AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ‘ನಿನಗಿಂತ ಕುಲ್ದೀಪ್ ಬೆಸ್ಟ್’; ರಜತ್ ಪಾಟಿದರ್ ಕಳಪೆ ಆಟಕ್ಕೆ ಬೇಸತ್ತ ಫ್ಯಾನ್ಸ್

IND vs ENG: ಅನುಭವಿಗಳ ಅಲಭ್ಯತೆಯ ಮೇರೆಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ರಜತ್ ಪಾಟಿದಾರ್, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಇದುವರೆಗೆ ಒಂದೇ ಒಂದು ಅದ್ಭುತ ಇನ್ನಿಂಗ್ಸ್ ಆಡಿಲ್ಲ. ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದರಿಂದ ರಜತ್ ಫ್ಲಾಪ್ ಶೋ ಹೆಚ್ಚು ಚರ್ಚೆಗೆ ಬಂದಿರಲಿಲ್ಲ.

IND vs ENG: ‘ನಿನಗಿಂತ ಕುಲ್ದೀಪ್ ಬೆಸ್ಟ್’; ರಜತ್ ಪಾಟಿದರ್ ಕಳಪೆ ಆಟಕ್ಕೆ ಬೇಸತ್ತ ಫ್ಯಾನ್ಸ್
ರಜತ್ ಪಾಟಿದರ್
ಪೃಥ್ವಿಶಂಕರ
|

Updated on: Feb 24, 2024 | 7:54 PM

Share

ರಾಂಚಿಯಲ್ಲಿ ನಡೆಯುತ್ತಿರುವ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ (Team India) ಮಧ್ಯಮ ಕ್ರಮಾಂಕದ ಯುವ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ (Rajat Patidar) ಮತ್ತೊಮ್ಮೆ ವಿಫಲರಾಗಿದ್ದಾರೆ. ಅನುಭವಿಗಳ ಅಲಭ್ಯತೆಯ ಮೇರೆಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ರಜತ್ ಪಾಟಿದಾರ್, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಇದುವರೆಗೆ ಒಂದೇ ಒಂದು ಅದ್ಭುತ ಇನ್ನಿಂಗ್ಸ್ ಆಡಿಲ್ಲ. ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದರಿಂದ ರಜತ್ ಫ್ಲಾಪ್ ಶೋ ಹೆಚ್ಚು ಚರ್ಚೆಗೆ ಬಂದಿರಲಿಲ್ಲ. ಆದರೀಗ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾದ ಇನ್ನಿಂಗ್ಸ್ ಸಂಕಷ್ಟದಲ್ಲಿದ್ದಾಗಲೂ ರಜತ್ ಬಿಗ್ ಇನ್ನಿಂಗ್ಸ್ ಆಡುವ ಯೋಚನೆ ಮಾಡಲಿಲ್ಲ. ಈ ಪಂದ್ಯದಲ್ಲಿ ರಜತ್ ಪಾಟಿದಾರ್ ಬ್ಯಾಟಿಂಗ್ ನೋಡಿದ ಟೀಂ ಇಂಡಿಯಾ ಅಭಿಮಾನಿಗಳು ಇವನಿಗಿಂತ ಕುಲ್ದೀಪ್ ಯಾದವೇ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಾರೆ ಎಂದಿದ್ದಾರೆ.

ಕುಲ್ದೀಪ್ ಪರ ಬ್ಯಾಟ್ ಬೀಸಿದ ಫ್ಯಾನ್ಸ್

ರಾಂಚಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 42 ಎಸೆತಗಳನ್ನು ಎದುರಿಸಿದ ರಜತ್ ಕೇವಲ 17 ರನ್ ಗಳಿಸಿ ಔಟಾದರು. ಇಂಗ್ಲೆಂಡ್ ತಂಡದ ಯುವ ಸ್ಪಿನ್ನರ್ ಶೋಯೆಬ್ ಬಶೀರ್​ಗೆ ಬಲಿಯಾದ ರಜತ್ ಮತ್ತೊಂದು ಕಳಪೆ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರ ನಂತರ ಅಭಿಮಾನಿಗಳು ರಜತ್ ಪಾಟಿದಾರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವು ಅಭಿಮಾನಿಗಳು ರಜತ್ ಪಾಟಿದಾರ್ ಅವರನ್ನು ತಂಡದಿಂದ ಕೈಬಿಡುವಂತೆ ಒತ್ತಾಯಿಸಿದ್ದಾರೆ.

ಅಲ್ಲದೆ ರಜತ್ ಬ್ಯಾಟಿಂಗ್ ಅನ್ನು ಗೇಲಿ ಮಾಡಿರುವ ನೆಟ್ಟಿಗರು ರಜತ್ ಪಾಟಿದಾರ್ ಅವರಿಗಿಂತ ಕುಲ್ದೀಪ್ ಯಾದವ್ ಉತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಎಂದಿದ್ದಾರೆ. ಕುಲ್ದೀಪ್ ಯಾದವ್, ರಜತ್ ಪಾಟಿದಾರ್ ಅವರಿಗಿಂತ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಾರೆ ಎಂದಿದ್ದಾರೆ.

ರಜತ್ ಫ್ಲಾಪ್ ಶೋ

ರಜತ್ ಪಾಟಿದಾರ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಪದಾರ್ಪಣೆ ಮಾಡುವ ಅವಕಾಶ ಪಡೆದರು. ಎರಡನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ರಜತ್ ಅವರ ಬ್ಯಾಟ್ ಕ್ರಮವಾಗಿ 9 ಮತ್ತು 32 ರನ್ ಗಳಿಸಿತು. ಇದಲ್ಲದೇ ಮೂರನೇ ಟೆಸ್ಟ್ ಪಂದ್ಯದಲ್ಲಿ ರಜತ್ ಕ್ರಮವಾಗಿ 0 ಮತ್ತು 5 ರನ್ ಗಳಿಸಿದ್ದರು. ಇದೀಗ ಕೇವಲ 17 ರನ್​ಗಳಿಸಿರುವ ರಜತ್ ಪಾಟಿದಾರ್ ಮೇಲೆ ತಂಡದಿಂದ ಹೊರಗುಳಿಯುವ ಕತ್ತಿ ತೂಗುತ್ತಿದೆ.

219 ರನ್ ಗಳಿಸಿದ ಭಾರತ

ಎರಡನೇ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿದೆ. ತಂಡದ ಪರ ಆರಂಭಿಕ ಯಶಸ್ವಿ ಜೈಸ್ವಾಲ್ ಎರಡನೇ ದಿನದಂದು 73 ರನ್‌ಗಳ ಗರಿಷ್ಠ ಇನ್ನಿಂಗ್ಸ್ ಆಡಿದರೆ, ಇಂಗ್ಲೆಂಡ್ ಪರ ಯುವ ಸ್ಪಿನ್ ಬೌಲರ್ ಶೋಯೆಬ್ ಬಶೀರ್ ಗರಿಷ್ಠ 4 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