AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,6,6,6,6,6,6,6.. ಪ್ರೇಯಸಿ ಮಹಿಕಾ ಎದರು ಸಿಕ್ಸರ್‌ಗಳ ಮಳೆಗರೆದ ಹಾರ್ದಿಕ್ ಪಾಂಡ್ಯ

Hardik Pandya's Vijay Hazare Blast: ವಿಜಯ್ ಹಜಾರೆ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ಬರೋಡಾ ಪರ ಮಿಂಚಿದ್ದಾರೆ. ಚಂಡೀಗಢ ವಿರುದ್ಧ 31 ಎಸೆತಗಳಲ್ಲಿ 75 ರನ್ ಸಿಡಿಸಿ, ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ತಮ್ಮ ಮೊದಲ ಲಿಸ್ಟ್ ಎ ಶತಕದ ನಂತರ ಬಂದ ಈ ಸ್ಫೋಟಕ ಆಟ, ಮುಂಬರುವ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾಕ್ಕೆ ದೊಡ್ಡ ಭರವಸೆ ಮೂಡಿಸಿದೆ. ಅವರ ಪ್ರೇಯಸಿ ಮಹಿಕಾ ಶರ್ಮಾ ಕೂಡ ಕ್ರೀಡಾಂಗಣದಲ್ಲಿ ಹಾಜರಿದ್ದು, ಪಾಂಡ್ಯರ ಆಟಕ್ಕೆ ಬೆಂಬಲ ನೀಡಿದರು.

6,6,6,6,6,6,6,6,6.. ಪ್ರೇಯಸಿ ಮಹಿಕಾ ಎದರು ಸಿಕ್ಸರ್‌ಗಳ ಮಳೆಗರೆದ ಹಾರ್ದಿಕ್ ಪಾಂಡ್ಯ
Hardik Pandya
ಪೃಥ್ವಿಶಂಕರ
|

Updated on:Jan 08, 2026 | 6:02 PM

Share

ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಪ್ರಸ್ತುತ 2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಆಡುತ್ತಿದ್ದಾರೆ. ಈ ಪಂದ್ಯಾವಳಿಯಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿರುವ ಹಾರ್ದಿಕ್ ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಮಳೆಗರೆಯುತ್ತಿದ್ದಾರೆ. ತವರು ತಂಡ ಬರೋಡಾ ಪರ ಆಡುತ್ತಿರುವ ಪಾಂಡ್ಯ ಇತ್ತೀಚೆಗಷ್ಟೇ ತಮ್ಮ ಲಿಸ್ಟ್ ಎ ವೃತ್ತಿಜೀವನದ ಮೊದಲ ಶತಕವನ್ನು ದಾಖಲಿಸಿದ್ದರು. ಇದೀಗ ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಅಬ್ಬರಿಸಿದ ಪಾಂಡ್ಯ, ಸ್ಫೋಟಕ ಅರ್ಧಶತಕ ಬಾರಿಸಿದ್ದಾರೆ. ಪಾಂಡ್ಯರ ಈ ಇನ್ನಿಂಗ್ಸ್​ನ ಮತ್ತೊಂದು ಹೈಲೇಟ್ಸ್ ಅಂದರೆ, ತಮ್ಮ ಪ್ರೇಯಸಿ ಮಹಿಕಾ ಶರ್ಮಾ ಕೂಡ ಈ ಪಂದ್ಯವನ್ನು ನೋಡಲು ಕ್ರೀಡಾಂಗಣದಲ್ಲಿ ಹಾಜರಿದ್ದರು.

ಸಿಕ್ಸರ್‌ಗಳ ಮಳೆ ಸುರಿಸಿದ ಹಾರ್ದಿಕ್ ಪಾಂಡ್ಯ

ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 31 ಎಸೆತಗಳಲ್ಲಿ 75 ರನ್ ಗಳಿಸಿ ಅಬ್ಬರದ ಇನ್ನಿಂಗ್ಸ್ ಆಡಿದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಪಾಂಡ್ಯ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೃಹತ್ ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳು ಸೇರಿದ್ದವು. 240 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಪಾಂಡ್ಯ ಅವರ ಅರ್ಧಶತಕಕ್ಕೆ ಮಹಿಕಾ ಶರ್ಮಾ ಕೂಡ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.

20 ಸಿಕ್ಸರ್ ಮತ್ತು 11 ಬೌಂಡರಿ

2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ಆಡುತ್ತಿರುವ ಎರಡನೇ ಪಂದ್ಯ ಇದಾಗಿದೆ. ಹಿಂದಿನ ಪಂದ್ಯದಲ್ಲಿ ಅವರು 92 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು 11 ಸಿಕ್ಸರ್ ಸೇರಿದಂತೆ 133 ರನ್ ಬಾರಿಸಿದ್ದರು. ಅಂದರೆ ಹಾರ್ದಿಕ್ ಪಾಂಡ್ಯ ಕೇವಲ ಎರಡು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ 20 ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಬಾರಿಸಿದ್ದಾರೆ. ಫೆಬ್ರವರಿಯಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್‌ಗೆ ಮುನ್ನ ಟೀಂ ಇಂಡಿಯಾಕ್ಕೆ ಇದು ಶುಭ ಸೂಚನೆಯಾಗಿದೆ. ಅದಕ್ಕೂ ಮೊದಲು, ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲೂ ಆಡಲಿದ್ದಾರೆ.

IND vs NZ: ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್; ಸೂಕ್ತ ಕಾರಣ ನೀಡಿದ ಬಿಸಿಸಿಐ

ಪ್ರಿಯಾಂಶು ಮೊಲಿಯಾ ಶತಕ

ಚಂಡೀಗಢ ವಿರುದ್ಧದ ಈ ಪಂದ್ಯದಲ್ಲಿ, ಹಾರ್ದಿಕ್ ಪಾಂಡ್ಯ ಜೊತೆಗೆ, ಪ್ರಿಯಾಂಶು ಮೋಲಿಯಾ ಕೂಡ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಅವರು 106 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 113 ರನ್ ಗಳಿಸಿದರು. ಜಿತೇಶ್ ಶರ್ಮಾ ಕೂಡ ಕೇವಲ 33 ಎಸೆತಗಳಲ್ಲಿ 73 ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ 391 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಚಂಡೀಗಢ 40 ಓವರ್‌ಗಳಲ್ಲಿ 242 ರನ್‌ ಕಲೆಹಾಕಿ ಆಲೌಟ್ ಆಯಿತು. ಅಂತಿಮವಾಗಿ ಬರೋಡಾ ಪಂದ್ಯವನ್ನು 149 ರನ್‌ಗಳಿಂದ ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:01 pm, Thu, 8 January 26