ಭಾರತಕ್ಕೆ ಬಂದಾಗಲೆಲ್ಲ ಇಂಜುರಿಗೊಳಗಾಗುತ್ತೇನೆ; ಇಲ್ಲೇ ನನಗ್ಯಾವುದೋ ಶಾಪ ತಟ್ಟಿರಬೇಕು; ಮಿಚೆಲ್ ಮಾರ್ಷ್

| Updated By: ಪೃಥ್ವಿಶಂಕರ

Updated on: Jun 06, 2022 | 6:23 PM

Mitchell Marsh: ಪ್ರತಿ ಬಾರಿ ಭಾರತಕ್ಕೆ ಬಂದಾಗಲೂ ತನಗೆ ಇಂಜುರಿಯಾಗುತ್ತದೆ. ಹಾಗಾಗಿ ಇಲ್ಲಿ ನನಗೆ ಯಾವುದಾದರು ಶಾಪ ತಟ್ಟಿರಬೇಕೆಂದು ಮಾರ್ಷ್ ಹೇಳಿದ್ದಾರೆ.

ಭಾರತಕ್ಕೆ ಬಂದಾಗಲೆಲ್ಲ ಇಂಜುರಿಗೊಳಗಾಗುತ್ತೇನೆ; ಇಲ್ಲೇ ನನಗ್ಯಾವುದೋ ಶಾಪ ತಟ್ಟಿರಬೇಕು; ಮಿಚೆಲ್ ಮಾರ್ಷ್
ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್
Follow us on

ಇಂಡಿಯನ್ ಪ್ರೀಮಿಯರ್ ಲೀಗ್-2022 15ನೇ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ. ಕಾಗದದ ಮೇಲೆ ಬಲಿಷ್ಠವಾಗಿ ಕಾಣುತ್ತಿದ್ದ ತಂಡ ಮೈದಾನದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅಸ್ಥಿರ ಪ್ರದರ್ಶನದಿಂದಾಗಿ ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ರಿಷಬ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ವಾರ್ನರ್ ಮತ್ತು ಮಿಚೆಲ್ ಮಾರ್ಷ್ (Mitchell Marsh) ಅವರಂತಹ ಟಾಪ್ ಆಟಗಾರರಿದ್ದಾರೆ. ಮೇಲಿಂದ ಮೇಲೆ ರಿಕಿ ಪಾಂಟಿಂಗ್ ಕೋಚ್ ಆಗಿದ್ದರೂ ತಂಡ ಮಿಂಚುವಲ್ಲಿ ವಿಫಲವಾಯಿತು. ಏತನ್ಮಧ್ಯೆ, ಟಿ20 ವಿಶ್ವಕಪ್‌ನಲ್ಲಿ ಆಸೀಸ್ ವಿಶ್ವ ಚಾಂಪಿಯನ್ ಆಗಿದ್ದ ಮಾರ್ಷ್ ಐಪಿಎಲ್ ಮಧ್ಯದಲ್ಲಿ ಆಘಾತ ಅನುಭವಿಸಿದರು. ಇದರಿಂದ ಕೆಲವು ಪಂದ್ಯಗಳಿಂದ ದೂರ ಉಳಿಯಬೇಕಾಯಿತು.

ನನಗೆ ಯಾವುದಾದರು ಶಾಪ ತಟ್ಟಿರಬೇಕು

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ, ಮಿಚೆಲ್ ಮಾರ್ಷ್ ತಮ್ಮ ಪ್ರದರ್ಶನದ ಬಗ್ಗೆ ಕೆಲವು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅದೇ ರೀತಿ ಪ್ರತಿ ಬಾರಿ ಭಾರತಕ್ಕೆ ಬಂದಾಗಲೂ ತನಗೆ ಇಂಜುರಿಯಾಗುತ್ತದೆ. ಹಾಗಾಗಿ ಇಲ್ಲಿ ನನಗೆ ಯಾವುದಾದರು ಶಾಪ ತಟ್ಟಿರಬೇಕೆಂದು ಮಾರ್ಷ್ ಹೇಳಿದ್ದಾರೆ. ನಾನು ಭಾರತಕ್ಕೆ ಬರುವ ಕೆಲವು ದಿನಗಳ ಮೊದಲು ಗಾಯಗೊಂಡಿದ್ದೆ. ನಂತರ ಇಲ್ಲಿ ಕೆಲವು ಐಪಿಎಲಗ ಪಂದ್ಯವನ್ನು ಆಡಿದ ನಂತರ ನನಗೆ ಕೋವಿಡ್ ತಗುಲಿತು. ಆಗ ನಾನು ನಿಜವಾಗಿಯೂ ಆಘಾತಕ್ಕೊಳಗಾಗಿದ್ದೆ. ನಾನು ಭಾರತದಲ್ಲಿ ಏನಾದರೂ ಶಾಪಕ್ಕೊಳಗಾಗಿದ್ದೇನೆಯೇ ಎಂಬ ಅನುಮಾನ ನನ್ನ ಕಾಡಲು ಆರಂಭಿಸಿತು. ಆದರೆ ಅದೃಷ್ಟವಶಾತ್ ನಾನು ಕೊರೊನಾದಿಂದ ಬೇಗನೆ ಚೇತರಿಸಿಕೊಂಡೆ. ನಂತರ ನಾನು ದೆಹಲಿ ತಂಡಕ್ಕೆ ಮರಳಿದ ಬಳಿಕ ತಂಡಕ್ಕೆ ನನ್ನ ಅಗತ್ಯ ಬಂದಾಗಲೆಲ್ಲ ಉತ್ತಮ ಪ್ರದರ್ಶನ ನೀಡಿದೆ ಎಂದು ಆಸೀಸ್ ಆಲ್‌ರೌಂಡರ್ ಹೇಳಿಕೊಂಡಿದ್ದಾರೆ. ಐಪಿಎಲ್ -2022 ರಲ್ಲಿ ಮಾತ್ರವಲ್ಲದೆ ಹಿಂದಿನ ಸೀಸನ್‌ಗಳಾದ 2020 ಮತ್ತು 21 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಆಡಿದ್ದ ಮಾರ್ಷ್, ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದರು.

