ENG vs SA: 10 ಎಸೆತ, 4 ಬ್ಯಾಟರ್ಸ್​ ಶೂನ್ಯಕ್ಕೆ ಔಟ್! ಆಂಗ್ಲರ ದಾಳಿಗೆ ನಲುಗಿದ ಆಫ್ರಿಕಾ 83 ರನ್​ಗಳಿಗೆ ಆಲೌಟ್

ENG vs SA: ಮಳೆ ಅಡ್ಡಿಪಡಿಸಿದ ಎರಡನೇ ಏಕದಿನ ಪಂದ್ಯದಲ್ಲಿ 10 ಎಸೆತಗಳಲ್ಲಿ ಜಾನೆಮನ್ ಮಲನ್ ಮತ್ತು ರಾಸಿ ವ್ಯಾನ್ ಡೆರ್ ದುಸ್ಸೇನ್ ಖಾತೆ ತೆರೆಯಲು ಅವಕಾಶ ನೀಡದ ಆಂಗ್ಲ ಬೌಲರ್‌ಗಳು 4 ದಕ್ಷಿಣ ಆಫ್ರಿಕಾದ ಬ್ಯಾಟರ್​ಗಳನ್ನು ಶೂನ್ಯಕ್ಕೆ ಔಟ್ ಮಾಡಿದರು.

ENG vs SA: 10 ಎಸೆತ, 4 ಬ್ಯಾಟರ್ಸ್​ ಶೂನ್ಯಕ್ಕೆ ಔಟ್! ಆಂಗ್ಲರ ದಾಳಿಗೆ ನಲುಗಿದ ಆಫ್ರಿಕಾ 83 ರನ್​ಗಳಿಗೆ ಆಲೌಟ್
ಇಂಗ್ಲೆಂಡ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Jul 23, 2022 | 3:54 PM

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ (England vs South Africa) ತಂಡದ ನಡುವೆ ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಂಗ್ಲ ಬೌಲರ್‌ಗಳು ದಾಳಿಗಿಳಿದ ತಕ್ಷಣ ಅಲ್ಲೋಲ ಕಲ್ಲೋಲ ಸೃಷ್ಟಿಸಿದರು. ಮಳೆ ಅಡ್ಡಿಪಡಿಸಿದ ಎರಡನೇ ಏಕದಿನ ಪಂದ್ಯದಲ್ಲಿ 10 ಎಸೆತಗಳಲ್ಲಿ ಜಾನೆಮನ್ ಮಲನ್ ಮತ್ತು ರಾಸಿ ವ್ಯಾನ್ ಡೆರ್ ದುಸ್ಸೇನ್ (Jaaneman Malan and Rasi Van der Dussain ) ಖಾತೆ ತೆರೆಯಲು ಅವಕಾಶ ನೀಡದ ಆಂಗ್ಲ ಬೌಲರ್‌ಗಳು 4 ದಕ್ಷಿಣ ಆಫ್ರಿಕಾದ ಬ್ಯಾಟರ್​ಗಳನ್ನು 0 ರನ್‌ಗೆ ಔಟ್ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕನ್ ಬೌಲರ್‌ಗಳು ಇಂಗ್ಲೆಂಡ್ ತಂಡವನ್ನು 28.1 ಓವರ್‌ಗಳಲ್ಲಿ 201 ರನ್‌ಗಳಿಗೆ ಸೀಮಿತಗೊಳಿಸಿದರು. ಇದರ ಹೊರತಾಗಿಯೂ ಆತಿಥೇಯ ತಂಡ 118 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ದಕ್ಷಿಣ ಆಫ್ರಿಕಾ ಕೂಡ ಇಂತಹ ಫಲಿತಾಂಶವನ್ನು ಊಹಿಸಿರಲಿಲ್ಲ

