ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 246 ರನ್ ಬಾರಿಸಿದರೆ, ಭಾರತ ತಂಡ 436 ರನ್ ಕಲೆಹಾಕಿತು. ಹಾಗೆಯೇ ದ್ವಿತೀಯ ಇನಿಂಗ್ಸ್ನಲ್ಲಿ 420 ರನ್ ಬಾರಿಸಿದ ಇಂಗ್ಲೆಂಡ್ ಟೀಮ್ ಇಂಡಿಯಾಗೆ 231 ರನ್ಗಳ ಗುರಿ ನೀಡಿತು. ಆದರೆ ಈ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 202 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಇಂಗ್ಲೆಂಡ್ ತಂಡವು 28 ರನ್ಗಳ ಜಯ ಸಾಧಿಸಿತು.