ಏಕದಿನ ವಿಶ್ವಕಪ್ನಲ್ಲಿ (ICC World Cup 2023) ಭಾರತ ನಿರೀಕ್ಷೆಯಂತೆಯೇ ಪ್ರದರ್ಶನ ನೀಡಿದೆ. ಲೀಗ್ ಸುತ್ತಿನಲ್ಲಿ ಇದುವರೆಗೆ ಆಡಿದ ಏಳು ಪಂದ್ಯಗಳಲ್ಲಿ ಏಳರಲ್ಲಿ ಗೆದ್ದಿದೆ. ಈ ಮೂಲಕ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ (World Cup 2023 Points Table) ಭಾರತ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ತಲುಪಿದೆ. ಅಲ್ಲದೆ, ಸೆಮಿಫೈನಲ್ ಸುತ್ತಿನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಭಾರತ ಅಧಿಕೃತವಾಗಿ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದ ಮೊದಲ ತಂಡವಾಗಿದೆ. ಮತ್ತೊಂದೆಡೆ, ಆರು ತಂಡಗಳು ಸೆಮಿಫೈನಲ್‌ಗಾಗಿ ಸೆಣಸಾಟ ನಡೆಸುತ್ತಿವೆ. ಭಾರತದ ವಿರುದ್ಧ 302 ರನ್ಗಳಿಂದ ಸೋತಿರುವ ಶ್ರೀಲಂಕಾಗೂ (India vs Sri Lanka) ಸೆಮಿಸ್ಗೇರುವ ಅವಕಾಶಗಳಿವೆ ಆದರೆ ಅದರ ನೆಟ್ ರನ್ಗೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಬಾಂಗ್ಲಾದೇಶ, ಇಂಗ್ಲೆಂಡ್ ಬಳಿಕ ಟೂರ್ನಿಯಲ್ಲಿ ಶ್ರೀಲಂಕಾ ಸವಾಲು ಅಂತ್ಯಗೊಂಡಿದೆ ಎಂದೇ ಹೇಳಬಹುದಾಗಿದೆ.
ಇದೀಗ ಸೆಮಿಫೈನಲ್‌ಗಾಗಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನೆದರ್ಲೆಂಡ್ಸ್ ನಡುವೆ ಪೈಪೋಟಿ ನಡೆಯಲ್ಲಿದೆ. ಈ ಆರು ತಂಡಗಳ ಪೈಕಿ ಮೂರು ತಂಡಗಳಿಗೆ ಸೆಮಿಫೈನಲ್‌ನಲ್ಲಿ ಅವಕಾಶ ಸಿಗಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸೆಮಿಫೈನಲ್ ಚಿತ್ರಣ ಸ್ಪಷ್ಟವಾಗಲಿದೆ.
IND vs SL: ಲಂಕಾ ವಿರುದ್ಧ 302 ರನ್‌ಗಳ ಗೆಲುವು! ಅಧಿಕೃತವಾಗಿ ಸೆಮಿಫೈನಲ್‌ಗೆ ಟೀಂ ಇಂಡಿಯಾ ಎಂಟ್ರಿ
ಭಾರತ 7 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 14 ಅಂಕ ಮತ್ತು +2.102 ನೆಟ್ ರನ್ ರೇಟ್‌ನೊಂದಿಗೆ ಮೊದಲ ಸ್ಥಾನಕ್ಕೆ ತಲುಪಿದೆ. ಹಾಗೆಯೇ ಸೆಮಿಫೈನಲ್‌ಗೂ ಲಗ್ಗೆ ಇಟ್ಟಿದ್ದಾರೆ. ದಕ್ಷಿಣ ಆಫ್ರಿಕಾ 6 ಪಂದ್ಯಗಳಿಂದ 12 ಅಂಕಗಳು ಮತ್ತು +2.290 ನೆಟ್ ರನ್ ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 8 ಅಂಕಗಳು ಮತ್ತು +0.970 ನೆಟ್ ರನ್ ರೇಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 8 ಅಂಕಗಳು ಮತ್ತು +0.484 ನೆಟ್ ರನ್ ರೇಟ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನ 6 ಅಂಕಗಳು ಮತ್ತು -0.024 ನೆಟ್ ರನ್ ರೇಟ್‌ನೊಂದಿಗೆ ಐದನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ್ 6 ಅಂಕಗಳು ಮತ್ತು -0.275 ನೆಟ್ ರನ್ ರೇಟ್, ನೆದರ್ಲ್ಯಾಂಡ್ಸ್ 4 ಅಂಕಗಳು ಮತ್ತು -1.277 ನೆಟ್ ರನ್ ರೇಟ್‌ನೊಂದಿಗೆ ಕ್ರಮವಾಗಿ 6 ಮತ್ತು ಏಳನೇ ಸ್ಥಾನದಲ್ಲಿವೆ.
ಶ್ರೀಲಂಕಾ ವಿರುದ್ಧ ಭಾರತ ದಾಖಲೆಯ ಜಯ ಸಾಧಿಸುವ ಮೂಲಕ ಪಾಕಿಸ್ತಾನದ ಸೆಮಿಫೈನಲ್ ಅವಕಾಶ ಮತ್ತಷ್ಟು ಹೆಚ್ಚಿದೆ. ನಾಳೆ ನಡೆಯಲ್ಲಿರುವ ಅಫ್ಘಾನಿಸ್ತಾನ ಮತ್ತು ನೆದರ್ಲೆಂಡ್ಸ್ ಪಂದ್ಯದ ಫಲಿತಾಂಶದ ನಂತರ, ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆಯುವುದು ಇನ್ನಷ್ಟು ಸುಲಭವಾಗಲಿದೆ. ಪಾಕಿಸ್ತಾನಕ್ಕೆ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಮುಂದಿನ ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಈ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದರೆ ನೆಟ್ ರನ್ ರೇಟ್ ಆಧಾರದ ಮೇಲೆ ಸೆಮಿಫೈನಲ್‌ಗೆ ಪ್ರವೇಶಿಸಬಹುದಾಗಿದೆ.
ಇನ್ನು ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯದ ವಿಚಾರಕ್ಕೆ ಬರುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಶ್ರೀಲಂಕಾ ಎದುರು ಗೆಲುವಿಗೆ 358 ರನ್‌ಗಳ ಸವಾಲನ್ನು ನೀಡಿತ್ತು. ಆದರೆ ಇಡೀ ಶ್ರೀಲಂಕಾ ತಂಡ 55 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿನ್ 18 ರನ್ ನೀಡಿ 5 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದರು. ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಒಂದು ವಿಕೆಟ್ ಪಡೆದರು. ಭಾರತದ ಪರ ಶುಭ್ಮನ್ ಗಿಲ್ 92 ರನ್, ವಿರಾಟ್ ಕೊಹ್ಲಿ 88 ರನ್ ಮತ್ತು ಶ್ರೇಯಸ್ ಅಯ್ಯರ್ 82 ರನ್ ಬಾರಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