AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS 1st Test: ನಾಗ್ಪುರ ಪಿಚ್​ ಬಗ್ಗೆ ಕೋಚ್ ದ್ರಾವಿಡ್ ಅತೃಪ್ತಿ: ಬದಲಿಸಲು ಸೂಚನೆ..!

India vs Australia 1st Test: ಟೆಸ್ಟ್ ಕ್ರಿಕೆಟ್​ನ ರೋಚಕತೆಯನ್ನು ಹೆಚ್ಚಿಸಲು 5 ದಿನಗಳ ಕಾಲ ಪಂದ್ಯ ನಡೆಯುವಂತಹ ಪಿಚ್​ಗಳನ್ನು ಸಿದ್ಧಪಡಿಸಲು ಈಗಾಗಲೇ ಬಿಸಿಸಿಐ ಸೂಚಿಸಿದೆ.

IND vs AUS 1st Test: ನಾಗ್ಪುರ ಪಿಚ್​ ಬಗ್ಗೆ ಕೋಚ್ ದ್ರಾವಿಡ್ ಅತೃಪ್ತಿ: ಬದಲಿಸಲು ಸೂಚನೆ..!
Rahul Dravid
TV9 Web
| Edited By: |

Updated on: Feb 07, 2023 | 7:24 PM

Share

IND vs AUS 1st Test: ಭಾರತ-ಆಸ್ಟ್ರೇಲಿಯಾ ನಡುವಣ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ನಾಗ್ಪುರ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದೀಗ ವಿದರ್ಭಗೆ ಆಗಮಿಸಿರುವ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಪಿಚ್​ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ಪಂದ್ಯದ ಆರಂಭಕ್ಕೂ 2 ದಿನ ಮುಂಚಿತವಾಗಿ ಉಭಯ ತಂಡಗಳು ವಿಸಿಎ ಸ್ಟೇಡಿಯಂನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ರಾಹುಲ್ ದ್ರಾವಿಡ್ ಪಿಚ್ ಅನ್ನು ಪರಿಶೀಲಿಸಿದ್ದಾರೆ. ಅಲ್ಲದೆ ಪಿಚ್​ನ ಮೇಲ್ಮೈ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಹೊಸ ಪಿಚ್ ಅನ್ನು ತಯಾರಿಸಲು ಕ್ಯುರೇಟರ್​ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸೂಚಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಟೆಸ್ಟ್ ಕ್ರಿಕೆಟ್​ನ ರೋಚಕತೆಯನ್ನು ಹೆಚ್ಚಿಸಲು 5 ದಿನಗಳ ಕಾಲ ಪಂದ್ಯ ನಡೆಯುವಂತಹ ಪಿಚ್​ಗಳನ್ನು ಸಿದ್ಧಪಡಿಸಲು ಈಗಾಗಲೇ ಬಿಸಿಸಿಐ ಸೂಚಿಸಿದೆ. ಇದಾಗ್ಯೂ ತವರಿನ ತಂಡದ ಅನುಕೂಲವನ್ನು ಕೂಡ ಇಲ್ಲಿ ಪರಿಗಣಿಸಲಾಗುತ್ತದೆ. ಆದರೆ ಪ್ರಸ್ತುತ ನಾಗ್ಪುರದಲ್ಲಿ ಸಿದ್ಧಪಡಿಸಲಾಗಿರುವ ಪಿಚ್​ ಮೇಲ್ಮೈಯನ್ನು ಪರಿಶೀಲಿಸಿರುವ ಮಾಜಿ ಟೆಸ್ಟ್ ಸ್ಪೆಷಲಿಸ್ಟ್ ರಾಹುಲ್ ದ್ರಾವಿಡ್ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಹೊಸ ಪಿಚ್​ ತಯಾರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ತಿಳಿದು ಬಂದಿದೆ.

ಭಾರತ-ಆಸ್ಟ್ರೇಲಿಯಾ ನಡುವಣ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಇದೇ ಗುರುವಾರದಿಂದ ಶುರುವಾಗಲಿದೆ. ಮೊದಲ ಪಂದ್ಯವು ವಿದರ್ಭದಲ್ಲಿ ನಡೆದರೆ, ಎರಡನೇ ಪಂದ್ಯಕ್ಕೆ ದೆಹಲಿ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಮೂರನೇ ಪಂದ್ಯವು ಧರ್ಮಶಾಲದ ಹಿಮಾಚಲ್ ಪ್ರದೇಶ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಹಾಗೂ ನಾಲ್ಕನೇ ಪಂದ್ಯಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಇದನ್ನೂ ಓದಿ
Image
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
Image
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Image
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
Image
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

ಇತ್ತ ಮೊದಲ ಪಂದ್ಯದಲ್ಲೇ ಗೆಲ್ಲುವ ಮೂಲಕ ಪ್ರತಿಷ್ಠಿತ ಟೆಸ್ಟ್ ಸರಣಿಯಲ್ಲಿ ಮೇಲುಗೈ ಸಾಧಿಸಲು ಉಭಯ ತಂಡಗಳು ಪ್ಲ್ಯಾನ್ ರೂಪಿಸಿದೆ. ಹೀಗಾಗಿ ನಾಗ್ಪುರ ಮೈದಾನದಿಂದಲೇ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ:

