India vs West Indies 2nd ODI Playing 11: ನಿರ್ಣಾಯಕ ಪಂದ್ಯಕ್ಕೆ ಬದಲಾವಣೆ ಮಾಡುತ್ತಾ ಭಾರತ? ಉಭಯ ತಂಡಗಳ ಸಂಭಾವ್ಯ 11

India vs West Indies 2nd ODI Playing 11: ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಈ ತಂಡದ ಕಣ್ಣು ಎರಡನೇ ಏಕದಿನ ಪಂದ್ಯ ಗೆದ್ದು ಸರಣಿ ಗೆಲ್ಲುವತ್ತ ನೆಟ್ಟಿದೆ.

India vs West Indies 2nd ODI Playing 11: ನಿರ್ಣಾಯಕ ಪಂದ್ಯಕ್ಕೆ ಬದಲಾವಣೆ ಮಾಡುತ್ತಾ ಭಾರತ? ಉಭಯ ತಂಡಗಳ ಸಂಭಾವ್ಯ 11
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on:Jul 23, 2022 | 6:09 PM

ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (West Indies) ತಂಡವನ್ನು ಸೋಲಿಸಿದ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಈ ತಂಡದ ಕಣ್ಣು ಎರಡನೇ ಏಕದಿನ ಪಂದ್ಯ ಗೆದ್ದು ಸರಣಿ ಗೆಲ್ಲುವತ್ತ ನೆಟ್ಟಿದೆ. ಇನ್ನು ಭಾನುವಾರದಂದು ಎರಡೂ ತಂಡಗಳು ಮುಖಾಮುಖಿಯಾಗಲಿದ್ದು, ಗೆಲ್ಲುವ ಪ್ರಯತ್ನ ನಡೆಸಲಿವೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ವೆಸ್ಟ್ ಇಂಡೀಸ್ ಸರಣಿ ಸಮಬಲಗೊಳಿಸಲು ಪ್ರಯತ್ನಿಸಲಿದೆ. ಈ ಪಂದ್ಯದಲ್ಲಿ ಸೋತರೆ ವೆಸ್ಟ್ ಇಂಡೀಸ್ ಸರಣಿಯನ್ನು ಕಳೆದುಕೊಳ್ಳಲಿದೆ. ಹೀಗಾಗಿ ತವರಿನಲ್ಲಿ ಸರಣಿ ಸೋಲಿನ ಅವಮಾನವನ್ನು ತಪ್ಪಿಸಲು ವಿಂಡೀಸ್ ಹೋರಾಡಲಿದೆ.

ಆದರೆ, ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರತಿ ಕ್ಷೇತ್ರದಲ್ಲೂ ವೆಸ್ಟ್ ಇಂಡೀಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರಿಂದ ವೆಸ್ಟ್ ಇಂಡೀಸ್​ಗೆ ಗೆಲುವು ಸುಲಭವಾಗಿರಲಿಲ್ಲ. ಈ ಸರಣಿಗೂ ಮುನ್ನ ವೆಸ್ಟ್ ಇಂಡೀಸ್ ತಂಡ ಟೀಂ ಇಂಡಿಯಾಗೆ ಪೈಪೋಟಿ ನೀಡುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತಾದರೂ ಮೊದಲ ಪಂದ್ಯದಲ್ಲಿ ಅದು ಆಗಲಿಲ್ಲ.

ಟೀಂ ಇಂಡಿಯಾ ಬದಲಾಗಲಿದೆ?

ಇದನ್ನೂ ಓದಿ
Image
IND vs WI: 3 ವರ್ಷಗಳಲ್ಲಿ 3 ಪಂದ್ಯ, ಕೇವಲ 49 ರನ್; ಈಗ ಇದ್ದಕ್ಕಿದ್ದಂತೆ ತಂಡಕ್ಕೆ ಮರಳಿ ಫಿಫ್ಟಿ ಬಾರಿಸಿದ ಗಿಲ್
Image
6 ಬೌಂಡರಿ, 9 ಸಿಕ್ಸರ್‌.. 45 ಎಸೆತಗಳಲ್ಲಿ ಬಿರುಸಿನ ಶತಕ! ಇಂಗ್ಲೆಂಡಿನಲ್ಲಿ ಮಿಂಚಿದ ಬೇಬಿ ಎಬಿ; ಭಾರತ ತಂಡಕ್ಕೆ ಗೆಲುವು
Image
Asia Cup 2022: ‘ನಂ.1 ಮೇರಾ ಇಂಡಿಯಾ’ ಏಷ್ಯಾ ಕಪ್ ಪ್ರೋಮೋದಲ್ಲಿ ಮಿಂಚಿದ ರೋಹಿತ್, ಕೊಹ್ಲಿ; ವಿಡಿಯೋ

ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಟೀಂ ಇಂಡಿಯಾ ಸರಣಿ ವಶಪಡಿಸಿಕೊಳ್ಳಲಿದ್ದು, ಶಿಖರ್ ಧವನ್ ನಾಯಕತ್ವದಲ್ಲಿ ತಂಡ ಈ ಕೆಲಸವನ್ನು ಮಾಡಲಿ ಎಂದು ಬಯಸುತ್ತಾರೆ. ಈ ಸರಣಿಯಲ್ಲಿ ಹಲವು ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಧವನ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಮೊದಲ ಪಂದ್ಯದಲ್ಲಿ ಎಲ್ಲವೂ ಚೆನ್ನಾಗಿತ್ತು. ಹೀಗಿರುವಾಗ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬದಲಾವಣೆ ಮಾಡಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಮೊದಲ ಪಂದ್ಯದಲ್ಲಿ ತಂಡ ತೋರಿದ ಆಟ ನೋಡಿದರೆ ಧವನ್ ಹಾಗೂ ಕೋಚ್ ರಾಹುಲ್ ದ್ರಾವಿಡ್ ಆಡುವ-11ರಲ್ಲಿ ಬದಲಾವಣೆ ತರುವಂತೆ ಕಾಣುತ್ತಿಲ್ಲ. ಶುಭಮನ್ ಗಿಲ್ ಸುದೀರ್ಘ ಸಮಯದ ನಂತರ ತಂಡದಲ್ಲಿ ಅವಕಾಶ ಪಡೆದಿದ್ದು, ಅರ್ಧಶತಕ ಬಾರಿಸುವ ಮೂಲಕ ಈ ಸರಣಿಗೆ ತಮ್ಮ ಸ್ಥಾನವನ್ನು ಖಚಿತಪಡಿಸಿದ್ದಾರೆ. ಧವನ್, ಅಯ್ಯರ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು.

ರವೀಂದ್ರ ಜಡೇಜಾ ಗಾಯಗೊಂಡಿದ್ದು, ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಅವರು ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಟೀಂ ಇಂಡಿಯಾ ಜಡೇಜಾ ಇಲ್ಲದೆ ಕಣಕ್ಕಿಳಿಯಲಿದೆ.

ವಿಂಡೀಸ್‌ನ ಪ್ಲೇಯಿಂಗ್-11 ಹೇಗಿರುತ್ತದೆ

ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋತಿರುವುದು ಖಚಿತವಾದರೂ ಟೀಂ ಇಂಡಿಯಾಗೆ ಸಂಕಷ್ಟ ತಂದಿದೆ. ಬೌಲಿಂಗ್‌ನಲ್ಲಿ ಅವರು ಕೊನೆಯ ಓವರ್‌ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು ಮತ್ತು ಟೀಮ್ ಇಂಡಿಯಾವನ್ನು ದೊಡ್ಡ ಸ್ಕೋರ್ ಮಾಡದಂತೆ ತಡೆದರು. ಹತ್ತಿರ ಹೋದ ನಂತರ ಪಂದ್ಯ ಸೋತರೂ ಬ್ಯಾಟಿಂಗ್​ನಲ್ಲಿ ಉತ್ತಮ ಹೋರಾಟ ನೀಡಿದರು. ನಾಯಕ ನಿಕೋಲಸ್ ಪೂರನ್ ಮತ್ತು ಕೋಚ್ ಫಿಲ್ ಸಿಮ್ಮನ್ಸ್ ಮೊದಲ ಪಂದ್ಯದಲ್ಲಿ ಆಡಿದ ತಂಡದ ಮೇಲೆ ಭರವಸೆ ಇಟ್ಟಿದ್ದು, ತಂಡದ ಪ್ಲೇಯಿಂಗ್-11 ನಲ್ಲಿ ಯಾವುದೇ ಬದಲಾವಣೆಯ ಭರವಸೆ ಇಲ್ಲ.

ಎರಡೂ ತಂಡಗಳ ಸಂಭಾವ್ಯ 11

ವೆಸ್ಟ್ ಇಂಡೀಸ್: ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್, ಶಮ್ರಾ ಬ್ರೂಕ್ಸ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ರೋವ್‌ಮನ್ ಪೊವೆಲ್, ಜೇಡನ್ ಸೀಲ್ಸ್, ಅಲ್ಜಾರಿ ಜೋಸೆಫ್, ರೊಮಾರಿಯೊ ಶೆಫರ್ಡ್, ಗುಡ್ಕೇಶ್ ಮೋತಿ, ಅಕಿಲ್ ಹೊಸೈನ್.

ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ಯುಜ್ವೇಂದ್ರ ಚಹಲ್

Published On - 6:09 pm, Sat, 23 July 22

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