AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

8 ತಂಡ, 15 ಪಂದ್ಯಗಳು: ಹೀಗಿರಲಿದೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ

Champions Trophy 2025: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲಿ ಜರುಗಲಿದೆ. ಇನ್ನು ಭಾರತ ತಂಡದ ಪಂದ್ಯಗಳಿಗೆ ದುಬೈನ ಇಂಟರ್​ನ್ಯಾಷನಲ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಈ ಟೂರ್ನಿಯ ಸ್ವರೂಪದ ಕುರಿತಾದ ನಿಮ್ಲೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

8 ತಂಡ, 15 ಪಂದ್ಯಗಳು: ಹೀಗಿರಲಿದೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ
Champions Trophy 2025
ಝಾಹಿರ್ ಯೂಸುಫ್
|

Updated on:Feb 18, 2025 | 8:07 AM

Share

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ನಾಳೆ (ಫೆ.19) ಚಾಲನೆ ಸಿಗಲಿದೆ. 8 ತಂಡಗಳ ನಡುವಣ ಈ ಕದನವು ಏಕದಿನ ಸ್ವರೂಪದಲ್ಲಿ ನಡೆಯುತ್ತಿರುವುದು ವಿಶೇಷ. ಹೀಗಾಗಿಯೇ ಈ ಟೂರ್ನಿಯನ್ನು ಮಿನಿ ವಿಶ್ವಕಪ್ ಎಂದು ಕರೆಯಲಾಗುತ್ತದೆ. ಇಲ್ಲಿ 8 ತಂಡಗಳು ಕಾಣಿಸಿಕೊಂಡರೂ ಇಡೀ ಟೂರ್ನಿಯಲ್ಲಿ ನಡೆಯುವುದು ಕೇವಲ 15 ಪಂದ್ಯಗಳು ಮಾತ್ರ.

8 ತಂಡ 2 ಗ್ರೂಪ್:

ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ 8 ತಂಡಗಳನ್ನು 2 ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಮೊದಲ ಸುತ್ತಿನಲ್ಲಿ ಗ್ರೂಪ್​ಗಳಲ್ಲಿ ಪಂದ್ಯ ನಡೆಯಲಿದೆ. ಅಂದರೆ ಆಯಾ ಗ್ರೂಪ್​ನಲ್ಲಿನ ತಂಡಗಳು ಪರಸ್ಪರ ಸೆಣಸಲಿದೆ.

  • ಗ್ರೂಪ್-A: ಭಾರತ, ಪಾಕಿಸ್ತಾನ್, ನ್ಯೂಝಿಲೆಂಡ್ ಮತ್ತು ಬಾಂಗ್ಲಾದೇಶ್
  • ಗ್ರೂಪ್- B: ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ಮತ್ತು ಇಂಗ್ಲೆಂಡ್

ಟೂರ್ನಿ ಸ್ವರೂಪ:

ಮೊದಲ ಹೇಳಿದಂತೆ ಚಾಂಪಿಯನ್ಸ್ ಟ್ರೋಫಿಯ ಮೊದಲ ಸುತ್ತಿನಲ್ಲಿ ಆಯಾ ಗ್ರೂಪ್​ನಲ್ಲಿರುವ ತಂಡಗಳು ಮುಖಾಮುಖಿಯಾಗಲಿದೆ. ಇಲ್ಲಿ ಗ್ರೂಪ್-ಎ ನಲ್ಲಿರುವ ಭಾರತ ತಂಡವು ಪಾಕಿಸ್ತಾನ್, ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ್ ವಿರುದ್ಧ ತಲಾ ಒಂದು ಪಂದ್ಯವಾಡಲಿದೆ. ಅದರಂತೆ ಪ್ರತಿ ತಂಡಗಳು ಲೀಗ್​ ಹಂತದಲ್ಲಿ ಒಟ್ಟು 3 ಪಂದ್ಯಗಳನ್ನಾಡಲಿದ್ದಾರೆ.

ಸೆಮಿಫೈನಲ್ ಹಾದಿ:

ಇಲ್ಲಿ ಎರಡು ಗ್ರೂಪ್​ಗಳಿಗೆ ಬೇರೆ ಬೇರೆ ಅಂಕಪಟ್ಟಿಯಲ್ಲಿ ಇರಲಿದೆ. ಗ್ರೂಪ್-ಎ ಮತ್ತು ಗ್ರೂಪ್-ಬಿ ಪಾಯಿಂಟ್ಸ್ ಟೇಬಲ್​ಗಳಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸುತ್ತದೆ. ಅಂದರೆ ಲೀಗ್ ಹಂತದಿಂದ ನಾಲ್ಕು ತಂಡಗಳು ಹೊರಬೀಳಲಿದ್ದು, 4 ಟೀಮ್​ಗಳು ಮುಂದಿನ ಹಂತಕ್ಕೇರಲಿದೆ.

