AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ಭಾರತದ ಫೈನಲ್​ ಕನಸಿಗೆ ಐಸಿಸಿ ಕೊಳ್ಳಿ

WTC final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಈವರೆಗೆ 3 ಫೈನಲ್ ಪಂದ್ಯಗಳು ನಡೆದಿವೆ. ಈ ಮೂರು ಪಂದ್ಯಗಳಿಗೆ ಆತಿಥ್ಯವಹಿಸಿದ್ದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್. ಇದೀಗ ಮುಂದಿನ ಮೂರು ಫೈನಲ್ ಪಂದ್ಯಗಳ ಆಯೋಜನೆಯ ಹಕ್ಕುಗಳನ್ನು ಸಹ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಇಸಿಬಿಗೆ ನೀಡಿದೆ. ಇದರೊಂದಿಗೆ 2027 ರಲ್ಲಿ ಭಾರತದಲ್ಲಿ ಫೈನಲ್ ಆಯೋಜಿಸುವ ಬಿಸಿಸಿಐ ಕನಸು ಕಮರಿದೆ.

WTC Final: ಭಾರತದ ಫೈನಲ್​ ಕನಸಿಗೆ ಐಸಿಸಿ ಕೊಳ್ಳಿ
Wtc Final
ಝಾಹಿರ್ ಯೂಸುಫ್
|

Updated on: Jul 21, 2025 | 10:33 AM

Share

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕೆ ಆತಿಥ್ಯವಹಿಸಬೇಕೆಂಬ ಭಾರತೀಯ ಕ್ರಿಕೆಟ್ ಮಂಡಳಿಯ ಕನಸು ಕಮರಿದೆ. ಏಕೆಂದರೆ ಮುಂದಿನ ಮೂರು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವು ಇಂಗ್ಲೆಂಡ್​ನಲ್ಲೇ ಜರುಗಲಿದೆ. ಇದಕ್ಕೂ ಮುನ್ನ WTC ಫೈನಲ್​ ಪಂದ್ಯದ ಆತಿಥ್ಯಕ್ಕಾಗಿ ಬಿಸಿಸಿಐ ತೆರೆಮರೆಯ ಪ್ರಯತ್ನ ನಡೆಸಿತ್ತು. ಆದರೀಗ ಮುಂದಿನ ಮೂರು ಆವೃತ್ತಿಗಳ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ಪಂದ್ಯವನ್ನು ಇಂಗ್ಲೆಂಡ್​ನಲ್ಲೇ ಆಯೋಜಿಸಲು ಐಸಿಸಿ ನಿರ್ಧರಿಸಿದೆ.

ಈ ಬಾರಿ ನಡೆದ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೀಗಾಗಿ ಮುಂಬರುವ ಫೈನಲ್​ ಪಂದ್ಯಗಳನ್ನೂ ಇಂಗ್ಲೆಂಡ್​ನಲ್ಲೇ ಆಯೋಜಿಸಲು ಐಸಿಸಿ ನಿರ್ಧರಿಸಿದೆ.
ಇದಕ್ಕೂ ಮುನ್ನ 2025ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಪಂದ್ಯಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎನ್ನಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಭಾರತ ತಂಡವು ಈ ಬಾರಿ ಫೈನಲ್​ಗೆ ಪ್ರವೇಶಿಸದಿರುವುದು.

ಟೀಮ್ ಇಂಡಿಯಾ ಫೈನಲ್​ನಲ್ಲಿ ಇಲ್ಲದಿದ್ದರೆ, ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರ ಅಭಾವ ಎದುರಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇಂಗ್ಲೆಂಡ್​ನ ಕ್ರಿಕೆಟ್ ಪ್ರೇಮಿಗಳು ಈ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದರು. ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಣ ಫೈನಲ್ ಫೈಟ್ ವೀಕ್ಷಿಸಲು ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದರು.

