Happy Birthday Yuzvendra Chahal: ‘ನಾನು ನಿಮ್ಮ ದೊಡ್ಡ ಅಭಿಮಾನಿ’; ಚಹಲ್ ಹುಟ್ಟು ಹಬ್ಬಕ್ಕೆ ಮಡದಿಯಿಂದ ವಿಶೇಷ ಸಂದೇಶ

Happy Birthday Yuzvendra Chahal: ಚಹಾಲ್‌ಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ ಧನಶ್ರೀ, "ಜೀವನವು ಒಂದು ಪ್ರಯಾಣ, ಆದರೆ ಅದು ಹಲವು ರೀತಿಯಲ್ಲಿ ಸುಂದರವಾಗಿದೆ. ನೀವು ತುಂಬಾ ಒಳ್ಳೆಯ ವ್ಯಕ್ತಿ ಮತ್ತು ದೇವರು ನಿಮ್ಮನ್ನು ಯಾವಾಗಲೂ ಆಶೀರ್ವದಿಸಲಿ ಎಂದಿದ್ದಾರೆ.

Happy Birthday Yuzvendra Chahal: ‘ನಾನು ನಿಮ್ಮ ದೊಡ್ಡ ಅಭಿಮಾನಿ'; ಚಹಲ್ ಹುಟ್ಟು ಹಬ್ಬಕ್ಕೆ ಮಡದಿಯಿಂದ ವಿಶೇಷ ಸಂದೇಶ
Dhanashree, Yuzvendra Chahal
Follow us
| Updated By: ಪೃಥ್ವಿಶಂಕರ

Updated on: Jul 23, 2022 | 8:30 PM

ಭಾರತ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಜುಲೈ 23 ಶನಿವಾರದಂದು ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಚಹಲ್‌ಗೆ ಎಲ್ಲಾ ಕಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕ್ರಿಕೆಟ್ ಲೋಕದಿಂದ ಹಿಡಿದು ಅವರ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಆದರೆ ಚಹಲ್ ಅವರ ಪತ್ನಿ ಧನಶ್ರೀ ವರ್ಮಾ (Dhanshree Verma) ಪತಿಗೆ ವಿಶೇಷವಾಗಿ ಶುಭಾಷಯ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಧನಶ್ರೀ ತಮ್ಮ ಪತಿಗೆ ಭಾವನಾತ್ಮಕ ಸಂದೇಶವನ್ನು ಬರೆದು, ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಧನಶ್ರೀ ವರ್ಮಾ ತನ್ನ ಪತಿ ಚಹಲ್‌ ಜೊತೆಗೆ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅವರು ಪ್ರತಿ ಸಂದರ್ಭದಲ್ಲೂ ಚಹಲ್ ಬೆಂಬಲಕ್ಕೆ ನಿಂತಿದ್ದಾರೆ. ಪಂದ್ಯದ ವೇಳೆಯೂ ಧನಶ್ರೀ ಅವರು ಕ್ರೀಡಾಂಗಣದಲ್ಲಿ ಚಹಲ್‌ಗೆ ಚಿಯರ್ ಮಾಡುವುದನ್ನು ನಾವೆಲ್ಲ ಕಂಡಿದ್ದೇವೆ. ಐಪಿಎಲ್ ಅಥವಾ ಅಂತರಾಷ್ಟ್ರೀಯ ಪಂದ್ಯವಾದಾಗಲೆಲ್ಲಾ ಧನಶ್ರೀ ಚಹಲ್ ಅವರನ್ನು ಪ್ರೋತ್ಸಾಹಿಸಲು ಕ್ರೀಡಾಂಗಣಕ್ಕೆ ಬರುವುದನ್ನು ಸಹ ಕಾಣಬಹುದು. ಚಹಲ್ ಪ್ರಸ್ತುತ ವೆಸ್ಟ್ ಇಂಡೀಸ್‌ನಲ್ಲಿದ್ದು ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ.

