಗ್ ಔಟ್

    ಸನ್ವೀರ್ ಸಿಂಗ್ ಔಟಾಗಿದ್ದಾರೆ. ಏಳನೇ ಓವರ್‌ನ ಮೊದಲ ಎಸೆತದಲ್ಲಿ ಸನ್ವೀರ್ ಸಿಂಗ್ ಕ್ಯಾಚ್ ನೀಡಿ ಔಟಾದರು.

    ಸನ್ವೀರ್ ಸಿಂಗ್ – 7 ರನ್, 6 ಎಸೆತಗಳು

  • 15 May 2023 10:07 PM (IST)

    ಪವರ್ ಪ್ಲೇ ಅಂತ್ಯ

    ಹೈದರಾಬಾದ್ ಪವರ್ ಪ್ಲೇ ಮುಗಿದಿದ್ದು, ಈ 6 ಓವರ್​ಗಳಲ್ಲಿ ತಂಡ 4 ವಿಕೆಟ್ ಕಳೆದುಕೊಂಡು 45 ರನ್ ಬಾರಿಸಿದೆ.

  • 15 May 2023 10:00 PM (IST)

    ಶಮಿಗೆ 3ನೇ ವಿಕೆಟ್

    ಹೈದರಾಬಾದ್ 4ನೇ ವಿಕೆಟ್ ಪತನವಾಗಿದೆ.

    ಶಮಿ ಬೌಲ್ ಮಾಡಿದ 5ನೇ ಓವರ್​ನ ಮೊದಲ ಎಸೆತದಲ್ಲಿ ಏಡೆನ್ ಮಾರ್ಕ್ರಾಮ್ ಕ್ಯಾಚಿತ್ತು ಔಟಾದರು.

    ಇದರೊಂದಿಗೆ ಶಮಿ ಈ ಪಂದ್ಯದಲ್ಲಿ 3ನೇ ವಿಕೆಟ್ ಕಬಳಿಸಿದ್ದಾರೆ.

  • 15 May 2023 09:55 PM (IST)

    ಕ್ಲಾಸೆನ್ ಫೋರ್

    ಯಶ್ ದಯಾಳ್ ಬೌಲ್ ಮಾಡಿದ 4ನೇ ಓವರ್​ನ ಮೊದಲ ಎಸೆತದಲ್ಲೇ ಕವರ್ಸ್​ನಲ್ಲಿ ಬೌಂಡರಿ ಬಾರಿಸಿದರು.

    4 ಓವರ್ ಅಂತ್ಯಕ್ಕೆ 29/3

  • 15 May 2023 09:52 PM (IST)

    ರಾಹುಲ್ ತ್ರಿಪಾಠಿ ಔಟ್

    ಮೂರನೇ ಓವರ್‌ನ ಮೊದಲ ಎಸೆತದಲ್ಲಿ ರಾಹುಲ್ ತ್ರಿಪಾಠಿ ಔಟಾದರು. ಮೊಹಮ್ಮದ್ ಶಮಿ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.

    ರಾಹುಲ್ ತ್ರಿಪಾಠಿ – 1 ರನ್, 2 ಎಸೆತಗಳು

  • 15 May 2023 09:52 PM (IST)

    ಅಭಿಷೇಕ್ ಶರ್ಮಾ ಔಟ್

    ಹೈದರಾಬಾದ್ ತಂಡದ ಎರಡನೇ ವಿಕೆಟ್ ಪತನಗೊಂಡಿದೆ. ಅಭಿಷೇಕ್ ಶರ್ಮಾ ಔಟಾಗಿದ್ದಾರೆ. ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರನ್ನು ಯಶ್ ದಯಾಳ್ ಔಟ್ ಮಾಡಿದರು.

    ಅಭಿಷೇಕ್ ಶರ್ಮಾ – 5 ರನ್, 5 ಎಸೆತಗಳು, 1×4

  • 15 May 2023 09:50 PM (IST)

    ಅನ್ಮೋಲ್‌ಪ್ರೀತ್ ಸಿಂಗ್ ಔಟ್

    ಹೈದರಾಬಾದ್‌ಗೆ ಉತ್ತಮ ಆರಂಭ ಸಿಕ್ಕಿಲ್ಲ. ಮೊಹಮ್ಮದ್ ಶಮಿ ಮೊದಲ ಓವರ್‌ನ ಐದನೇ ಎಸೆತದಲ್ಲಿ ಅನ್ಮೋಲ್‌ಪ್ರೀತ್ ಸಿಂಗ್ ಅವರನ್ನು ಔಟ್ ಮಾಡಿದರು. ಎರಡನೇ ಎಸೆತದಲ್ಲಿ ಅನ್ಮೋಲ್‌ಪ್ರೀತ್‌ ಕ್ಯಾಚ್‌ ಕೂಡ ಕೈಬಿಡಲಾಯಿತು.