ಅಂದರೆ ಇಂಗ್ಲೆಂಡ್ ತಂಡವು ಫೈನಲ್​ನಲ್ಲಿ ಇಲ್ಲದಿದ್ದರೂ, ಭಾರತ ಫೈನಲ್​ಗೆ ಪ್ರವೇಶಿಸದಿದ್ದರೂ, ಇಂಗ್ಲೆಂಡ್​ನ ಕ್ರಿಕೆಟ್ ಪ್ರೇಮಿಗಳಿಂದ ಉತ್ತಮ ಸ್ಪಂದನೆ ದೊರೆತಿದೆ. ಹೀಗಾಗಿ ಮುಂಬರುವ ಮೂರು WTC ಫೈನಲ್ ಪಂದ್ಯಗಳ ಆಯೋಜನೆಯ ಹಕ್ಕುಗಳನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ಗೆ ನೀಡಲಾಗಿದೆ.

ಹ್ಯಾಟ್ರಿಕ್ ಫೈನಲ್:

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯಲ್ಲಿ ಈವರೆಗೆ ಮೂರು ಫೈನಲ್​ ಆಡಲಾಗಿದೆ. 2021 ರಲ್ಲಿ ನಡೆದ ಮೊದಲ WTC ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್‌ನ ಸೌತಾಂಪ್ಟನ್‌ ಆತಿಥ್ಯವಹಿಸಿತ್ತು. ಇನ್ನು 2023ರ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಲಂಡನ್‌ನಲ್ಲಿರುವ ಐತಿಹಾಸಿಕ ಮೈದಾನವಾದ ದಿ ಓವಲ್‌ನಲ್ಲಿ ಆಯೋಜಿಸಲಾಗಿತ್ತು. ಅಲ್ಲದೆ 2025ರ WTC ಫೈನಲ್ ಪಂದ್ಯ ನಡೆದಿರುವುದು ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ. ಈ ಮೂಲಕ ಇಂಗ್ಲೆಂಡ್ ಹ್ಯಾಟ್ರಿಕ್ ಫೈನಲ್ ಆಯೋಜಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: 5 ವರ್ಷಗಳಲ್ಲಿ 9 ಐಸಿಸಿ ಟೂರ್ನಿ: 3 ಪಂದ್ಯಾವಳಿಗಳಿಗೆ ಭಾರತ ಆತಿಥ್ಯ..!

ಇದೀಗ 2027, 2029 ಮತ್ತು 2031ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಗಳ ಆಯೋಜನೆಯ ಹಕ್ಕುಗಳನ್ನು ಐಸಿಸಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ಗೆ ನೀಡಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವನ್ನು ಆಯೋಜಿಸಲು ಭಾರತ 8 ವರ್ಷಗಳವರೆಗೆ ಕಾಯಲೇಬೇಕು. ಅಂದರೆ ಬಿಸಿಸಿಐ 2033ರ ಫೈನಲ್ ಆಯೋಜನೆಯ ಹಕ್ಕುಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ ಮಾತ್ರ WTC ಸರಣಿಯ ಅಂತಿಮ ಪಂದ್ಯ ಭಾರತದಲ್ಲಿ ಜರುಗಲಿದೆ.

Follow Us
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ
ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ
ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ
ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ
‘ರಾಶಿಕಾಗಿಂತ ನನಗೆ ಅವರೇ ಹೆಚ್ಚು ಇಷ್ಟ’; ಓಪನ್ ಆಗಿ ಹೇಳಿದ ಸೂರಜ್ 
‘ರಾಶಿಕಾಗಿಂತ ನನಗೆ ಅವರೇ ಹೆಚ್ಚು ಇಷ್ಟ’; ಓಪನ್ ಆಗಿ ಹೇಳಿದ ಸೂರಜ್ 
ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಅಯೋಧ್ಯೆಯಲ್ಲಿ ಬಂದೂಕು ತೋರಿಸಿ ಆಭರಣದಂಗಡಿ ದೋಚಿದ ಬುರ್ಖಾಧಾರಿ ಮಹಿಳೆ
ಅಯೋಧ್ಯೆಯಲ್ಲಿ ಬಂದೂಕು ತೋರಿಸಿ ಆಭರಣದಂಗಡಿ ದೋಚಿದ ಬುರ್ಖಾಧಾರಿ ಮಹಿಳೆ
ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್
ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್
ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್
ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್