ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ವಿದೇಶಿ ಬ್ಯಾಟರ್. ಆದರೆ ಐಪಿಎಲ್ 2021 ರ ಅಂತಿಮ ಪಂದ್ಯಗಳಲ್ಲಿ ಅವರಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಅವಕಾಶ ಸಿಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅವರು ಮುಂದಿನ ಸೀಸನ್ನಲ್ಲಿ ಎಸ್ಆರ್ಹೆಚ್ ಪರ ಆಡುವುದಿಲ್ಲ ಎಂಬ ಊಹಾಪೋಹಗಳು ಹರಿದಾಡುತ್ತಿದೆ. ಆದರೆ ಈ ಬಗ್ಗೆ ಇದೇ ಮೊದಲ ಬಾರಿಗೆ ವಾರ್ನರ್ ಮಾತನಾಡಿದ್ದಾರೆ.
ನನಗೆ ಹೈದರಾಬಾದ್ ಎಂದರೆ ಎರಡನೇ ಮನೆಯಿದ್ದಂತೆ. ಅಲ್ಲಿನ ಅಭಿಮಾನಿಗಳಿಂದ ನನಗೆ ತುಂಬಾ ಪ್ರೀತಿ ಸಿಕ್ಕಿದೆ. ಕೆಲವೊಮ್ಮೆ ನಿಮ್ಮನ್ನು ಫ್ರಾಂಚೈಸ್ ಉಳಿಸಿಕೊಳ್ಳುವುದಿಲ್ಲ ಎಂಬ ಸೂಚನೆ ಸಿಗುತ್ತದೆ. ಆದರೆ ನಾನಂತು ಮುಂದಿನ ವರ್ಷ ಹೈದರಾಬಾದ್ ತಂಡದ ಭಾಗವಾಗಲು ಬಯಸುತ್ತೇನೆ ಎಂದು ವಾರ್ನರ್ ತಿಳಿಸಿದ್ದಾರೆ.
ಎಸ್ಆರ್ಹೆಚ್ ಅಭಿಮಾನಿಗಳಿಂದ ಸಿಕ್ಕ ಪ್ರೀತಿಗಾಗಿ ನಾನು ಮುಂದಿನ ವರ್ಷ ಅದೇ ತಂಡದ ಪರ ಆಡಲು ಬಯಸುತ್ತೇನೆ. ಆದರೆ ಇದೆಲ್ಲಾ ಫ್ರಾಂಚೈಸಿಯ ನಿರ್ಧಾರವನ್ನು ಅವಲಂಬಿಸಿರುತ್ತದೆ. ಮುಂದಿನ ವರ್ಷ ಮೆಗಾ ಹರಾಜು ಕೂಡ ನಡೆಯಲಿದೆ. ನನ್ನನ್ನು ಏಕೆ ನಾಯಕತ್ವದಿಂದ ತೆಗೆದುಹಾಕಲಾಗಿದೆ ಎಂದು ನನಗೆ ಗೊತ್ತಿಲ್ಲ ಎಂದು ಇದೇ ವೇಳೆ ವಾರ್ನರ್ ತಿಳಿಸಿದರು.
2009 ರ ನಂತರ ಅತೀ ಕಡಿಮೆ ರನ್:
ಪ್ರಸಕ್ತ ಸೀಸನ್ನಲ್ಲಿ ಕೇವಲ 8 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದ ಡೇವಿಡ್ ವಾರ್ನರ್ 24 ರ ಸರಾಸರಿಯಲ್ಲಿ 195 ರನ್ ಗಳಿಸಿದರು. ಇದರಲ್ಲಿ 2 ಅರ್ಧಶತಕಗಳು ಮೂಡಿಬಂದಿತ್ತು. ಇದಾಗ್ಯೂ ಈ ಸೀಸನ್ನಲ್ಲಿನ ಅವರ ಬ್ಯಾಟ್ನಿಂದ ಹೆಚ್ಚಿನ ರನ್ ಮೂಡಿಬಂದಿರಲಿಲ್ಲ. 2009 ರ ನಂತರ, ವಾರ್ನರ್ ಇದೇ ಮೊದಲ ಬಾರಿಗೆ 200 ರನ್ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. 2014 ರಿಂದ 2020 ರವರೆಗೆ ಸತತ 6 ಸೀಸನ್ಗಳಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆ ವಾರ್ನರ್ ಹೆಸರಿನಲ್ಲಿದೆ. ಕಳೆದ ಸೀಸನ್ನಲ್ಲಿ 16 ಪಂದ್ಯಗಳಿಂದ 548 ರನ್ ಗಳಿಸಿದ್ದರು.
ಟಾಪ್ ಸ್ಕೊರರ್:
ಡೇವಿಡ್ ವಾರ್ನರ್ ಅವರ ಒಟ್ಟಾರೆ ಐಪಿಎಲ್ ವೃತ್ತಿಜೀವನದಲ್ಲಿ 150 ಪಂದ್ಯಗಳನ್ನು ಆಡಿದ್ದು, 42 ಸರಾಸರಿಯಲ್ಲಿ 5449 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿದೇಶಿ ಆಟಗಾರ ಎಂಬ ದಾಖಲೆ ವಾರ್ನರ್ ಹೆಸರಿನಲ್ಲಿದೆ. 4 ಶತಕ ಮತ್ತು 50 ಅರ್ಧ ಶತಕಗಳನ್ನುಕೂಡ ಬಾರಿಸಿದ್ದಾರೆ.
ಇದನ್ನೂ ಓದಿ: KL Rahul: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ:ಟಿ20 ವಿಶ್ವಕಪ್ ಪಾಕ್ ತಂಡದಲ್ಲಿ ಪ್ರಮುಖ ಬದಲಾವಣೆ: 39 ವರ್ಷದ ಆಲ್ರೌಂಡರ್ ಆಯ್ಕೆ
ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!
(I Would Love To Be At SRH Next Year Says David Warner)