‘ಆಯ್ಕೆ ಸಮಿತಿಯ ಮುಖ್ಯಸ್ಥನಾಗಬೇಕೆಂದರೆ’..! ಬಿಸಿಸಿಐ ಮುಂದೆ ಬಹುದೊಡ್ಡ ಬೇಡಿಕೆಯಿಟ್ಟ ಟರ್ಬನೇಟರ್

BCCI: ಐವರು ಸದಸ್ಯರನ್ನು ಹೊಂದಿರುವ ಹಿರಿಯ ಆಯ್ಕೆ ಸಮಿತಿಯು ಪ್ರಸ್ತುತ ಮುಖ್ಯ ಆಯ್ಕೆದಾರರಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಬಿಸಿಸಿಐ ಯಾರನ್ನು ಹೊಸ ಮುಖ್ಯ ಆಯ್ಕೆದಾರರನ್ನಾಗಿ ಮಾಡುತ್ತದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

‘ಆಯ್ಕೆ ಸಮಿತಿಯ ಮುಖ್ಯಸ್ಥನಾಗಬೇಕೆಂದರೆ’..! ಬಿಸಿಸಿಐ ಮುಂದೆ ಬಹುದೊಡ್ಡ ಬೇಡಿಕೆಯಿಟ್ಟ ಟರ್ಬನೇಟರ್
ಹರ್ಭಜನ್ ಸಿಂಗ್
Follow us
ಪೃಥ್ವಿಶಂಕರ
|

Updated on:Feb 27, 2023 | 11:23 AM

ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ (BCCI Selection Committee) ನೂತನ ಮುಖ್ಯಸ್ಥರು ಯಾರು? ಈ ಪ್ರಶ್ನೆಯನ್ನು ಕಳೆದ ಕೆಲವು ದಿನಗಳಿಂದ ಕೇಳಲಾಗುತ್ತಿದೆ. ಈ ಹಿಂದೆ ತಂಡದ ಮುಖ್ಯ ಆಯ್ಕೆಗಾರರಾಗಿದ್ದ ಚೇತನ್ ಶರ್ಮಾ (Chetan Sharma), ಕುಟುಕು ಕಾರ್ಯಾಚರಣೆಯಲ್ಲಿ ಭಾರತ ಕ್ರಿಕೆಟ್​ ಬಗ್ಗೆ ಅನೇಕ ವಿವಾದಾತ್ಮಕ ಹೇಳಿಕೆ ನೀಡಿದ್ದರ ಸಲುವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ, ಐವರು ಸದಸ್ಯರನ್ನು ಹೊಂದಿರುವ ಹಿರಿಯ ಆಯ್ಕೆ ಸಮಿತಿಯು ಪ್ರಸ್ತುತ ಮುಖ್ಯ ಆಯ್ಕೆದಾರರಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯಾರನ್ನು ಹೊಸ ಮುಖ್ಯ ಆಯ್ಕೆದಾರರನ್ನಾಗಿ ಮಾಡುತ್ತದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಈ ಸ್ಥಾನಕ್ಕೆ ಹರ್ಭಜನ್ ಸಿಂಗ್ (Harbhajan Singh) ಅಥವಾ ವಿರೇಂದ್ರ ಸೆಹ್ವಾಗ್ (Virender Sehwag) ಸೂಕ್ತ ಎಂಬುದು ಮಾಜಿ ಆಟಗಾರರ ಅಭಿಪ್ರಾಯವಾಗಿದೆ. ಆದರೆ ಈ ಬಗ್ಗೆ ಹರ್ಭಜನ್ ಬಳಿ ಕೇಳಿದ್ದಕ್ಕೆ ಅವರು ನೀಡಿದ ಉತ್ತರ ಬಿಸಿಸಿಐ ಅನ್ನು ಹೌಹಾರುವಂತೆ ಮಾಡಿದೆ.

ವಾಸ್ತವವಾಗಿ ಕಳೆದ ಕೆಲವು ವರ್ಷಗಳವರೆಗು ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನವನ್ನು ಅನುಭವಿ ಮಾಜಿ ಆಟಗಾರರಾದ ದಿಲೀಪ್ ವೆಂಗ್‌ಸರ್ಕರ್, ಸಂದೀಪ್ ಪಾಟೀಲ್, ಮೊಹಿಂದರ್ ಅಮರನಾಥ್, ಕಿರಣ್ ಮೋರೆ ಅಲಂಕರಿಸಿದ್ದರು. ಆದರೆ ಆ ನಂತರ ಈ ಸ್ಥಾನಕ್ಕೆ ಭಾರತದ ಪರ ಹೆಚ್ಚು ಕ್ರಿಕೆಟ್ ಆಡದ ಮಾಜಿ ಆಟಗಾರರು ಆಯ್ಕೆಯಾಗಲು ಆರಂಭವಾಯಿತು. ಅಲ್ಲದೆ ಭಾರತ ಕ್ರಿಕೆಟ್‌ನಲ್ಲಿ ಹಲವು ವರ್ಷ ಆಡಿದ ಹೆಸರುಗಳು ಈ ಕೆಲಸದಿಂದ ವಿಮುಖರಾಗಲು ಪ್ರಾರಂಭಿಸಿದವು. ಇದಕ್ಕೆ ದೊಡ್ಡ ಕಾರಣವೆಂದರೆ ಆಯ್ಕೆ ಸಮಿತಿಯ ಮುಖ್ಯಸ್ಥ ಮತ್ತು ಆಯ್ಕೆದಾರರು ಪಡೆಯುವ ಸಂಬಳ.

ಟೀಂ ಇಂಡಿಯಾಕ್ಕೆ ಬಿಗ್ ಶಾಕ್! ಐಪಿಎಲ್ ಜೊತೆಗೆ ಡಬ್ಲ್ಯುಟಿಸಿ ಫೈನಲ್, ಏಷ್ಯಾಕಪ್‌ನಿಂದಲೂ ಬುಮ್ರಾ ಔಟ್?

ಕೋಚ್‌ಗೆ ಸಮಾನ ವೇತನ ನೀಡಿ; ಭಜ್ಜಿ

ಆಂಗ್ಲ ಪತ್ರಿಕೆ ಇಂಡಿಯನ್ ಎಕ್ಸ್‌ಪ್ರೆಸ್‌ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನುಭವಿ ಆಫ್ ಸ್ಪಿನ್ನರ್‌ ಹರ್ಭಜನ್​ ಸಿಂಗ್​ಗೆ ಮುಖ್ಯ ಆಯ್ಕೆದಾರರಾಗುವ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಹರ್ಭಜನ್, ಭವಿಷ್ಯದಲ್ಲಿ ಈ ಹುದ್ದೆಗೇರುವ ಅವಕಾಶ ಸಿಗಬಹುದು. ಆದರೆ ಈ ಹುದ್ದೆಗೇರಬೇಕೆಂದರೆ, ಈ ಹುದ್ದೆಯಲ್ಲಿರುವವರಿಗೆ ನೀಡುವ ವೇತನದಲ್ಲೂ ಬದಲಾವಣೆ ಕಾಣಬೇಕು. ಟೀಂ ಇಂಡಿಯಾದ ಮುಖ್ಯ ಕೋಚ್​ಗೆ ನೀಡುವಷ್ಟೇ ಸಂಬಳವನ್ನು ಆಯ್ಕೆದಾರರಿಗೂ ನೀಡಬೇಕು. ತರಬೇತುದಾರ ತಂಡದೊಂದಿಗೆ ಯಾವಾಗಲೂ ಇರಬೇಕು ಮತ್ತು ಯೋಜನೆಗಳನ್ನು ಮಾಡಬೇಕು. ಅವರಂತೆಯೇ ತಂಡದ ಆಯ್ಕೆಯು ಅಷ್ಟೇ ಮುಖ್ಯವಾಗಿದೆ. ಹೀಗಾಗಿ ಇಬ್ಬರಿಗೂ ಸಮಾನ ವೇತನ ನೀಡಬೇಕು. ಹಾಗಿದ್ದರೆ ಮಾತ್ರ ಈ ಹುದ್ದೆಗೇರುವುದಾಗಿ ಟರ್ಬನೇಟರ್ ಹೇಳಿಕೊಂಡಿದ್ದಾರೆ.

ಮಾಹಿತಿ ಪ್ರಕಾರ ಆಯ್ಕೆದಾರರು ಮತ್ತು ಮುಖ್ಯ ಕೋಚ್‌ಗೆ ಬಿಸಿಸಿಐ ನೀಡುವ ಸಂಭಾವನೆಯಲ್ಲಿ ಭಾರಿ ವ್ಯತ್ಯಾಸವಿದೆ. ವರದಿಗಳ ಪ್ರಕಾರ ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಾರ್ಷಿಕ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಆಯ್ಕೆ ಸಮಿತಿಯ ಮುಖ್ಯಸ್ಥರು ವಾರ್ಷಿಕವಾಗಿ 1 ಕೋಟಿ ಪಡೆದರೆ, ಸಮಿತಿಯ ಇತರ ನಾಲ್ಕು ಸದಸ್ಯರು ತಲಾ 90 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ.

ಅನುಭವಿ ಬೇಕಾದರೆ, ಸಂಬಳ ಕೂಡ ಅದಕ್ಕೆ ತಕ್ಕಂತಿರಬೇಕು

ಮೇಲ್ನೋಟಕ್ಕೆ, ಸಂಬಳದಲ್ಲಿನ ಇಷ್ಟು ವ್ಯತ್ಯಾಸವು ಮಾಜಿ ಅನುಭವಿಗಳು ಈ ಕೆಲಸವನ್ನು ಆಯ್ಕೆ ಮಾಡದಿರಲು ಒಂದು ಕಾರಣವಾಗಿದೆ. ಆಯ್ಕೆ ಸಮಿತಿಯವರಿಗೆ ನೀಡುವ ಸಂಬಳಕ್ಕೆ ಹೊಲಿಸಿದರೆ, ಕಳೆದ ಕೆಲವು ವರ್ಷಗಳಲ್ಲಿ, ವಿವಿಧ ಕ್ರೀಡಾ ಚಾನೆಲ್‌ಗಳಲ್ಲಿ ನಿರೂಪಕರಾಗಿ ಮತ್ತು ಪರಿಣಿತರಾಗಿ, ಮಾಜಿ ಆಟಗಾರರು ಸ್ವಲ್ಪ ಸಮಯ ಮಾಡುವ ಕೆಲಸಕ್ಕೆ ದೊಡ್ಡ ಮೊತ್ತವನ್ನೇ ಪಡೆಯುತ್ತಾರೆ.

ಹೀಗಾಗಿ ವೀರೇಂದ್ರ ಸೆಹ್ವಾಗ್ ಅವರಂತಹ ಅನುಭವಿ ಆಟಗಾರರನ್ನು ಮುಖ್ಯ ಆಯ್ಕೆಗಾರರನ್ನಾಗಿ ಮಾಡಬೇಕಾದರೆ, ಮಂಡಳಿಯು ವೇತನದ ಕಡೆಗೂ ಸಹ ಗಮನಹರಿಸಬೇಕಾಗುತ್ತದೆ. ಏಕೆಂದರೆ ದೊಡ್ಡ ಸ್ಥಾನಮಾನ ಹೊಂದಿರುವ ಆಟಗಾರನಿಗೆ ಉತ್ತಮ ಸಂಭಾವನೆ ನೀಡಬೇಕಾಗುತ್ತದೆ ಎಂದು ಹರ್ಭಜನ್ ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:20 am, Mon, 27 February 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