T20 World Cup 2026 Tickets: ಜೇಬಿನಲ್ಲಿ 500 ರೂ ಇದ್ದರೆ ಸಾಕು ಭಾರತ- ಪಾಕ್ ಪಂದ್ಯವನ್ನು ನೋಡಬಹುದು
T20 World Cup 2026 Tickets: 2026ರ ಟಿ20 ವಿಶ್ವಕಪ್‌ಗೆ ಟಿಕೆಟ್ ಮಾರಾಟ ಆರಂಭವಾಗಿದ್ದು, ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುವ ಪಂದ್ಯಗಳಿಗೆ ಭಾರಿ ಬೇಡಿಕೆ ಬಂದಿದೆ. ವಿಶೇಷವಾಗಿ ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ. ಐಸಿಸಿ ಅನೇಕ ಪಂದ್ಯಗಳಿಗೆ ಕಡಿಮೆ ಬೆಲೆ ನಿಗದಿಪಡಿಸಿದ್ದು (₹100 ರಿಂದ ಪ್ರಾರಂಭ), ಭಾರತ ತಂಡದ ಇತರ ಪಂದ್ಯಗಳ ಟಿಕೆಟ್‌ಗಳೂ ವೇಗವಾಗಿ ಮಾರಾಟವಾಗಿವೆ.

2026 ರ ಟಿ20 ವಿಶ್ವಕಪ್‌ಗೆ (T20 World Cup 2026) ಎರಡು ತಿಂಗಳುಗಳಿಗಿಂತ ಕಡಿಮೆ ಸಮಯ ಉಳಿದಿದೆ. 20 ತಂಡಗಳನ್ನು ಒಳಗೊಂಡ ಈ ಪಂದ್ಯಾವಳಿ ಫೆಬ್ರವರಿ 7 ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ಪ್ರಾರಂಭವಾಗಲಿದೆ. ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಪಂದ್ಯಾವಳಿಯ ಟಿಕೆಟ್ ಮಾರಾಟ ಪ್ರಾರಂಭವಾಗುವುದೊಂದೇ ಬಾಕಿ ಇತ್ತು. ಇದೀಗ ಅದಕ್ಕೂ ಚಾಲನೆ ನೀಡಲಾಗಿದೆ. ವಾಸ್ತವವಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದ ದಿನದಂದು ಐಸಿಸಿ (ICC), ವಿಶ್ವಕಪ್‌ನ ಲೀಗ್ ಹಂತದ ಪಂದ್ಯಗಳ ಟಿಕೆಟ್‌ಗಳ ಮೊದಲ ಕಂತಿನ ಮಾರಾಟವನ್ನು ಆರಂಭಿಸಿದೆ. ಆ ಪ್ರಕಾರ, ಟೂರ್ನಿಯ ಬಹುನಿರೀಕ್ಷಿತ ಪಂದ್ಯವಾದ ಭಾರತ-ಪಾಕಿಸ್ತಾನ (India vs Pakistan) ನಡುವಿನ ಪಂದ್ಯದ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ.
ಕಡಿಮೆ ಬೆಲೆಗೆ ಟಿಕೆಟ್ ಮಾರಾಟ
ಭಾರತ ಮತ್ತು ಶ್ರೀಲಂಕಾ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ 2026 ರ ಟಿ20 ವಿಶ್ವಕಪ್ ಅನ್ನು ಆಯೋಜಿಸಲಿವೆ. ಈ ಅವಧಿಯಲ್ಲಿ, ಎಲ್ಲಾ ತಂಡಗಳು ಫೆಬ್ರವರಿ 20 ರವರೆಗೆ ಗುಂಪು ಹಂತದಲ್ಲಿ ತಮ್ಮ ತಮ್ಮ ಪಂದ್ಯಗಳನ್ನು ಆಡುತ್ತವೆ. ಗುಂಪು ಹಂತದಲ್ಲಿ ಒಟ್ಟು 40 ಪಂದ್ಯಗಳು ನಡೆಯಲಿವೆ. ಈ 40 ಪಂದ್ಯಗಳ ಟಿಕೆಟ್ ಮಾರಾಟ ಗುರುವಾರ ಪ್ರಾರಂಭವಾಗಿದ್ದು, ಮೊದಲ ಸುತ್ತಿಗೆ ಅನೇಕ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ. ಗಮನಾರ್ಹವಾಗಿ, ಐಸಿಸಿ ಟಿಕೆಟ್ ಬೆಲೆಗಳನ್ನು ತುಂಬಾ ಕಡಿಮೆ ಇರಿಸಿದ್ದು, ಅನೇಕ ಪಂದ್ಯಗಳ ಟಿಕೆಟ್‌ಗಳ ಬೆಲೆ ಕೇವಲ 100 ರೂ. ಗಳಿಂದ ಪ್ರಾರಂಭವಾಗುತ್ತದೆ.
