‘ನಾನು ಆಡೋದನ್ನು ಅವರು ಸಹಿಸಲ್ಲ, ನನ್ನ ಕಂಡ್ರೆ ಹೊಟ್ಟೆಕಿಚ್ಚು’; ಸಿಟ್ಟು ಹೊರಹಾಕಿದ ರಹಾನೆ
IPL 2026ರಲ್ಲಿ KKR ಸತತ ಸೋಲುಗಳ ಬಳಿಕ ಅಜಿಂಕ್ಯ ರಹಾನೆ ತೀವ್ರ ಟೀಕೆ ಎದುರಿಸುತ್ತಿದ್ದಾರೆ. 'ನಾನು ಆಡುವುದನ್ನು ಸಹಿಸಲ್ಲ, ನನ್ನ ಯಶಸ್ಸು ಕಂಡರೆ ಅವರಿಗೆ ಹೊಟ್ಟೆಕಿಚ್ಚು' ಎಂದು ರಹಾನೆ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಸ್ಟ್ರೈಕ್ ರೇಟ್ ಸಮರ್ಥಿಸಿಕೊಂಡ ಅವರು, ಟೀಕಾಕಾರರಿಗೆ ಆಟದ ಅರಿವಿಲ್ಲ, ಅಥವಾ ನನ್ನ ಆಟ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಅಂಜಿಕ್ಯ ರಹಾನೆ ನೇತೃತ್ವದ ಕೋಲ್ಕತ್ತ ನೈಟ್ ರೈಡರ್ಸ್ ಈ ಐಪಿಎಲ್ ಸೀಸನ್ ಅಲ್ಲಿ ಸತತ ಎರಡನೇ ಸೋಲು ಕಂಡಿದೆ. ಇದು ತಂಡಕ್ಕೆ ದೊಡ್ಡ ಹಿನ್ನಡೆ ತಂದಿದೆ. ಎರಡು ಸೋಲು ತಂಡದವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಸಾಧ್ಯತೆ ಇರುತ್ತದೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಹಾನೆ ಅವರಿಂದ ನಿರೀಕ್ಷಿತ ಮಟ್ಟದ ಆಟ ಬಂದಿಲ್ಲ. ಅವರು 10 ಬಾಲ್ಗಳಿಗೆ 8 ರನ್ ಹೊಡೆಯಲಷ್ಟೇ ಶಕ್ಯರಾದರು. ಈ ಕಾರಣಕ್ಕೆ ಅವರನ್ನು ಟೀಕೆ ಮಾಡಲಾಗುತ್ತಿದೆ. ಆದರೆ, ಈ ಟೀಕೆಯನ್ನು ತೆಗೆದುಕೊಳ್ಳಲು ಅವರು ಸಿದ್ಧರಿಲ್ಲ.
‘2023ರಿಂದ ಇಲ್ಲಿಯವರೆಗೆ ನಾನು ಅತ್ಯುತ್ತಮ ಸ್ಟ್ರೈಕ್ ರೇಟ್ ಕಾಪಾಡಿಕೊಂಡು ಬಂದಿದ್ದೇನೆ. ನನ್ನ ಬಗ್ಗೆ ಮಾತನಾಡುತ್ತಿರುವವರು ಬಹುಶಃ ನನ್ನ ಆಟವನ್ನು ನೋಡುತ್ತಿಲ್ಲ. ನನ್ನ ವಿರುದ್ಧ ಅವರಿಗೆ ನಿರ್ದಿಷ್ಟ ಅಜೆಂಡಾ ಇದೆ. ನಾನು ಆಡುವುದನ್ನು ಅವರು ಇಷ್ಟಪಡುವುದಿಲ್ಲ. ನಾನು ಆಡುವುದನ್ನು ನೋಡಲು ಅವರಿಗೆ ಆಗುವುದಿಲ್ಲ’ ಎಂದು ಅಸಮಾಧಾನ ಹೊರಹಾಕಿದರು ರಹಾನೆ.
