ಎಲ್ಲಾ ವಿಶ್ವಕಪ್ ಪಂದ್ಯಗಳನ್ನು ಟಿವಿ ಮತ್ತು ಮೊಬೈಲ್ನಲ್ಲಿ ಉಚಿತವಾಗಿ ವೀಕ್ಷಿಸುವುದು ಹೇಗೆ?
ICC World Cup 2023: ಲಕ್ಷಾಂತರ ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲೇ ಪಂದ್ಯವನ್ನು ಲೈವ್ ವೀಕ್ಷಿಸಲು ಟಿಕೆಟ್ ಸಿಗದೆ ಇರಬಹುದು. ಅಥವಾ ಕಾರಣಾಂತರಗಳಿಂದ ಅವರಿಗೆ ಕ್ರೀಡಾಂಗಣಕ್ಕೆ ಹೋಗದಿರಲು ಸಾಧ್ಯವಾಗದೆ ಇರಬಹುದು. ಅಂತಹ ಅಭಿಮಾನಿಗಳು ಟಿವಿ ಹಾಗೂ ಮೊಬೈಲ್ ಫೋನ್‌ಗಳಲ್ಲಿ ಉಚಿತವಾಗಿ ಎಲ್ಲಾ ವಿಶ್ವಕಪ್ ಪಂದ್ಯಗಳನ್ನು ತಮ್ಮಿಷ್ಟದ ಭಾಷೆಯಲ್ಲಿ ವೀಕ್ಷಿಸುವುದು ಹೇಗೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಏಕದಿನ ವಿಶ್ವಕಪ್ (ICC World Cup 2023) ಈ ವರ್ಷ ಭಾರತದಲ್ಲಿ ನಡೆಯುತ್ತಿದೆ. ಅಕ್ಟೋಬರ್ 5 ರಿಂದ ಈ ಮಹಾ ಈವೆಂಟ್ಗೆ ಚಾಲನೆ ಸಿಗುತ್ತಿದೆ. ವಿಶ್ವಕಪ್‌ನ ಮೊದಲ ಮತ್ತು ಕೊನೆಯ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Ahmedabad’s Narendra Modi Stadium) ನಡೆಯಲಿದ್ದು, ಫೈನಲ್ ಪಂದ್ಯ ನವೆಂಬರ್ 19 ರಂದು ನಡೆಯಲಿದೆ. ಈ ಬಾರಿಯ ವಿಶ್ವಕಪ್‌ಗೆ ಸಕಲ ಸಿದ್ಧತೆಗಳನ್ನು ಬಿಸಿಸಿಐ (BCCI) ಮಾಡಿಕೊಂಡಿದ್ದು, ಒಟ್ಟು 10 ತಂಡಗಳ ವಿಶ್ವಕಪ್ ಕದನ 45 ದಿನಗಳ ಕಾಲ ನಡೆಯಲಿದೆ. ಟೂರ್ನಿಯ ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ (England vs New Zealand) ನಡುವೆ ನಡೆಯಲಿದೆ. ಕ್ರಿಕೆಟ್ ಅಭಿಮಾನಿಗಳು ಕೂಡ ಈ ಪಂದ್ಯಕ್ಕೆ ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ ಇನ್ನು ಲಕ್ಷಾಂತರ ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲೇ ಪಂದ್ಯವನ್ನು ಲೈವ್ ವೀಕ್ಷಿಸಲು ಟಿಕೆಟ್ ಸಿಗದೆ ಇರಬಹುದು. ಅಥವಾ ಕಾರಣಾಂತರಗಳಿಂದ ಅವರಿಗೆ ಕ್ರೀಡಾಂಗಣಕ್ಕೆ ಹೋಗದಿರಲು ಸಾಧ್ಯವಾಗದೆ ಇರಬಹುದು. ಅಂತಹ ಅಭಿಮಾನಿಗಳು ಟಿವಿ ಹಾಗೂ ಮೊಬೈಲ್ ಫೋನ್‌ಗಳಲ್ಲಿ ಉಚಿತವಾಗಿ ಎಲ್ಲಾ ವಿಶ್ವಕಪ್ ಪಂದ್ಯಗಳನ್ನು ತಮ್ಮಿಷ್ಟದ ಭಾಷೆಯಲ್ಲಿ ವೀಕ್ಷಿಸುವುದು ಹೇಗೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
ಟಿವಿಯಲ್ಲಿ ವಿಶ್ವಕಪ್ ನೋಡುವುದು ಹೇಗೆ?
