IND vs ENG: ಇಂಗ್ಲೆಂಡ್ ಪ್ಲೇಯಿಂಗ್ 11 ಪ್ರಕಟ: ತಂಡದಲ್ಲಿ 2 ಬದಲಾವಣೆ

| Updated By: ಝಾಹಿರ್ ಯೂಸುಫ್

Updated on: Feb 01, 2024 | 2:17 PM

India vs England 2nd Test: ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಫೆಬ್ರವರಿ 2 ರಿಂದ ಶುರುವಾಗಲಿದೆ. ಆಂಧ್ರ ಪ್ರದೇಶದ ವಿಶಾಖ ಪಟ್ಟಣದಲ್ಲಿರುವ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಕಂಬ್ಯಾಕ್ ಮಾಡುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.

IND vs ENG: ಇಂಗ್ಲೆಂಡ್ ಪ್ಲೇಯಿಂಗ್ 11 ಪ್ರಕಟ: ತಂಡದಲ್ಲಿ 2 ಬದಲಾವಣೆ
England Team
Follow us on

India vs England 2nd Test: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್  ತಂಡ ಪ್ಲೇಯಿಂಗ್ ಇಲೆವೆನ್​ನನ್ನು ಪ್ರಕಟಿಸಿದೆ. ವಿಶಾಖಪಟ್ಟಣಂನಲ್ಲಿ ನಾಳೆಯಿಂದ (ಫೆ.2) ಶುರುವಾಗಲಿರುವ ಈ ಪಂದ್ಯಕ್ಕಾಗಿ ಇಂಗ್ಲೆಂಡ್ 2 ಬದಲಾವಣೆ ಮಾಡಿಕೊಂಡಿದೆ. ಈ ಬದಲಾವಣೆಯಂತೆ ಭಾರತದ ವಿರುದ್ಧದ ಪಂದ್ಯದ ಮೂಲಕ ಯುವ ಸ್ಪಿನ್ನರ್ ಶೊಯೆಬ್ ಬಶೀರ್ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲಿದ್ದಾರೆ.

ಇಂಗ್ಲೆಂಡ್ ತಂಡದ ಅನುಭವಿ ಸ್ಪಿನ್ನರ್ ಜ್ಯಾಕ್ ಲೀಚ್ ಗಾಯಗೊಂಡಿದ್ದು, ಹೀಗಾಗಿ ದ್ವಿತೀಯ ಟೆಸ್ಟ್​ನಲ್ಲಿ ಕಣಕ್ಕಿಳಿಯುತ್ತಿಲ್ಲ. ಲೀಚ್ ಅವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಆಡುವ ಬಳಗದಲ್ಲಿ 20 ವರ್ಷದ ಯುವ ಸ್ಪಿನ್ನರ್ ಶೊಯೆಬ್ ಬಶೀರ್​ಗೆ ಸ್ಥಾನ ನೀಡಲಾಗಿದೆ.

ಹಾಗೆಯೇ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವೇಗಿ ಮಾರ್ಕ್​ ವುಡ್ ಅವರನ್ನು ದ್ವಿತೀಯ ಪಂದ್ಯದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ಅನುಭವಿ ವೇಗಿ ಜೇಮ್ಸ್ ಅ್ಯಂಡರ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್​ಗೆ ಆಯ್ಕೆ ಮಾಡಲಾಗಿದೆ.

ಮತ್ತೆ ಏಕೈಕ ವೇಗಿ:

ಮೊದಲ ಟೆಸ್ಟ್ ಪಂದ್ಯದಲ್ಲಿ ಏಕೈಕ ವೇಗಿಯೊಂದಿಗೆ ಕಣಕ್ಕಿಳಿದಿದ್ದ ಇಂಗ್ಲೆಂಡ್ ಈ ಬಾರಿ ಕೂಡ ಓರ್ವ ವೇಗದ ಬೌಲರ್​ನನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಅದರಂತೆ ವೇಗಿ ಜೇಮ್ಸ್ ಅ್ಯಂಡರ್ಸನ್ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.

