AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: 3ನೇ ದಿನದಾಟದ ಅಂತ್ಯಕ್ಕೆ 3 ದಾಖಲೆ ಬರೆದ ಕಿಂಗ್ ಕೊಹ್ಲಿ

India vs Australia 4th Test: 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಕೂಡ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ರವೀಂದ್ರ ಜಡೇಜಾ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಕೊಹ್ಲಿ ತಮ್ಮ 29ನೇ ಅರ್ಧಶತಕ ಪೂರೈಸಿದರು.

Virat Kohli: 3ನೇ ದಿನದಾಟದ ಅಂತ್ಯಕ್ಕೆ 3 ದಾಖಲೆ ಬರೆದ ಕಿಂಗ್ ಕೊಹ್ಲಿ
Virat Kohli
TV9 Web
| Edited By: |

Updated on: Mar 11, 2023 | 6:10 PM

Share

India vs Australia 4th Test: ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ (Virat Kohli) ಬ್ಯಾಟ್​ನಿಂದ ಅರ್ಧಶತಕ ಮೂಡಿಬಂದಿದೆ. ಇದರೊಂದಿಗೆ 424 ದಿನಗಳ ಕಾಯುವಿಕೆ ಕೂಡ ಅಂತ್ಯಗೊಂಡಿದೆ. ಅಂದರೆ ಕಳೆದ ವರ್ಷ ಜನವರಿ ತಿಂಗಳಲ್ಲಿ ಸೌತ್ ಆಫ್ರಿಕಾ ವಿರುದ್ಧ ಕಿಂಗ್ ಕೊಹ್ಲಿ ಕೊನೆಯ ಬಾರಿ ಟೆಸ್ಟ್​ನಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಒಂದು ವರ್ಷಗಳ ಬಳಿಕ ಮತ್ತೊಮ್ಮೆ ಟೆಸ್ಟ್​ ಕ್ರಿಕೆಟ್​ನಲ್ಲಿ ಕೊಹ್ಲಿ ಬ್ಯಾಟ್ ಮೇಲೆತ್ತಿದ್ದಾರೆ.  ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ಪೇರಿಸಿದ 480 ರನ್​ಗಳಿಗೆ ಉತ್ತರವಾಗಿ ಇನಿಂಗ್ಸ್​ ಆರಂಭಿಸಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 74 ರನ್​ ಕಲೆಹಾಕಿದ ಬಳಿಕ ಹಿಟ್​ಮ್ಯಾನ್ (35) ಔಟಾದರು. ಆ ಬಳಿಕ ಬಂದ ಚೇತೇಶ್ವರ ಪೂಜಾರಾ 42 ರನ್​ ಬಾರಿಸಿ ನಿರ್ಗಮಿಸಿದರು. ಇದರ ನಡುವೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶುಭ್​ಮನ್ ಗಿಲ್ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ 2ನೇ ಶತಕ ಪೂರೈಸಿದರು. ಅಲ್ಲದೆ 235 ಎಸೆತಗಳಲ್ಲಿ 128 ರನ್ ಬಾರಿಸಿ ನಾಥನ್ ಲಿಯಾನ್​ಗೆ ವಿಕೆಟ್ ಒಪ್ಪಿಸಿದರು.

ಇತ್ತ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಕೂಡ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ರವೀಂದ್ರ ಜಡೇಜಾ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಕೊಹ್ಲಿ ತಮ್ಮ 29ನೇ ಅರ್ಧಶತಕ ಪೂರೈಸಿದರು. ವಿಶೇಷ ಎಂದರೆ ಈ ಹಾಫ್ ಸೆಂಚುರಿಯೊಂದಿಗೆ ತವರಿನಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ 4 ಸಾವಿರ ರನ್ ಬಾರಿಸಿದ ವಿಶೇಷ ಮೈಲುಗಲ್ಲನ್ನು ಕೂಡ ದಾಟಿದರು.

ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿದ್ದು ಕೇವಲ 4 ಆಟಗಾರರು ಮಾತ್ರ. ಸಚಿನ್ ತೆಂಡೂಲ್ಕರ್ (7216), ರಾಹುಲ್ ದ್ರಾವಿಡ್ (5598), ಸುನಿಲ್ ಗವಾಸ್ಕರ್ (5067) ಹಾಗೂ ವೀರೇಂದ್ರ ಸೆಹ್ವಾಗ್ (4656) ಮಾತ್ರ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದಲ್ಲೇ ನಾಲ್ಕು ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಇದೀಗ ಈ ಪಟ್ಟಿಗೆ ವಿರಾಟ್ ಕೊಹ್ಲಿ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ
Image
Ravindra Jadeja: 500 ವಿಕೆಟ್ ಕಬಳಿಸಿ ಮತ್ತೊಂದು ದಾಖಲೆ ಬರೆದ ರವೀಂದ್ರ ಜಡೇಜಾ
Image
Rishabh Pant: ಅಪಘಾತದ ಬಳಿಕ ಜೀವನ ಹೇಗಿದೆ? ಮುಕ್ತವಾಗಿ ಮಾತನಾಡಿದ ರಿಷಭ್ ಪಂತ್
Image
IPL 2023: ಐಪಿಎಲ್​ ವೇಳೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ RCB ತ್ರಿಮೂರ್ತಿಗಳು
Image
IPL 2023: ಐಪಿಎಲ್​ನಿಂದ ಬುಮ್ರಾ ಔಟ್: ಮುಂಬೈ ಇಂಡಿಯನ್ಸ್​ ಮುಂದಿದೆ 3 ಆಯ್ಕೆಗಳು

ಇನ್ನು ಅರ್ಧಶತಕದ ಬಳಿಕ ಬ್ಯಾಟಿಂಗ್ ಮುಂದುವರೆಸಿರುವ ವಿರಾಟ್ ಕೊಹ್ಲಿ 3ನೇ ದಿನದಾಟದ ಅಂತ್ಯಕ್ಕೆ 59 ರನ್​ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಕೊಹ್ಲಿಗೆ ಸಾಥ್ ನೀಡಿರುವ ರವೀಂದ್ರ ಜಡೇಜಾ 16 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

3ನೇ ದಿನದಾಟದ ಅಂತ್ಯಕ್ಕೆ ಸ್ಕೋರ್:

  • ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​- 480/10
  • ಭಾರತ ಮೊದಲ ಇನಿಂಗ್ಸ್​- 289/3

ವಿರಾಟ್ ಕೊಹ್ಲಿ 3 ವಿಶೇಷ ದಾಖಲೆ:

ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೂರು ವಿಶೇಷ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳು ಯಾವುದೆಂದರೆ….

  1.  50ನೇ ಟೆಸ್ಟ್ ಪಂದ್ಯ: ಭಾರತದಲ್ಲಿ 50 ಟೆಸ್ಟ್ ಪಂದ್ಯಗಳನ್ನಾಡಿದ ವಿಶೇಷ ಸಾಧಕರ ಪಟ್ಟಿಗೆ ಕಿಂಗ್ ಕೊಹ್ಲಿ ಸೇರ್ಪಡೆಯಾಗಿದ್ದಾರೆ.
  2.  300 ಕ್ಯಾಚ್: ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 300 ಕ್ಯಾಚ್​ಗಳನ್ನು ಹಿಡಿದ ವಿಶೇಷ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ.
  3.  4 ಸಾವಿರ ರನ್: ಭಾರತದ ಪರ ತವರಿನಲ್ಲಿ 4 ಸಾವಿರ ಟೆಸ್ಟ್​ ರನ್​ಗಳಿಸಿದ 5ನೇ ಬ್ಯಾಟರ್​ ಆಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್ , ಸ್ಟೀವನ್ ಸ್ಮಿತ್ (ನಾಯಕ) ಪೀಟರ್ ಹ್ಯಾಂಡ್ಸ್​ಕಾಂಬ್ , ಕ್ಯಾಮರೂನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಮಿಚೆಲ್ ಸ್ಟಾರ್ಕ್ , ಮ್ಯಾಥ್ಯೂ ಕುಹ್ನೆಮನ್ , ಟಾಡ್ ಮರ್ಫಿ , ನಾಥನ್ ಲಿಯಾನ್

ಟೀಮ್ ಇಂಡಿಯಾ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಶುಭಮನ್ ಗಿಲ್ , ಚೇತೇಶ್ವರ ಪೂಜಾರ , ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ , ಶ್ರೀಕರ್ ಭರತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ಅಕ್ಷರ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಉಮೇಶ್ ಯಾದವ್ , ಮೊಹಮ್ಮದ್ ಶಮಿ.

ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