  1. ಫೆಬ್ರವರಿ 9 ರಿಂದ 13- ಮೊದಲ ಟೆಸ್ಟ್ ಪಂದ್ಯ (ವಿದರ್ಭ ಕ್ರಿಕೆಟ್ ಸ್ಟೇಡಿಯಂ)
  2. ಫೆಬ್ರವರಿ 17 ರಿಂದ 21- ಎರಡನೇ ಟೆಸ್ಟ್ ಪಂದ್ಯ (ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂ, ದೆಹಲಿ)
  3. ಮಾರ್ಚ್ 1 ರಿಂದ 5- ಮೂರನೇ ಟೆಸ್ಟ್ ಪಂದ್ಯ (ಧರ್ಮಶಾಲ ಕ್ರಿಕೆಟ್ ಸ್ಟೇಡಿಯಂ, ಹಿಮಾಚಲ್ ಪ್ರದೇಶ್)
  4. ಮಾರ್ಚ್ 9 ರಿಂದ 13- ನಾಲ್ಕನೇ ಟೆಸ್ಟ್ ಪಂದ್ಯ (ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್)

ಮೊದಲೆರಡು ಟೆಸ್ಟ್‌ಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ , ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.

ಹಿಮಪಾತದಿಂದ ಜಮ್ಮು-ಶ್ರೀನಗರ ಹೈವೇ ಬಂದ್; ಪ್ರವಾಸಿಗರಿಗೆ ವಿಶೇಷ ರೈಲು ಸಂಚಾರ
ಹಿಮಪಾತದಿಂದ ಜಮ್ಮು-ಶ್ರೀನಗರ ಹೈವೇ ಬಂದ್; ಪ್ರವಾಸಿಗರಿಗೆ ವಿಶೇಷ ರೈಲು ಸಂಚಾರ
ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರವಾಸಿಗನ ಕಾಪಾಡಿದ ಗೈಡ್
ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರವಾಸಿಗನ ಕಾಪಾಡಿದ ಗೈಡ್
ನನ್ನ ಅತ್ತೆ ಮಕ್ಕಳು ಜೀತಕ್ಕೆ ಇದ್ದರು: ಭಾವುಕವಾಗಿ ಮಾತನಾಡಿದ ದುನಿಯಾ ವಿಜಯ್
ನನ್ನ ಅತ್ತೆ ಮಕ್ಕಳು ಜೀತಕ್ಕೆ ಇದ್ದರು: ಭಾವುಕವಾಗಿ ಮಾತನಾಡಿದ ದುನಿಯಾ ವಿಜಯ್
ಬೆಂಗಳೂರಿನಲ್ಲಿಲ್ಲೂ ಗನ್​ ತೋರಿಸಿ ಬಂಗಾರದ ಅಂಗಡಿ ದರೋಡೆ
ಬೆಂಗಳೂರಿನಲ್ಲಿಲ್ಲೂ ಗನ್​ ತೋರಿಸಿ ಬಂಗಾರದ ಅಂಗಡಿ ದರೋಡೆ
ಜೈಲಿಗೆ ಕರೆದೊಯ್ಯವಾಗ ಅಡ್ಡಹಾಕಿದ ರಾಜೀವ್ ಗೌಡನ ಬೆಂಬಲಿಗರಿಗೆ ಲಾಠಿ ರುಚಿ!
ಜೈಲಿಗೆ ಕರೆದೊಯ್ಯವಾಗ ಅಡ್ಡಹಾಕಿದ ರಾಜೀವ್ ಗೌಡನ ಬೆಂಬಲಿಗರಿಗೆ ಲಾಠಿ ರುಚಿ!
ಏಮ್ಸ್ ಆಸ್ಪತ್ರೆಯೊಳಗೆ ಲಿಫ್ಟ್​ನಲ್ಲೇ ಮಾಂಗಲ್ಯ ದೋಚಿ ಕಳ್ಳ ಪರಾರಿ
ಏಮ್ಸ್ ಆಸ್ಪತ್ರೆಯೊಳಗೆ ಲಿಫ್ಟ್​ನಲ್ಲೇ ಮಾಂಗಲ್ಯ ದೋಚಿ ಕಳ್ಳ ಪರಾರಿ
ವಿಜಯಪುರ ರಾಬರಿ: ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!
ವಿಜಯಪುರ ರಾಬರಿ: ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!
10ನೇ ದಿನ ಉತ್ಖನನ ವೇಳೆ ಲಕ್ಕುಂಡಿಯಲ್ಲಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ!
10ನೇ ದಿನ ಉತ್ಖನನ ವೇಳೆ ಲಕ್ಕುಂಡಿಯಲ್ಲಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ!
ಕಾವ್ಯಾ ಗೌಡ ಪತಿಯಿಂದ ಕೊಲೆ ಬೆದರಿಕೆ? ಎಲ್ಲವನ್ನೂ ವಿವರಿಸಿದ ಸಂಬಂಧಿ ಪ್ರೇಮಾ
ಕಾವ್ಯಾ ಗೌಡ ಪತಿಯಿಂದ ಕೊಲೆ ಬೆದರಿಕೆ? ಎಲ್ಲವನ್ನೂ ವಿವರಿಸಿದ ಸಂಬಂಧಿ ಪ್ರೇಮಾ
ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?
ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?