AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ಬೌಂಡರಿ, 9 ಸಿಕ್ಸರ್‌.. 45 ಎಸೆತಗಳಲ್ಲಿ ಬಿರುಸಿನ ಶತಕ! ಇಂಗ್ಲೆಂಡಿನಲ್ಲಿ ಮಿಂಚಿದ ಬೇಬಿ ಎಬಿ; ಭಾರತ ತಂಡಕ್ಕೆ ಗೆಲುವು

Dewald Brevis: ಬೇಬಿ ಎಬಿ ಎಂದು ಕರೆಯಲ್ಪಡುವ ಈ ಆಟಗಾರ 49 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳ ಸಹಾಯದಿಂದ 112 ರನ್ ಗಳಿಸಿದರು. ಇವರನ್ನು ಬಿಟ್ಟರೆ ತಂಡದ ಬೇರಾವ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ.

6 ಬೌಂಡರಿ, 9 ಸಿಕ್ಸರ್‌.. 45 ಎಸೆತಗಳಲ್ಲಿ ಬಿರುಸಿನ ಶತಕ! ಇಂಗ್ಲೆಂಡಿನಲ್ಲಿ ಮಿಂಚಿದ ಬೇಬಿ ಎಬಿ; ಭಾರತ ತಂಡಕ್ಕೆ ಗೆಲುವು
ಬ್ರೇವಿಸ್, ರೋಹಿತ್Image Credit source: Timesnow
TV9 Web
| Edited By: |

Updated on:Jul 23, 2022 | 3:11 PM

Share

ಕಳೆದ ಐಪಿಎಲ್​ನಲ್ಲಿ (IPL-2022) ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ಕಳಪೆ ಪ್ರದರ್ಶನ ನೀಡಿ ಪಾಯಿಂಟ್ ಪಟ್ಟಿಯಲ್ಲಿ ಕೆಳಗಿನ ಸ್ಥಾನ ಪಡೆದಿರಬಹುದು. ಆದರೆ ಈ ಸೀಸನ್​ನಲ್ಲಿ ಕೆಲವು ಉದಯೋನ್ಮುಖ ಪ್ರತಿಭಾವಂತ ಆಟಗಾರರು ಈ ತಂಡದಿಂದ ಹೊರಬಂದರು. ಅವರಲ್ಲಿ ಒಬ್ಬರು ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಡೆವಲ್ಡ್ ಬ್ರೆವಿಸ್ (Dewald Brevis). ಬ್ರೆವಿಸ್ ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್​ನಿಂದ ಭವಿಷ್ಯದ ಭರವಸೆ ಆಟಗಾರನೆನಿಸಿಕೊಂಡರು. ಈಗ ಮತ್ತೊಮ್ಮೆ ತಮ್ಮ ಬ್ಯಾಟ್‌ನ ಶಕ್ತಿ ಪ್ರದರ್ಶಿಸಿರುವ ಬೇಬಿ ಎಬಿ ಖ್ಯಾತಿಯ ಬ್ರೆವಿಸ್, ಇಂಗ್ಲೆಂಡಿನಲ್ಲಿ ನಡೆದ ಟಿ20 ಪಂದ್ಯದಲ್ಲಿ ಅಬ್ಬರದ ಶತಕ ದಾಖಲಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಒಡೆತನದ ಕಂಪನಿಯಾದ ರಿಲಯನ್ಸ್ ತಂಡವು ಪ್ರಸ್ತುತ ಇಂಗ್ಲೆಂಡ್‌ನಲ್ಲಿದ್ದು, ಕೌಂಟಿ ತಂಡಗಳೊಂದಿಗೆ ಪಂದ್ಯಗಳನ್ನು ಆಡುತ್ತಿದೆ. ಈ ವೇಳೆ ರಿಲಯನ್ಸ್ ತಂಡ ಡರ್ಹಾಮ್ ಕೌಂಟಿ ಕ್ರಿಕೆಟ್ ತಂಡವನ್ನು ಎದುರಿಸಿತ್ತು. ಈ ವೇಳೆ ರಿಲಯನ್ಸ್ ತಂಡದ ಪರ ಆಡಿದ ಬ್ರೆವಿಸ್ ತಮ್ಮ ಬಿರುಸಿನ ಫಾರ್ಮ್ ಪ್ರದರ್ಶಿಸಿ ಅಮೋಘ ಶತಕ ಬಾರಿಸಿದರು.

45 ಎಸೆತಗಳಲ್ಲಿ ಶತಕ

ಇದನ್ನೂ ಓದಿ
Image
Asia Cup 2022: ‘ನಂ.1 ಮೇರಾ ಇಂಡಿಯಾ’ ಏಷ್ಯಾ ಕಪ್ ಪ್ರೋಮೋದಲ್ಲಿ ಮಿಂಚಿದ ರೋಹಿತ್, ಕೊಹ್ಲಿ; ವಿಡಿಯೋ
Image
IPL 2022: ಸತತ 2 ವರ್ಷಗಳಿಂದ ಬೆಂಚ್ ಕಾಯುತ್ತಿರುವ ಮಗ ಅರ್ಜುನ್​ಗೆ ಸಚಿನ್ ನೀಡಿದ ಸಲಹೆ ಏನು ಗೊತ್ತಾ?
Image
IND vs SA: ಭಾರತ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ! ಬೇಬಿ ಎಬಿಗಿಲ್ಲ ಅವಕಾಶ