ಆಫ್ರಿಕಾ ಪರ ಡ್ವೇನ್ ಪ್ರಿಟೋರಿಯಸ್ 36 ರನ್ ನೀಡಿ 4 ವಿಕೆಟ್ ಪಡೆದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ತಂಡವನ್ನು ಕಡಿಮೆ ಸ್ಕೋರ್‌ಗೆ ಕಟ್ಟಿಹಾಕಿ ಸಂಭ್ರಮಿಸಿತ್ತು. ಆದರೆ ತಮ್ಮ ತಂಡದ ಪ್ರದರ್ಶನ ಇಷ್ಟು ಕೆಟ್ಟದಾಗಿರುತ್ತದೆ ಎಂದು ಅವರೇ ಊಹಿಸಿರಲಿಲ್ಲ ಎಂದೆನಿಸುತ್ತದೆ. ಮಳೆಯಿಂದಾಗಿ ಪಂದ್ಯ ತಡವಾದ ನಂತರ ದಕ್ಷಿಣ ಆಫ್ರಿಕಾಕ್ಕೆ 29 ಓವರ್‌ಗಳಲ್ಲಿ 202 ರನ್‌ಗಳ ಗುರಿ ನೀಡಲಾಯಿತು. ಇದಕ್ಕುತ್ತರವಾಗಿ ಕೇಶವ್ ಮಹಾರಾಜ್ ಬಳಗ 83 ರನ್ ಗಳಿಗೆ ಕುಸಿಯಿತು. ಕೇವಲ 6 ರನ್‌ಗಳಿಗೆ ಆಫ್ರಿಕಾ ತಂಡದ 4 ವಿಕೆಟ್‌ ಬಿದ್ದಿತ್ತು. ಮಲಾನ್ 6 ಮತ್ತು ದುಸ್ಸೇನ್ 4 ಎಸೆತಗಳನ್ನು ಎದುರಿಸಿದರು, ಆದರೆ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ ಏಡನ್ ಮಾರ್ಕ್ರಾಮ್ ಮತ್ತು ಲುಂಗಿ ಎನ್ಗಿಡಿ ಕೂಡ 0 ರನ್ ಗಳಿಸಿ ಔಟಾದರು. ಹೆನ್ರಿಕ್ ಕ್ಲಾಸೆನ್ ದಕ್ಷಿಣ ಆಫ್ರಿಕಾ ಪರ ಗರಿಷ್ಠ 33 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ 10 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡಿತು. ಈ 10 ಎಸೆತಗಳಲ್ಲಿ ಬ್ಯಾಟ್ಸ್‌ಮನ್‌ಗಳು 1 ರನ್ ಗಳಿಸಲು ಸಾಧ್ಯವಾಗಲಿಲ್ಲ. ರೀಸ್ ಟೋಪ್ಲಿ ತನ್ನ ಓವರ್‌ನಲ್ಲಿ ಮಲಾನ್ ಮತ್ತು ದುಸೇನ್ ಅವರನ್ನು ಔಟ್ ಮಾಡಿದರು. ಮುಂದಿನ ಓವರ್‌ನಲ್ಲಿ ವಿಲ್ಲೀ ಡಿಕಾಕ್ ಮತ್ತು ಕ್ಲಾಸೆನ್‌ರನ್ನು ಬೇಟೆಯಾಡಿದರು.

ಇದನ್ನೂ ಓದಿ
Image
6 ಬೌಂಡರಿ, 9 ಸಿಕ್ಸರ್‌.. 45 ಎಸೆತಗಳಲ್ಲಿ ಬಿರುಸಿನ ಶತಕ! ಇಂಗ್ಲೆಂಡಿನಲ್ಲಿ ಮಿಂಚಿದ ಬೇಬಿ ಎಬಿ; ಭಾರತ ತಂಡಕ್ಕೆ ಗೆಲುವು
Image
Asia Cup 2022: ‘ನಂ.1 ಮೇರಾ ಇಂಡಿಯಾ’ ಏಷ್ಯಾ ಕಪ್ ಪ್ರೋಮೋದಲ್ಲಿ ಮಿಂಚಿದ ರೋಹಿತ್, ಕೊಹ್ಲಿ; ವಿಡಿಯೋ

ದಕ್ಷಿಣ ಆಫ್ರಿಕಾಕ್ಕೆ ಮುಜುಗರದ ದಾಖಲೆ

18 ಎಸೆತಗಳಲ್ಲಿ 35 ರನ್ ಬಾರಿಸಿ, ಬೌಲಿಂಗ್​ನಲ್ಲಿ 5 ರನ್ ನೀಡಿ 1 ವಿಕೆಟ್ ಪಡೆದ ಸ್ಯಾಮ್ ಕರನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸರಣಿಯ ಮೊದಲ ಪಂದ್ಯದಲ್ಲಿ, ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತನ್ನ ಅತಿದೊಡ್ಡ ಏಕದಿನ ಸ್ಕೋರ್ ಗಳಿಸಿತು. ದಕ್ಷಿಣ ಆಫ್ರಿಕಾ 331 ರನ್ ಗಳಿಸಿತ್ತು. ಈ ಪಂದ್ಯದ ನಂತರ, ಕೇವಲ 3 ದಿನಗಳ ನಂತರ ದಕ್ಷಿಣ ಆಫ್ರಿಕಾ ಕೂಡ ಇಂಗ್ಲೆಂಡ್ ವಿರುದ್ಧ ಮುಜುಗರದ ದಾಖಲೆ ಮಾಡಿದೆ. ಇದು ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾದ ಜಂಟಿ ಕಡಿಮೆ ಸ್ಕೋರ್ ಆಗಿದೆ. ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಜಂಟಿ ಕಡಿಮೆ ಸ್ಕೋರ್ ಹೊಂದಿದೆ. ಇದಕ್ಕೂ ಮುನ್ನ 2008ರಲ್ಲಿ ಆಫ್ರಿಕಾ ತಂಡ 83 ರನ್ ಗಳಿಸಿತ್ತು. ಅದೇ ಸಮಯದಲ್ಲಿ, ಇದು ಒಟ್ಟಾರೆಯಾಗಿ ದಕ್ಷಿಣ ಆಫ್ರಿಕಾದ ಜಂಟಿ ಎರಡನೇ ಕಡಿಮೆ ಸ್ಕೋರ್ ಆಗಿದೆ. 1993ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಕೇವಲ 69 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