‘ನನಗೆ ಸಿಕ್ಕಿರುವ ಯಶಸ್ಸಿನ ಪ್ರಮಾಣ ನೋಡಿ ಕೆಲವರಿಗೆ ನನ್ನ ಮೇಲೆ ಅಸೂಯೆ ಮೂಡಿರಬಹುದು. ನನಗೆ ಹೆಚ್ಚು ಚಿಂತೆ ಇಲ್ಲ. ನಾನು ಏನು ಮಾಡುತ್ತಿದ್ದೇನೆ ಎಂಬುದು ನಿಮಗೆಲ್ಲಾ ಗೊತ್ತು. ಒಂದೇ ಒಂದು ಕೆಟ್ಟ ಇನ್ನಿಂಗ್ಸ್.. ಕೆಟ್ಟ ಇನ್ನಿಂಗ್ಸ್ ಎಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಆಡಬೇಕು ಎಂಬುದು ನನಗೂ ಇತ್ತು. ಆದರೆ, ಕೆಲವೊಮ್ಮೆ ಬ್ಯಾಟ್ಸ್‌ಮನ್ ಆಗಿ ನಿಮಗೆ ಆ ಲಯ ಸಿಗುವುದಿಲ್ಲ. ಮಾತನಾಡುತ್ತಿರುವ ಜನರಿಗೆ, ಒಂದೋ ಅವರಿಗೆ ಆಟ ಅರ್ಥವಾಗುವುದಿಲ್ಲ ಅಥವಾ ಅವರು ನಾನು ಬೇರೆ ರೀತಿಯ ಇನ್ನಿಂಗ್ಸ್ ಆಡಬೇಕೆಂದು ಬಯಸುತ್ತಾರೆ’ ಎಂದು ಕೋಪಗೊಂಡರು.
‘ಅಜಿಂಕ್ಯ ರಹಾನೆ ತನ್ನನ್ನು ಹಾಗೂ ತನ್ನ ಆಟವನ್ನು ಈ ಮಟ್ಟಕ್ಕೆ ಸಾಬೀತುಪಡಿಸುತ್ತಾರೆಂದು ಅವರು ನಿರೀಕ್ಷಿಸಿರಲಿಲ್ಲ. ಆದ್ದರಿಂದ ಅವರು ನನ್ನ ಬಗ್ಗೆ ಮಾತನಾಡುತ್ತಿರುವುದಕ್ಕೆ ಖುಷಿ ಇದೆ. ಅದು ನಕಾರಾತ್ಮಕವಾಗಿರಲಿ ಅಥವಾ ಸಕಾರಾತ್ಮಕವಾಗಿರಲಿ. ಅವರು ಮಾತನಾಡಲಿ’ ಎಂದು ತಮ್ಮ ಮಾತುಗಳಲ್ಲೇ ಟೀಕಾಕಾರರಿಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ಕೆಕೆಆರ್ಗೆ ಸತತ ಎರಡನೇ ಸೋಲು; ಗೆಲುವಿನ ಖಾತೆ ತೆರೆದ ಸನ್‌ರೈಸರ್ಸ್ ಹೈದರಾಬಾದ್ ನೀಡಿದ 227 ರನ್ಗಳ ಟಾರ್ಗೆಟ್ ಬೆನ್ನು ಹತ್ತಿದ ಕೆಕೆಆರ್ ಕೇವಲ 161 ರನ್ಗಳನ್ನು ಗಳಿಸಲಷ್ಟೇ ಶಕ್ಯವಾಯಿತು. 120 ರನ್ಗಳಿಗೆ ತಂಡ 3 ವಿಕೆಟ್ ನಷ್ಟ ಅನುಭವಿಸಿತ್ತು. ಬಳಿಕ 41 ರನ್ ಗಳಿಸುವಷ್ಟರಲ್ಲಿ ಆಲ್ಔಟ್ ಆಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
