AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋರ್ ಹೊಡೆದು ಗೆಲ್ಲಿಸಿದ ರಾಧಾ ಹಿಟ್ ವಿಕೆಟ್ ಆಗಿದ್ರಾ? ನಡೆಯಿತಾ ಮೋಸದಾಟ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ರೋಮಾಂಚಕ ರನ್ ಚೇಸ್ ಮೂಲಕ ಎರಡನೇ ಬಾರಿಗೆ ಕಪ್ ಗೆದ್ದಿದೆ. ಅಂತಿಮ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿನ ವೇಳೆ 'ಕಳ್ಳಾಟ'ದ ಆರೋಪ ಕೇಳಿಬಂದಿತ್ತು. ರಾಧಾ ಅವರ ಬ್ಯಾಟ್ ಸ್ಟಂಪ್‌ಗೆ ತಾಗಿದೆಯೇ ಎಂಬ ಅನುಮಾನಕ್ಕೆ ಈ ವಿಡಿಯೋದಿಂದ ಸ್ಪಷ್ಟನೆ ಸಿಕ್ಕಿದೆ.

ಫೋರ್ ಹೊಡೆದು ಗೆಲ್ಲಿಸಿದ ರಾಧಾ ಹಿಟ್ ವಿಕೆಟ್ ಆಗಿದ್ರಾ? ನಡೆಯಿತಾ ಮೋಸದಾಟ?
ಕ್ರಿಕೆಟ್
ರಾಜೇಶ್ ದುಗ್ಗುಮನೆ
|

Updated on:Feb 06, 2026 | 8:03 AM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಎರಡನೇ ಬಾರಿಗೆ ವುಮನ್ಸ್ ಪ್ರೀಮಿಯರ್ ಲೀಗ್ ಅಲ್ಲಿ ಕಪ್ ಎತ್ತಿದೆ. ಅದ್ಭುತ ರನ್ ಚೇಸ್ ಮೂಲಕ ಆರ್​​ಸಿಬಿ ಮತ್ತೊಮ್ಮೆ ಕಪ್​​​ನ ತನ್ನದಾಗಿಸಿಕೊಂಡಿತು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಮ್ಮೆ ಫೈನಲ್​​ಗೆ ಬಂದು ಸೋತಿದೆ. ಈ ಮಧ್ಯೆ ಆರ್​​ಸಿಬಿ ಕಳ್ಳಾಟ ಆಡಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಈಗ ಸ್ಪಷ್ಟನೆ ಕೂಡ ಸಿಕ್ಕಿದೆ.

ಟಾಸ್​ ಗೆದ್ದ ಆರ್​​ಸಿಬಿ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಡೆಲ್ಲಿ ಉತ್ತಮ ಆರಂಭ ಕಂಡಿತು. ಸಂಘಟಿತ ಆಟದಿಂದ ಡೆಲ್ಲಿ ತಂಡ ಅಂತಿಮವಾಗಿ 20 ಓವರ್​​ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 203 ರನ್​​​ ಕಲೆ ಹಾಕಿತು. ಈ ಬೃಹತ್ ಮೊತ್ತ ಬೆನ್ನು ಹತ್ತಿದ ಆರ್​​ಸಿಬಿಗೆ ಆರಂಭಿಕ ಆಘಾತ ಎದುರಾಯಿತು. ತಂಡದ ಮೊತ್ತ 9 ರನ್ ಇದ್ದಾಗ ಗ್ರೇಸ್ ಹ್ಯಾರಿಸ್ ಅವರು ವಿಕೆಟ್ ಒಪ್ಪಿಸಿದರು.

ನಂತರ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವಾಲ್ ಅವರ ಜೊತೆಯಾಟದಿಂದ ಆರ್​​ಸಿಬಿ ಗೆಲುವಿನ ಹಾದಿ ಹಿಡಿಯಿತು. ಸುಲಭದಲ್ಲಿ ಕಪ್ ನಮ್ಮದಾಯಿತು ಎನ್ನುವಾಗ ಮತ್ತೆ ಸಂಕಷ್ಟ ಎದುರಾಯಿತು. ತಂಡದ ಮೊತ್ತ 174 ರನ್ ಇರುವಾಗ ಆರ್​ಸಿಬಿ 2ನೇ ವಿಕೆಟ್ ಕಳೆದುಕೊಂಡಿತು. ಜಾರ್ಜಿಯಾ ವಾಲ್(54 ಬಾಲ್​​ಗೆ 79 ರನ್) ಔಟ್ ಆದರು. ನಂತರ ರಿಚಾ ಘೋಷ್ ಕೇವಲ 6 ರನ್​​ಗೆ ವಿಕೆಟ್ ಒಪ್ಪಿಸಿದರು. ಸ್ಮೃತಿ ಕೂಡ ಔಟ್ ಆದರು. ತಂಡದ ಮೊತ್ತ 191 ಇರುವಾಗ ನಾಲ್ಕು ವಿಕೆಟ್ ಬಿದ್ದಿತ್ತು.

ಕೊನೆಯ ಓವರ್​​ನಲ್ಲಿ ಬೇಕಿದ್ದಿದ್ದು 10 ರನ್​​ಗಳು. ಆಗ, ಮೊದಲ ಎರಡು ಬಾಲ್, ಎರಡು ಸಿಂಗಲ್ ಬಂತು. ಕ್ರೀಜ್​​ನಲ್ಲಿ ಇದ್ದ ರಾಧಾ ಅವರು ಮೂರನೇ ಬಾಲ್​​ನ ಫೋರ್​​ಗಡಿಗೆ ಅಟ್ಟಿದರು. ನಾಲ್ಕನೇ ಬಾಲ್​ ಕೂಡ ಫೋರ್ ಬಾರಿಸಿದರು. ಈ ವೇಳೆ ರಾಧಾ ಅವರ ಬ್ಯಾಟ್ ಸ್ಟಂಪ್​​ಗೆ ತಾಗಿದೆ ಎಂದು ಕೆಲವರು ಹೇಳಿದ್ದಾರೆ.

ಅಸಲಿಗೆ ಸ್ಟಂಪ್​​ಗೆ ತಾಗಿದ್ದು ಕೀಪರ್ ಕೈ. ವಿಡಿಯೋದಲ್ಲಿ ಅದು ಸ್ಪಷ್ಟವಾಗಿ ಕಾಣಿಸಿದೆ. ಆದಾಗ್ಯೂ ಕೆಲವರು ಈ ರೀತಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ಮಾಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:41 am, Fri, 6 February 26