  • 15 May 2023 09:30 PM (IST)

    189 ರನ್ ಟಾರ್ಗೆಟ್

    20 ಓವರ್‌ಗಳ ಅಂತ್ಯಕ್ಕೆ ಗುಜರಾತ್ ಟೈಟಾನ್ಸ್ 189 ರನ್‌ಗಳ ಗುರಿ ನೀಡಿದೆ. ತಂಡದ ಪರ ಗಿಲ್ ಚೊಚ್ಚಲ ಶತಕ ಸಿಡಿಸಿದರೆ, ಸುದರ್ಶನ್ 47 ರನ್​ಗಳ ಕೊಡುಗೆ ನೀಡಿದರು.

  • 15 May 2023 09:22 PM (IST)

    ಭುವಿ ಬ್ರಿಲಿಯಂಟ್ ಓವರ್

    ಕೊನೆಯ ಓವರ್ ಬೌಲ್ ಮಾಡಿದ ಭುವನೇಶ್ವರ್ ಕುಮಾರ್ ಅದ್ಭುತವಾಗಿ ಬೌಲಿಂಗ್ ಮಾಡಿದರು. ಕೊನೆಯ ಓವರ್​ನಲ್ಲಿ ನಾಲ್ಕು ವಿಕೆಟ್ ಕಬಳಿಸಿದರು.ಆದರೆ ಹ್ಯಾಟ್ರಿಕ್ ಮಿಸ್ ಮಾಡಿಕೊಂಡರು. ಈ ಓವರ್‌ನಲ್ಲಿ ಭುವನೇಶ್ವರ್ ಗಿಲ್, ರಶೀದ್ ಖಾನ್ ಮತ್ತು ಮೊಹಮ್ಮದ್ ಶಮಿ ಅವರನ್ನು ಔಟ್ ಮಾಡಿದರೆ, ನೂರ್ ಅಹ್ಮದ್ ರನೌಟ್ ಆದರು.

  • 15 May 2023 09:20 PM (IST)

    ಗಿಲ್ ಔಟ್

    ಶುಭ್​ಮನ್ ಗಿಲ್ ಔಟಾಗಿದ್ದಾರೆ. ಭುವಿ ಎಸೆದ 20ನೇ ಓವರ್‌ನ ಮೊದಲ ಎಸೆತದಲ್ಲಿ ಅಬ್ದುಲ್ ಸಮದ್​ಗೆ ಗಿಲ್ ಕ್ಯಾಚ್ ನೀಡಿದರು.

    ಶುಭಮನ್ ಗಿಲ್ – 101 ರನ್, 58 ಎಸೆತಗಳು 13×4 1×6

  • 15 May 2023 09:13 PM (IST)

    ಗಿಲ್ ಶತಕ

    ಶುಭ್​ಮನ್ ಗಿಲ್ 19ನೇ ಓವರ್​ನ ಮೂರನೇ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ಶತಕ ಪೂರೈಸಿದರು. ಇದು ಐಪಿಎಲ್‌ನಲ್ಲಿ ಅವರ ಮೊದಲ ಶತಕವಾಗಿದೆ. ಅದೇ ಸಮಯದಲ್ಲಿ ಗುಜರಾತ್ ಟೈಟಾನ್ಸ್‌ ಪರ ಐಪಿಎಲ್‌ನಲ್ಲಿ ಇದು ಮೊದಲ ಶತಕವಾಗಿದೆ.

  • 15 May 2023 09:08 PM (IST)

    ತೆವಾಟಿಯಾ ಔಟ್

    ರಾಹುಲ್ ತೆವಾಟಿಯಾ ಔಟಾಗಿದ್ದಾರೆ. ಫಾರೂಕಿ ಬೌಲಿಂಗ್​​ ಮಾಡಿದ 18ನೇ ಓವರ್‌ನ ಮೂರನೇ ಎಸೆತದಲ್ಲಿ ಮಾರ್ಕೊ ಯಾನ್ಸನ್​ಗೆ ಕ್ಯಾಚ್ ನೀಡಿದರು.

  • 15 May 2023 09:01 PM (IST)

    ಮಿಲ್ಲರ್ ಔಟ್

    ಗುಜರಾತ್ ಟೈಟಾನ್ಸ್ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಡೇವಿಡ್ ಮಿಲ್ಲರ್ ಔಟ್ ಆಗಿದ್ದಾರೆ. 17ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮಿಲ್ಲರ್ ಲಾಂಗ್ ಆನ್ ಬೌಂಡರಿಯಲ್ಲಿ ಮಾರ್ಕ್ರಾಮ್ ಅವರಿಗೆ ಕ್ಯಾಚ್ ನೀಡಿದರು.

