IND vs ENG: ಶತಕದ ಮಾತು ಹಾಗಿರಲಿ; ಕಳೆದ 6 ವರ್ಷಗಳಲ್ಲಿ ಕೊಹ್ಲಿ ವೈಯಕ್ತಿಕ ಪ್ರದರ್ಶನ ಹೇಗಿದೆ ಗೊತ್ತಾ?

Virat Kohli: ಕೊನೆಯ 5 ಏಕದಿನ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 8, 18, 0, 16, 17 ರನ್ ಗಳಿಸಿದ್ದಾರೆ. ಕೊಹ್ಲಿ ಸತತ 5 ಇನ್ನಿಂಗ್ಸ್‌ಗಳಲ್ಲಿ 20 ರನ್ ಗಳಿಸಲು ಸಾಧ್ಯವಾಗದಿರುವುದು ಇದೇ ಮೊದಲು.

IND vs ENG: ಶತಕದ ಮಾತು ಹಾಗಿರಲಿ; ಕಳೆದ 6 ವರ್ಷಗಳಲ್ಲಿ ಕೊಹ್ಲಿ ವೈಯಕ್ತಿಕ ಪ್ರದರ್ಶನ ಹೇಗಿದೆ ಗೊತ್ತಾ?
ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಹಂತವನ್ನು ಎದುರಿಸುತ್ತಿರಬಹುದು. ಅವರ ಬ್ಯಾಟಿಂಗ್ ಬಗ್ಗೆ ಕ್ರಿಕೆಟ್ ಪಂಡಿತರು, ಅಭಿಮಾನಿಗಳು ಸಾಕಷ್ಟು ಟೀಕೆಗಳನ್ನು ಮಾಡುತ್ತಿರಬಹುದು. ಆದರೆ ಹಣ ಗಳಿಸುವ ವಿಚಾರದಲ್ಲಿ ವಿರಾಟ್ ಕೊಹ್ಲಿಗೆ ಯಾವುದೇ ಭಂಗ ಎದುರಾಗಿಲ್ಲ. ಇತ್ತೀಚಿನ ವರದಿಯ ಪ್ರಕಾರ ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ವಿರಾಟ್ ಕೊಹ್ಲಿ ಎಂಬ ಮಾಹಿತಿ ಈಗ ಹೊರಬಿದ್ದಿದೆ.
Follow us
TV9 Web
| Updated By: ಪೃಥ್ವಿಶಂಕರ

Updated on: Jul 18, 2022 | 4:13 PM

ಟೀಂ ಇಂಡಿಯಾ (Team India)ದ ಇಂಗ್ಲೆಂಡ್ ಪ್ರವಾಸ ಮುಗಿದಿದೆ. ವಿರಾಟ್ ಕೊಹ್ಲಿ (Virat Kohli) ಕೂಡ ಇಂಗ್ಲೆಂಡ್ ತೊರೆಯಲು ತಯಾರಿ ನಡೆಸಿದ್ದಾರೆ. ಇಂಗ್ಲೆಂಡಿಗೆ ಹೋಗಿದ್ದ ಕೊಹ್ಲಿ ನಿರಾಸೆಯಿಂದ ಅಲ್ಲಿಂದ ಹೊರಡಬೇಕಾಯಿತು. ಸ್ವತಃ ಕೊಹ್ಲಿ ಕೂಡ ಇಂಗ್ಲೆಂಡ್‌ನಲ್ಲಿ ಎದುರಾದ ಈ ತರಹನದ ದುಸ್ಥಿತಿಯ ಬಗ್ಗೆ ಯೋಚಿಸಿರಲಿಲ್ಲ. ಇಂಗ್ಲೆಂಡಿನಲ್ಲಿ ಅವರ ಬ್ಯಾಟ್ ಮೊದಲಿನಂತೆ ಸಿಡಿಯಲಿಲ್ಲ. ಈ ಬಾರಿಯ ಇಂಗ್ಲೆಂಡ್ ಪ್ರವಾಸದ ಕೊನೆಯ ಪಂದ್ಯದಲ್ಲಿ ಕೊಹ್ಲಿ ಎಲ್ಲರ ನಿರಾಸೆಯನ್ನು ದೂರ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಆಗಲಿಲ್ಲ. ಮೂರನೇ ಏಕದಿನ ಪಂದ್ಯದಲ್ಲಿ ಅವರು 17 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿಯನ್ನು ರೀಸ್ ಟೋಪ್ಲೆ ಬೇಟೆಯಾಡಿದರು ಮತ್ತು ಇದರೊಂದಿಗೆ ಅವರ ಪ್ರವಾಸವೂ ಕೊನೆಗೊಂಡಿತು.

