IND vs ENG: ಜಡೇಜಾ ಎಡವಟ್ಟು, ಸರ್ಫರಾಜ್ ರನೌಟ್; ಸಿಟ್ಟಿಗೆದ್ದ ರೋಹಿತ್..! ವಿಡಿಯೋ ವೈರಲ್

IND vs ENG: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಶತಕದತ್ತ ದಾಪುಗಾಲಿಡುತ್ತಿದ್ದ ಸರ್ಫರಾಜ್ ಖಾನ್ ತನ್ನದಲ್ಲದ ತಪ್ಪಿಗೆ ರನೌಟ್​ಗೆ ಬಲಿಯಾಗಬೇಕಾಯಿತು. ಇದರೊಂದಿಗೆ ಸರ್ಫರಾಜ್, ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶಕತ ಸಿಡಿಸುವ ಅವಕಾಶದಿಂದ ವಂಚಿತರಾದರು.

IND vs ENG: ಜಡೇಜಾ ಎಡವಟ್ಟು, ಸರ್ಫರಾಜ್ ರನೌಟ್; ಸಿಟ್ಟಿಗೆದ್ದ ರೋಹಿತ್..! ವಿಡಿಯೋ ವೈರಲ್
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on:Feb 15, 2024 | 8:21 PM

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಶತಕದತ್ತ ದಾಪುಗಾಲಿಡುತ್ತಿದ್ದ ಸರ್ಫರಾಜ್ ಖಾನ್ (Sarfaraz Khan)  ತನ್ನದಲ್ಲದ ತಪ್ಪಿಗೆ ರನೌಟ್​ಗೆ ಬಲಿಯಾಗಬೇಕಾಯಿತು. ಇದರೊಂದಿಗೆ ಸರ್ಫರಾಜ್, ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶಕತ ಸಿಡಿಸುವ ಅವಕಾಶದಿಂದ ವಂಚಿತರಾದರು. ಕೇವಲ 48 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸರ್ಫರಾಜ್, ರವೀಂದ್ರ ಜಡೇಜಾ (Ravindra Jadeja) ಮಾಡಿದ ತಪ್ಪಿನಿಂದಾಗಿ ರನ್ ಔಟ್ ಆದರು. ಅಂತಿಮವಾಗಿ ಸರ್ಫರಾಜ್ 66 ಎಸೆತಗಳಲ್ಲಿ 62 ರನ್ ಗಳಿಸಿ ಬೇಸರದೊಂದಿಗೆ ಕ್ರೀಸ್‌ನಿಂದ ಮರಳಿದರು. ಈ ರನೌಟ್‌ನಿಂದ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ನಿರಾಸೆಗೊಂಡರು. ಟಿವಿ ನೋಡುತ್ತಿದ್ದ ಪ್ರೇಕ್ಷಕರು ಕೂಡ ಸರ್ಫರಾಜ್ ಔಟ್ ಆಗಿದಕ್ಕೆ ಬೇಸರಗೊಂಡರು. ಮತ್ತೊಂದೆಡೆ, ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ಅಸಮಾಧಾನಗೊಂಡು ತನ್ನ ತಲೆಗೆ ಹಾಕಿದ್ದ ಕ್ಯಾಪ್ ತೆಗೆದು ಬೀಸಾಡಿದರು. ರೋಹಿತ್​ಗೆ ರವೀಂದ್ರ ಜಡೇಜಾ ಅವರ ಮೇಲಿನ ಕೋಪ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

ಜಡೇಜಾ ಮಾಡಿದ ಎಡವಟ್ಟು

ನಿರಂಜನ್ ಶಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಕೆಲವೇ ಓವರ್​ಗಳು ಬಾಕಿ ಉಳಿದಿದ್ದವು. ಈ ವೇಳೆ ಭಾರತ 81 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 310 ರನ್ ಕಲೆಹಾಕಿತ್ತು. ಜಡೇಜಾ ನಾಲ್ಕನೇ ಟೆಸ್ಟ್ ಶತಕಕ್ಕೆ ಕೇವಲ ಒಂದು ರನ್ ಅಂತರದಲ್ಲಿದ್ದರೆ, ಸರ್ಫರಾಜ್ 62 ರನ್ ಗಳಿಸಿದ್ದರು. ಶತಕದ ಅಂಚಿನಲ್ಲಿದ್ದ ಜಡೇಜಾ ಶತಕ ಸಿಡಿಸಲು ಹೋರಾಟ ನಡೆಸುತ್ತಿದ್ದರು. ಈ ವೇಳೆ ಆಂಗ್ಲ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಬೌಲ್ ಮಾಡಿದ ಓವರ್‌ನ ಐದನೇ ಎಸೆತದಲ್ಲಿ, ಜಡೇಜಾ ಮಿಡ್-ಆನ್ ಕಡೆಗೆ ಒಂದು ಶಾಟ್ ಆಡಿದರು, ಅದು ನೇರವಾಗಿ ಫೀಲ್ಡರ್‌ಗೆ ಹೋಯಿತು.

