IND vs AUS: ‘ನಾನಿದ್ದಿದ್ದರೆ ಔಟಾಗಿರುತ್ತಿದೆ’; ಅಂಪೈರ್ ನಿತಿನ್ ಮೆನನ್ ಕಾಲೆಳೆದ ಕಿಂಗ್ ಕೊಹ್ಲಿ
IND vs AUS: ನಿತಿನ್ ಮೆನನ್ ಅವರ ನಿರ್ಧಾರದ ಕುರಿತು ಆಕ್ರೋಶ ಹೊರಹಾಕಿರುವ ವಿರಾಟ್ ಕೊಹ್ಲಿ, ನಾನಿದ್ದಿದ್ದರೆ ಔಟಾಗಿರುತ್ತಿದೆ ಎಂದಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ (India Vs Australia) ನಡುವಿನ ಅಹಮದಾಬಾದ್ ಟೆಸ್ಟ್ (Ahmedabad Test) ಅಂತಿಮ ಘಟ್ಟ ತಲುಪಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ಟೆಸ್ಟ್ ಡ್ರಾದೊಂದಿಗೆ ಅಂತ್ಯಗೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸೀಸ್ ಪಡೆ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ. ಈ ನಡುವೆ ಕಿಂಗ್ ಕೊಹ್ಲಿ (Virat Kohli ) ಅಂಪೈರ್ ವಿರುದ್ಧ ಆಡಿರುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಫೀಲ್ಡಿಂಗ್ ವೇಳೆ ಅಂಪೈರ್ ನಿತಿನ್ ಮೆನನ್ ಅವರ ಕಾಲೆಳೆದಿರುವ ಕಿಂಗ್ ಕೊಹ್ಲಿ, ನಿತಿನ್ ಮೆನನ್ (Nitin Menon) ಅವರ ಅದೊಂದು ನಿರ್ಧಾರದ ಬಗ್ಗೆ ಈಗ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಹಮದಾಬಾದ್ ಟೆಸ್ಟ್‌ನ ಐದನೇ ದಿನದಂದು ಅಂಪೈರ್ ನಿತಿನ್ ಮೆನನ್ ಅವರ ನಿರ್ಧಾರದ ಬಗ್ಗೆ ವಿರಾಟ್ ಕೊಹ್ಲಿ ನೀಡಿರುವ ಪ್ರತಿಕ್ರಿಯೆ ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ.
ವಾಸ್ತವವಾಗಿ ಈ ಘಟನೆ ನಡೆದಿದ್ದು, ಆಸ್ಟ್ರೇಲಿಯ ಇನಿಂಗ್ಸ್‌ನ 35ನೇ ಓವರ್‌ನಲ್ಲಿ. ಈ ಓವರ್‌ನಲ್ಲಿ ಟೀಂ ಇಂಡಿಯಾ, ಆಸೀಸ್ ಆಟಗಾರ ಟ್ರಾವಿಸ್ ಹೆಡ್ ವಿರುದ್ಧ ಎಲ್‌ಬಿಡಬ್ಲ್ಯು ಮನವಿ ಮಾಡಿತು. ಆದರೆ ಟೀಂ ಇಂಡಿಯಾವನ್ನು ಮನವಿಯನ್ನು ತಿರಸ್ಕರಿಸಿದ್ದ ಅಂಪೈರ್ ನಿತಿನ್ ಮೆನನ್ ನಾಟೌಟ್ ನೀಡಿದರು. ಹೀಗಾಗಿ ಟೀಂ ಇಂಡಿಯಾ ಅಂಪೈರ್ ನಿರ್ಧಾರದ ವಿರುದ್ಧ ಡಿಆರ್ಎಸ್ ತೆಗೆದುಕೊಂಡಿತು. ರಿವ್ಯೂವ್ನಲ್ಲಿ ಹೆಡ್ ಔಟಾಗಿರುವುದು ಖಚಿತವಾಗಿತ್ತು. ಆದರೆ ಅಂಪೈರ್ ನಾಟೌಟ್ ನೀಡಿದ್ದರಿಂದಾಗಿ, ಅಂಪೈರ್ ಕಾಲ್ ಆಧಾರದ ಮೇಲೆ ಹೆಡ್ ಬದುಕುಳಿದರು. ಇದಾದ ನಂತರ ನಿತಿನ್ ಮೆನನ್ ನಿರ್ಧಾರದಿಂದ ಅಸಮಾಧಾನಗೊಂಡ ವಿರಾಟ್ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಆಕ್ರೋಶ ಹೊರಹಾಕಿದರು.
Breaking News: ಡಬ್ಲ್ಯುಟಿಸಿ ಫೈನಲ್ಗೆ ಅಧಿಕೃತವಾಗಿ ಎಂಟ್ರಿಕೊಟ್ಟ ಟೀಂ ಇಂಡಿಯಾ..!
ನಾನಿದ್ದಿದ್ದರೆ ಔಟಾಗಿರುತ್ತಿದೆ
ನಿತಿನ್ ಮೆನನ್ ಅವರ ನಿರ್ಧಾರದ ಕುರಿತು ಆಕ್ರೋಶ ಹೊರಹಾಕಿರುವ ವಿರಾಟ್ ಕೊಹ್ಲಿ, ನಾನಿದ್ದಿದ್ದರೆ ಔಟಾಗಿರುತ್ತಿದೆ ಎಂದಿದ್ದಾರೆ. ಕೊಹ್ಲಿ ಆಡಿದ ಈ ಮಾತುಗಳು ಸ್ಟಂಪ್ ಮೈಕ್ನಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿವೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Virat saying “mai hota toh out tha” & Nitin Menon is agreeing too by raising his finger ??pic.twitter.com/huqRnRXCyN
— Adi (@WintxrfellViz) March 13, 2023
ನಿತಿನ್ ಮೆನನ್ ನಿರ್ಧಾರದಿಂದ ಕೊಹ್ಲಿ ಔಟ್
ವಾಸ್ತವವಾಗಿ ಕೊಹ್ಲಿ ಈ ರೀತಿಯಾಗಿ ಅಂಪೈರ್ ನಿತಿನ್ ಮೆನನ್ ವಿರುದ್ಧ ಉರಿದು ಬೀಳಲು ಕಾರಣವೂ ಇದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಔಟ್ ಸಾಕಷ್ಟು ವಿವಾದ ಹುಟ್ಟಿಸಿತ್ತು. ಕುಹ್ನೆಮನ್ ಎಸೆತದಲ್ಲಿ ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯೂ ಆಗಿ ಔಟಾಗಿದ್ದರು. ಈ ನಿರ್ಧಾರವನ್ನು ನಿತಿನ್ ಮೆನನ್ ನೀಡಿದ್ದರು. ಆದರೆ ಅಂಪೈರ್ ನಿರ್ಧಾರದ ವಿರುದ್ಧ ವಿರಾಟ್ ಕೊಹ್ಲಿ ಡಿಆರ್ಎಸ್ ತೆಗೆದುಕೊಂಡಿದ್ದರು. ಆದರೆ ರಿವ್ಯೂವ್ನಲ್ಲಿ, ಚೆಂಡು ಮೊದಲು ಬ್ಯಾಟ್‌ಗೆ ತಗುಲಿತೋ ಅಥವಾ ಪ್ಯಾಡ್‌ಗೆ ಬಡಿದಿದೆಯೋ ಎಂದು ಮೂರನೇ ಅಂಪೈರ್‌ಗೆ ಸ್ಪಷ್ಟವಾಗಿ ಹೇಳಲು ಸಾಧ್ಯವಾಗಲಿಲ್ಲ.
ಇದಾದ ನಂತರ ನಿತಿನ್ ಮೆನನ್ ನಿರ್ಧಾರವನ್ನು ಬೆಂಬಲಿಸಿದ ಮೂರನೇ ಅಂಪೈರ್ ವಿರಾಟ್ ಕೊಹ್ಲಿ ಔಟ್ ಎಂದು ತೀರ್ಪು ನೀಡಿದ್ದರು. ಹೀಗಾಗಿ ಮೆನನ್ ನಿರ್ಧಾರಕ್ಕೆ ವಿರಾಟ್ ಕೊಹ್ಲಿ ಅಸಮಾಧಾನಗೊಂಡಿದ್ದರು. ಅಲ್ಲದೆ ನಿತಿನ್ ಮೆನನ್ ನಿರ್ಧಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ನೆಟ್ಟಿಗರು ಕೂಡ ನಿತಿನ್ರನ್ನು ಸಾಕಷ್ಟು ಟ್ರೋಲ್ ಮಾಡಿದ್ದರು. ಬಹುಶಃ ವಿರಾಟ್ ಈ ಘಟನೆಯನ್ನು ಮನಸಿನಲ್ಲಿಟ್ಟುಕೊಂಡು, ಈಗ ಸಿಕ್ಕ ಅವಕಾಶವನ್ನು ಬಳಸಿಕೊಂಡು ನಿತಿನ್ ಮೆನನ್ ಕಾಲೆಳೆದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:45 pm, Mon, 13 March 23