AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ವರುಣ್ ಚಕ್ರವರ್ತಿ ಆಯ್ಕೆಯಿಂದ ಹೊರಬೀಳುವವರು ಯಾರು?

India vs England, 1st ODI: ಭಾರತ ಮತ್ತು ಇಂಗ್ಲೆಂಡ್ ನಡುವಣ 3 ಪಂದ್ಯಗಳ ಏಕದಿನ ಸರಣಿಯು ಇಂದಿನಿಂದ (ಫೆ.6) ಶುರುವಾಗಲಿದೆ. ನಾಗ್ಪುರದಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯದ ಮೂಲಕ ವರುಣ್ ಚಕ್ರವರ್ತಿ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಇತ್ತ ವರುಣ್​ಗೆ ಅವಕಾಶ ನೀಡಿದರೆ ಅನುಭವಿ ಸ್ಪಿನ್ನರ್​ ಒಬ್ಬರು ತಂಡದಿಂದ ಹೊರಗುಳಿಯಬೇಕಾಗುತ್ತದೆ.

IND vs ENG: ವರುಣ್ ಚಕ್ರವರ್ತಿ ಆಯ್ಕೆಯಿಂದ ಹೊರಬೀಳುವವರು ಯಾರು?
Team India
ಝಾಹಿರ್ ಯೂಸುಫ್
|

Updated on:Feb 06, 2025 | 7:59 AM

Share

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ವರುಣ್ ಚಕ್ರವರ್ತಿ ಆಯ್ಕೆಯಾಗಿದ್ದಾರೆ. ಈ ಮೊದಲು ಪ್ರಕಟಿಸಿದ 15 ಸದಸ್ಯರ ಬಳಗದಲ್ಲಿ ವರುಣ್ ಕಾಣಿಸಿಕೊಂಡಿರಲಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 14 ವಿಕೆಟ್ ಕಬಳಿಸಿ ಮಿಂಚುವುದರೊಂದಿಗೆ ಮಿಸ್ಟರಿ ಸ್ಪಿನ್ನರ್​ಗೆ ಟೀಮ್ ಇಂಡಿಯಾದಿಂದ ಬುಲಾವ್ ಬಂದಿದೆ. ಅದರಂತೆ ಇದೀಗ ನಾಗ್ಪುರದಲ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ.

ಇತ್ತ ಲೇಟ್ ಎಂಟ್ರಿಯಾದರೂ ಮೊದಲ ಏಕದಿನ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಏಕೆಂದರೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಆಂಗ್ಲ ಬ್ಯಾಟರ್​ಗಳನ್ನು ಕಾಡಿದ್ದ ವರುಣ್ ಅವರ ಮಿಸ್ಟರಿ ಸ್ಪಿನ್ ಅನ್ನು ಏಕದಿನದಲ್ಲೂ ಪ್ರಯೋಗಿಸಲು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಯಸಿದ್ದಾರೆ.

ಹೀಗಾಗಿ ಮೊದಲ ಏಕದಿನ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ವರುಣ್​ಗೆ ಅವಕಾಶ ಕಲ್ಪಿಸಲು ಮುಂದಾದರೆ, ಸ್ಟಾರ್ ಸ್ಪಿನ್ನರೊಬ್ಬರು ಹೊರಗುಳಿಯಬೇಕಾಗುತ್ತದೆ.

ಇಲ್ಲಿ ಪರಿಪೂರ್ಣ ಸ್ಪಿನ್ನರ್ ಆಗಿ ಇರುವುದು ಕುಲ್ದೀಪ್ ಯಾದವ್. ಹಾಗೆಯೇ ಸ್ಪಿನ್ ಆಲ್​ರೌಂಡರ್ ಆಗಿ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ತಂಡದಲ್ಲಿದ್ದಾರೆ. ಅನುಭವದ ಆಧಾರದ ಮೇಲೆ ಜಡೇಜಾಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಸಿಗುವುದು ಖಚಿತ.

ಇನ್ನು ಇಬ್ಬರು ಸ್ಪಿನ್ನರ್​ಗಳನ್ನು ಕಣಕ್ಕಿಳಿಸಲು ಬಯಸಿದರೆ ಯುವ ವೇಗಿ ಹರ್ಷಿತ್ ರಾಣಾ ಹೊರಗುಳಿಯಲಿದ್ದಾರೆ. ಅದರಂತೆ ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್​ಗೆ ಚಾನ್ಸ್ ಸಿಗಬಹುದು.

ಒಂದು ವೇಳೆ ಓರ್ವ ಪರಿಪೂರ್ಣ ಸ್ಪಿನ್ನರ್​ನೊಂದಿಗೆ ಪ್ಲೇಯಿಂಗ್ ಇಲೆವೆನ್ ರೂಪಿಸಿದರೆ, ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ನಡುವೆ ನೇರ ಪೈಪೋಟಿ ಏರ್ಪಡಲಿದೆ. ಇಲ್ಲಿ ಇಂಗ್ಲೆಂಡ್ ವಿರುದ್ದದ ಕಳೆದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಕಾರಣ ವರುಣ್​ಗೆ ಅವಕಾಶ ಸಿಗಬಹುದು.

ಅಂದರೆ ವರುಣ್ ಚಕ್ರವರ್ತಿ ಎಂಟ್ರಿಯಿಂದಾಗಿ ಇದೀಗ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ನಡುವೆ ಪೈಪೋಟಿ ಏರ್ಪಟ್ಟಿರುವುದಂತು ಸತ್ಯ. ಈ ಮೂವರನ್ನು ಹಿಂದಿಕ್ಕಿ ವರುಣ್ ಚಕ್ರವರ್ತಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: ಬ್ರಾವೊ ವಿಶ್ವ ದಾಖಲೆ ಬೌಲ್ಡ್: ಹೊಸ ಇತಿಹಾಸ ನಿರ್ಮಿಸಿದ ರಶೀದ್ ಖಾನ್

ಭಾರತ ಸಂಭಾವ್ಯ ಪ್ಲೇಯಿಂಗ್ 11:

  1. ರೋಹಿತ್ ಶರ್ಮಾ (ನಾಯಕ)
  2. ಶುಭ್​ಮನ್ ಗಿಲ್
  3. ವಿರಾಟ್ ಕೊಹ್ಲಿ
  4. ಶ್ರೇಯಸ್ ಅಯ್ಯರ್
  5. ಕೆಎಲ್ ರಾಹುಲ್ (ವಿಕೆಟ್ ಕೀಪರ್)
  6. ಹಾರ್ದಿಕ್ ಪಾಂಡ್ಯ
  7. ರವೀಂದ್ರ ಜಡೇಜಾ
  8. ಮೊಹಮ್ಮದ್ ಶಮಿ,
  9. ಅರ್ಷದೀಪ್ ಸಿಂಗ್
  10. ಹರ್ಷಿತ್ ರಾಣಾ
  11. ವರುಣ್ ಚಕ್ರವರ್ತಿ.

Published On - 7:58 am, Thu, 6 February 25