AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಭಾರಿ ಗೆಲುವು: 30 ವರ್ಷಗಳ ಬಿಜೆಪಿ ಭದ್ರಕೋಟೆ ಧೂಳಿಪಟ, ಪತ್ನಿ ಜಾಹ್ನವಿ ಹೇಳಿದ್ದೇನು?

ಪ್ರಸಿದ್ಧ ಚುನಾವಣಾ ತಂತ್ರಜ್ಞ ಹಾಗೂ 'ಜನ್ ಸುರಾಜ್' ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್(Prashant Kishor) ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ 19,324 ಮತಗಳ ಭಾರಿ ಅಂತರದ ಭವ್ಯ ಗೆಲುವು ಸಾಧಿಸುವ ಮೂಲಕ ಸಕ್ರಿಯ ರಾಜಕೀಯಕ್ಕೆ ಅದ್ಧೂರಿ ಪಾದಾರ್ಪಣೆ ಮಾಡಿದ್ದಾರೆ. ಚುನಾವಣಾ ಆಯೋಗದ ಅಧಿಕೃತ ಮಾಹಿತಿಯ ಪ್ರಕಾರ, ಪ್ರಶಾಂತ್ ಕಿಶೋರ್ ಅವರು ಒಟ್ಟು 64,151 ಮತಗಳನ್ನು ಪಡೆದರೆ, ಅವರ ನಿಕಟ ಸ್ಪರ್ಧಿ ಬಿಜೆಪಿಯ ನೀರಜ್ ಕುಮಾರ್ 44,827 ಮತಗಳನ್ನು ಗಳಿಸಿದರು. ಆರ್‌ಜೆಡಿ (RJD) ಅಭ್ಯರ್ಥಿ ರೇಖಾ ಕುಮಾರಿ ಕೇವಲ 14,273 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಭಾರಿ ಗೆಲುವು: 30 ವರ್ಷಗಳ ಬಿಜೆಪಿ ಭದ್ರಕೋಟೆ ಧೂಳಿಪಟ, ಪತ್ನಿ ಜಾಹ್ನವಿ ಹೇಳಿದ್ದೇನು?
ಪ್ರಶಾಂತ್ ಕಿಶೋರ್
ನಯನಾ ರಾಜೀವ್
|

Updated on: Aug 04, 2026 | 8:13 AM

Share

ಬಂಕಿಪುರ, ಆಗಸ್ಟ್ 04: ಪ್ರಸಿದ್ಧ ಚುನಾವಣಾ ತಂತ್ರಜ್ಞ ಹಾಗೂ ‘ಜನ್ ಸುರಾಜ್’ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್(Prashant Kishor) ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ 19,324 ಮತಗಳ ಭಾರಿ ಅಂತರದ ಭವ್ಯ ಗೆಲುವು ಸಾಧಿಸುವ ಮೂಲಕ ಸಕ್ರಿಯ ರಾಜಕೀಯಕ್ಕೆ ಅದ್ಧೂರಿ ಪಾದಾರ್ಪಣೆ ಮಾಡಿದ್ದಾರೆ. ಚುನಾವಣಾ ಆಯೋಗದ ಅಧಿಕೃತ ಮಾಹಿತಿಯ ಪ್ರಕಾರ, ಪ್ರಶಾಂತ್ ಕಿಶೋರ್ ಅವರು ಒಟ್ಟು 64,151 ಮತಗಳನ್ನು ಪಡೆದರೆ, ಅವರ ನಿಕಟ ಸ್ಪರ್ಧಿ ಬಿಜೆಪಿಯ ನೀರಜ್ ಕುಮಾರ್ 44,827 ಮತಗಳನ್ನು ಗಳಿಸಿದರು. ಆರ್‌ಜೆಡಿ (RJD) ಅಭ್ಯರ್ಥಿ ರೇಖಾ ಕುಮಾರಿ ಕೇವಲ 14,273 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ನಾನು ರಾಜಕೀಯದಿಂದ ದೂರವೇ ಇರುತ್ತೇನೆ: ಪ್ರಶಾಂತ್ ಕಿಶೋರ್ ಪತ್ನಿ ಸ್ಪಷ್ಟನೆ ಗಂಡನ ಐತಿಹಾಸಿಕ ಗೆಲುವಿನ ಕುರಿತು ಖಾಸಗಿ ವಾಹಿನಿ ಎನ್​ಡಿಟಿವಿ ಜತೆ ಮಾತನಾಡಿದ ಪ್ರಶಾಂತ್ ಕಿಶೋರ್ ಅವರ ಪತ್ನಿ ಡಾ. ಜಾಹ್ನವಿ ದಾಸ್, ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ. ಈ ದೊಡ್ಡ ಗೆಲುವಿಗಾಗಿ ಮಾ ಕಾಮಾಕ್ಯ ದೇವಿ, ಬಂಕಿಪುರ ಮತ್ತು ಬಿಹಾರದ ಜನತೆಗೆ ಹಾಗೂ ಜನ್ ಸುರಾಜ್ ತಂಡದ ಪ್ರತಿಯೊಬ್ಬ ಸದಸ್ಯರಿಗೆ ಧನ್ಯವಾದಗಳು ಎಂದಿದ್ದಾರೆ. ನೀವು ರಾಜಕೀಯಕ್ಕೆ ಬರುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಿಂದ ನಾನು ಎಂದಿಗೂ ದೂರವೇ ಇರುತ್ತೇನೆ. ಆ ಕೆಲಸ ನಿರ್ವಹಿಸಲು ಅವರ ಬಳಿ ಅತ್ಯುತ್ತಮ ತಂಡವಿದೆ. ಆದರೆ ವೈಯಕ್ತಿಕ ಜೀವನದಲ್ಲಿ ಅವರಿಗೆ ಪೂರ್ಣ ಬೆಂಬಲ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಗೆಲುವಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, ನಾನಿಲ್ಲಿ ಯಾವುದೇ ಪವಾಡ ಮಾಡಿಲ್ಲ. ಕೇವಲ 30 ದಿನಗಳ ಕಠಿಣ ಶ್ರಮದಿಂದ ಬಿಜೆಪಿಯ 30 ವರ್ಷಗಳ ಸುರಕ್ಷಿತ ಭದ್ರಕೋಟೆಯನ್ನು ಕೆಡವಿದ್ದೇನೆ ಎಂದರು. ಬಂಕಿಪುರ ಕ್ಷೇತ್ರದ ಜನರಿಗೆ ನನ್ನ ಬಾಗಿಲು ಸದಾ ತೆರೆದಿರುತ್ತದೆ. ಕೇವಲ 3 ತಿಂಗಳಲ್ಲಿ ಬಂಕಿಪುರದಲ್ಲಿ ಪ್ರತ್ಯಕ್ಷ ಬದಲಾವಣೆಯನ್ನು ನೀವು ನೋಡಲಿದ್ದೀರಿ ಎಂದು ಅಭಿವೃದ್ಧಿಯ ಭರವಸೆ ನೀಡಿದರು.

ಮತ್ತಷ್ಟು ಓದಿ: ಬಂಕಿಪುರ, ಡಾಟಿಯಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ಏಕೆ?; ಪ್ರಶಾಂತ್ ಕಿಶೋರ್ ಗೆಲುವಿಗೆ ಕಾರಣವೇನು?

ಬಿಹಾರ ರಾಜಕೀಯದಲ್ಲಿ ಹೊಸ ಅಲೆ: ಕಳೆದ ಎರಡು ವರ್ಷಗಳಿಂದ ‘ಜನ್ ಸುರಾಜ್’ ಪಾದಯಾತ್ರೆಯ ಮೂಲಕ ಬಿಹಾರದಾದ್ಯಂತ ಸಂಚರಿಸಿದ್ದ ಪ್ರಶಾಂತ್ ಕಿಶೋರ್, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಬಂಕಿಪುರ ಕ್ಷೇತ್ರವು ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಕ್ಷೇತ್ರವಾಗಿತ್ತು. ದಶಕಗಳಿಂದ ಬಿಜೆಪಿಯ ತೆಕ್ಕೆಯಲ್ಲಿದ್ದ ಈ ನಗರ ಕ್ಷೇತ್ರವನ್ನು ಕಳೆದುಕೊಂಡಿರುವುದು ಕೇಸರಿ ಪಡೆಗೆ ತೀವ್ರ ರಾಜಕೀಯ ಆಘಾತ ತಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಸಂಪುಟ ವಿಸ್ತರಣೆ ಗೊಂದಲದ ನಡುವೆ ಡಿಕೆ ಶಿವಕುಮಾರ್ ಸ್ಪಷ್ಟನೆ
ಸಂಪುಟ ವಿಸ್ತರಣೆ ಗೊಂದಲದ ನಡುವೆ ಡಿಕೆ ಶಿವಕುಮಾರ್ ಸ್ಪಷ್ಟನೆ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಕೋಲಾರಕ್ಕೆ ಮೋಸ ಮಾಡಿದ್ದಾರೆ: ನಾರಾಯಣಸ್ವಾಮಿ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಕೋಲಾರಕ್ಕೆ ಮೋಸ ಮಾಡಿದ್ದಾರೆ: ನಾರಾಯಣಸ್ವಾಮಿ
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ
ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು
ರೆಬೆಲ್ಸ್​​ ಸಭೆಯಲ್ಲಿ ಅಪ್ಪಾಜಿ ನಾಡಗೌಡ ಕಣ್ಣೀರು
ರೆಬೆಲ್ಸ್​​ ಸಭೆಯಲ್ಲಿ ಅಪ್ಪಾಜಿ ನಾಡಗೌಡ ಕಣ್ಣೀರು
ಬಂಕಿಪುರದ ಐತಿಹಾಸಿಕ ಗೆಲುವಿನ ಮೂಲಕ ರಾಜಕೀಯಕ್ಕೆ ಪ್ರಶಾಂತ್ ಕಿಶೋರ್ ಎಂಟ್ರಿ
ಬಂಕಿಪುರದ ಐತಿಹಾಸಿಕ ಗೆಲುವಿನ ಮೂಲಕ ರಾಜಕೀಯಕ್ಕೆ ಪ್ರಶಾಂತ್ ಕಿಶೋರ್ ಎಂಟ್ರಿ