IND vs WI: ಭಾರತ ವಿರುದ್ಧದ ಸರಣಿಗೂ ಮುನ್ನ ವಿಂಡೀಸ್​ಗೆ ಆಘಾತ; ತಂಡದ ಸ್ಟಾರ್ ಬ್ಯಾಟರ್​ ಕ್ರಿಕೆಟ್​ಗೆ ಗುಡ್​ ಬೈ..!

IND vs WI: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ODI ಸರಣಿಯು ಜುಲೈ 22 ರಿಂದ ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮೊದಲು ಕೆರಿಬಿಯನ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ರಾಮ್‌ದಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

IND vs WI: ಭಾರತ ವಿರುದ್ಧದ ಸರಣಿಗೂ ಮುನ್ನ ವಿಂಡೀಸ್​ಗೆ ಆಘಾತ; ತಂಡದ ಸ್ಟಾರ್ ಬ್ಯಾಟರ್​ ಕ್ರಿಕೆಟ್​ಗೆ ಗುಡ್​ ಬೈ..!
ವಿಂಡೀಸ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Jul 18, 2022 | 4:36 PM

ಭಾರತ ಮತ್ತು ವೆಸ್ಟ್ ಇಂಡೀಸ್ (India and West Indies) ನಡುವಿನ ODI ಸರಣಿಯು ಜುಲೈ 22 ರಿಂದ ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮೊದಲು ಕೆರಿಬಿಯನ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ರಾಮ್‌ದಿನ್ (Denesh Ramdin) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2005 ರಲ್ಲಿ ವೆಸ್ಟ್ ಇಂಡೀಸ್‌ ಪರ ಅಂತರರಾಷ್ಟ್ರೀಯ ಪಾದಾರ್ಪಣೆ ಮಾಡಿದ 37 ವರ್ಷದ ರಾಮ್‌ದಿನ್, ಜುಲೈ 18 ಸೋಮವಾರದಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ರಾಮ್ದಿನ್ ಸುಮಾರು 14 ವರ್ಷಗಳ ಕಾಲ ನಿರಂತರವಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಭಾಗವಾಗಿದ್ದರು. ಜೊತೆಗೆ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡವನ್ನು ಪ್ರತಿನಿಧಿಸಿದರು. ಕೆಲವು ಪಂದ್ಯಗಳಲ್ಲಿ ತಂಡದ ನಾಯಕರೂ ಆಗಿದ್ದರು.

14 ವರ್ಷಗಳ ನನ್ನ ಕನಸು ನನಸಾಗಿಸಿದೆ

ಇದನ್ನೂ ಓದಿ
Image
IND vs ENG: ಪಂತ್​ಗೆ ಜೀವದಾನ ಕೊಟ್ಟು ಕೆಟ್ಟೆವು..! ತಪ್ಪೊಪ್ಪಿಕೊಂಡ ಆಂಗ್ಲ ನಾಯಕ ಬಟ್ಲರ್ ಹೇಳಿದ್ದಿದು
Image
Happy Birthday Smriti Mandhana: ಕ್ರಿಕೆಟ್ ದುನಿಯಾದ ಚೆಂದುಳ್ಳಿ ಚೆಲುವೆಗೆ ಜನ್ಮದಿನ; ಸ್ಮೃತಿ ಮಂಧಾನ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು
Image
ICC ODI Ranking: ಏಕದಿನ ಸರಣಿ ಗೆದ್ದು ರ‍್ಯಾಂಕಿಂಗ್​ನಲ್ಲಿ ಪಾಕ್ ಹಿಂದಿಕ್ಕಿದ ಭಾರತ; ಸೋತ ಇಂಗ್ಲೆಂಡ್ ಸ್ಥಿತಿ ಏನು?

