BCCI: ವಯಸ್ಸು ಪತ್ತೆ ಹಚ್ಚಲು ಹೊಸ ಸಾಫ್ಟ್‌ವೇರ್ ಬಳಕೆಗೆ ಬಿಸಿಸಿಐ ಪ್ಲಾನ್; ತಗಲುವ ವೆಚ್ಚವೂ ತೀರ ಕಡಿಮೆ

BCCI: ವಯೋಮಾನದ ವಂಚನೆ ಪತ್ತೆ ಹಚ್ಚಲು ಬಿಸಿಸಿಐ ಹೊಸ ಸಾಫ್ಟ್​ವೇರ್ ಅನ್ನು ಪ್ರಾಯೋಗಿಕವಾಗಿ ಬಳಸಲು ಮುಂದಾಗಿದೆ. ಈ ಸಾಫ್ಟ್‌ವೇರ್ ಅನ್ನು ಅಸ್ತಿತ್ವದಲ್ಲಿರುವ TW3 ವಿಧಾನದೊಂದಿಗೆ 80 ಪ್ರತಿಶತದಷ್ಟು ವೆಚ್ಚವನ್ನು ಉಳಿಸುವ ಗುರಿಯೊಂದಿಗೆ ಬಳಸಲಾಗುತ್ತದೆ.

BCCI: ವಯಸ್ಸು ಪತ್ತೆ ಹಚ್ಚಲು ಹೊಸ ಸಾಫ್ಟ್‌ವೇರ್ ಬಳಕೆಗೆ ಬಿಸಿಸಿಐ ಪ್ಲಾನ್; ತಗಲುವ ವೆಚ್ಚವೂ ತೀರ ಕಡಿಮೆ
BCCI
Follow us
TV9 Web
| Updated By: ಪೃಥ್ವಿಶಂಕರ

Updated on:Jul 23, 2022 | 8:01 PM

ವಯೋಮಾನದ ವಂಚನೆ ಪತ್ತೆ ಹಚ್ಚಲು ಬಿಸಿಸಿಐ (BCCI) ಹೊಸ ಸಾಫ್ಟ್​ವೇರ್ ಅನ್ನು ಪ್ರಾಯೋಗಿಕವಾಗಿ ಬಳಸಲು ಮುಂದಾಗಿದೆ. ಈ ಸಾಫ್ಟ್‌ವೇರ್ ಅನ್ನು ಅಸ್ತಿತ್ವದಲ್ಲಿರುವ TW3 ವಿಧಾನದೊಂದಿಗೆ 80 ಪ್ರತಿಶತದಷ್ಟು ವೆಚ್ಚವನ್ನು ಉಳಿಸುವ ಗುರಿಯೊಂದಿಗೆ ಬಳಸಲಾಗುತ್ತದೆ. ಬಿಸಿಸಿಐ ಪ್ರಸ್ತುತ TW3 ವಿಧಾನವನ್ನು ಬಳಸುತ್ತದೆ. ಈ ವಿಧಾನವು ವಯಸ್ಸನ್ನು ನಿರ್ಧರಿಸಲು ಎಡಗೈ ಮತ್ತು ಮಣಿಕಟ್ಟಿನ ಎಕ್ಸ್-ರೇ ಅನ್ನು ಆಧರಿಸಿದೆ.

ಪ್ರಸ್ತುತ ವಿಧಾನದಲ್ಲಿ ಮೂಳೆ ಪರೀಕ್ಷೆಗೆ ರೂ 2400 ವೆಚ್ಚವಾಗುತ್ತದೆ. ಜೊತೆಗೆ ಈ ಪರೀಕ್ಷೆಯ ಫಲಿತಾಂಶಗಳನ್ನು ನೀಡಲು ಸುಮಾರು 3-4 ದಿನಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ತಗಲುವ ವೆಚ್ಚ ಮತ್ತು ಕಾಲವಕಾಶವನ್ನು ಕಡಿಮೆಗೊಳಿಸುವ ಸಲುವಾಗಿ ಬಿಸಿಸಿಐ ಈ ತಂತ್ರಾಂಶ ಬಳಸುತ್ತಿದೆ. ಈ ಬೋನ್ ಎಕ್ಸ್‌ಪರ್ಟ್ ಸಾಫ್ಟ್‌ವೇರ್‌ನಲ್ಲಿ ತ್ವರಿತ ಫಲಿತಾಂಶ ಸಿಗುವುದಲ್ಲದೆ, ಇದಕ್ಕೆ ತಗಲುವ ವೆಚ್ಚ ಕೇವಲ 288 ರೂ. ಆಗಿದೆ.