ಇದನ್ನೂ ಓದಿ
Image
IND vs WI 2nd ODI Match Live Streaming: ಸರಣಿ ಗೆಲ್ಲುವ ತವಕದಲ್ಲಿ ಭಾರತ; ಪಂದ್ಯದ ನೇರ ಪ್ರಸಾರ ಯಾವ ಚಾನೆಲ್​ನಲ್ಲಿ?
Image
BCCI: ವಯಸ್ಸು ಪತ್ತೆ ಹಚ್ಚಲು ಹೊಸ ಸಾಫ್ಟ್‌ವೇರ್ ಬಳಕೆಗೆ ಬಿಸಿಸಿಐ ಪ್ಲಾನ್; ತಗಲುವ ವೆಚ್ಚವೂ ತೀರ ಕಡಿಮೆ
Image
India vs West Indies 2nd ODI Playing 11: ನಿರ್ಣಾಯಕ ಪಂದ್ಯಕ್ಕೆ ಬದಲಾವಣೆ ಮಾಡುತ್ತಾ ಭಾರತ? ಉಭಯ ತಂಡಗಳ ಸಂಭಾವ್ಯ 11

Instagram ನಲ್ಲಿ ವಿಶೇಷ ಸಂದೇಶ

ಧನಶ್ರೀ ತಮ್ಮ ಪತಿಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಸಂದೇಶವನ್ನು ಬರೆದಿದ್ದಾರೆ. ಚಹಾಲ್‌ಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ ಧನಶ್ರೀ, “ಜೀವನವು ಒಂದು ಪ್ರಯಾಣ, ಆದರೆ ಅದು ಹಲವು ರೀತಿಯಲ್ಲಿ ಸುಂದರವಾಗಿದೆ. ನೀವು ತುಂಬಾ ಒಳ್ಳೆಯ ವ್ಯಕ್ತಿ ಮತ್ತು ದೇವರು ನಿಮ್ಮನ್ನು ಯಾವಾಗಲೂ ಆಶೀರ್ವದಿಸಲಿ. ಜನ್ಮದಿನದ ಶುಭಾಶಯಗಳು ಯುಜ್ವೇಂದ್ರ ಚಹಾಲ್. ನಾನು ನಿಮ್ಮ ದೊಡ್ಡ ಅಭಿಮಾನಿ. ಎಂದು ಬರೆದುಕೊಂಡಿದ್ದಾರೆ.

ಲವ್ ಸ್ಟೋರಿ ಶುರುವಾಗಿದ್ದು ಹೀಗೆ

ಚಹಾಲ್ ಮತ್ತು ಧನಶ್ರೀ ಅವರ ಪ್ರೇಮಕಥೆಯು ತುಂಬಾ ಆಸಕ್ತಿದಾಯಕವಾಗಿದೆ. ಕೋವಿಡ್‌ನಿಂದಾಗಿ ಲಾಕ್‌ಡೌನ್ ವಿಧಿಸಿದಾಗ, ಚಹಲ್ ನೃತ್ಯ ಕಲಿಯಲು ನಿರ್ಧರಿಸಿದ್ದರು. ಅದೇ ಸಮಯದಲ್ಲಿ ಧನಶ್ರೀ ನೃತ್ಯ ಶಿಕ್ಷಕಿಯಾಗಿದ್ದು, ನೃತ್ಯ ಕಲಿಯಲು ಚಹಲ್, ಧನಶ್ರೀಯನ್ನು ಸಂಪರ್ಕಿಸಿದರು. ಈ ವೇಳೆ ನೃತ್ಯ ಕಲಿಯುವ, ಕಲಿಸುವ ನಡುವೆ ಇಬ್ಬರ ನಡುವೆ ಪ್ರೀತಿ ಅರಳಿತು ಮತ್ತು ಇಬ್ಬರ ಪ್ರೇಮಕಥೆ ಪ್ರಾರಂಭವಾಯಿತು. ಆ ನಂತರ ಇಬ್ಬರೂ ಮದುವೆಯಾದರು.

ಇವರೂ ಅಭಿನಂದಿಸಿದ್ದಾರೆ

ಚಹಲ್ ಅವರ ಜನ್ಮದಿನದಂದು ಹಲವರು ಶುಭಾಶಯಗಳನ್ನು ಕೋರಿದ್ದಾರೆ. ಬಿಸಿಸಿಐ ಕೂಡ ಚಹಲ್ ಅವರನ್ನು ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದೆ. ಇದಲ್ಲದೆ, ಚಹಲ್ ಅವರ ಪ್ರಸ್ತುತ ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಮತ್ತು ಅವರ ಮಾಜಿ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಚಹಲ್ ಅವರ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಕುಲದೀಪ್ ಯಾದವ್, ಸುರೇಶ್ ರೈನಾ, ಚೇತೇಶ್ವರ ಪೂಜಾರ ಕೂಡ ಚಹಲ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು