IND vs BAN: 11 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ ಟೀಂ ಇಂಡಿಯಾ..!

| Updated By: ಪೃಥ್ವಿಶಂಕರ

Updated on: Dec 10, 2022 | 1:18 PM

IND vs BAN: ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್ ಆರಂಭಿಸಲು ಶಿಖರ್ ಧವನ್ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದರು. ಈ ಮೂಲಕ ಟೀಂ ಇಂಡಿಯಾದ ಇಬ್ಬರು ಎಡಗೈ ದಾಂಡಿಗರು ಏಕದಿನ ಕ್ರಿಕೆಟ್​ನಲ್ಲಿ 11 ವರ್ಷಗಳ ನಂತರ ಆರಂಭಿಕರಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

IND vs BAN: 11 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ ಟೀಂ ಇಂಡಿಯಾ..!
Ishan Kishan, Shikhar Dhawan
Follow us on

ಭಾರತ ಮತ್ತು ಬಾಂಗ್ಲಾದೇಶ (India vs Bangladesh) ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಚಿತ್ತಗಾಂಗ್‌ನಲ್ಲಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಟೀಂ ಇಂಡಿಯಾ (Team India) ಈ ಮೈದಾನದಲ್ಲಿ ಆಡುತ್ತಿದೆ. ಈ ಹಿಂದೆ 2007ರಲ್ಲಿಯೇ ಉಭಯ ತಂಡಗಳು ಈ ಮೈದಾನದಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಮಳೆಯಿಂದಾಗಿ ಈ ಮೈದಾನದಲ್ಲಿ ಒಂದೇ ಒಂದು ಚೆಂಡನ್ನು ಎಸೆಯಲಾಗಲಿಲ್ಲ. ಈ ಮೈದಾನದಲ್ಲಿ ಚೊಚ್ಚಲ ಪಂದ್ಯವನ್ನಾಡುವುದರೊಂದಿಗೆ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿರುವ ಟೀಂ ಇಂಡಿಯಾ , ಬರೋಬ್ಬರಿ 11 ವರ್ಷಗಳ ಬಳಿಕ ಇಬ್ಬರು ಎಡಗೈ ಬ್ಯಾಟ್ಸ್​ಮನ್​ಗಳನ್ನು ಆರಂಭಿಕರಾಗಿ ಕಣಕ್ಕಿಳಿಸಿದೆ.

11 ವರ್ಷಗಳ ನಂತರ ಈ ಪ್ರಯತ್ನ

ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್ ಆರಂಭಿಸಲು ಶಿಖರ್ ಧವನ್ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದರು. ಈ ಮೂಲಕ ಟೀಂ ಇಂಡಿಯಾದ ಇಬ್ಬರು ಎಡಗೈ ದಾಂಡಿಗರು ಏಕದಿನ ಕ್ರಿಕೆಟ್​ನಲ್ಲಿ 11 ವರ್ಷಗಳ ನಂತರ ಆರಂಭಿಕರಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು, ಶಿಖರ್ ಧವನ್ ಮತ್ತು ಪಾರ್ಥಿವ್ ಪಟೇಲ್ ಜೂನ್ 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ್ದರು.

IPL 2023: ಆಂಗ್ಲರ ಮೇಲೆ ಹದ್ದಿನ ಕಣ್ಣು; ಮಿನಿ ಹರಾಜಿನಲ್ಲಿ ಈ ಆಟಗಾರರು ಕೋಟಿ ಒಡೆಯರಾಗುವುದು ಗ್ಯಾರಂಟಿ..!

15 ರನ್‌ಗಳಿಗೆ ಜೊತೆಯಾಟ ಅಂತ್ಯ

ಆದರೆ 11 ವರ್ಷಗಳ ನಂತರ ಈ ತಂತ್ರದ ಮೊರೆಹೋಗಿದ್ದ ಭಾರತಕ್ಕೆ ಯಶಸ್ಸು ಸಿಗಲಿಲ್ಲ. ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಶಿಖರ್ ಧವನ್ ಈ ಪಂದ್ಯದಲ್ಲೂ ಸಿಂಗಲ್​ ಡಿಜಿಟ್​ಗೆ ಆಟ ಮುಗಿಸಿದರು. ಈ ಮೂಲಕ ಕೇವಲ 15 ರನ್ ಜೊತೆಗೂಡಿಸುವುದರೊಳಗೆ ಈ ಜೋಡಿ ಬೇರ್ಪಟಿತು. ಆದರೆ ನಾಯಕ ರೋಹಿತ್ ಶರ್ಮಾ ಇಂಜುರಿಯಿಂದಾಗಿ ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್ ಅಬ್ಬರದ ಇನ್ನಿಂಗ್ಸ್ ಕಟ್ಟಿದ್ದಾರೆ.

ಟಾಸ್ ಗೆದ್ದ ಬಾಂಗ್ಲಾ ಬೌಲಿಂಗ್ ಆಯ್ಕೆ

ಇದಕ್ಕೂ ಮುನ್ನ ಪಂದ್ಯದ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಈ ನಿರ್ಧಾರದ ಪ್ರತಿಫಲವನ್ನು ಅವರು ಶಿಖರ್ ಧವನ್ ರೂಪದಲ್ಲಿ ಶೀಘ್ರದಲ್ಲೇ ಪಡೆದುಕೊಂಡಿದ್ದಾರೆ. ಮೂರನೇ ಮತ್ತು ಕೊನೆಯ ಏಕದಿನ ಪಂದ್ಯಕ್ಕಾಗಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ತಮ್ಮ ತಂಡಗಳಲ್ಲಿ ಎರಡು ಬದಲಾವಣೆಗಳನ್ನು ಮಾಡಿವೆ. ದೀಪಕ್ ಚಹಾರ್ ರೂಪದಲ್ಲಿ ಭಾರತ ತಂಡದಲ್ಲಿ ಮತ್ತೊಂದು ಬದಲಾವಣೆಯಾಗಿದೆ. ಅವರ ಸ್ಥಾನಕ್ಕೆ ಕುಲದೀಪ್ ಯಾದವ್ ಬಂದಿದ್ದಾರೆ.

ಈ ಪಂದ್ಯಕ್ಕೆ ಉಭಯ ತಂಡಗಳು

ಬಾಂಗ್ಲಾದೇಶ ತಂಡ

ಲಿಟ್ಟನ್ ದಾಸ್ (ನಾಯಕ), ಅನಾಮುಲ್ ಹಕ್, ಯಾಸಿರ್ ಅಲಿ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಎಬಾದತ್ ಹೊಸೈನ್

ಭಾರತ ತಂಡ

ಇಶಾನ್ ಕಿಶನ್, ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Sat, 10 December 22