ಇಡೀ ಪ್ರಕ್ರಿಯೆಯನ್ನು ವಿವರಿಸುವುದಾದರೆ, ಆಟಗಾರರ ವಯಸ್ಸನ್ನು ಪತ್ತೆ ಹಚ್ಚಲು ಬಳಸುವ ಈ ತಂತ್ರಜ್ಞಾನದಲ್ಲಿ ಆಟಗಾರರ ದೇಹದ ಎಕ್ಸ್-ರೇಗಳನ್ನು ಸ್ವತಂತ್ರ ಬಿಸಿಸಿಐ ವೀಕ್ಷಕರ ಸಮ್ಮುಖದಲ್ಲಿ ಎಕ್ಸ್-ರೇ ಕೇಂದ್ರದಲ್ಲಿ ರಾಜ್ಯ ಸಂಘಗಳ ಆಯಾ ಹೋಮ್ ಸೆಂಟರ್‌ಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಅದನ್ನು ಬಿಸಿಸಿಐ ಎವಿಪಿ ಇಲಾಖೆಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ
Image
IND vs WI: 3 ವರ್ಷಗಳಲ್ಲಿ 3 ಪಂದ್ಯ, ಕೇವಲ 49 ರನ್; ಈಗ ಇದ್ದಕ್ಕಿದ್ದಂತೆ ತಂಡಕ್ಕೆ ಮರಳಿ ಫಿಫ್ಟಿ ಬಾರಿಸಿದ ಗಿಲ್
Image
6 ಬೌಂಡರಿ, 9 ಸಿಕ್ಸರ್‌.. 45 ಎಸೆತಗಳಲ್ಲಿ ಬಿರುಸಿನ ಶತಕ! ಇಂಗ್ಲೆಂಡಿನಲ್ಲಿ ಮಿಂಚಿದ ಬೇಬಿ ಎಬಿ; ಭಾರತ ತಂಡಕ್ಕೆ ಗೆಲುವು
Image
Asia Cup 2022: ‘ನಂ.1 ಮೇರಾ ಇಂಡಿಯಾ’ ಏಷ್ಯಾ ಕಪ್ ಪ್ರೋಮೋದಲ್ಲಿ ಮಿಂಚಿದ ರೋಹಿತ್, ಕೊಹ್ಲಿ; ವಿಡಿಯೋ

ಇದನ್ನು ಸ್ವೀಕರಿಸಿದ ಬಿಸಿಸಿಐ ಎವಿಪಿ ವಿಭಾಗವು ಅವುಗಳನ್ನು ಸರಿಯಾದ ಸ್ವರೂಪದಲ್ಲಿ ಒಟ್ಟುಗೂಡಿಸುತ್ತದೆ. ಬಳಿಕ BCCI ಪ್ಯಾನೆಲ್‌ನಲ್ಲಿರುವ ಇಬ್ಬರು ಸ್ವತಂತ್ರ ರೇಡಿಯಾಲಜಿಸ್ಟ್‌ಗಳು ಆ ಮೂಳೆಗಳ ವಯಸ್ಸನ್ನು ಪರೀಕ್ಷಿಸುತ್ತಾರೆ. ಆದರೆ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸಹ ಸಮಯ ಹಿಡಿಯಲಿದೆ.

ಸದ್ಯಕ್ಕೆ ಭಾರತೀಯ ಕ್ರಿಕೆಟ್ ಮಂಡಳಿಯು ರಾಜ್ಯ ಸಂಸ್ಥೆಗಳೊಂದಿಗೆ ಪ್ರಾಯೋಗಿಕವಾಗಿ ಹೊಸ ವ್ಯವಸ್ಥೆಯನ್ನು ಬಳಸಲಿದೆ. ಈ ಬಗ್ಗೆ ವಯೋಮಿತಿ ಪರೀಕ್ಷಾ ವಿಭಾಗವೂ ಮಾಹಿತಿ ನೀಡಿದ್ದು, ಪ್ರಾಯೋಗಿಕ ಪಲಿತಾಂಶವು ನಮಗೆ ತೃಪ್ತಿ ತಂದಿದೆ. ಇದರಡಿಯಲ್ಲಿ ಸೀಮಿತ ಸಂಖ್ಯೆಯ ಪರೀಕ್ಷೆಗಳನ್ನು ನಡೆಸಲಾಗಿದೆ. ಎಲ್ಲಾ ರಾಜ್ಯ ಏಜೆನ್ಸಿಗಳು ಇದನ್ನು ಹೆಚ್ಚು ಬಳಸಲು ಆಸಕ್ತಿ ತೊರಿವೆ. ಒಮ್ಮೆ ಸಂಪೂರ್ಣವಾಗಿ ದೃಢೀಕರಿಸಿದ ನಂತರ, ಈ ಸಾಫ್ಟ್‌ವೇರ್ ಅನ್ನು ಬಳಸಲು ಪ್ರಾರಂಭಿಸಲಾಗುತ್ತದೆ ಅದಕ್ಕಾಗಿಯೇ ಸದ್ಯಕ್ಕೆ ಈವರೆಗೆ ನಡೆದ ಪರೀಕ್ಷೆಗಳ ಜತೆಗೆ ಹೊಸ ವಿಧಾನವನ್ನು ಬಳಸಲಾಗುವುದು ಎಂದು ಹೇಳಿಕೊಂಡಿದೆ.

ಕ್ರಿಕೆಟ್ ಆಟದಲ್ಲಿ ವಯೋಮಾನದ ವಂಚನೆ ದೇಶಾದ್ಯಂತ ವ್ಯಾಪಕವಾಗಿದೆ. ಜೂನ್ 2019 ರಲ್ಲಿ, ತಪ್ಪಾದ ಜನನ ಪ್ರಮಾಣಪತ್ರವನ್ನು ಸಲ್ಲಿಸಿದ ತಪ್ಪಿತಸ್ಥರೆಂದು ಕಂಡುಬಂದ ನಂತರ ಜಮ್ಮು ಮತ್ತು ಕಾಶ್ಮೀರದ ವೇಗಿ ರಸಿಖ್ ಆಲಂ ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಯಿತು. ಇವರೊಂದಿಗೆ 19 ವರ್ಷದೊಳಗಿನವರ ವಿಶ್ವಕಪ್ ಸ್ಟಾರ್ ಮಂಜೋತ್ ಕಾರ್ಲಾ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ದೆಹಲಿ ಬ್ಯಾಟರ್ ಅಂಕಿತ್ ಬಾವ್ನೆ ತಮ್ಮ ನಿಜ ವಯಸ್ಸನ್ನು ಮರೆಮಾಚಿದ ಆರೋಪವನ್ನು ಎದುರಿಸುತ್ತಿದ್ದಾರೆ.

Published On - 6:56 pm, Sat, 23 July 22

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