ಭಾರತ-ಪಾಕ್ ಪಂದ್ಯದ ಟಿಕೆಟ್‌ಗಳು ಸೋಲ್ಡ್ ಔಟ್
ವಾಸ್ತವವಾಗಿ ಗುರುವಾರ ಸಂಜೆ 6:45 ಕ್ಕೆ ಟಿಕೆಟ್‌ಗಳ ಮಾರಾಟವನ್ನು ಪ್ರಾರಂಭಿಸಲಾಯಿತು. ಟಿಕೆಟ್ ಮಾರಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಮೊದಲ ಬ್ಯಾಚ್‌ನ ಎಲ್ಲಾ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾದವು. ಕೇವಲ ಅರ್ಧ ಗಂಟೆಯೊಳಗೆ, ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಬಿಕರಿಯಾದವು.
ಫೆಬ್ರವರಿ 15 ರಂದು ನಡೆಯಲಿರುವ ಈ ಹೈವೋಲ್ಟೇಜ್ ಕದನದ ಟಿಕೆಟ್‌ಗಳ ಬೆಲೆಯನ್ನು ಐಸಿಸಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟಕ್ಕಿಟ್ಟಿದೆ. ಅಂದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಆರಂಭಿಕ ಟಿಕೆಟ್ ಬೆಲೆಯನ್ನು 1500 ಶ್ರೀಲಂಕಾ ರೂಪಾಯಿಗೆ ನಿಗಧಿಪಡಿಸಲಾಗಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಕೇವಲ 438 ರೂಪಾಯಿಗಳು. ಪರಿಣಾಮವಾಗಿ, ಟಿಕೆಟ್‌ಗಳು ಕ್ಷಣಮಾತ್ರದಲ್ಲಿ ಮಾರಾಟವಾಗಿವೆ.
𝗧𝗛𝗘 𝗧𝗜𝗖𝗞𝗘𝗧𝗦 𝗔𝗥𝗘 𝗢𝗨𝗧 🎟️
At historic low entry-level prices, witness the world’s best in action at the ICC Men's #T20WorldCup 2026 in India and Sri Lanka ➡️ https://t.co/MSLEQzcObb pic.twitter.com/iMBPdpixMf
— ICC (@ICC) December 11, 2025
ಈ ಪಂದ್ಯಗಳ ಟಿಕೆಟ್‌ಗಳು ಸಹ ಸೋಲ್ಡ್ ಔಟ್
ಭಾರತ ತಂಡದ ಇತರ ಪಂದ್ಯಗಳಿಗೆ ಸಂಬಂಧಿಸಿದಂತೆ, ಟೀಂ ಇಂಡಿಯಾ ಫೆಬ್ರವರಿ 7 ರಂದು ಮುಂಬೈನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ಈ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿದೆ. ಈ ಪಂದ್ಯದ ಟಿಕೆಟ್‌ಗಳ ಬೆಲೆಯನ್ನು 750 ರೂಗಳಿಗೆ ನಿಗಧಿಪಡಿಸಲಾಗಿದ್ದು, ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಅದೇ ರೀತಿ, ಫೆಬ್ರವರಿ 12 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ-ನಮೀಬಿಯಾ ಪಂದ್ಯದ ಟಿಕೆಟ್‌ಗಳು ಸಹ ಮಾರಾಟವಾಗಿವೆ. ಈ ಪಂದ್ಯದ ಟಿಕೆಟ್ ಬೆಲೆಯೂ ಸಹ750 ರೂಗಳಿಂದ ಪ್ರಾರಂಭವಾಗುತ್ತವೆ. ಉಳಿದಂತೆ ಭಾರತ-ನೆದರ್‌ಲ್ಯಾಂಡ್ಸ್ ಪಂದ್ಯದ ಟಿಕೆಟ್‌ಗಳು ಮಾತ್ರ 500 ರೂಗಳಿಂದ ಪ್ರಾರಂಭವಾಗುತ್ತವೆ. ಈ ಪಂದ್ಯವು ಫೆಬ್ರವರಿ 18 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:28 pm, Thu, 11 December 25