  • 15 May 2023 08:54 PM (IST)

    ಪಾಂಡ್ಯ ಔಟ್

    ಹಾರ್ದಿಕ್ ಪಾಂಡ್ಯ ಔಟಾಗಿದ್ದಾರೆ. ಭುವನೇಶ್ವರ್ ಕುಮಾರ್ ಓವರ್​ನಲ್ಲಿ ಪಾಂಡ್ಯ, ರಾಹುಲ್ ತ್ರಿಪಾಠಿ ಅವರಿಗೆ ಕ್ಯಾಚ್ ನೀಡಿದರು. ಇದರೊಂದಿಗೆ ಗುಜರಾತ್ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. 16ನೇ ಓವರ್‌ನ ಎರಡನೇ ಎಸೆತದಲ್ಲಿ ಈ ವಿಕೆಟ್ ಉರುಳಿತು.

  • 15 May 2023 08:49 PM (IST)

    ಸುದರ್ಶನ್ ಔಟ್

    ಗುಜರಾತ್ ನ ಎರಡನೇ ವಿಕೆಟ್ ಪತನಗೊಂಡಿದೆ. ಸಾಯಿ ಸುದರ್ಶನ್ ತಮ್ಮ ಅರ್ಧಶತಕವನ್ನು ತಪ್ಪಿಸಿಕೊಂಡಿದ್ದಾರೆ. 15ನೇ ಓವರ್‌ನ ಮೊದಲ ಎಸೆತದಲ್ಲಿ ಅವರ ವಿಕೆಟ್ ಪತನವಾಯಿತು.

  • 15 May 2023 08:33 PM (IST)

    ಶತಕದತ್ತ ಗಿಲ್

    12ನೇ ಓವರ್​ನಲ್ಲಿ ಬೌಂಡರಿಗಳ ಮಳೆ ಸುರಿಯಿತು

    ಅಭಿಷೇಕ್ ಎಸೆದ 3ನೇ ಎಸೆತವನ್ನು ಡೀಪ್ ಸ್ಕ್ವೇರ್​ ಲೆಗ್​ನಲ್ಲಿ ಸಿಕ್ಸರ್​ಗಟ್ಟಿದ ಗಿಲ್, 5ನೇ ಎಸೆತವನ್ನು ಬೌಂಡರಿ ಬಾರಿಸಿದರು

    12 ಓವರ್ ಅಂತ್ಯಕ್ಕೆ 131/1

  • 15 May 2023 08:29 PM (IST)

    ಯಾನ್ಸೆನ್ ಮತ್ತೆ ದುಬಾರಿ

    ಯಾನ್ಸೆನ್ ಬೌಲ್ ಮಾಡಿದ 11ನೇ ಓವರ್​ನಲ್ಲಿ 14 ರನ್ ಬಂದವು

    ನೋಬಾಲ್​ನ ಪ್ರಯೋಜನ ಪಡೆದ ಸುದರ್ಶನ್ ಸಿಕ್ಸರ್ ಬಾರಿಸಿದರೆ, ಫ್ರೀ ಹಿಟ್​ ಬಾಲ್​​ನಲ್ಲಿ ಬೌಂಡರಿ ಬಾರಿಸಿದರು

    11 ಓವರ್ ಅಂತ್ಯಕ್ಕೆ 118/1

  • 15 May 2023 08:22 PM (IST)

    ಜಿಟಿ ಶತಕ ಪೂರ್ಣ

    10ನೇ ಓವರ್​ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಸುದರ್ಶನ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು

    10 ಓವರ್ ಅಂತ್ಯಕ್ಕೆ 103/1

  • 15 May 2023 08:10 PM (IST)

    ಅರ್ಧಶತಕ ಚಚ್ಚಿದ ಗಿಲ್

    ಮಾರ್ಕಂಡೆ ಬೌಲ್ ಮಾಡಿದ 8ನೇ ಓವರ್​ನ ಮೊದಲ ಎರಡು ಎಸೆತಗಳನ್ನು ಬೌಂಡರಿಗಟ್ಟಿದ ಗಿಲ್, ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.

  • 15 May 2023 08:06 PM (IST)

    ಮಾರ್ಕ್ರಾಮ್ ದುಬಾರಿ

    ಮಾರ್ಕ್ರಾಮ್ ಬೌಲ್ ಮಾಡಿದ 7ನೇ ಓವರ್​ನಲ್ಲಿ 13 ರನ್ ಬಂದವು

    ಈ ಓವರ್​ನಲ್ಲಿ ಗಿಲ್ 2 ಫೋರ್ ಹೊಡೆದರು.

    ಇದರೊಂದಿಗೆ ಗಿಲ್ ಅರ್ಧಶತಕದ ಸನಿಹಕ್ಕೂ ಬಂದಿದ್ದಾರೆ.

