IND vs AUS: ಚೆನ್ನೈನಲ್ಲಿ ಹೈವೋಲ್ಟೇಜ್ ಪಂದ್ಯ; ಟಿಕೆಟ್‌ಗಾಗಿ ಮಧ್ಯರಾತ್ರಿ 2ಗಂಟೆಯಿಂದಲೇ ಕ್ಯೂ ನಿಂತ ಫ್ಯಾನ್ಸ್
IND vs AUS: ಕೊರೊನಾ ವೈರಸ್‌ನಿಂದಾಗಿ ಕಳೆದ ಕೆಲವು ವರ್ಷಗಳಿಂದ ಚೆನ್ನೈನಲ್ಲಿ ಐಪಿಎಲ್ ಸೇರಿದಂತೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ. ಹೀಗಾಗಿ ಪಂದ್ಯದ ಟಿಕೆಟ್‌ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ.

ಭಾರತ ಕ್ರಿಕೆಟ್ ಧರ್ಮ ದೇಶ. ಇಲ್ಲಿ ಕ್ರಿಕೆಟ್ಗೆ ಸಿಗುವಷ್ಟು ಮಾನ್ಯತೆ ಮಿಕ್ಕ ಆಟಗಳಿಗೆ ಸಿಗುವುದಿಲ್ಲ. ಹೀಗಾಗಿಯೇ ಬಿಸಿಸಿಐ (BCCI) ವಿಶ್ವದ ಅತ್ಯಂತ ಶ್ರೀಮಂತ ಮಂಡಳಿ ಎನಿಸಿಕೊಂಡಿರುವುದು. ಇತರೆ ದೇಶಗಳಲ್ಲಿ ಏಕದಿನ ಮತ್ತು ಟಿ20 ಪಂದ್ಯಗಳನ್ನು ನೋಡುವುದಕ್ಕೇ ಅಭಿಮಾನಿಗಳು ಕ್ರೀಡಾಂಗಣದತ್ತ ಬರುತ್ತಿಲ್ಲ. ಆದರೆ ಭಾರತದಲ್ಲಿ ಟೆಸ್ಟ್ ಪಂದ್ಯಕ್ಕೂ ಕ್ರೀಡಾಂಗಣಗಳು ಭರ್ತಿಯಾಗುತ್ತವೆ. ಇತ್ತೀಚೆಗಷ್ಟೇ ಭಾರತ-ಆಸ್ಟ್ರೇಲಿಯಾ (India Vs Australia) ನಡುವಿನ ಟೆಸ್ಟ್ ಪಂದ್ಯಗಳಿಗೆ ಕ್ರೀಡಾಂಗಣಗಳು ತುಂಬಿ ತುಳುಕಿರುವುದು ನಮ್ಮ ದೇಶದಲ್ಲಿ ಕ್ರಿಕೆಟ್ ಮೇಲಿನ ವ್ಯಾಮೋಹಕ್ಕೆ ನೇರ ಸಾಕ್ಷಿ. ಪ್ರಸ್ತುತ ಭಾರತದಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ನಡೆಯುತ್ತಿದ್ದು, ಮೂರನೇ ಏಕದಿನ ಪಂದ್ಯ ಬುಧವಾರ ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ (Chidambaram Stadium) ನಡೆಯಲಿದೆ. ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದ್ದರಿಂದ ಚೆನ್ನೈ ಪಂದ್ಯ ಸರಣಿ ನಿರ್ಣಾಯಕವಾಗಿದೆ. ಹೀಗಾಗಿ ಈ ಹೈವೋಲ್ಟೇಜ್ ಪಂದ್ಯವನ್ನು ನೇರವಾಗಿ ಕಣ್ತುಂಬಿಕೊಳ್ಳುವ ಸಲುವಾಗಿ ಚೆನ್ನೈ ಅಭಿಮಾನಿಗಳು ಮಧ್ಯಾರಾತ್ರಿಯಿಂದಲೇ ಟಿಕೆಟ್‌ಗಾಗಿ ಕ್ರೀಡಾಂಗಣದ ಬಳಿ ಕ್ಯೂ ನಿಂತಿದ್ದಾರೆ.
ಟಿಕೆಟ್ ಕೌಂಟರ ಬಳಿಯೆ ನಿದ್ರೆ
ಅಂತಿಮ ಕದನವನ್ನು ವೀಕ್ಷಿಸಲು ಅಭಿಮಾನಿಗಳು ಸ್ಟೇಡಿಯಂ ಟಿಕೆಟ್ ಕೌಂಟರ್‌ಗಳಲ್ಲಿ ಮಧ್ಯರಾತ್ರಿ 2 ಗಂಟೆಯಿಂದಲೇ ಸರತಿ ಸಾಲುಗಳಲ್ಲಿ ನಿಂತಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸುಮಾರು ಎರಡು ಕಿಲೋಮೀಟರ್ ದೂರದವರೆಗೂ ಸರತಿ ಸಾಲು ಕಂಡುಬಂದಿದ್ದು, ಕೆಲ ಅಭಿಮಾನಿಗಳಂತೂ, ಟಿಕೆಟ್ ಕೌಂಟರ ಬಳಿಯೆ ನಿದ್ರೆಗೆ ಜಾರಲು ಕಂಬಳಿಯನ್ನೂ ಜೊತೆಗೆ ತಂದಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.
Cricket fans in Chennai waiting for the tickets for the 3rd ODI from 2 am this morning. pic.twitter.com/uVlItXL0yV
— Johns. (@CricCrazyJohns) March 18, 2023
ಅಷ್ಟಕ್ಕೂ ಅಭಿಮಾನಿಗಳು ಈ ರೀತಿಯಾಗಿ ಮಧ್ಯರಾತ್ರಿ 2 ಗಂಟೆಯಿಂದಲೇ ಟಿಕೆಟ್‌ಗಾಗಿ ಕ್ಯೂ ನಿಲ್ಲಲೂ ಕಾರಣವೂ ಇದ್ದು, ಕೊರೊನಾ ವೈರಸ್‌ನಿಂದಾಗಿ ಕಳೆದ ಕೆಲವು ವರ್ಷಗಳಿಂದ ಚೆನ್ನೈನಲ್ಲಿ ಐಪಿಎಲ್ ಸೇರಿದಂತೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ. ಹೀಗಾಗಿ ಪಂದ್ಯದ ಟಿಕೆಟ್‌ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ. ಏತನ್ಮಧ್ಯೆ, ಚೆನ್ನೈ ಕ್ರೀಡಾಂಗಣದ ಟಿಕೆಟ್ ಕೌಂಟರ್‌ಗಳಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ ಎಂದು ಅಭಿಮಾನಿಗಳು ಕೂಡ ಕಿಡಿಕಾರಿದ್ದಾರೆ.
NZ vs SL: ವೆಲ್ಲಿಂಗ್ಟನ್ನಲ್ಲಿ ಇನ್ನಿಂಗ್ಸ್ ಸೋಲುಂಡ ಲಂಕಾ; ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್
ಎರಡೂ ಪಂದ್ಯಗಳ ಫಲಿತಾಂಶ
ಇನ್ನು ಈಗಾಗಲೇ ನಡೆದಿರುವ ಎರಡು ಏಕದಿನ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 188 ರನ್ ಗಳಿಗೆ ಆಲೌಟ್ ಆಗಿತ್ತು. ಈ ಗುರಿಬೆನ್ನಟ್ಟಿದ ಟೀಂ ಇಂಡಿಯಾ ರಾಹುಲ್ ಹಾಗೂ ಜಡೇಜಾ ಅವರ ಶತಕದ ಜೊತೆಯಾಟದಿಂದ ಗೆದ್ದು ಬೀಗಿತ್ತು. ಹಾಗೆಯೇ ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಏಕಪಕ್ಷೀಯ ಗೆಲುವು ಸಾದಿಸಿತು. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 117ರನ್ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ ಆಸೀಸ್ 10 ವಿಕೆಟ್ಗಳ ಗೆಲುವು ಸಾಧಿಸಿತು. ಹೀಗಾಗಿ 3 ಪಂದ್ಯಗಳ ಸರಣಿ 1-1 ರಿಂದ ಸಮಬಲಗೊಂಡಿರುವುದು ಮೂರನೇ ಪಂದ್ಯದ ಮೇಲೆ ಹೈಪ್ ಕ್ರಿಯೆಟ್ ಆಗುವಂತೆ ಮಾಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:33 pm, Mon, 20 March 23
