IND vs ENG: ಕೊನೆಗೂ ಟೀಂ ಇಂಡಿಯಾದಲ್ಲಿ ಸ್ಥಾನ; ಮೈದಾನದಲ್ಲೇ ಕಣ್ಣೀರಿಟ್ಟ ಸರ್ಫರಾಜ್ ಹೆತ್ತವರು! ವಿಡಿಯೋ

IND vs ENG: ಹಲವು ವರ್ಷಗಳ ಸತತ ಪ್ರಯತ್ನಗಳ ನಂತರ ಟೀಂ ಇಂಡಿಯಾ ಸೇರಿಕೊಂಡಿರುವ ಸರ್ಫರಾಜ್​ ಖಾನ್​ಗೆ ಭಾರತದ ಮಾಜಿ ಶ್ರೇಷ್ಠ ನಾಯಕ ಅನಿಲ್ ಕುಂಬ್ಳೆ ಚೊಚ್ಚಲ ಟೆಸ್ಟ್ ಕ್ಯಾಪ್ ನೀಡಿದರು. ಇದೇ ವೇಳೆ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಸರ್ಫರಾಜ್​ಗೆ ಅಭಿನಂದನೆ ಸಲ್ಲಿಸಿದರೆ, ಮತ್ತೊಂದೆಡೆ, ಬೌಂಡರಿ ಹೊರಗೆ ನಿಂತಿದ್ದ ಸರ್ಫರಾಜ್ ಹೆತ್ತವರ ಕಣ್ಣಲ್ಲಿ ಆನಂದ ಭಾಷ್ಪವೇ ಹರಿಯಿತು.

IND vs ENG: ಕೊನೆಗೂ ಟೀಂ ಇಂಡಿಯಾದಲ್ಲಿ ಸ್ಥಾನ; ಮೈದಾನದಲ್ಲೇ ಕಣ್ಣೀರಿಟ್ಟ ಸರ್ಫರಾಜ್ ಹೆತ್ತವರು! ವಿಡಿಯೋ
ಸರ್ಫರಾಜ್ ಖಾನ್ ಹಾಗೂ ಪೋಷಕರು
Follow us
ಪೃಥ್ವಿಶಂಕರ
|

Updated on:Feb 15, 2024 | 9:14 PM

ಹಲವು ವರ್ಷಗಳ ಸತತ ಪ್ರಯತ್ನಗಳ ನಂತರ ಭಾರತದ ಪ್ರತಿಭಾವಂತ ಕ್ರಿಕೆಟಿಗನಿಗೆ ಟೀಂ ಇಂಡಿಯಾದ (Team India) ಕದ ತೆರೆದಿದೆ. ರಾಜ್‌ಕೋಟ್‌ (Rajkot) ಟೆಸ್ಟ್​ಗೆ ಟೀಂ ಇಂಡಿಯಾ ಇಬ್ಬರು ಯುವ ಆಟಗಾರರಿಗೆ ಮೊದಲ ಪಂದ್ಯವನ್ನಾಡುವ ಅವಕಾಶ ನೀಡಿದೆ. ಅವರಲ್ಲಿ ಒಬ್ಬರು ಯುವ ವಿಕೆಟ್‌ಕೀಪರ್ ಬ್ಯಾಟರ್ ಧೃವ್ ಜುರೇಲ್ ಆದರೆ ಇನ್ನೊಬ್ಬರು ಇಡೀ ಟೀಂ ಇಂಡಿಯಾ ಅಭಿಮಾನಿಗಳೇ ಈತನಿಗೆ ತಂಡದಲ್ಲಿ ಸ್ಥಾನ ಸಿಗುವುದು ಯಾವಾಗ ಎಂದು ಕಾಯುತ್ತಿದ್ದ ಸರ್ಫರಾಜ್ ಖಾನ್ (Sarfaraz Khan). ತನ್ನ ಪ್ರತಿಭೆಯ ಮೂಲಕವೇ ಟೀಂ ಇಂಡಿಯಾ ಸೇರಿಕೊಂಡಿರುವ ಸರ್ಫರಾಜ್​ ಖಾನ್​ಗೆ ಭಾರತದ ಮಾಜಿ ಶ್ರೇಷ್ಠ ನಾಯಕ ಅನಿಲ್ ಕುಂಬ್ಳೆ ಚೊಚ್ಚಲ ಟೆಸ್ಟ್ ಕ್ಯಾಪ್ ನೀಡಿದರು. ಇದೇ ವೇಳೆ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಸರ್ಫರಾಜ್​ಗೆ ಅಭಿನಂಧನೆ ಸಲ್ಲಿಸಿದರೆ, ಮತ್ತೊಂದೆಡೆ, ಬೌಂಡರಿ ಹೊರಗೆ ನಿಂತಿದ್ದ ಸರ್ಫರಾಜ್ ಹೆತ್ತವರ ಕಣ್ಣಲ್ಲಿ ಆನಂದ ಭಾಷ್ಪವೇ ಹರಿಯಿತು.