ಬ್ರೆವಿಸ್, ಡರ್ಹಾಮ್ ತಂಡದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಈ ಬಲಗೈ ಬ್ಯಾಟ್ಸ್‌ಮನ್ ಕೇವಲ 45 ಎಸೆತಗಳಲ್ಲಿ ಶತಕ ಗಳಿಸಿ ಅಬ್ಬರಿಸಿದರು. ಈ ಪಂದ್ಯದಲ್ಲಿ ಆರ್‌ಎಸ್ ಗೆಹ್ಲೋಟ್ ಅವರೊಂದಿಗೆ ಇನ್ನಿಂಗ್ಸ್ ತೆರೆಯಲು ಬಂದ ಬ್ರೆವಿಸ್, ಬಂದ ಕೂಡಲೇ ಬಿರುಗಾಳಿ ಎಬ್ಬಿಸಿ ರನ್ ಸುರಿಮಳೆಗೈದರು. ಬೇಬಿ ಎಬಿ ಎಂದು ಕರೆಯಲ್ಪಡುವ ಈ ಆಟಗಾರ 49 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳ ಸಹಾಯದಿಂದ 112 ರನ್ ಗಳಿಸಿದರು. ಇವರನ್ನು ಬಿಟ್ಟರೆ ತಂಡದ ಬೇರಾವ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. ಬ್ರೆವಿಸ್ ನಂತರ, ಗೆಹ್ಲೋಟ್ 25 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಬ್ರೆವಿಸ್ ಅವರ ಈ ಬಿರುಸಿನ ಬ್ಯಾಟಿಂಗ್‌ನ ಬಲದ ಮೇಲೆ, ರಿಲಯನ್ಸ್ ನಿಗದಿತ 20 ಓವರ್‌ಗಳಲ್ಲಿ 211 ರನ್ ಗಳಿಸಿತು.

ಬೌಲರ್‌ಗಳ ಅದ್ಭುತ ಪ್ರದರ್ಶನ

ಮೊದಲು ಬ್ಯಾಟ್ ಮಾಡಿ 211 ರನ್ ಕಲೆ ಹಾಕಿದ ರಿಲಯನ್ಸ್ ತಂಡದ ಮುಂದೆ ಡರ್ಹಾಮ್ ತಂಡವು ಸಂಪೂರ್ಣವಾಗಿ ವಿಫಲವಾಯಿತು. ಡರ್ಹಾಮ್ ತಂಡ ತನ್ನ ಇನ್ನಿಂಗ್ಸ್‌ನಲ್ಲಿ ಕೇವಲ 130 ರನ್‌ಗಳಿಸಿ ಆಲೌಟ್ ಆಯಿತು. ಜೊತೆಗೆ ಪಂದ್ಯವನ್ನು 81 ರನ್‌ಗಳಿಂದ ಕಳೆದುಕೊಂಡಿತು. ಇಜೆಎಚ್ ಎಕರ್ಸ್ಲೆ ಮತ್ತು ಜೇ ಕ್ರೌಲಿ ಡರ್ಹಾಮ್ ಪರ ಗರಿಷ್ಠ ತಲಾ 23 ರನ್ ಗಳಿಸಿದರು. ಈ ವೇಳೆ ಎದುರಾಳಿಗಳನ್ನು ಕಟ್ಟಿಹಾಕಲು ರಿಲಯನ್ಸ್ ತಂಡದ ನಾಯಕ ಏಳು ಬೌಲರ್‌ಗಳನ್ನು ಬಳಸಿದರು, ಅದರಲ್ಲಿ ನಾಲ್ಕು ಬೌಲರ್‌ಗಳು ತಲಾ ಎರಡು ವಿಕೆಟ್ ಪಡೆದರು. ಬಾಸಿಲ್ ಥಂಪಿ, ಕಾರ್ತಿಕೇಯ ಸಿಂಗ್, ಹೃತಿಕ್ ಶೋಕಿನ್ ಮತ್ತು ವೈ ಚರಕ್ ತಲಾ ಎರಡು ವಿಕೆಟ್ ಪಡೆದರು. ಅರ್ಜುನ್ ತೆಂಡೂಲ್ಕರ್ ಒಂದೂ ವಿಕೆಟ್ ಪಡೆಯಲಿಲ್ಲ. ಬದಲಿಗೆ ಅವರು ಮೂರು ಓವರ್‌ಗಳಲ್ಲಿ 27 ರನ್‌ ನೀಡಿದರು.

19 ವರ್ಷದೊಳಗಿನವರ ವಿಶ್ವಕಪ್‌ನಿಂದ ಮಿಂಚಿಗ್

ಈ ವರ್ಷ ಅಂಡರ್-19 ವಿಶ್ವಕಪ್‌ನಲ್ಲಿ ಬ್ರೆವಿಸ್ ಅದ್ಭುತ ಆಟ ಪ್ರದರ್ಶಿಸಿದ್ದರು. ಜೊತೆಗೆ ಈ ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಇಲ್ಲಿಂದ ಅವರಿಗೆ ಬೇಬಿ ಎಬಿ ಎಂಬ ಹೆಸರು ತಳುಕು ಹಾಕಿಕೊಂಡಿತು. ಏಕೆಂದರೆ ಅವರು ದಕ್ಷಿಣ ಆಫ್ರಿಕಾದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅವರಂತೆ ಬ್ಯಾಟ್ ಮಾಡುವುದೇ ಇದಕ್ಕೆ ಕಾರಣವಾಗಿತ್ತು.

Published On - 3:11 pm, Sat, 23 July 22

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು