WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ

| Updated By: ಝಾಹಿರ್ ಯೂಸುಫ್

Updated on: Aug 17, 2021 | 5:27 PM

ICC World Test Championship Point Table: ಇನ್ನು ಹೊಸ ನಿಯಮದ ಪ್ರಕಾರ ಆಡಿದ ಪಂದ್ಯಗಳಲ್ಲಿ ಗೆದ್ದ ಪಂದ್ಯಗಳಿಗೆ ಅನುಸಾರವಾಗಿ ಶೇಕಡಾವಾರಿನಂತೆ ತಂಡಗಳು ರ್‍ಯಾಂಕ್ ಪಡೆದುಕೊಳ್ಳಲಿವೆ.

WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ
ಪ್ರಸ್ತುತ ಕ್ರಿಕೆಟ್ ಅಂಗಳದ ಕಿಂಗ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ತಮ್ಮ ಫಿಟ್​ನೆಸ್​ಗಾಗಿ ವಿಶೇಷ ಕಾಳಜಿವಹಿಸುತ್ತಿದ್ದು, ಹೀಗಾಗಿ ಸಾಮಾನ್ಯ ನೀರಿನ ಬದಲು ಬ್ಲ್ಯಾಕ್ ವಾಟರ್ ಮೊರೆ ಹೋಗುತ್ತಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ಅಭ್ಯಾಸದ ವೇಳೆ ಕೊಹ್ಲಿ ಕೈಯಲ್ಲಿ ಕಪ್ಪು ನೀರಿನ ಬಾಟಲ್ ಕಾಣಿಸಿಕೊಂಡ ಬೆನ್ನಲ್ಲೇ ಬ್ಲ್ಯಾಕ್ ವಾಟರ್ ಬಗ್ಗೆಗಿನ ಚರ್ಚೆಗಳು ಶುರುವಾಗಿದೆ.
Follow us on

ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (ICC World Test Championship 2021–23) ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ದ ಮುಗ್ಗರಿಸಿದ್ದ ಟೀಮ್ ಇಂಡಿಯಾ (Team India), ಇದೀಗ 2021ರ ಟೆಸ್ಟ್ ಚಾಂಪಿಯನ್​ಶಿಪ್​ ಅಭಿಯಾನ ಆರಂಭಿಸಿದೆ. ಇಂಗ್ಲೆಂಡ್ (England)​ ವಿರುದ್ದದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಭಾರತ (India) ತಂಡ ಖಾತೆ ತೆರೆದಿತ್ತು. ಇದೀಗ ಲಾರ್ಡ್ಸ್​ನಲ್ಲಿ (Lords) ನಡೆದ ದ್ವಿತೀಯ ಟೆಸ್ಟ್​ನಲ್ಲಿ ಇಂಗ್ಲೆಂಡ್ ತಂಡಕ್ಕೆ ಮಣ್ಣು ಮುಕ್ಕಿಸುವ ಮೂಲಕ ಬರೋಬ್ಬರಿ 12 ಅಂಕಗಳನ್ನು ಪಡೆದುಕೊಂಡಿದೆ. ಅಲ್ಲದೆ ಪಾಯಿಂಟ್ ಟೇಬಲ್​ನಲ್ಲಿ ಒಟ್ಟು 14 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ. ಇನ್ನು ಪಾಕಿಸ್ತಾನ್ (Pakistan) ವಿರುದ್ದದ ಮೊದಲ ಟೆಸ್ಟ್ ಪಂದ್ಯ ಗೆದ್ದಿರುವ ವೆಸ್ಟ್ ಇಂಡೀಸ್ (West Indies) ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇಲ್ಲಿ ಭಾರತ ಎರಡು ಪಂದ್ಯಗಳಿಂದ ಒಟ್ಟು 14 ಅಂಕ ಪಡೆದರೂ ಗೆಲುವಿನ ಶೇಕಡಾವಾರು (58.33%) ಲೆಕ್ಕಚಾರದಲ್ಲಿ ದ್ವಿತೀಯ ಸ್ಥಾನಕ್ಕೆ ದೂಡಲ್ಪಟ್ಟಿದೆ. ಇದಾಗ್ಯೂ ಮೊದಲ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡ ಮಾಡಿದ ಎಡವಟ್ಟಿಗೂ ಇಲ್ಲಿ ಬೆಲೆ ತೆರಬೇಕಾಗಿ ಬಂದಿದೆ. ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್​ನಲ್ಲಿ ಭಾರತ ಡ್ರಾ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ 4 ಅಂಕಗಳನ್ನು ಪಡೆದುಕೊಂಡಿತು. ಆದರೆ ನಿಧಾನಗತಿಯ ಬೌಲಿಂಗ್ ಮಾಡಿದ್ದರ ಪರಿಣಾಮ ಐಸಿಸಿ (ICC) ನೀತಿ ಸಂಹಿತೆಯ ಕಾಯ್ದೆ 2.22 ರ ಪ್ರಕಾರ ಅಂಕ ಕಡಿತಗೊಳಿಸಲಾಗಿದೆ. ಅಂದರೆ ಸ್ಲೋ ಓವರ್-ರೇಟ್ ಬೌಲಿಂಗ್ ಶಿಕ್ಷೆಯ ಅನುಸಾರ 2 ಅಂಕಗಳನ್ನು ಕಡಿತಗೊಳಿಸಿದ್ದು, ಇದರಿಂದ ಒಟ್ಟು 16 ಅಂಕ ಪಡೆದರೂ ಭಾರತ ಇದೀಗ 2 ಅಂಕಗಳ ಕಡಿತದೊಂದಿಗೆ 14 ಪಾಯಿಂಟ್ ಪಡೆದು ದ್ವಿತೀಯ ಸ್ಥಾನದಲ್ಲಿದೆ.

ಇನ್ನು ಪಾಕಿಸ್ತಾನದ ವಿರುದ್ದದ ಮೊದಲ ಟೆಸ್ಟ್​ನಲ್ಲಿ 1 ವಿಕೆಟ್​ಗಳ ರೋಚಕ ಜಯ ಸಾಧಿಸಿದ ವೆಸ್ಟ್ ಇಂಡೀಸ್ 12 ಅಂಕ ಪಡೆದರೂ ಗೆಲುವಿನ ಶೇಕಡಾವಾರು ಲೆಕ್ಕಚಾರದಲ್ಲಿ 100% ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ. ಇನ್ನು ಟೀಮ್ ಇಂಡಿಯಾ ವಿರುದ್ದ ಮೊದಲ ಟೆಸ್ಟ್​ನಲ್ಲಿ ಡ್ರಾ ಸಾಧಿಸಿ 4 ಅಂಕ ಪಡೆದಿದ್ದ ಇಂಗ್ಲೆಂಡ್ ತಂಡಕ್ಕೂ ನಿಧಾನಗತಿ ಬೌಲಿಂಗ್ ದಂಡವಾಗಿ 2 ಅಂಕಗಳನ್ನು ಕಡಿತಗೊಳಿಸಲಾಗಿದೆ. ಅದರಂತೆ ಇದೀಗ 2 ಅಂಕಗಳೊಂದಿಗೆ ಇಂಗ್ಲೆಂಡ್ ತಂಡವು ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿದೆ.

2021 ರಿಂದ 2023 ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಪಂದ್ಯಾವಳಿಗು ನಡೆಯಲಿದ್ದು, ಈ ಬಾರಿ ಅಂಕಗಳ ಲೆಕ್ಕಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಾರಿ ಗೆಲ್ಲುವ ಪಂದ್ಯಕ್ಕೆ 12 ಅಂಕ ನಿಗದಿಪಡಿಸಲಾಗಿದ್ದು, ಹಾಗೆಯೇ ಪಂದ್ಯ ಟೈ ಆದರೆ 6 ಅಂಕ ಹಾಗೂ ಡ್ರಾ ಆದರೆ 4 ಅಂಕ ನೀಡಲಾಗುತ್ತದೆ.

ಇನ್ನು ಹೊಸ ನಿಯಮದ ಪ್ರಕಾರ ಆಡಿದ ಪಂದ್ಯಗಳಲ್ಲಿ ಗೆದ್ದ ಪಂದ್ಯಗಳಿಗೆ ಅನುಸಾರವಾಗಿ ಶೇಕಡಾವಾರಿನಂತೆ ತಂಡಗಳು ರ್‍ಯಾಂಕ್ ಪಡೆದುಕೊಳ್ಳಲಿವೆ. ಇದರಿಂದ ಪಂದ್ಯಗಳಿಗೆ ಮತ್ತು ಸರಣಿಗೆ ಅನುಸಾರವಾಗಿ ಅಂಕ ಪಟ್ಟಿಯಲ್ಲಿ ಬದಲಾವಣೆ ಕಂಡು ಬರಲಿದೆ. ಅಲ್ಲದೆ ಶ್ರೇಯಾಂಕ ಪಟ್ಟಿಯಲ್ಲಿ ಪ್ರತಿ ಪಂದ್ಯಕ್ಕನುಸಾರವಾಗಿ ಪೈಪೋಟಿ ಕಂಡು ಬರಲಿದೆ.

ಇದನ್ನೂ ಓದಿ: Team India Video: ಲಾರ್ಡ್ಸ್​ ಡ್ರೆಸಿಂಗ್ ರೂಮ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ವಿಜಯೋತ್ಸವ

ಇದನ್ನೂ ಓದಿ: T20 World Cup 2021: ಟಿ20 ವಿಶ್ವಕಪ್​ಗೆ ಅಫ್ಘಾನಿಸ್ತಾನ್ ತಂಡ ಅನುಮಾನ

ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್​

ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

(ICC World Test Championship Point Table 2021)