15 ಸಿಕ್ಸರ್, 15 ಬೌಂಡರಿ, 192 ರನ್‌ಗಳ ಜೊತೆಯಾಟ! ವಿಶ್ವದಾಖಲೆ ಮುರಿದ ಶಕೀಬ್-ಇಫ್ತಿಕರ್
ವಾಸ್ತವವಾಗಿ, ಶಕೀಬ್ ಅಲ್ ಹಸನ್ ಮತ್ತು ಇಫ್ತಿಕರ್ ಅಹ್ಮದ್ ಜೋಡಿ ಈಗ ಟಿ20 ಕ್ರಿಕೆಟ್‌ನಲ್ಲಿ ಐದನೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟವನ್ನು ಆಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ.
ಪ್ರಸ್ತುತ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನ (Bangladesh Premier League)ಲ್ಲಿ ವಿಶ್ವ ದಾಖಲೆಯೊಂದನ್ನು ಮುರಿಯಲಾಗಿದೆ. ಬಾಂಗ್ಲಾ ಪ್ರೀಮಿಯರ್ ಲೀಗ್‌ನ 18ನೇ ಪಂದ್ಯದಲ್ಲಿ ಫಾರ್ಚೂನ್ ಬಾರಿಶಾಲ್ ತಂಡವು ರಂಗಪುರ್ ರೈಡರ್ಸ್ ತಂಡವನ್ನು 67 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಫಾರ್ಚೂನ್ ತಂಡದ ಪರ ಇಫ್ತಿಕರ್ ಅಹ್ಮದ್ (Iftikhar Ahmed) 45 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರೆ, ನಾಯಕ ಶಕೀಬ್ ಅಲ್ ಹಸನ್ (Shakib Al Hasan) 43 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಅದ್ಭುತ ಇನ್ನಿಂಗ್ಸ್‌ನ ಆಧಾರದ ಮೇಲೆ, ಫಾರ್ಚೂನ್ ಬಾರಿಶಾಲ್ ತಂಡ 238 ರನ್‌ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು.ಈ ಗುರಿ ಬೆನ್ನಟ್ಟಿದ ರಂಗ್‌ಪುರ ರೈಡರ್ಸ್ ತಂಡವು 171 ರನ್‌ಗಳಿಗೆ ಆಲೌಟ್ ಆಯಿತು. ಫಾರ್ಚೂನ್ ತಂಡದ ಪರ ದಾಖಲೆಯ ಜೊತೆಯಾಟವನ್ನಾಡಿದ ಶಾಕಿಬ್ ಮತ್ತು ಇಫ್ತಿಕರ್ ಜೋಡಿ ದೊಡ್ಡ ವಿಶ್ವ ದಾಖಲೆಯನ್ನೂ ಮುರಿದಿದೆ.
ವಾಸ್ತವವಾಗಿ, ಶಕೀಬ್ ಅಲ್ ಹಸನ್ ಮತ್ತು ಇಫ್ತಿಕರ್ ಅಹ್ಮದ್ ಜೋಡಿ ಈಗ ಟಿ20 ಕ್ರಿಕೆಟ್‌ನಲ್ಲಿ ಐದನೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟವನ್ನು ಆಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಈ ಪಂದ್ಯದಲ್ಲಿ ಇಫ್ತಿಕರ್ ಮತ್ತು ಶಾಕಿಬ್ ಐದನೇ ವಿಕೆಟ್‌ಗೆ 86 ಎಸೆತಗಳಲ್ಲಿ ಬರೋಬ್ಬರಿ 192 ರನ್‌ಗಳ ಜೊತೆಯಾಟವಾಡಿದ್ದು ವಿಶ್ವದಾಖಲೆಯಾಗಿದೆ.
