ಕಳೆದ ಕೆಲವು ತಿಂಗಳುಗಳು ಹಾರ್ದಿಕ್ ಪಾಂಡ್ಯಗೆ (Hardik Pandya) ಅದ್ಭುತವಾಗಿದೆ. ಹಲವು ದಿನಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಭಾರತದ ಡ್ಯಾಶಿಂಗ್ ಆಲ್‌ರೌಂಡರ್ ಮೈದಾನಕ್ಕೆ ಮರಳಿದ್ದಲ್ಲದೆ, ಐಪಿಎಲ್‌ನಲ್ಲಿ ಹೊಸ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಜೊತೆಗೆ ಅವರ ನಾಯಕತ್ವದಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದರು. ಅಂದಿನಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ (Indian cricket team) ಮರಳಿದ್ದ ಪಾಂಡ್ಯ ಅದ್ಭುತ ಆಟ ಪ್ರದರ್ಶಿಸಿದ್ದರು. ಜೊತೆಗೆ ನಾಯಕತ್ವದ ಅವಕಾಶವನ್ನೂ ಪಡೆದುಕೊಂಡಿದ್ದರು. ಹೀಗಿರುವಾಗ ಇನ್ನೇನು ಒಂದು ವರ್ಷದಲ್ಲಿ ಹಾರ್ದಿಕ್ ಪಾಂಡ್ಯ ನಿವೃತ್ತಿ ಹೊಂದಲಿದ್ದಾರೆ ಎಂದು ಯಾರಾದರೂ ಹೇಳಿದರೆ ಅಚ್ಚರಿಯಾಗುವುದು ಸಹಜ. ಆದರೆ ಇದು ಸಂಭವಿಸಬಹುದು ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಅಭಿಪ್ರಾಯಪಟ್ಟಿದ್ದಾರೆ.
ಏಕದಿನ ಪಂದ್ಯಕ್ಕೆ ಹಾರ್ದಿಕ್ ನಿವೃತ್ತಿ!
ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ಭಾರತದ ಮಾಜಿ ಕೋಚ್ ಶಾಸ್ತ್ರಿ ಈ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಈ ಪಂದ್ಯದಲ್ಲಿ ಸ್ಕೈ ಸ್ಪೋರ್ಟ್ಸ್ ಪರವಾಗಿ ಪ್ರತಿಕ್ರಿಯಿಸಿದ ಶಾಸ್ತ್ರಿ, ODI ಸ್ವರೂಪದ ಭವಿಷ್ಯದ ಚರ್ಚೆಗೆ ಪ್ರತಿಕ್ರಿಯಿಸಿದರು ಮತ್ತು ಹಾರ್ದಿಕ್ 2023 ರ ವಿಶ್ವಕಪ್ ನಂತರ ODI ಕ್ರಿಕೆಟ್‌ನಿಂದ ನಿವೃತ್ತರಾಗಬಹುದು ಎಂದು ಹೇಳಿದರು. ಜೊತೆಗೆ ಯಾವ ಮಾದರಿಯಲ್ಲಿ ಆಡಬೇಕೆಂದು ಆಯ್ಕೆ ಮಾಡುವ ಆಟಗಾರರು ಈಗಾಗಲೇ ನಿಮ್ಮ ಮುಂದೆ ಇದ್ದಾರೆ. ಇದರಲ್ಲಿ ನೀವು ಹಾರ್ದಿಕ್ ಪಾಂಡ್ಯ ಅವರನ್ನೇ ತೆಗೆದುಕೊಳ್ಳಿ. ಅವರು ಟಿ 20 ಕ್ರಿಕೆಟ್ ಅನ್ನು ಹೆಚ್ಚು ಆಡಲು ಬಯಸುತ್ತಾರೆ. ಹೀಗಾಗಿ ಏಕದಿನ ಕ್ರಿಕೆಟ್‌ಗೆ ಹಾರ್ದಿಕ್ ಗುಡ್ಬೈ ಹೇಳಬಹುದು ಎಂದಿದ್ದಾರೆ.