ರಾಮ್ದಿನ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ಈ 14 ವರ್ಷಗಳ ಪ್ರಯಾಣವು ನನಗೆ ಕನಸಿನಂತೆ ಮತ್ತು ವಿವಿಧ ದೇಶಗಳಿಗೆ ಭೇಟಿ ನೀಡುವ ಮತ್ತು ಸ್ನೇಹ ಬೆಳೆಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ನಾನು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಕಳೆದ 14 ವರ್ಷಗಳು ನನಗೆ ಕನಸಿನಂತೆ ನನಸಾಗಿವೆ. ನಾನು ಟ್ರಿನಿಡಾಡ್-ಟೊಬಾಗೊ ಮತ್ತು ವೆಸ್ಟ್ ಇಂಡೀಸ್‌ಗಾಗಿ ಕ್ರಿಕೆಟ್ ಆಡುವ ಮೂಲಕ ನನ್ನ ಬಾಲ್ಯದ ಕನಸನ್ನು ಈಡೇರಿಸಿದೆ. ನನ್ನ ವೃತ್ತಿಜೀವನವು ಜಗತ್ತನ್ನು ನೋಡಲು, ವಿವಿಧ ಸಂಸ್ಕೃತಿಗಳಿಂದ ಸ್ನೇಹಿತರನ್ನು ಮಾಡಿಕೊಳ್ಳಲು ಮತ್ತು ನಾನು ಬಂದ ಸ್ಥಳದಿಂದ ಬದುಕಲು ನನಗೆ ಅವಕಾಶ ನೀಡಿದೆ ಎಂದು ಬರೆದುಕೊಂಡಿದ್ದಾರೆ.

2005 ರಲ್ಲಿ ವೃತ್ತಿಜೀವನ ಪ್ರಾರಂಭ

ರಾಮ್‌ದಿನ್ ಜುಲೈ 2005 ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು, ಮೂರು ತಿಂಗಳ ನಂತರ ಅಕ್ಟೋಬರ್‌ನಲ್ಲಿ ಅವರು ಭಾರತದ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದರು. ಅಂದಿನಿಂದ, ಅವರು ಎರಡೂ ಸ್ವರೂಪಗಳಲ್ಲಿ ತಂಡದ ಪ್ರಮುಖ ಭಾಗವಾಗಿದ್ದಾರೆ. ಜೊತೆಗೆ 2012 ಮತ್ತು 2016 ರಲ್ಲಿ T20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್‌ ತಂಡದಲ್ಲಿದ್ದರು. ಅಲ್ಲದೆ 2014 ರಲ್ಲಿ, ಡ್ಯಾರೆನ್ ಸಾಮಿ ನಂತರ, ಅವರು ವೆಸ್ಟ್ ಇಂಡೀಸ್ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡು, 13 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಹಾಗೆಯೇ 3 T20 ಮತ್ತು ಒಂದು ODI ಪಂದ್ಯದಲ್ಲಿ ತಂಡದ ನಾಯಕತ್ವವಹಿಸಿದ್ದರು.

ಭಾರತದ ವಿರುದ್ಧ ಕೊನೆಯ ಪಂದ್ಯ

ಬಲಗೈ ಬ್ಯಾಟ್ಸ್‌ಮನ್ ರಾಮ್‌ದಿನ್ 2019 ರಲ್ಲಿ ಭಾರತದ ವಿರುದ್ಧ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡಿದರು. ಈ ಪಂದ್ಯವನ್ನು ಡಿಸೆಂಬರ್ 2019 ರಲ್ಲಿ ಹೈದರಾಬಾದ್‌ನಲ್ಲಿ ಆಡಲಾಯಿತು. ಒಟ್ಟಾರೆಯಾಗಿ, ರಾಮ್‌ದಿನ್ ತಮ್ಮ ವೃತ್ತಿಜೀವನದಲ್ಲಿ 74 ಟೆಸ್ಟ್, 139 ODI ಮತ್ತು 71 T20 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಐದೂವರೆ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕ್ಯಾಚ್ ಮತ್ತು ಸ್ಟಂಪಿಂಗ್ ಜೊತೆಗೆ 450 ಕ್ಕೂ ಹೆಚ್ಚು ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.

Published On - 4:28 pm, Mon, 18 July 22

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