ತಂಡದಲ್ಲಿ ನಾಲ್ವರು ಸ್ಪಿನ್ನರ್:

ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಇಂಗ್ಲೆಂಡ್ ನಾಲ್ವರು ಸ್ಪಿನ್ನರ್​ಗಳನ್ನು ಪ್ರಯೋಗಿಸಲಿದೆ. ಇಲ್ಲಿ ಸ್ಪಿನ್ನರ್​ಗಳಾಗಿ ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ ಹಾಗೂ ಶೊಯೆಬ್ ಬಶೀರ್ ಸ್ಥಾನ ಪಡೆದಿದ್ದಾರೆ. ಹಾಗೆಯೇ ನಾಲ್ಕನೇ ಸ್ಪಿನ್ನರ್ ಆಗಿ ಜೋ ರೂಟ್ ಬೌಲಿಂಗ್ ಮಾಡಲಿದ್ದಾರೆ.

6ನೇ ಬೌಲರ್​ ಆಗಿ ಬೆನ್ ಸ್ಟೋಕ್ಸ್​?

ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕೂಡ ಬೌಲಿಂಗ್ ಮಾಡುವ ಸಾಧ್ಯತೆಯಿದೆ. ಫಿಟ್​ನೆಸ್ ಸಮಸ್ಯೆಯ ಕಾರಣ ಸ್ಟೋಕ್ಸ್ ಬೌಲಿಂಗ್ ನಿಲ್ಲಿಸಿದ್ದರು. ಆದರೆ ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ತಂಡ ಅಭ್ಯಾಸ ಮಾಡುತ್ತಿದ್ದ ವೇಳೆ ಸ್ಟೋಕ್ಸ್ ಬೌಲಿಂಗ್ ಪ್ರಾಕ್ಟೀಸ್ ನಡೆಸಿದ್ದರು. ಹೀಗಾಗಿ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಸ್ಟೋಕ್ಸ್ 6ನೇ ಬೌಲರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ದ್ವಿತೀಯ ಟೆಸ್ಟ್​ಗೆ ಇಂಗ್ಲೆಂಡ್ ಪ್ಲೇಯಿಂಗ್ 11:

  • ಝಾಕ್ ಕ್ರಾಲಿ
  • ಬೆನ್ ಡಕೆಟ್
  • ಒಲ್ಲಿ ಪೋಪ್
  •  ಜೋ ರೂಟ್
  • ಜಾನಿ ಬೈರ್‌ಸ್ಟೋವ್
  • ಬೆನ್ ಸ್ಟೋಕ್ಸ್ (ನಾಯಕ)
  • ಬೆನ್ ಫೋಕ್ಸ್ (ವಿಕೆಟ್ ಕೀಪರ್)
  • ರೆಹಾನ್ ಅಹ್ಮದ್
  •  ಟಾಮ್ ಹಾರ್ಟ್ಲಿ
  • ಶೊಯೆಬ್ ಬಶೀರ್
  •  ಜೇಮ್ಸ್ ಅ್ಯಂಡರ್ಸನ್.

ಇದನ್ನೂ ಓದಿ: Jay Shah: ಬಿಸಿಸಿಐನಿಂದ ಜಯ್ ಶಾ ಪಡೆಯುವ ವೇತನ ಎಷ್ಟು?

ಇಂಗ್ಲೆಂಡ್ ಟೆಸ್ಟ್​ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಅ್ಯಂಡರ್ಸನ್, ಗಸ್ ಅಟ್ಕಿನ್ಸನ್ , ಜಾನಿ ಬೈರ್‌ಸ್ಟೋವ್, ಶೋಯೆಬ್ ಬಶೀರ್, ಡ್ಯಾನ್ ಲಾರೆನ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲಿ ರಾಬಿನ್ಸನ್ , ಜೋ ರೂಟ್ , ಮಾರ್ಕ್ ವುಡ್.