IND vs NZ 2nd ODI: ರಾಯ್ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು: ಎರಡನೇ ಏಕದಿನಕ್ಕೆ ಸಜ್ಜು
ವಿಶ್ವದಾಖಲೆ ಮುರಿದ ಶಕೀಬ್-ಇಫ್ತಿಕರ್
ಈ ಹಿಂದೆ ಬರ್ಮಿಂಗ್ಹ್ಯಾಮ್ ಬೇರ್ಸ್ ಆಟಗಾರರಾದ ಹೋಸ್ ಮತ್ತು ಮೂಸ್ಲೆ ಐದನೇ ವಿಕೆಟ್‌ಗೆ 171 ರನ್‌ಗಳ ಜೊತೆಯಾಟ ಆಡುವ ಮೂಲಕ ಐದನೇ ವಿಕೆಟ್‌ಗೆ ಅತ್ಯಧಿಕ ಟಿ20 ಜೊತೆಯಾಟ ಆಡಿದ ದಾಖಲೆ ನಿರ್ಮಿಸಿದ್ದರು. ಇವರಲ್ಲದೆ ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ ಮತ್ತು ವಿಂಡೀಸ್ನ ಡ್ವೇನ್ ಬ್ರಾವೋ ಐದನೇ ವಿಕೆಟ್‌ಗೆ 150 ರನ್‌ಗಳ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ 2ನೇ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಈಗ ಈ ದಾಖಲೆಯು ಇಫ್ತಿಕರ್ ಮತ್ತು ಶಕೀಬ್ ಅಲ್ ಹಸನ್ ಅವರ ಹೆಸರಿನಲ್ಲಿ ದಾಖಲಾಗಿದೆ.
ಇಫ್ತಿಕರ್-ಶಕೀಬ್ ದಾಳಿ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಫಾರ್ಚೂನ್ ಬಾರಿಶಾಲ್ ತಂಡವು ಪವರ್‌ಪ್ಲೇನಲ್ಲಿಯೇ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಂತರ ಜೊತೆಯಾದ ಇಫ್ತಿಕರ್-ಶಕೀಬ್ ಎದುರಾಳಿ ಬೌಲಿಂಗ್ ಘಟಕವನ್ನು ಸಮರ್ಥವಾಗಿ ಎದುರಿಸಿದರು. ಇವರಿಬ್ಬರು 15 ಸಿಕ್ಸರ್ ಮತ್ತು 15 ಬೌಂಡರಿಗಳನ್ನು ಬಾರಿಸಿದಲ್ಲದೆ 200ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದರು. ಇದರ ಪರಿಣಾಮವಾಗಿ ತಂಡ 238 ರನ್‌ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಇಫ್ತಿಕರ್ ಅಹ್ಮದ್ ಕೇವಲ 45 ಎಸೆತಗಳಲ್ಲಿ ತಮ್ಮ ಮೊದಲ ಟಿ20 ಶತಕವನ್ನು ಪೂರ್ಣಗೊಳಿಸಿದರೆ, ಶಕೀಬ್ ಶತಕ ಗಳಿಸಲು ಸಾಧ್ಯವಾಗದಿದ್ದರೂ ಅದ್ಭುತ ಇನ್ನಿಂಗ್ಸ್ ಆಡಿದರು.
Iftikhar Ahmed's three successive sixes off Haris Rauf ? #BPL2023 pic.twitter.com/fu1Uc1f0NP
— Farid Khan (@_FaridKhan) January 20, 2023
ಈ ಗೆಲುವಿನೊಂದಿಗೆ ಫಾರ್ಚೂನ್ ಬಾರಿಶಾಲ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತಲುಪಿದೆ. ಇದುವರೆಗೆ 5 ಪಂದ್ಯಗಳನ್ನಾಡಿರುವ ಫಾರ್ಚೂನ್ ಬಾರಿಶಾಲ್ ತಂಡ 4 ರಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ರಂಗಪುರ್ ರೈಡರ್ಸ್ 5 ಪಂದ್ಯಗಳಲ್ಲಿ ಮೂರನೇ ಸೋಲು ಕಂಡಿದ್ದು, ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Fri, 20 January 23