ರವಿಶಾಸ್ತ್ರಿ ಹೇಳಿದ್ದೇನು?
ಮುಂದಿನ ವರ್ಷ ಭಾರತದಲ್ಲಿ ವಿಶ್ವಕಪ್ ಇರುವುದರಿಂದ ಹಾರ್ದಿಕ್ 50 ಓವರ್‌ಗಳ ಕ್ರಿಕೆಟ್ ಆಡಲಿದ್ದಾರೆ. ಅದರ ನಂತರ ಪಾಂಡ್ಯ ಏಕದಿನ ಕ್ರಿಕೆಟ್‌ನಿಂದ ಬೇರ್ಪಡುವುದನ್ನು ನೀವು ನೋಡಬಹುದು. ಇತರ ಆಟಗಾರರ ವಿಷಯದಲ್ಲೂ ಇದು ಸಂಭವಿಸುವುದನ್ನು ನೀವು ನೋಡಬಹುದು ಎಂದಿದ್ದಾರೆ.
ಹಾರ್ದಿಕ್ ಪುನರಾಗಮನ
ಕಳೆದ 3-4 ವರ್ಷಗಳಿಂದ ಗಾಯದ ಸಮಸ್ಯೆಗೆ ಸಿಲುಕಿರುವ ಹಾರ್ದಿಕ್ ಪಾಂಡ್ಯ ಹೆಚ್ಚು ಕ್ರಿಕೆಟ್ ಆಡಿರಲಿಲ್ಲ. 2018 ರವರೆಗೆ, ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಿದ್ದರು, ಆದರೆ ನಂತರ ಅವರು ODI ಮತ್ತು T20 ಅನ್ನು ಮಾತ್ರ ಆಡುತ್ತಿದ್ದರು. ಇದರಲ್ಲೂ ಕಳೆದ ಕೆಲವು ತಿಂಗಳುಗಳಲ್ಲಿ ಹೆಚ್ಚು ಟಿ20 ಕ್ರಿಕೆಟ್ ಆಡಿದ್ದಾರೆ. ಆದರೆ, ಸದ್ಯಕ್ಕೆ ಟಿ20 ವಿಶ್ವಕಪ್ ಮೇಲೆ ಮಾತ್ರ ತನ್ನ ಗಮನವಿದ್ದು, ಅದಕ್ಕಾಗಿಯೇ ಆದ್ಯತೆ ನೀಡುತ್ತಿದ್ದೇನೆ ಎಂದು ಹಾರ್ದಿಕ್ ಸ್ಪಷ್ಟವಾಗಿ ಹೇಳಿದ್ದಾರೆ.
ಸ್ಟೋಕ್ಸ್ ನಿವೃತ್ತಿ ಚರ್ಚೆಗೆ ನಾಂದಿ
ವಾಸ್ತವವಾಗಿ, ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರ ನಿರ್ಧಾರವು ಈ ವಾರದುದ್ದಕ್ಕೂ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಇಂಗ್ಲೆಂಡ್‌ನ ಟೆಸ್ಟ್ ನಾಯಕ ಸ್ಟೋಕ್ಸ್ ಜುಲೈ 18 ಸೋಮವಾರದಂದು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇಂತಹ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಮೂರು ಮಾದರಿಗಳಲ್ಲಿ ನಿರಂತರವಾಗಿ ಆಡುವುದು ಕಷ್ಟ ಎಂದು ಸ್ಟೋಕ್ಸ್ ಹೇಳಿದ್ದರು. ಅಂದಿನಿಂದ, ಇತರ ಆಟಗಾರರು ಸಹ ಈ ಮಾರ್ಗವನ್ನು ಅನುಸರಿಸಲು ಮುಂದೆಬರಲಿದ್ದಾರೆ. ಅಂದಿನಿಂದ ಏಕದಿನ ಸ್ವರೂಪದ ಭವಿಷ್ಯದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ.
Published On - 9:15 pm, Sat, 23 July 22