ಇನ್ನು ಸೆಮಿಫೈನಲ್​ನಲ್ಲಿ ಆಯಾ ಗ್ರೂಪ್​ನಿಂದ ಅರ್ಹತೆ ಪಡೆದ ತಂಡಗಳು ಪರಸ್ಪರ ವಿರುದ್ಧವಾಗಿ ಸೆಣಸಲಿದೆ. ಅಂದರೆ ಲೀಗ್​ ಹಂತದಲ್ಲಿ ಮುಖಾಮುಖಿಯಾದ ತಂಡಗಳು ಸೆಮಿಫೈನಲ್​ನಲ್ಲಿ ಮತ್ತೆ ಎದುರು ಬದುರಾಗುವುದಿಲ್ಲ.

ಫೈನಲ್ ಪಂದ್ಯ:

ಈ ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಮೊದಲ ಮತ್ತು ಎರಡನೇ ಸೆಮಿಫೈನಲ್​ಗಳಲ್ಲಿ ಗೆದ್ದ ತಂಡಗಳು ಫೈನಲ್​ಗೆ ಪ್ರವೇಶಿಸಲಿದೆ. ಅದರಂತೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್​ ಹಂತದಲ್ಲಿ 12 ಪಂದ್ಯಗಳು ಮತ್ತು ನಾಕೌಟ್ ಹಂತದಲ್ಲಿ ಮೂರು ಪಂದ್ಯಗಳು ನಡೆಯಲಿದೆ.

ಇದನ್ನೂ ಓದಿ:  ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ 8 ತಂಡಗಳ ಪಟ್ಟಿ ಇಲ್ಲಿದೆ

ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ:

ದಿನಾಂಕ ಪಂದ್ಯ ಸ್ಥಳ ಸಮಯ (IST)
ಫೆಬ್ರವರಿ 19 ಪಾಕಿಸ್ತಾನ್ v ನ್ಯೂಝಿಲೆಂಡ್ ರಾಷ್ಟ್ರೀಯ ಕ್ರೀಡಾಂಗಣ, ಕರಾಚಿ 2:30 PM
ಫೆಬ್ರವರಿ 20 ಬಾಂಗ್ಲಾದೇಶ್ v ಭಾರತ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ 2:30 PM
ಫೆಬ್ರವರಿ 21 ಅಫ್ಘಾನಿಸ್ತಾನ v ಸೌತ್ ಆಫ್ರಿಕಾ ರಾಷ್ಟ್ರೀಯ ಕ್ರೀಡಾಂಗಣ, ಕರಾಚಿ 2:30 PM
22 ಫೆಬ್ರವರಿ ಆಸ್ಟ್ರೇಲಿಯಾ v ಇಂಗ್ಲೆಂಡ್ ಗದ್ದಾಫಿ ಕ್ರೀಡಾಂಗಣ, ಲಾಹೋರ್ 2:30 PM
ಫೆಬ್ರವರಿ 23 ಪಾಕಿಸ್ತಾನ್ v ಭಾರತ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ 2:30 PM
24 ಫೆಬ್ರವರಿ ಬಾಂಗ್ಲಾದೇಶ್ v ನ್ಯೂಝಿಲೆಂಡ್ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ 2:30 PM
25 ಫೆಬ್ರವರಿ ಆಸ್ಟ್ರೇಲಿಯಾ v ಸೌತ್ ಆಫ್ರಿಕಾ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ 2:30 PM
ಫೆಬ್ರವರಿ 26 ಅಫ್ಘಾನಿಸ್ತಾನ್ v ಇಂಗ್ಲೆಂಡ್ ಗದ್ದಾಫಿ ಕ್ರೀಡಾಂಗಣ, ಲಾಹೋರ್ 2:30 PM
ಫೆಬ್ರವರಿ 27 ಪಾಕಿಸ್ತಾನ್ v ಬಾಂಗ್ಲಾದೇಶ್ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ 2:30 PM
28 ಫೆಬ್ರವರಿ ಅಫ್ಘಾನಿಸ್ತಾನ್ v ಆಸ್ಟ್ರೇಲಿಯಾ ಗದ್ದಾಫಿ ಕ್ರೀಡಾಂಗಣ, ಲಾಹೋರ್ 2:30 PM
ಮಾರ್ಚ್ 1 ಸೌತ್ ಆಫ್ರಿಕಾ v ಇಂಗ್ಲೆಂಡ್ ರಾಷ್ಟ್ರೀಯ ಕ್ರೀಡಾಂಗಣ, ಕರಾಚಿ 2:30 PM
ಮಾರ್ಚ್ 2 ನ್ಯೂಝಿಲೆಂಡ್ v ಭಾರತ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ 2:30 PM
ಮಾರ್ಚ್ 4 ಸೆಮಿಫೈನಲ್ 1 ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ 2:30 PM
ಮಾರ್ಚ್ 5 ಸೆಮಿಫೈನಲ್ 2 ಗದ್ದಾಫಿ ಕ್ರೀಡಾಂಗಣ, ಲಾಹೋರ್ 2:30 PM
ಮಾರ್ಚ್ 9 ಫೈನಲ್ ಲಾಹೋರ್ ಅಥವಾ ದುಬೈ 2:30 PM

Published On - 8:06 am, Tue, 18 February 25

ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!