ICC ODI Ranking: ಏಕದಿನ ಸರಣಿ ಗೆದ್ದು ರ್ಯಾಂಕಿಂಗ್ನಲ್ಲಿ ಪಾಕ್ ಹಿಂದಿಕ್ಕಿದ ಭಾರತ; ಸೋತ ಇಂಗ್ಲೆಂಡ್ ಸ್ಥಿತಿ ಏನು?
ICC ODI Team Ranking: ಐಸಿಸಿ ಶ್ರೇಯಾಂಕದಲ್ಲಿ 109 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಟೀಮ್ ಇಂಡಿಯಾ ಈಗ ಪಾಕಿಸ್ತಾನ ತಂಡಕ್ಕಿಂತ (106) ಮೂರು ಅಂಕ ಮುಂದಿದೆ. ಇದರೊಂದಿಗೆ ನ್ಯೂಜಿಲೆಂಡ್ ತಂಡ 128 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಗೆದ್ದ ಭಾರತ ಐಸಿಸಿ ರ್ಯಾಂಕಿಂಗ್ನಲ್ಲಿ (ICC ODI Team Ranking) 3ನೇ ಸ್ಥಾನವನ್ನು ಮರಳಿ ಪಡೆದುಕೊಂಡಿದೆ. ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದಿರುವ ಭಾರತ ಈಗ ಐಸಿಸಿ ಪುರುಷರ ODI ತಂಡ ಶ್ರೇಯಾಂಕದಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಮುಖ್ಯವಾಗಿ, ಭಾರತ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಗೆದ್ದು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ರಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ರಿಷಬ್ ಪಂತ್ (Rishabh Pant) ಅವರ ಮೊದಲ ಏಕದಿನ ಶತಕ ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಅವರ ಬ್ಲಾಕ್ ಬಸ್ಟರ್ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ಭಾರತವು ಇಂಗ್ಲೆಂಡ್ ನೀಡಿದ್ದ 260 ರನ್ಗಳ ಗುರಿಯನ್ನು 43 ಓವರ್ಗಳಲ್ಲಿ ಬೆನ್ನಟ್ಟಿತು. ಈ ಮೂಲಕ ಭಾರತ 2014ರ ನಂತರ ಇಂಗ್ಲೆಂಡ್‌ನಲ್ಲಿ ಮೊದಲ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.
ಏಕದಿನ ಸರಣಿ ಗೆಲುವಿನೊಂದಿಗೆ ಭಾರತ ಮೂರನೇ ಸ್ಥಾನಕ್ಕೆ
ಐಸಿಸಿ ಶ್ರೇಯಾಂಕದಲ್ಲಿ 109 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಟೀಮ್ ಇಂಡಿಯಾ ಈಗ ಪಾಕಿಸ್ತಾನ ತಂಡಕ್ಕಿಂತ (106) ಮೂರು ಅಂಕ ಮುಂದಿದೆ. ಇದರೊಂದಿಗೆ ನ್ಯೂಜಿಲೆಂಡ್ ತಂಡ 128 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೋತಿದ್ದರೂ, ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡ 121 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಸರಣಿಯನ್ನು 1-2 ಅಂತರದಲ್ಲಿ ವಶಪಡಿಸಿಕೊಂಡ ಭಾರತ
ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರ ಚೊಚ್ಚಲ ಏಕದಿನ ಶತಕದ ನೆರವಿನಿಂದ ಭಾರತವು ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಸರಣಿ ಗೆಲುವಿನೊಂದಿಗೆ ಭಾರತ ತಂಡ ಇತ್ತೀಚಿನ ಶ್ರೇಯಾಂಕದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
An extra bonus for India after a thrilling series triumph over England.
Details ?https://t.co/40EhChy9kH
— ICC (@ICC) July 18, 2022
India make progress in the latest ICC Men’s ODI rankings after a memorable win against England ???#IndianCricketTeam #ENGvIND #ICCRankings #CricketTwitter pic.twitter.com/b4xQ0Wzdyr
— Sportskeeda (@Sportskeeda) July 18, 2022
ಈಗ ಎಲ್ಲರ ಕಣ್ಣು ಇಂಗ್ಲೆಂಡ್ ಮತ್ತು ಆಫ್ರಿಕಾ ನಡುವಿನ ಸರಣಿಯತ್ತ ನೆಟ್ಟಿದೆ
ಐಸಿಸಿ ಪ್ರಕಟಿಸಿರುವ ಏಕದಿನ ತಂಡದ ಶ್ರೇಯಾಂಕಗಳು ಮುಂಬರುವ ವಾರಗಳಲ್ಲಿ ಬದಲಾಗಬಹುದು. ಆರನೇ ಶ್ರೇಯಾಂಕದ ದಕ್ಷಿಣ ಆಫ್ರಿಕಾ ಪ್ರಸ್ತುತ ಪಾಕಿಸ್ತಾನಕ್ಕಿಂತ ಕೇವಲ ಏಳು ರೇಟಿಂಗ್ ಪಾಯಿಂಟ್‌ಗಳ ಹಿಂದೆ ಇದೆ. ಹೀಗಾಗಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಗೆದ್ದರೆ ನಾಲ್ಕನೇ ಸ್ಥಾನಕ್ಕೆ ಏರಬಹುದು.
ಹಾಗಾಗಿ ಟೀಮ್ ಇಂಡಿಯಾ ಈ ತಿಂಗಳ ಅಂತ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ಅಲ್ಲಿ ಅಜೇಯ ಗೆಲುವು ಸಾಧಿಸಿದರೆ ತಮ್ಮ ಸ್ಥಾನ ಭದ್ರವಾಗಿರಲಿದೆ. ಸದ್ಯ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯ ಆಡುತ್ತಿದ್ದು, ಭಾರತದ ಸ್ಥಾನಕ್ಕೆ ಸಧ್ಯಕ್ಕೆ ಕುತ್ತಿಲ್ಲ. ವಿಂಡೀಸ್ ಸರಣಿ ಬಳಿಕ ಟೀಂ ಇಂಡಿಯಾ ಆಗಸ್ಟ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ODI ಸರಣಿಯನ್ನು ಆಡಲಿದ್ದು, ಈ ಸರಣಿಯಲ್ಲಿ ಭಾರತಕ್ಕೆ ಗೆದ್ದರೆ ಶ್ರೇಯಾಂಕದಲ್ಲಿ ಮೇಲಕ್ಕೇರುವ ಅವಕಾಶ ಸಿಗಲಿದೆ.
Published On - 2:29 pm, Mon, 18 July 22