ಇದನ್ನೂ ಓದಿ
49 ಎಸೆತ, 15 ಸಿಕ್ಸರ್, 137 ರನ್! ಟಿ20 ಕ್ರಿಕೆಟ್​ನಲ್ಲಿ ಅಬ್ಬರಿಸಿದ 36 ವರ್ಷದ ಆಲ್​ರೌಂಡರ್
Ranji Trophy: ಮೊದಲ ದಿನವೇ ಸುಸ್ತಾದ ಗಿಲ್, ಮಯಾಂಕ್, ಪೃಥ್ವಿ, ಜೈಸ್ವಾಲ್; ಸಂಕಷ್ಟಕ್ಕೆ ಸಿಲುಕಿದ ತಂಡಗಳು

ಇದನ್ನೂ ಓದಿ:DC vs KKR Highlights, IPL 2022: ಡೆಲ್ಲಿ ದಾಳಿಗೆ ಸುಸ್ತಾದ ಕೆಕೆಆರ್; ಪಂತ್ ಪಡೆಗೆ ಸುಲಭ ಜಯ

ಅವರೇ ನನಗೆ ಸ್ಫೂರ್ತಿ..

ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಅವರನ್ನು ಮಾರ್ಷ್ ಹೊಗಳಿದ್ದಾರೆ. ‘ನಾನು ತಂಡಕ್ಕೆ ಸೇರಿದಾಗ ಎಲ್ಲರೂ ರಿಕಿ ಪಾಂಟಿಂಗ್ ಬಗ್ಗೆ ಉತ್ತಮ ಮಾತುಗಳನ್ನು ಹೇಳಿದ್ದಾರೆ. ಒಬ್ಬ ಆಸ್ಟ್ರೇಲಿಯನ್ನಾಗಿ ಅವರು ಕ್ರಿಕೆಟ್‌ನಲ್ಲಿ ಏನು ಸಾಧಿಸಿದ್ದಾರೆ ಎಂದು ನನಗೆ ಚೆನ್ನಾಗಿ ತಿಳಿದಿದೆ. ಆದಾಗ್ಯೂ, ಪಾಂಟಿಂಗ್ ಅವರು ಡೆಲ್ಲಿ ತಂಡವನ್ನು ಸೇರಿಕೊಂಡಾಗ ಅವರೊಂದಿಗಿನ ಪ್ರಯಾಣವು ಅವಿಸ್ಮರಣೀಯವಾಗಿದೆ. ಅವರು ತಮ್ಮ ಆಟಗಾರರನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾನು ಎಷ್ಟು ನಿರ್ಣಾಯಕ ಎಂದು ಪಾಂಟಿಂಗ್ ಹೇಳಿದ್ದಾರೆ. ಆ ದಿಶೆಯಲ್ಲಿ ಪಾಂಟಿಂಗ್ ನನ್ನನ್ನು ಪ್ರತಿ ಪಂದ್ಯಕ್ಕೂ ಪ್ರೇರೇಪಿಸುತ್ತಾರೆ. ಗಾಯಗಳಿಂದ ನನ್ನ ನಂಬಿಕೆ ದುರ್ಬಲಗೊಂಡಾಗಲೆಲ್ಲಾ ಅವರು ನನ್ನೊಂದಿಗೆ ಮಾತನಾಡುತ್ತಿದ್ದರು. ಜೊತೆಗೆ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡಿದರು, ಎಂದು ಮಾರ್ಷ್ ಹೇಳಿದರು. ಸದ್ಯ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ಪ್ರವಾಸದಲ್ಲಿದ್ದು, ಉಭಯ ತಂಡಗಳ ನಡುವೆ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ

Published On - 6:23 pm, Mon, 6 June 22