2019ರಲ್ಲಿ ಕೊಹ್ಲಿ ಕೊನೆಯ ಶತಕ

ಈ ವರ್ಷದ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಮಾಜಿ ನಾಯಕ ಕೊಹ್ಲಿ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 76 ರನ್ ಗಳಿಸಿದ್ದಾರೆ. ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 31 ರನ್ ಗಳಿಸಲಷ್ಟೇ ಶಕ್ತರಾದರು. ಅದೇ ಸಮಯದಲ್ಲಿ, ಟಿ20 ಸರಣಿಯಲ್ಲಿ 1 ಮತ್ತು 11 ರನ್ ಗಳಿಸಿ ಸುಸ್ತಾದರು. ಏಕದಿನ ಸರಣಿಯಲ್ಲೂ ಕೂಡ ಕೊಹ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು, ಎರಡನೇ ಏಕದಿನ ಪಂದ್ಯದಲ್ಲಿ 16 ರನ್ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ 17 ರನ್ ಗಳಿಸಲಷ್ಟೇ ಶಕ್ತರಾದರು. ಕೊಹ್ಲಿ ನವೆಂಬರ್ 2019 ರಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತದ ಪರ ಕೊನೆಯ ಶತಕವನ್ನು ಗಳಿಸಿದರು. ಅಂದಿನಿಂದ, ಅಭಿಮಾನಿಗಳು ಅವರ ಬ್ಯಾಟ್‌ನಿಂದ ಶತಕವನ್ನು ನೋಡಲು ಹಾತೊರೆಯುತ್ತಿದ್ದರು. ಆ ಇನ್ನಿಂಗ್ಸ್ ನಂತರ, ಕೊಹ್ಲಿ 68 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 79 ಇನ್ನಿಂಗ್ಸ್‌ಗಳಲ್ಲಿ 2 ಸಾವಿರದ 554 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ 24 ಅರ್ಧಶತಕಗಳನ್ನು ಒಳಗೊಂಡಂತೆ 35.47 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

ಇದನ್ನೂ ಓದಿ
Image
IND vs ENG: ಪಂತ್​ಗೆ ಜೀವದಾನ ಕೊಟ್ಟು ಕೆಟ್ಟೆವು..! ತಪ್ಪೊಪ್ಪಿಕೊಂಡ ಆಂಗ್ಲ ನಾಯಕ ಬಟ್ಲರ್ ಹೇಳಿದ್ದಿದು
Image
Happy Birthday Smriti Mandhana: ಕ್ರಿಕೆಟ್ ದುನಿಯಾದ ಚೆಂದುಳ್ಳಿ ಚೆಲುವೆಗೆ ಜನ್ಮದಿನ; ಸ್ಮೃತಿ ಮಂಧಾನ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು
Image
ICC ODI Ranking: ಏಕದಿನ ಸರಣಿ ಗೆದ್ದು ರ‍್ಯಾಂಕಿಂಗ್​ನಲ್ಲಿ ಪಾಕ್ ಹಿಂದಿಕ್ಕಿದ ಭಾರತ; ಸೋತ ಇಂಗ್ಲೆಂಡ್ ಸ್ಥಿತಿ ಏನು?

ಕೊಹ್ಲಿಯ ದೌರ್ಬಲ್ಯ ಬಹಿರಂಗ

ಇತ್ತೀಚಿನ ದಿನಗಳಲ್ಲಿ ಕೊಹ್ಲಿಯ ದೌರ್ಬಲ್ಯವೂ ಬಹಿರಂಗವಾಗಿ ಎಲ್ಲರ ಮುಂದೆ ತೆರೆದುಕೊಳ್ಳುತ್ತಿದೆ. ಅನೇಕ ಪಂದ್ಯಗಳಲ್ಲಿ, ಆಫ್-ಸ್ಟಂಪ್‌ನ ಹೊರಗೆ ಹೋಗುವ ಚೆಂಡನ್ನು ಆಡುವ ಯತ್ನದಲ್ಲಿ ಕೊಹ್ಲಿ ಔಟಾಗುತ್ತಿದ್ದಾರೆ. ಎರಡನೇ ODIನಲ್ಲಿ, ಡೇವಿಡ್ ವಿಲ್ಲಿ ಅವರು ಆಫ್-ಸ್ಟಂಪ್‌ನ ಹೊರಗೆ ಬೌಲ್ ಮಾಡಿದ ಬಾಲ್‌ನಲ್ಲಿ ಕೊಹ್ಲಿ ಔಟಾದರು. ಹಾಗೆಯೇ ಮೂರನೇ ಪಂದ್ಯದಲ್ಲಿ ಅವರು ಅದೇ ಎಸೆತದಲ್ಲಿ ಪೆವಿಲಿಯನ್‌ಗೆ ಮರಳಿದರು. ಕಳೆದ 6 ವರ್ಷಗಳಲ್ಲಿ, ODI ಕ್ರಿಕೆಟ್‌ನಲ್ಲಿ, ವಿರಾಟ್ ಕೊಹ್ಲಿ 2017 ಮತ್ತು 2019 ರ ನಡುವೆ 65 ಇನ್ನಿಂಗ್ಸ್‌ಗಳಲ್ಲಿ 4 ಸಾವಿರ 39 ರನ್ ಗಳಿಸಿದ್ದು, 79.19 ಸರಾಸರಿಯಲ್ಲಿ 17 ಶತಕಗಳನ್ನು ಗಳಿಸಿದ್ದರು. 2020 ಮತ್ತು 2022 ರ ನಡುವೆ ಅವರು 20 ಇನ್ನಿಂಗ್ಸ್‌ಗಳಲ್ಲಿ 735 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರ ಸರಾಸರಿ 36.75 ಆಗಿದೆ. ಆದರೆ ಈ ಮಧ್ಯೆ ಅವರು ಒಂದೇ ಒಂದು ಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಕೊನೆಯ 5 ಏಕದಿನ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 8, 18, 0, 16, 17 ರನ್ ಗಳಿಸಿದ್ದಾರೆ. ಕೊಹ್ಲಿ ಸತತ 5 ಇನ್ನಿಂಗ್ಸ್‌ಗಳಲ್ಲಿ 20 ರನ್ ಗಳಿಸಲು ಸಾಧ್ಯವಾಗದಿರುವುದು ಇದೇ ಮೊದಲು.