ICC Awards: ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ

ICC Awards: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮೇ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತರನ್ನು ಪ್ರಕಟಿಸಿದೆ. ಐಸಿಸಿ ಪುರುಷರ ವಿಭಾಗದಲ್ಲಿ ಮೂವರು ಕ್ರಿಕೆಟಿಗರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ICC Awards: ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ
ಮುಶ್ಫಿಕರ್ ರಹೀಮ್
Follow us
TV9 Web
| Updated By: ಪೃಥ್ವಿಶಂಕರ

Updated on: Jun 06, 2022 | 8:01 PM

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮೇ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತರನ್ನು ಪ್ರಕಟಿಸಿದೆ. ಐಸಿಸಿ ಪುರುಷರ ವಿಭಾಗದಲ್ಲಿ ಮೂವರು ಕ್ರಿಕೆಟಿಗರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಅವರಲ್ಲಿ ಶ್ರೀಲಂಕಾದ ಹಿರಿಯ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ (Angelo Mathews), ಬಾಂಗ್ಲಾದೇಶದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮುಶ್ಫಿಕರ್ ರಹೀಮ್ (Mushfiqur Rahim) ಮತ್ತು ಶ್ರೀಲಂಕಾದ ಯುವ ವೇಗಿ ಅಸಿತಾ ಫೆರ್ನಾಂಡೋ (Asita Fernando) ಸೇರಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನದ ಯುವ ಕ್ರಿಕೆಟರ್ ತುಬಾ ಹಸನ್, ಪಾಕಿಸ್ತಾನದ ನಾಯಕಿ ಬಿಸ್ಮಾ ಮರೂಫ್ ಮತ್ತು ಜೆರ್ಸಿಯ ಟ್ರಿನಿಟಿ ಸ್ಮಿತ್ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶತನಗೊಂಡಿದ್ದಾರೆ.

ಮತ್ತೊಂದೆಡೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಏಂಜೆಲೊ ಮ್ಯಾಥ್ಯೂಸ್ ಮಿಂಚಿದ್ದರು. ಅವರು ಒಟ್ಟು 344 ರನ್ ಗಳಿಸಿದಲ್ಲದೆ ತಮ್ಮ ಇನ್ನಿಂಗ್ಸ್‌ನಲ್ಲಿ ಎರಡು ಶತಕ ಕೂಡ ಬಾರಿಸಿದರು. ಇದೇ ಟೆಸ್ಟ್ ಸರಣಿಯಲ್ಲಿ ಮುಶ್ಫಿಕರ್ ರಹೀಮ್ 303 ರನ್ ಗಳಿಸಿದ್ದರು.ಇದೇ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾದ ಯುವ ವೇಗಿ ಅಸಿತಾ ಫೆರ್ನಾಂಡೋ ತಮ್ಮ ಬಿರುಸಿನ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದರು. ಅವರು ಎರಡು ಟೆಸ್ಟ್‌ಗಳಲ್ಲಿ ಒಟ್ಟು 13 ವಿಕೆಟ್‌ಗಳನ್ನು ಪಡೆದರು. ಇದರ ಜೊತೆಗೆ ಟೆಸ್ಟ್‌ನಲ್ಲಿ ವೃತ್ತಿಜೀವನದ 6/51 ಅತ್ಯುತ್ತಮ ಪ್ರದರ್ಶನ ಇದಾಯಿತು. ಇದರೊಂದಿಗೆ ಪಂದ್ಯಪುರುಷೋತ್ತಮ ಪ್ರಶಸ್ತಿ ಕೂಡ ಪಡೆದರು.

ಇದನ್ನೂ ಓದಿ:49 ಎಸೆತ, 15 ಸಿಕ್ಸರ್, 137 ರನ್! ಟಿ20 ಕ್ರಿಕೆಟ್​ನಲ್ಲಿ ಅಬ್ಬರಿಸಿದ 36 ವರ್ಷದ ಆಲ್​ರೌಂಡರ್

ಇದನ್ನೂ ಓದಿ
Image
IND vs SA: 6 ವರ್ಷ, 56 ಟಿ20 ಪಂದ್ಯ; ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ನಾಯಕನ ಚೊಚ್ಚಲ ಪಂದ್ಯವಿದು
Image
ಭಾರತಕ್ಕೆ ಬಂದಾಗಲೆಲ್ಲ ಇಂಜುರಿಗೊಳಗಾಗುತ್ತೇನೆ; ಇಲ್ಲೇ ನನಗ್ಯಾವುದೋ ಶಾಪ ತಟ್ಟಿರಬೇಕು; ಮಿಚೆಲ್ ಮಾರ್ಷ್

ಮಹಿಳಾ ವಿಭಾಗದಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಪಾಕಿಸ್ತಾನದ ನಾಯಕಿ ಬಿಸ್ಮಾ ಮರೂಫ್ ಮತ್ತು ತುಬಾ ಹಸನ್ ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಮಿಂಚಿದ್ದರು. ಅದೇ ರೀತಿ ಜರ್ಸಿಯ ಟ್ರಿನಿಟಿ ಸ್ಮಿತ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿದರು. ಇದರೊಂದಿಗೆ ಮಹಿಳಾ ವಿಭಾಗದಲ್ಲಿ ಅವರು ತಿಂಗಳ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಐಸಿಸಿ ಶೀಘ್ರದಲ್ಲೇ ವಿಜೇತರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಿದೆ.