Virat Kohli: ಇಂದು ಕೊಹ್ಲಿ ಬ್ಯಾಟ್​ನಿಂದ ಬರುತ್ತಾ ಶತಕ?: ರೋಚಕತೆ ಸೃಷ್ಟಿಸಿದ ಇಂಡೋ-ಆಸೀಸ್ ನಾಲ್ಕನೇ ಟೆಸ್ಟ್

|

Updated on: Mar 12, 2023 | 9:15 AM

India vs Australia 4th Test: ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಶುಭ್​ಮನ್ ಗಿಲ್ (Shubhman Gill) ಅವರ ಅಮೋಘ ಶತಕ ಹಾಗೂ ವಿರಾಟ್ ಕೊಹ್ಲಿ (Virat Kohli) ಅವರ ಅರ್ಧಶತಕದ ನೆರವಿನಿಂದ 300ರ ಗಡಿಯತ್ತ ತಲುಪುತ್ತಿದೆ.

Virat Kohli: ಇಂದು ಕೊಹ್ಲಿ ಬ್ಯಾಟ್​ನಿಂದ ಬರುತ್ತಾ ಶತಕ?: ರೋಚಕತೆ ಸೃಷ್ಟಿಸಿದ ಇಂಡೋ-ಆಸೀಸ್ ನಾಲ್ಕನೇ ಟೆಸ್ಟ್
Virat Kohli
Follow us on

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ರೋಚಕತೆ ಸೃಷ್ಟಿಸಿದೆ. ಕಾಂಗರೂ ಪಡೆಯನ್ನು 480 ರನ್​ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಶುಭ್​ಮನ್ ಗಿಲ್ (Shubhman Gill) ಅವರ ಅಮೋಘ ಶತಕ ಹಾಗೂ ವಿರಾಟ್ ಕೊಹ್ಲಿ (Virat Kohli) ಅವರ ಅರ್ಧಶತಕದ ನೆರವಿನಿಂದ 300ರ ಗಡಿಯತ್ತ ತಲುಪುತ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ ರೋಹಿತ್ ಪಡೆ 3 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿದ್ದು 191 ರನ್​ಗಳ ಹಿನ್ನಡೆಯಲ್ಲಿದೆ. 59 ರನ್ ಸಿಡಿಸಿ ಕೊಹ್ಲಿ ಕ್ರೀಸ್​ನಲ್ಲಿದ್ದು ಅಭಿಮಾನಿಗಳು ಶತಕದ ನಿರೀಕ್ಷೆಯಲ್ಲಿದ್ದಾರೆ.

ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿತ್ತು. ರೋಹಿತ್​ ಶರ್ಮಾ 17 ಮತ್ತು ಗಿಲ್​ 18 ರನ್​ ಗಳಿಸಿದ್ದರು. ಮೂರನೇ ದಿನ ಬ್ಯಾಟಿಂಗ್​ ಆರಂಭಿಸಿದ ಇವರಿಬ್ಬರು 74 ರನ್​ಗಳ ಜೊತೆಯಾಟ ಆಡಿದರು. ರೋಹಿತ್​ ಶರ್ಮಾ 21 ರನ್​ ಗಳಿಸುತ್ತಿದ್ದಂತೆ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 17,000 ರನ್​ ಗಳಿಸಿದ ಸಾಧನೆ ಮಾಡಿದರು. ಆದರೆ, ಹೆಚ್ಚುಹೊತ್ತು ಹಿಟ್​ಮ್ಯಾನ್ ಕ್ರೀಸ್​ನಲ್ಲಿ ನಿಲ್ಲಲಿಲ್ಲ. 35 ರನ್ ಗಳಿಸಿ ಔಟಾದರು. ರೋಹಿತ್​ ವಿಕೆಟ್​ ನಂತರ ಬಂದ ಚೇತೇಶ್ವರ ಪೂಜಾರ ಗಿಲ್​ ಜೊತೆ ಸೇರಿ ಅದ್ಭುತ ರನ್ ಕಲೆಹಾಕಿದರು.

Virat Kohli: 3ನೇ ದಿನದಾಟದ ಅಂತ್ಯಕ್ಕೆ 3 ದಾಖಲೆ ಬರೆದ ಕಿಂಗ್ ಕೊಹ್ಲಿ

ಇದನ್ನೂ ಓದಿ
IPL 2023: ಮುಂಬೈ ಇಂಡಿಯನ್ಸ್​ ತಂಡದ ಹೊಸ ಜೆರ್ಸಿ ಫೋಟೋಸ್ ಇಲ್ಲಿದೆ
WPL 2023: 5 ಸಿಕ್ಸ್, 10 ಫೋರ್..ಸ್ಪೋಟಕ ಬ್ಯಾಟಿಂಗ್​ನೊಂದಿಗೆ ದಾಖಲೆ ಬರೆದ ಶಫಾಲಿ ವರ್ಮಾ
Virat Kohli: ಫೀಲ್ಡಿಂಗ್ ಮೂಲಕವೇ ಹೊಸ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
GG vs DC, WPL 2023: ಶಫಾಲಿ ಸಿಡಿಲಬ್ಬರ: ಡೆಲ್ಲಿ ಕ್ಯಾಪಿಟಲ್ಸ್​ಗೆ ಭರ್ಜರಿ ಜಯ

ಈ ಜೋಡಿ ತಂಡದ ಮೊತ್ತವನ್ನು 200ರ ಅಂಚಿಗೆ ತಂದಿತು. ಗಿಲ್ ಆಕ್ರಮಣಕಾರಿ ಆಟವಾಡಿದರೆ ಪೂಜಾರ ಉತ್ತಮ ಸಾಥ್ ನೀಡಿದರು. ಇವರ ಕಡೆಯಿಂದ 113 ರನ್​ಗಳ ಜೊತೆಯಾಟ ಮೂಡಿಬಂತು. ಪೂಜಾರ 121 ಎಸೆತಗಳಲ್ಲಿ 42 ರನ್ ಕಲೆಹಾಕಿ ಮಾರ್ಫಿ ಬೌಲಿಂಗ್​ನಲ್ಲಿ ನಿರ್ಗಮಿಸಿದರು. ನಂತರ ಕೊಹ್ಲಿ ಹಾಗೂ ಗಿಲ್ ಕಡೆಯಿಂದಲೂ ಉತ್ತಮ ಆಟ ಮೂಡಿಬಂತು. ಶುಭ್​ಮನ್ ಟೆಸ್ಟ್ ಕ್ರಿಕೆಟ್​ನಲ್ಲಿ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದರು. ಆದರೆ, ಕೊನೆಯ ಸೆಷನ್​ನಲ್ಲಿ ಗಿಲ್​ ಔಟ್​ ಆದರು. 235 ಎಸೆತಗಳಲ್ಲಿ ಎದುರಿಸಿದ ಗಿಲ್ 12 ಫೋರ್, 1 ಸಿಕ್ಸರ್​ನೊಂದಿಗೆ 128 ರನ್ ಸಿಡಿಸಿದರು.

ಗಿಲ್​ ನಂತರ ಬಡ್ತಿ ಪಡೆದು ರವೀಂದ್ರ ಜಡೇಜಾ ವಿರಾಟ್​ ಕೊಹ್ಲಿ ಜೊತೆಗೂಡಿ ಇನ್ನಿಂಗ್ಸ್ ಕಟ್ಟಲು ಹೊರಟರು. ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದೆ. 191 ರನ್​ಗಳ ಹಿನ್ನಡೆಯಲ್ಲಿದೆ. ಕೊಹ್ಲಿ 128 ಎಸೆತಗಳಲ್ಲಿ 59 ರನ್ ಮತ್ತು ಜಡೇಜಾ 16 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸೀಸ್ ಪರ ನೇಥನ್ ಲಿಯಾನ್, ಮ್ಯೂಥ್ಯೂ ಮತ್ತು ಟಾಡ್ ಮರ್ಫಿ ತಲಾ 1 ವಿಕೆಟ್ ಪಡೆದರು.

480 ರನ್ ಕಲೆಹಾಕಿದ ಆಸ್ಟ್ರೇಲಿಯಾ:

ಶುಕ್ರವಾರ ಎರಡನೇ ದಿನದಾಟ ಶುರು ಮಾಡಿದ್ದ ಆಸ್ಟ್ರೇಲಿಯಾ ಭರ್ಜರಿ ಆರಂಭ ಪಡೆದುಕೊಂಡಿತ್ತು. ಪಂದ್ಯ ಆರಂಭವಾಗುತ್ತಿದ್ದಂತೆ ಗ್ರೀನ್​ ಅರ್ಧ ಶತಕ ಪೂರ್ಣಗೊಳಿಸಿ ನಂತರ ಶತಕವನ್ನೂ ಬಾರಿಸಿದರು. ಆಸೀಸ್ ತಂಡಕ್ಕೆ ಶತಕ ಸಿಡಿಸಿ ಆಧಾರವಾಗಿ ನಿಂತಿದ್ದ ಗ್ರೀನ್​ರನ್ನು (114) ಅಶ್ವಿನ್ ಪೆವಿಲಿಯನ್​ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಟೀ ವಿರಾಮದ ನಂತರ 180 ರನ್​ ಗಳಿಸಿ ಆಡುತ್ತಿದ್ದ ಉಸ್ಮಾನ್​ ಖವಾಜಾರನ್ನು ಅಕ್ಷರ್​ ಪಟೇಲ್​ ಎಲ್​ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ನಂತರ ನೇಥನ್​ ಲಿಯಾನ್​ (34) ಮತ್ತು ಟಾಡ್ ಮಾರ್ಫಿ (41) ಕೊಂಚ ರನ್​ ಕಲೆ ಹಾಕಿದರು. ಅಂತಿಮವಾಗಿ ಆಸ್ಟ್ರೇಲಿಯಾ 167.2 ಓವರ್​ಗಳಲ್ಲಿ 420 ರನ್​ಗೆ ಆಲೌಟ್ ಆಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:13 am, Sun, 12 March 23