IND vs BAN: ಅಭ್ಯಾಸದ ವೇಳೆ ಡ್ರೆಸ್ಸಿಂಗ್ ಕೊಠಡಿಯ ಗೋಡೆ ಒಡೆದ ಕಿಂಗ್ ಕೊಹ್ಲಿ..! ವಿಡಿಯೋ ವೈರಲ್

|

Updated on: Sep 16, 2024 | 3:27 PM

Virat Kohli: ಡಬ್ಲ್ಯುಟಿಸಿ ಫೈನಲ್ ದೃಷ್ಟಿಯಿಂದ ಈ ಸರಣಿ ಟೀಂ ಇಂಡಿಯಾಗೆ ಮಹತ್ವದ್ದಾಗಿದೆ. ಹೀಗಾಗಿಯೇ ತಂಡದ ಆಟಗಾರರು ಸಾಕಷ್ಟು ಸಮಯವನ್ನು ನೆಟ್ಸ್‌ನಲ್ಲಿ ಕಳೆಯುತ್ತಿದ್ದಾರೆ. ಅದರಂತೆ ತಿಂಗಳುಗಳ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಅಭ್ಯಾಸದ ವೇಳೆ ತಮ್ಮ ಪವರ್​ಫುಲ್ ಶಾಟ್​ನಿಂದ ಕ್ರೀಡಾಂಗಣದ ಡ್ರೆಸ್ಸಿಂಗ್ ಕೋಣೆಯ ಗೋಡೆಯಲ್ಲಿ ರಂಧ್ರವುಂಟಾಗುವಂತೆ ಮಾಡಿದ್ದಾರೆ.

IND vs BAN: ಅಭ್ಯಾಸದ ವೇಳೆ ಡ್ರೆಸ್ಸಿಂಗ್ ಕೊಠಡಿಯ ಗೋಡೆ ಒಡೆದ ಕಿಂಗ್ ಕೊಹ್ಲಿ..! ವಿಡಿಯೋ ವೈರಲ್
ವಿರಾಟ್ ಕೊಹ್ಲಿ
Follow us on

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಉಭಯ ತಂಡಗಳು ಚೆನ್ನೈಗೆ ಬಂದಿಳಿದಿವೆ. ಟೀಂ ಇಂಡಿಯಾ ಈಗಾಗಲೇ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿದ್ದರೆ, ಬಾಂಗ್ಲಾದೇಶ ತಂಡ ನಿನ್ನೆಯಷ್ಟೇ ಚೆನ್ನೈ ತಲುಪಿದೆ. ಮೂರ್ನಾಲ್ಕು ದಿನಗಳಿಂದ ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿರುವ ಟೀಂ ಇಂಡಿಯಾ ಆಟಗಾರರು ನೆಟ್ಸ್‌ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಡಬ್ಲ್ಯುಟಿಸಿ ಫೈನಲ್ ದೃಷ್ಟಿಯಿಂದ ಈ ಸರಣಿ ಟೀಂ ಇಂಡಿಯಾಗೆ ಮಹತ್ವದ್ದಾಗಿದೆ. ಹೀಗಾಗಿಯೇ ತಂಡದ ಆಟಗಾರರು ಸಾಕಷ್ಟು ಸಮಯವನ್ನು ನೆಟ್ಸ್‌ನಲ್ಲಿ ಕಳೆಯುತ್ತಿದ್ದಾರೆ. ಅದರಂತೆ ತಿಂಗಳುಗಳ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಅಭ್ಯಾಸದ ವೇಳೆ ತಮ್ಮ ಪವರ್​ಫುಲ್ ಶಾಟ್​ನಿಂದ ಕ್ರೀಡಾಂಗಣದ ಡ್ರೆಸ್ಸಿಂಗ್ ಕೋಣೆಯ ಗೋಡೆಯಲ್ಲಿ ರಂಧ್ರವುಂಟಾಗುವಂತೆ ಮಾಡಿದ್ದಾರೆ.

ವಿಡಿಯೋ ವೈರಲ್

ನಿನ್ನೆ ನಡೆದ ಅಭ್ಯಾಸದ ಅವಧಿಯಲ್ಲಿ ನೆಟ್ಸ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಅಭ್ಯಾಸ ನಡೆಸಿದ ವಿರಾಟ್ ಕೊಹ್ಲಿ, ಬಿಗ್ ಶಾಟ್ ಆಡಿದರು. ಈ ವೇಳೆ ಕೊಹ್ಲಿ ಹೊಡೆದ ಶಾಟ್ ಡ್ರೆಸ್ಸಿಂಗ್ ರೂಮಿನ ಗೋಡೆಯನ್ನು ಒಡೆದಿದೆ. ಅದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮೇಲೆ ಹೇಳಿದಂತೆ ವಿರಾಟ್ ಕೊಹ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 2024 ರ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡಿದ್ದರು. ಇದರ ನಂತರ, ಅವರು ವೈಯಕ್ತಿಕ ಕಾರಣಗಳಿಂದ ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದ್ದಿದ್ದರು. ಇದೀಗ ಕೊಹ್ಲಿ ಟೆಸ್ಟ್‌ನಲ್ಲಿ ಪುನರಾಗಮನ ಮಾಡಲಿದ್ದು, ಅವರ ಮೇಲೆ ಎಲ್ಲರ ಗಮನ ನೆಟ್ಟಿದೆ. ಈ ಸರಣಿಗೆ ಕೊಹ್ಲ್ಲಿ ಅಲ್ಲದೆ ಹಲವು ಹಿರಿಯ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಆರ್.ಅಶ್ವಿನ್, ಆರ್.ಜಡೇಜಾ ಜತೆಗೆ ಅಕ್ಷರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸಚಿನ್ ದಾಖಲೆ ಮುರಿಯುವ ಅವಕಾಶ

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯುವ ಅವಕಾಶ ಕೊಹ್ಲಿಗೆ ಲಭಿಸಲಿದೆ. ಕೊಹ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಇದುವರೆಗೆ 591 ಇನ್ನಿಂಗ್ಸ್‌ಗಳಲ್ಲಿ 26942 ರನ್ ಗಳಿಸಿದ್ದಾರೆ. ಈ ಸರಣಯಲ್ಲಿ ಕೊಹ್ಲಿ ಕೇವಲ 58 ರನ್‌ ಬಾರಿಸಿದರೆ 27 ಸಾವಿರ ರನ್​ಗಳ ಗಡಿ ದಾಟಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಕೊಹ್ಲಿ 58 ರನ್ ಗಳಿಸಿದರೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಸಚಿನ್ 623 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಮೊದಲ ಟೆಸ್ಟ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫ್ರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಆರ್ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Mon, 16 September 24