ICC World Cup 2023: ಬರೋಬ್ಬರಿ 23 ಸಾವಿರ ರನ್​ಗಳು: 683 ವಿಕೆಟ್​ಗಳು..!

ICC World Cup 2023: ಏಕದಿನ ವಿಶ್ವಕಪ್​ನ ಮೂರು ಪಂದ್ಯಗಳು ಇನ್ನೂ ಬಾಕಿಯಿವೆ. ಇದರಲ್ಲಿ 2 ಸೆಮಿ ಫೈನಲ್ಸ್​ ಹಾಗೂ ಒಂದು ಫೈನಲ್ ಪಂದ್ಯ ಸೇರಿದೆ. ಅದರಲ್ಲೂ ಸೆಮಿಫೈನಲ್​ ಹಂತದಲ್ಲಿ ಕಣಕ್ಕಿಳಿಯುತ್ತಿರುವುದು ಬಲಿಷ್ಠ ಪಡೆ ಎಂದೇ ಗುರುತಿಸಿಕೊಂಡಿರುವ ಟೀಮ್ ಇಂಡಿಯಾ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಝಿಲೆಂಡ್ ತಂಡಗಳು.

ICC World Cup 2023: ಬರೋಬ್ಬರಿ 23 ಸಾವಿರ ರನ್​ಗಳು: 683 ವಿಕೆಟ್​ಗಳು..!
ICC World Cup 2023
Follow us
TV9 Web
| Updated By: ಝಾಹಿರ್ ಯೂಸುಫ್

Updated on: Nov 13, 2023 | 5:58 PM

ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ರನ್ ಪ್ರವಾಹವೇ ಹರಿದು ಬಂದಿದೆ. ಇದಕ್ಕೆ ಸಾಕ್ಷಿಯೇ ಲೀಗ್ ಹಂತದ 45 ಪಂದ್ಯಗಳಲ್ಲಿ ಮೂಡಿಬಂದಿರುವ ಒಟ್ಟು ಸ್ಕೋರ್. ಅಂದರೆ ಈ ಬಾರಿಯ ವಿಶ್ವಕಪ್​ನ ಲೀಗ್ ಹಂತದಲ್ಲಿ ಒಟ್ಟು 45 ಪಂದ್ಯಗಳನ್ನಾಡಲಾಗಿದೆ. ಈ ವೇಳೆ 10 ತಂಡಗಳು ಸೇರಿ ಕಲೆಹಾಕಿರುವ ಒಟ್ಟು ರನ್​ಗಳ ಮೊತ್ತ 23 ಸಾವಿರವನ್ನು ದಾಟಿದೆ ಎಂದರೆ ನಂಬಲೇಬೇಕು.  ಹಾಗಿದ್ರೆ ಈ ಬಾರಿಯ ವಿಶ್ವಕಪ್​ನ ಲೀಗ್ ಹಂತದ ಪಂದ್ಯಗಳಲ್ಲಿ ಕಲೆಹಾಕಿರುವ ರನ್​ಗಳು, ಪಡೆದಿರುವ ವಿಕೆಟ್​ಗಳು, ಹಿಡಿದ ಕ್ಯಾಚ್​ಗಳೆಷ್ಟು ಎಂಬುದರ ಸಂಪೂರ್ಣ ಮಾಹಿತಿ ನೋಡೋಣ…