ನಿಮ್ಮ ಟಿವಿಯಲ್ಲಿ ಮನೆಯಲ್ಲಿ ಕುಳಿತು ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಬೇಕೆಂದರೆ ಸ್ಟಾರ್ ಸ್ಪೋರ್ಟ್ಸ್ ಚಾನಲ್‌ಗೆ ಟ್ಯೂನ್ ಮಾಡಬೇಕಾಗುತ್ತದೆ. ಈ ಬಾರಿ ವಿಶ್ವಕಪ್ ಕ್ರಿಕೆಟ್ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಪಡೆದುಕೊಂಡಿದೆ. ಆದ್ದರಿಂದ, ನೀವು ಸ್ಟಾರ್ ಸ್ಪೋರ್ಟ್ಸ್ನ ಎಲ್ಲಾ ಚಾನಲ್‌ಗಳಲ್ಲಿ ಲೈವ್ ಆಗಿ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಇದಲ್ಲದೆ ನಿಮಗೆ ಭಾಷೆಯ ಸಮಸ್ಯೆ ಬರಬಾರದು ಎಂಬ ಉದ್ದೇಶಕ್ಕಾಗಿಯೇ ಸ್ಟಾರ್ ಸ್ಪೋರ್ಟ್ಸ್ ವಿವಿದ ಸ್ಥಳೀಯ ಭಾಷೆಗಳಲ್ಲಿ ಕಾಮೆಂಟೆಟರಿ ನೀಡುವ ಮೂಲಕ ಪಂದ್ಯವನ್ನು ಪ್ರಸಾರ ಮಾಡುತ್ತಿದೆ. ಹೀಗಾಗಿ ನೀವು ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ ಹಿಂದಿ, ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಸ್ಟಾರ್ ಸ್ಪೋರ್ಟ್ಸ್ ಮರಾಠಿ ಮತ್ತು ಸ್ಟಾರ್ ಸ್ಪೋರ್ಟ್ಸ್ ತೆಲುಗು, ಸ್ಟಾರ್ ಸ್ಪೋರ್ಟ್ಸ್ ತಮಿಳು ಸೇರಿದಂತೆ ಇತರ ಭಾಷೆಗಳಲ್ಲಿ ನೀವು ವಿಶ್ವಕಪ್ ಪಂದ್ಯಾವಳಿಯನ್ನು ವೀಕ್ಷಿಸಬಹುದಾವಗಿದೆ.
ಮೊಬೈಲ್ನಲ್ಲಿ ಉಚಿತವಾಗಿ ವಿಶ್ವಕಪ್ ನೋಡುವುದು ಹೇಗೆ?
ನೀವು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ, ಮನೆಯಲ್ಲಿ ಅಥವಾ ಹೊರಗೆ ಲೈವ್ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಬಯಸಿದರೆ ನಿಮ್ಮ ಫೋನ್‌ನಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಹೊಂದಿರಬೇಕಾಗಿರುತ್ತದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ನೀವು ಎಲ್ಲಾ ವಿಶ್ವಕಪ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದಾಗಿದೆ. ಇಲ್ಲಿ ಖುಷಿಯ ಸಂಗತಿಯೆಂದರೆ ಈ ಬಾರಿ ನೀವು ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನ ಚಂದಾದಾರರಾಗುವ ಅಗತ್ಯವಿಲ್ಲ. ಅಂದರೆ ವಿಶ್ವಕಪ್ ಪಂದ್ಯಗಳನ್ನು ನೋಡಲು ನೀವು ಹಣ ಪಾವತಿಸುವ ಅವಶ್ಯಕತೆ ಇಲ್ಲ. ನೀವು ಮಾಡಬೇಕಾಗಿರುವುದು ಇಷ್ಟೆ. ನೀವು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ಕ್ರೀಡಾ ವಿಭಾಗಕ್ಕೆ ಹೋಗಿ. ಅಲ್ಲಿ ನೀವು ಒಂದು ರೂಪಾಯಿ ಖರ್ಚು ಮಾಡದೆ ಎಲ್ಲಾ ವಿಶ್ವಕಪ್ ಪಂದ್ಯಗಳನ್ನು ಸಂಪೂರ್ಣವಾಗಿ ಉಚಿತವಾಗಿ ವೀಕ್ಷಿಸಬಹುದಾಗಿದೆ.
ಟಿವಿ9 ವೆಬ್‌ಸೈಟ್‌ನಲ್ಲಿಯೂ ಲಭ್ಯ
ಇದಲ್ಲದೆ, ನೀವು ವಿಶ್ವಕಪ್ ಪಂದ್ಯಗಳ ಕುರಿತಾದ ಹೆಚ್ಚಿನ ಮಾಹಿತಿ, ಪಂದ್ಯಗಳ ಲೈವ್ ಬ್ಲಾಗ್, ಪಂದ್ಯಾವಳಿಯ ಕುತೂಹಲಕಾರಿ ಘಟನೆಗಳ ಬಗ್ಗೆ, ವಿಶೇಷ ದಾಖಲೆಗಳ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ತಿಳಿದುಕೊಳ್ಳಲು ಬಯಸಿದರೆ, ನೀವು tv9kannada.com ವೆಬ್ಸೈಟ್ಗೆ ಭೇಟಿ ನೀಡಿ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