ರನೌಟ್​ಗೆ ಬಲಿಯಾದ ಸರ್ಫರಾಜ್

ಮೊದಲು ಜಡೇಜಾ ಸರ್ಫರಾಜ್ ಅವರನ್ನು ಸಿಂಗಲ್‌ಗಾಗಿ ಕರೆದರು. ಹೀಗಾಗಿ ಸರ್ಫರಾಜ್ ಕೂಡ ಓಡಲು ಆರಂಭಿಸಿದರು. ಆದರೆ ಕೂಡಲೇ ತನ್ನ ನಿರ್ಧಾರ ಬದಲಿಸಿದ ಜಡೇಜಾ ಸಿಂಗಲ್ ನಿರಾಕರಿಸಿದರು. ಈ ವೇಳೆ ಚೆಂಡನ್ನು ಹಿಡಿದ ಮಾರ್ಕ್ ವುಡ್ ನಾನ್-ಸ್ಟ್ರೈಕರ್‌ನ ತುದಿಯ ಸ್ಟಂಪ್‌ಗಳು ಡೈರೆಕ್ಟ್ ಥ್ರೋ ಹೊಡೆದರು. ಹೀಗಾಗಿ ಸರ್ಫರಾಜ್ ಖಾನ್ ತನ್ನದಲ್ಲದ ತಪ್ಪಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಬೇಕಾಯಿತು. ಈ ವೇಳೆ ಡ್ರೆಸ್ಸಿಂಗ್ ರೂಂನಲ್ಲಿದ್ದ ರೋಹಿತ್ ಶರ್ಮಾ, ಜಡೇಜಾ ಮಾಡಿದ ಎಡವಟ್ಟಿಗೆ ಕೋಪಗೊಂಡು ತಾವು ಧರಿಸಿದ್ದ ಕ್ಯಾಪ್ ಬಿಸಾಡಿದರು. ರೋಹಿತ್ ಅವರ ಈ ಅಸಮಾಧಾನದ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಎಲ್ಲೆಡೆ ವೈರಲ್ ಆಗಿದೆ.

ಮೊದಲ ದಿನ ಭಾರತದ ಸ್ಕೋರ್

ಮೊದಲ ದಿನದಾಟದಂತ್ಯಕ್ಕೆ ಭಾರತ ತಂಡ 86 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 326 ರನ್ ಗಳಿಸಿದೆ. ತಂಡದ ಪರ ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್ ಮತ್ತು ರಜತ್ ಪಾಟಿದಾರ್ ಬೇಗನೇ ಔಟಾದರೆ, ರೋಹಿತ್ ಶರ್ಮಾ ತಮ್ಮ ಟೆಸ್ಟ್ ವೃತ್ತಿಜೀವನದ 11ನೇ ಶತಕ ದಾಖಲಿಸಿದರು. ರವೀಂದ್ರ ಜಡೇಜಾ 110 ರನ್ ಗಳಿಸಿ ಅಜೇಯರಾಗಿ ಮರಳಿದರು. ಕುಲ್ದೀಪ್ ಯಾದವ್ ಒಂದು ರನ್ ಗಳಿಸುವ ಮೂಲಕ ಅಜೇರಾಗುಳಿದಿದ್ದಾರೆ. ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಸರ್ಫರಾಜ್ ಖಾನ್ 66 ಎಸೆತಗಳಲ್ಲಿ 62 ರನ್ ಗಳಿಸಿ ರನೌಟ್ ಆದರು. ಒಂದು ಸಮಯದಲ್ಲಿ ಭಾರತ ಕೇವಲ 33 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು, ಇಲ್ಲಿಂದ ರೋಹಿತ್ ಶರ್ಮಾ (131) ಮತ್ತು ರವೀಂದ್ರ ಜಡೇಜಾ ದ್ವಿಶತಕದ ಜೊತೆಯಾಟ ನಡೆಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್ ಮೂರು ಮತ್ತು ಸ್ಪಿನ್ನರ್ ಟಾಮ್ ಹಾರ್ಟ್ಲಿ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:19 pm, Thu, 15 February 24

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