  • ಒಟ್ಟು ರನ್​ಗಳು: ಲೀಗ್​ ಹಂತದ 45 ಪಂದ್ಯಗಳಿಂದ 10 ತಂಡಗಳು ಸೇರಿ 23002 ರನ್​ಗಳನ್ನು ಕಲೆಹಾಕಿದ್ದಾರೆ.
  • ಸಿಕ್ಸ್​ಗಳ ಸಂಖ್ಯೆ: ಈ ಬಾರಿಯ ವಿಶ್ವಕಪ್​ನಲ್ಲಿ ಇದುವರೆಗೆ 592 ಸಿಕ್ಸ್​ಗಳನ್ನು ಸಿಡಿಸಲಾಗಿದೆ.
  • ಒಟ್ಟು ಕ್ಯಾಚ್​ಗಳು: ಲೀಗ್ ಹಂತದ ಪಂದ್ಯಗಳಲ್ಲಿ ಹಿಡಿದಿರುವ ಒಟ್ಟು ಕ್ಯಾಚ್​ಗಳ ಸಂಖ್ಯೆ ಬರೋಬ್ಬರಿ 429.
  • ಶತಕಗಳ ಸಂಖ್ಯೆ: ಈ ಬಾರಿಯ ವಿಶ್ವಕಪ್​ನಲ್ಲಿ ಇದುವರೆಗೆ ಒಟ್ಟು 35 ಶತಕಗಳು ಮೂಡಿ ಬಂದಿವೆ.
  • ಅರ್ಧಶತಕಗಳ ಸಂಖ್ಯೆ: ಲೀಗ್ ಹಂತದಲ್ಲಿ ಒಟ್ಟು 113 ಅರ್ಧಶತಕಗಳನ್ನು ಬಾರಿಸಿದ್ದಾರೆ.
  • ಒಟ್ಟು ವಿಕೆಟ್​ಗಳು: 45 ಪಂದ್ಯಗಳಿಂದ ಒಟ್ಟು 683 ವಿಕೆಟ್​ಗಳನ್ನು ಕಬಳಿಸಲಾಗಿದೆ.
  • ಶೂನ್ಯಕ್ಕೆ ಔಟ್: 45 ಪಂದ್ಯಗಳಲ್ಲಿ ಒಟ್ಟು 56 ಬಾರಿ ಬ್ಯಾಟರ್​​ ಶೂನ್ಯಕ್ಕೆ ಔಟಾಗಿದ್ದಾರೆ.
  • ಮೇಡನ್ ಓವರ್: ಲೀಗ್​ ಹಂತದಲ್ಲಿ ಒಟ್ಟು 137 ಮೇಡನ್ ಓವರ್​ಗಳನ್ನು ಎಸೆಯಲಾಗಿದೆ.
  • ಫೋರ್​ಗಳ ಸಂಖ್ಯೆ: 45 ಪಂದ್ಯಗಳಿಂದ ಮೂಡಿಬಂದ ಒಟ್ಟು ಫೋರ್​ಗಳ ಸಂಖ್ಯೆ ಬರೋಬ್ಬರಿ 2109.

ಇದನ್ನೂ ಓದಿ: ಮೈದಾನಕ್ಕೆ ಡ್ರಿಂಕ್ಸ್ ತಂದು ತಾನೇ ಕುಡಿದ ಇಶಾನ್ ಕಿಶನ್..!

3 ಪಂದ್ಯಗಳು ಬಾಕಿ:

ಏಕದಿನ ವಿಶ್ವಕಪ್​ನ ಮೂರು ಪಂದ್ಯಗಳು ಇನ್ನೂ ಬಾಕಿಯಿವೆ. ಇದರಲ್ಲಿ 2 ಸೆಮಿ ಫೈನಲ್ಸ್​ ಹಾಗೂ ಒಂದು ಫೈನಲ್ ಪಂದ್ಯ ಸೇರಿದೆ. ಅದರಲ್ಲೂ ಸೆಮಿಫೈನಲ್​ ಹಂತದಲ್ಲಿ ಕಣಕ್ಕಿಳಿಯುತ್ತಿರುವುದು ಬಲಿಷ್ಠ ಪಡೆ ಎಂದೇ ಗುರುತಿಸಿಕೊಂಡಿರುವ ಟೀಮ್ ಇಂಡಿಯಾ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಝಿಲೆಂಡ್ ತಂಡಗಳು. ಹೀಗಾಗಿ ವಿಶ್ವಕಪ್​ ಮುಕ್ತಾಯದ ವೇಳೆಗೆ ಈ ಅಂಕಿ ಅಂಶಗಳಲ್ಲಿ ಮತ್ತಷ್ಟು ಬದಲಾವಣೆ ಕಂಡು ಬರಲಿದೆ.

ಏಕದಿನ ವಿಶ್ವಕಪ್​ ಸೆಮಿ ಫೈನಲ್ ವೇಳಾಪಟ್ಟಿ:

  1. ಮೊದಲ ಸೆಮಿಫೈನಲ್​: ನವೆಂಬರ್ 15 (ಬುಧವಾರ)– ಭಾರತ vs ನ್ಯೂಝಿಲೆಂಡ್​ (ವಾಂಖೆಡೆ ಸ್ಟೇಡಿಯಂ, ಮುಂಬೈ)
  2. ಎರಡನೇ ಸೆಮಿಫೈನಲ್: ನವೆಂಬರ್ 16 (ಗುರುವಾರ)– ಸೌತ್ ಆಫ್ರಿಕಾ vs ಆಸ್ಟ್ರೇಲಿಯಾ (ಈಡನ್ ಗಾರ್ಡನ್ಸ್​ ಸ್ಟೇಡಿಯಂ, ಕೊಲ್ಕತ್ತಾ)
  3. ಫೈನಲ್ ಪಂದ್ಯ: ನವೆಂಬರ್ 19 (ಭಾನುವಾರ)- ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್