  • 15 May 2023 08:04 PM (IST)

    ಪವರ್ ಪ್ಲೇ ಅಂತ್ಯ

    ನಟರಾಜನ್ ಬೌಲ್ ಮಾಡಿದ 6ನೇ ಓವರ್​ನಲ್ಲಿ 2 ಬೌಂಡರಿ ಬಂದವು

    6 ಓವರ್ ಅಂತ್ಯಕ್ಕೆ 65/1

  • 15 May 2023 07:53 PM (IST)

    ಹ್ಯಾಟ್ರಿಕ್ ಫೋರ್, ಜಿಟಿ 50 ರನ್ ಪೂರ್ಣ

    ಫರೂಕಿ ಬೌಲ್ ಮಾಡಿದ 4ನೇ ಓವರ್​ನಲ್ಲಿ ಬರೋಬ್ಬರಿ 4 ಬೌಂಡರಿ ಬಂದವು.

    ಕೊನೆಯ 4 ಎಸೆತದಲ್ಲಿ ಗಿಲ್ 4 ಫೋರ್ ಬಾರಿಸಿದರು.

    ಇದರೊಂದಿಗೆ ಗುಜರಾತ್ ತನ್ನ ಅರ್ಧಶತಕ ಪೂರೈಸಿತು

    ಈ ಓವರ್​ನಲ್ಲಿ 18 ರನ್ ಬಂದವು.

  • 15 May 2023 07:47 PM (IST)

    ಭುವಿ ದುಬಾರಿ

    ಭುವಿ ಬೌಲ್ ಮಾಡಿದ 3ನೇ ಓವರ್​ನಲ್ಲಿ 15 ರನ್ ಬಂದವು

    ಈ ಓವರ್​ನಲ್ಲಿ ಗಿಲ್ 1 ಬೌಂಡರಿ ಹೊಡೆದರೆ, ಸುದರ್ಶನ್ ಕೂಡ 2 ಫೋರ್ ಬಾರಿಸಿದರು

    ಜಿಟಿ 32/1

  • 15 May 2023 07:43 PM (IST)

    ಸುದರ್ಶನ್ ಬೌಂಡರಿ

    ಯಾನ್ಸೆನ್ ಬೌಲ್ ಮಾಡಿದ 2ನೇ ಓವರ್​ನ 3ನೇ ಎಸೆತವನ್ನು ಸುದರ್ಶನ್ ಬೌಂಡರಿಗಟ್ಟಿದರು.

    2ನೇ ಓವರ್​ನಲ್ಲಿ ಒಟ್ಟು 11 ರನ್ ಬಂದವು

    ಗುಜರಾತ್ 17/1

  • 15 May 2023 07:35 PM (IST)

    ಶೂನ್ಯಕ್ಕೆ ಸಹಾ ಔಟ್

    ಭುವಿ ಬೌಲ್ ಮಾಡಿದ ಮೊದಲ ಓವರ್​ನ 3ನೇ ಎಸೆತದಲ್ಲಿ ಆರಂಭಿಕ ಸಹಾ ಯಾವುದೇ ರನ್ ಗಳಿಸದೆ ಪೆವಲಿಯನ್​​ಗೆ ತೆರಳಿದ್ದಾರೆ.

  • 15 May 2023 07:18 PM (IST)

    ಗುಜರಾತ್ ಟೈಟಾನ್ಸ್

    ಶುಭ್​ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ದಾಸುನ್ ಶನಕ, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್

  • 15 May 2023 07:17 PM (IST)

    ಸನ್‌ರೈಸರ್ಸ್ ಹೈದರಾಬಾದ್

    ಏಡೆನ್ ಮಾರ್ಕ್ರಾಮ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಸನ್ವೀರ್, ಮಾರ್ಕೊ ಯಾನ್ಸನ್, ಮಯಾಂಕ್ ಮಾರ್ಕಾಂಡೆ, ಭುವನೇಶ್ವರ್ ಕುಮಾರ್, ಫಜಲ್‌ಹಕ್ ಫಾರೂಕಿ, ಟಿ.ನಟರಾಜನ್

  • 15 May 2023 07:03 PM (IST)

    ಪ್ಲೇಆಫ್‌ ಮೇಲೆ ಗುಜರಾತ್‌ ಕಣ್ಣು

    ಗುಜರಾತ್ ಟೈಟಾನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದರೆ ತನ್ನ ಪ್ಲೇಆಫ್ ಟಿಕೆಟ್ ಅನ್ನು ಖಚಿತಪಡಿಸಿಕೊಳ್ಳಲಿದೆ.

  • 15 May 2023 07:03 PM (IST)

    ಟಾಸ್ ಗೆದ್ದ ಹೈದರಾಬಾದ್

    ಟಾಸ್ ಗೆದ್ದ ಹೈದರಾಬಾದ್ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - May 15,2023 7:02 PM

Follow Us
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್