5 ವರ್ಷಗಳಲ್ಲಿ 9 ಐಸಿಸಿ ಟೂರ್ನಿ: 3 ಪಂದ್ಯಾವಳಿಗಳಿಗೆ ಭಾರತ ಆತಿಥ್ಯ..!
ICC Tournaments 2026 To 2031: ಐಸಿಸಿ 2026 ರಿಂದ 2031ರ ನಡುವೆ ಒಟ್ಟು 9 ಟೂರ್ನಿಗಳನ್ನು ಆಯೋಜಿಸಲಿದೆ. ಈ ಟೂರ್ನಿಗಳಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಹೊರತುಪಡಿಸಿ ಮಿಕ್ಕೆಲ್ಲಾ ಪಂದ್ಯಾವಳಿಗಳು ಜಂಟಿಯಾಗಿ ಆಯೋಜನೆಗೊಳ್ಳಲಿರುವುದು ವಿಶೇಷ. ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಗಳು ಇಂಗ್ಲೆಂಡ್ನಲ್ಲಿ ಜರುಗಲಿದೆ.
Updated on:Jul 21, 2025 | 8:56 AM

ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂಬರುವ 5 ವರ್ಷಗಳಲ್ಲಿ ಒಟ್ಟು 9 ಟೂರ್ನಿಗಳನ್ನು ಆಯೋಜಿಸಲಿದೆ. ಈ ಟೂರ್ನಿಗಳ ಆತಿಥ್ಯ ರಾಷ್ಟ್ರಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಭಾರತಕ್ಕೆ ಮೂರು ಪಂದ್ಯಾವಳಿಗಳ ಆತಿಥ್ಯವನ್ನು ನೀಡಲಾಗಿದೆ. ಆದರೆ ಇದರಲ್ಲಿ 2 ಟೂರ್ನಿಗಳನ್ನು ಭಾರತ ಜಂಟಿಯಾಗಿ ಆಯೋಜಿಸಬೇಕಿದೆ. ಐಸಿಸಿಯ ಮುಂದಿನ 9 ಟೂರ್ನಿಗಳಾವು, ಅವುಗಳು ನಡೆಯುವುದೆಲ್ಲಿ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ಟಿ20 ವಿಶ್ವಕಪ್ 2026: ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿದೆ. | ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2027 ಫೈನಲ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಫೈನಲ್ ಪಂದ್ಯವನ್ನು ಇಂಗ್ಲೆಂಡ್ನಲ್ಲಿ ಆಯೋಜಿಸಲಾಗುತ್ತದೆ. | ಏಕದಿನ ವಿಶ್ವಕಪ್ 2027: ಮುಂದಿನ ಏಕದಿನ ವಿಶ್ವಕಪ್ ಅನ್ನು ಸೌತ್ ಆಫ್ರಿಕಾ, ಝಿಂಬಾಬ್ವೆ, ನಮೀಬಿಯಾ ಜಂಟಿಯಾಗಿ ಆಯೋಜಿಸಲಿದೆ.

ಟಿ20 ವಿಶ್ವಕಪ್ 2028: ಆಸ್ಟ್ರೇಲಿಯಾ ಹಾಗೂ ನ್ಯೂಝಿಲೆಂಡ್ 2028ರ ಟಿ20 ವಿಶ್ವಕಪ್ಗೆ ಆತಿಥ್ಯವಹಿಸಲಿದೆ. | ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2029 ಫೈನಲ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ 5ನೇ ಫೈನಲ್ ಪಂದ್ಯ ಕೂಡ ಇಂಗ್ಲೆಂಡ್ನಲ್ಲೇ ನಡೆಯಲಿದೆ. | ಚಾಂಪಿಯನ್ಸ್ ಟ್ರೋಫಿ 2029: ಭಾರತದಲ್ಲಿ 2029 ರಲ್ಲಿ ಚಾಂಪಿಯನ್ಸ್ ಟ್ರೋಫಿ ಜರುಗಲಿದೆ.

ಟಿ20 ವಿಶ್ವಕಪ್ 2030: ಇಂಗ್ಲೆಂಡ್, ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್ ಜಂಟಿಯಾಗಿ 2030 ಟಿ20 ವಿಶ್ವಕಪ್ ಅನ್ನು ಆಯೋಜಿಸಲಿದೆ. | ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2031 ಫೈನಲ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2031ರ ಫೈನಲ್ ಪಂದ್ಯಕ್ಕೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆತಿಥ್ಯವಹಿಸಲಿದೆ. | ಏಕದಿನ ವಿಶ್ವಕಪ್ 2031: ಭಾರತ ಮತ್ತು ಬಾಂಗ್ಲಾದೇಶ್ 2031 ರಲ್ಲಿ ಜಂಟಿಯಾಗಿ ಏಕದಿನ ವಿಶ್ವಕಪ್ ಅನ್ನು ಆಯೋಜಿಸಲಿದೆ.

ಅಂದರೆ ಮುಂದಿನ ಮೂರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಇಂಗ್ಲೆಂಡ್ನಲ್ಲೇ ಜರುಗಲಿದೆ. ಈ ಹಿಂದಿನ ಮೂರು ಆವೃತ್ತಿಗಳ ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆತಿಥ್ಯವಹಿಸಿತ್ತು. ಇದೀಗ ಮುಂದಿನ ಮೂರು ಆವೃತ್ತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಇಸಿಬಿ ಯಶಸ್ವಿಯಾಗಿದೆ. ಇತ್ತ ಬಿಸಿಸಿಐ, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಏಕದಿನ ವಿಶ್ವಕಪ್ನ ಆತಿಥ್ಯದ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ.
Published On - 8:55 am, Mon, 21 July 25
