
ಲಾರ್ಡ್ಸ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ (SA vs AUS) ನಡುವಿನ ಫೈನಲ್ ಪಂದ್ಯದೊಂದಿಗೆ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಅಂತ್ಯವಾಗಿದೆ. ದಕ್ಷಿಣ ಆಫ್ರಿಕಾ ತಂಡ ಮೂರನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದೆ. ಇದೀಗ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ವೇಳಾಪಟ್ಟಿಯನ್ನು ಐಸಿಸಿ (ICC) ಪ್ರಕಟಿಸಿದೆ. ಇದರಲ್ಲಿ 9 ತಂಡಗಳ ನಡುವೆ ಒಟ್ಟು 71 ಪಂದ್ಯಗಳು ನಡೆಯಲಿವೆ. ಜೂನ್ 17 ರಿಂದ ನಾಲ್ಕನೇ ಆವೃತ್ತಿ ಪ್ರಾರಂಭವಾಗಲಿದ್ದು, ಮೊದಲ ಪಂದ್ಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಶ್ರೀಲಂಕಾದ ಗಾಲೆಯಲ್ಲಿ ನಡೆಯಲಿದೆ. ವೇಳಾಪಟ್ಟಿಯ ಪ್ರಕಾರ, ಆಸ್ಟ್ರೇಲಿಯಾ ಈ ಬಾರಿ ಗರಿಷ್ಠ 22 ಪಂದ್ಯಗಳನ್ನು ಆಡಲಿದ್ದು, ಇಂಗ್ಲೆಂಡ್ 21 ಪಂದ್ಯಗಳನ್ನು ಆಡಬೇಕಾಗುತ್ತದೆ. ಈ ವರ್ಷದ ಕೊನೆಯಲ್ಲಿ ಆಶಸ್ ಸರಣಿಯ ಸಮಯದಲ್ಲಿ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದೊಂದಿಗೆ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಪಂದ್ಯ ಲೀಡ್ಸ್‌ನಲ್ಲಿ ನಡೆಯಲಿದೆ.
ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡವು 2025-27ರ ಡಬ್ಲ್ಯೂಟಿಸಿ ಅವಧಿಯಲ್ಲಿ ಒಟ್ಟು 18 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಸರಣಿಯೊಂದಿಗೆ ಇದು ಪ್ರಾರಂಭವಾಗಲಿದೆ. ಇದರ ನಂತರ ಟೀಂ ಇಂಡಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಗಳನ್ನು ಆಡಲಿದೆ. ಇದಲ್ಲದೆ, ಟೆಸ್ಟ್ ಪಂದ್ಯಗಳನ್ನು ಆಡಲು ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ.
🚨 WTC 2027 BEGINS ON JUNE 17, TUESDAY 🚨 pic.twitter.com/wPiNnUWvnL
— Johns. (@CricCrazyJohns) June 14, 2025
ಇಂಗ್ಲೆಂಡ್: 5 ಪಂದ್ಯಗಳು
ವೆಸ್ಟ್ ಇಂಡೀಸ್: 2 ಪಂದ್ಯಗಳು
ದಕ್ಷಿಣ ಆಫ್ರಿಕಾ: 2 ಪಂದ್ಯಗಳು
ಆಸ್ಟ್ರೇಲಿಯಾ: 5 ಪಂದ್ಯಗಳು
ಶ್ರೀಲಂಕಾ: 2 ಪಂದ್ಯಗಳು
ನ್ಯೂಜಿಲೆಂಡ್: 2 ಪಂದ್ಯಗಳು
2023-25ರ ಡಬ್ಲ್ಯೂಟಿಸಿಯಲ್ಲಿ, ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು, ಆದರೆ ಈ ಬಾರಿ ಗಿಲ್ ಪಡೆಯ ಹೆಚ್ಚಿನ ಪಂದ್ಯಗಳು ತವರಿನಲ್ಲಿ ನಡೆಯುತ್ತವೆ, ಆದ್ದರಿಂದ ಯಾವುದೇ ಬೆಲೆ ತೆತ್ತಾದರೂ ಗೆಲ್ಲುವ ಇರಾದೆಯಲ್ಲಿರುವ ಭಾರತಕ್ಕೆ ತಂಡಕ್ಕೆ ಪ್ರಮುಖ ಸವಾಲೆಂದರೆ ಅದು ಆಸ್ಟ್ರೇಲಿಯಾ ತಂಡ. ಆಸ್ಟ್ರೇಲಿಯಾ ಈ ಬಾರಿ ಭಾರತ ಪ್ರವಾಸ ಮಾಡಬೇಕಾಗಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ಎದುರಿಸಲಿದೆ. ಈ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಸಾಧ್ಯತೆಗಳಿವೆ.
ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ ಅಕ್ಟೋಬರ್‌ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದು, ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಆ ಬಳಿಕ ದಕ್ಷಿಣ ಆಫ್ರಿಕಾ ತಂಡವು ಸೆಪ್ಟೆಂಬರ್ 2026 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಲಿದೆ.
WTC 2025 final: 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲುವು; 27 ವರ್ಷಗಳ ನಂತರ ಸಚಿನ್ ದಾಖಲೆ ಉಡೀಸ್
2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯಾ ಗರಿಷ್ಠ 22 ಟೆಸ್ಟ್ ಪಂದ್ಯಗಳನ್ನು ಆಡಿದರೆ, ಇಂಗ್ಲೆಂಡ್ 21 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಲ್ಲದೆ, ನ್ಯೂಜಿಲೆಂಡ್ 16, ವೆಸ್ಟ್ ಇಂಡೀಸ್ 14, ದಕ್ಷಿಣ ಆಫ್ರಿಕಾ 14, ಪಾಕಿಸ್ತಾನ 13, ಶ್ರೀಲಂಕಾ 12 ಮತ್ತು ಬಾಂಗ್ಲಾದೇಶ 12 ಟೆಸ್ಟ್ ಪಂದ್ಯಗಳನ್ನು ಆಡಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:04 pm, Sun, 15 June 25