ಇಂದು ಭಾರತ ಕ್ರಿಕೆಟ್ನ ‘ಟರ್ಬನೇಟರ್’ ಹರ್ಭಜನ್ ಸಿಂಗ್ (Harbhajan Singh) ಅವರ ಜನ್ಮದಿನ. ಭಾರತದ ಮಾಜಿ ಕ್ರಿಕೆಟಿಗ 42 ನೇ ವಯಸ್ಸಿಗೆ ಹೆಜ್ಜೆ ಹಾಕಿದ್ದಾರೆ. ಅವರ 23 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ, ಹರ್ಭಜನ್ ಅವರ ಹೆಸರನ್ನು 2007 ರ T20 ವಿಶ್ವಕಪ್ ಮತ್ತು 2011 ರ ODI ವಿಶ್ವಕಪ್ ಗೆದ್ದ ತಂಡದಲ್ಲಿ ನೆನಪಿಸಿಕೊಳ್ಳಲಾಗುತ್ತದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ (Eden Gardens) ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದೆದುರು ಹರ್ಭಜನ್ 21 ನೇ ವಯಸ್ಸಿನಲ್ಲಿ ಹ್ಯಾಟ್ರಿಕ್ ಗಳಿಸಿದರು. ಈಡನ್ನಲ್ಲಿ ನಡೆದ ಆ ಟೆಸ್ಟ್ ಪಂದ್ಯದಲ್ಲಿ ಭಜ್ಜಿ ಮೊದಲ ಇನ್ನಿಂಗ್ಸ್ನಲ್ಲಿ ಸತತ ರಿಕಿ ಪಾಂಟಿಂಗ್ (7), ಆಡಮ್ ಗಿಲ್ಕ್ರಿಸ್ಟ್ (0) ಮತ್ತು ಶೇನ್ ವಾರ್ನ್ (0) (Ricky Ponting, Adam Gilchrist and Shane Warne) ಅವರನ್ನು ಔಟ್ ಮಾಡಿದರು. ಅದು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಮೊದಲ ಹ್ಯಾಟ್ರಿಕ್ ಆಗಿತ್ತು. ಆದರೆ, ಆ ಪಂದ್ಯದಲ್ಲಿ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡ ಫಾಲೋ ಆನ್ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಗೆಲುವು ಸಾಧಿಸಿತ್ತು. ಆ ಗೆಲುವು ಭಾರತಕ್ಕೆ ಐತಿಹಾಸಿಕ ಗೆಲುವಾಗಿದ್ದು, ಆ ಟೆಸ್ಟ್ ಸರಣಿಯ 3 ಪಂದ್ಯಗಳಲ್ಲಿ ಭಜ್ಜಿ 32 ವಿಕೆಟ್ಗಳನ್ನು ಪಡೆದರು.
ಹರ್ಭಜನ್, ಮಾರ್ಚ್ 1997 ರಲ್ಲಿ ಬೆಂಗಳೂರಿನಲ್ಲಿ ಟೆಸ್ಟ್ಗೆ ಪಾದಾರ್ಪಣೆ ಮಾಡಿದರು, ಅದೇ ಆಸ್ಟ್ರೇಲಿಯಾದ ವಿರುದ್ಧ ಹರ್ಭಜನ್ ಮೊದಲ ಬಾರಿಗೆ ಭಾರತದ ಪರ ಟೆಸ್ಟ್ನಲ್ಲಿ ಹ್ಯಾಟ್ರಿಕ್ ಗಳಿಸಿದರು. ಚೊಚ್ಚಲ ಟೆಸ್ಟ್ನಲ್ಲೇ 2 ವಿಕೆಟ್ ಕಬಳಿಸಿದರು. ತಮ್ಮ 23 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ 103 ಟೆಸ್ಟ್ಗಳಲ್ಲಿ 418 ವಿಕೆಟ್ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ 15-218. ಜೊತೆಗೆ 25 ಬಾರಿ 5 ವಿಕೆಟ್ ಪಡೆದಿದ್ದಾರೆ. ಮತ್ತು ಟೆಸ್ಟ್ನಲ್ಲಿ 5 ಬಾರಿ 10 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲ, ಟೆಸ್ಟ್ನಲ್ಲಿ 2 ಶತಕ ಕೂಡ ಸಿಡಿಸಿದ್ದಾರೆ.
ಏಪ್ರಿಲ್ 1997 ರಲ್ಲಿ ಶಾರ್ಜಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಹರ್ಭಜನ್ ತಮ್ಮ ODI ಚೊಚ್ಚಲ ಪಂದ್ಯವನ್ನು ಮಾಡಿದರು. ಅವರು 238 ODIಗಳಲ್ಲಿ 269 ವಿಕೆಟ್ಗಳನ್ನು ಪಡೆದಿದ್ದಾರೆ. ODIನಲ್ಲಿ ಅವರ ಅತ್ಯುತ್ತಮ ಬೌಲಿಂಗ್ 31 ರನ್ಗೆ 5 ವಿಕೆಟ್ ಪಡೆದಿರುವುದಾಗಿದೆ. 1997 ರಲ್ಲಿ ತಮ್ಮ ಟೆಸ್ಟ್ ಮತ್ತು ODI ಗೆ ಪಾದಾರ್ಪಣೆ ಮಾಡಿದರೂ, ಭಜ್ಜಿ 2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್ಬರ್ಗ್ನಲ್ಲಿ ದೇಶಕ್ಕಾಗಿ ಟ್ವೆಂಟಿ 20 ಗೆ ಪಾದಾರ್ಪಣೆ ಮಾಡಿದರು. 26 ಅಂತರಾಷ್ಟ್ರೀಯ ಟ್ವೆಂಟಿ-20 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದಾರೆ.
ದೇಶದ ಜೆರ್ಸಿ ಹೊರತಾಗಿ 2008ರಿಂದ 2021ರ ವರೆಗೆ ಐಪಿಎಲ್ನಲ್ಲಿ 183 ಪಂದ್ಯಗಳಲ್ಲಿ ಆಡಿದ್ದು, 150 ವಿಕೆಟ್ ಪಡೆದಿದ್ದಾರೆ. ಕಳೆದ ಐಪಿಎಲ್ನಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಯಲ್ಲಿದ್ದರು.