ಕಣ್ಣೀರಿಟ್ಟ ಸರ್ಫರಾಜ್ ಹೆತ್ತವರು

ಕುಂಬ್ಳೆ ಅವರಿಂದ ಟೆಸ್ಟ್ ಕ್ಯಾಪ್ ಪಡೆದ ಕೂಡಲೇ ಸರ್ಫರಾಜ್ ತನ್ನ ಹೆತ್ತವರ ಬಳಿಗೆ ಓಡಿದರು. ಬೌಂಡರಿಯಿಂದ ಹೊರಗೆ ನಿಂತಿದ್ದ ಸರ್ಫರಾಜ್ ತಂದೆ ನೌಶಾದ್ ಖಾನ್ ಹಾಗೂ ಅವರ ತಾಯಿ ಮಗನ ಟೆಸ್ಟ್ ಪದಾರ್ಪಣೆಯನ್ನು ಕಂಡು ಕಣ್ಣೀರಿಡ ತೊಡಗಿದರು. ಹೆತ್ತವರ ಬಳಿ ಓಡಿದ ಸರ್ಫರಾಜ್, ಮೊದಲು ತಂದೆಯನ್ನು ತಬ್ಬಿಕೊಂಡರು. ಈ ವೇಳೆ ನೌಶಾದ್ ಖಾನ್ ಕೂಡ ಮಗನ ಕೆನ್ನೆಗೆ ಮುತ್ತಿಟ್ಟರು. ಆ ಬಳಿಕ ಟೆಸ್ಟ್​ ಕ್ಯಾಪ್​ ಮೇಲಿದ್ದ ಬಿಸಿಸಿಐ ಲೋಗೋಗೂ ಮುತ್ತಿಟ್ಟರು. ನಂತರ ತಾಯಿ ಬಳಿ ಹೋದ ಸರ್ಫರಾಜ್​ಗೆ ಸಿಕ್ಕಿದ್ದು, ತಾಯಿಯ ಅಕ್ಕರೆಯ ಅಪ್ಪಿಗೆ. ನಂತರ ಒಂದು ಪ್ರೀತಿ ತುಂಬಿದ ಮುತ್ತು. ಇದೀಗ ಮಗನ ಕನಸು ನನಸಾದ ಕ್ಷಣವನ್ನು ಹೆತ್ತವರು ಕಣ್ಣೀರಿಟ್ಟು ಆನಂದಿಸಿದ ಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಸಾಕಷ್ಟು ಪ್ರಯತ್ನಗಳ ನಂತರ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದಿದ್ದ ಸರ್ಫರಾಜ್​ಗೆ ಒತ್ತಡದ ಸನ್ನಿವೇಶದಲ್ಲಿ ಬ್ಯಾಟಿಂಗ್ ಮಾಡುವ ಸಂದರ್ಭ ಎದುರಾಯಿತು. ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಕೇವಲ 33 ರನ್‌ಗಳಿಗೆ ಮೂರು ದೊಡ್ಡ ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಜೊತೆಯಾದ ನಾಯಕ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇಬ್ಬರ ನಡುವೆ ದ್ವಿಶತಕದ ಜೊತೆಯಾಟವಿತ್ತು. 131 ರನ್ ಗಳಿಸಿ ರೋಹಿತ್ ಔಟಾದ ಬಳಿಕ ಸರ್ಫರಾಜ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದರು.

IND vs ENG: ರಾಜ್‌ಕೋಟ್​ನಲ್ಲಿ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಜಡೇಜಾ..!

ಎಂಟನೇ ಎಸೆತದಲ್ಲಿ ಖಾತೆ ತೆರೆದ ಸರ್ಫರಾಜ್

ಈ ವೇಳೆ ಪ್ರತಿ ಚೆಂಡಿನ ನಂತರ, ಕ್ಯಾಮರಾ ಕ್ರೀಡಾಂಗಣದಲ್ಲಿ ಇರುವ ಸರ್ಫರಾಜ್ ಕುಟುಂಬದ ಮೇಲೆ ಕೇಂದ್ರೀಕರಿಸುತ್ತಿತ್ತು. ಸರ್ಫರಾಜ್ ತನ್ನ ಖಾತೆಯನ್ನು ತೆರೆಯುವವರೆಗೂ ಹೆತ್ತವರು ಉಸಿರನ್ನು ಬಿಗಿ ಹಿಡದು ಕುಳಿತಿದ್ದರು. ಎಂಟನೇ ಎಸೆತದಲ್ಲಿ ಮೊದಲ ರನ್ ಗಳಿಸಿದ ಸರ್ಫರಾಜ್ ಮೊದಲ ಬೌಂಡರಿಗಾಗಿ 14 ಎಸೆತಗಳನ್ನು ಕಾಯಬೇಕಾಯಿತು. ಆದರೆ ಒಮ್ಮೆ ಫಾರ್ಮ್‌ಗೆ ಬಂದ ಅವರು ಬಿರುಸಿನ ಅರ್ಧಶತಕ ಬಾರಿಸಿದರು. ಇದೀಗ ಸರ್ಫರಾಜ್ ತಮ್ಮ ಚೊಚ್ಚಲ ಟೆಸ್ಟ್‌ನಲ್ಲೇ ಅತಿವೇಗದ ಅರ್ಧಶತಕ ಸಿಡಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ರನೌಟ್​ಗೆ ಬಲಿಯಾದ ಸರ್ಫರಾಜ್

ಸರ್ಫರಾಜ್ ಬ್ಯಾಟಿಂಗ್ ಮಾಡುತ್ತಿದ್ದ ರೀತಿ, ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ನೆನಪಿಸುವಂತಿತ್ತು. ಆಕ್ರಮಣಕಾರಿ ಬ್ಯಾಟ್ಸ್‌ಮನ್ ಸರ್ಫರಾಜ್ ಕೆಟ್ಟ ಎಸೆತಗಳನ್ನು ಶಿಕ್ಷಿಸುತ್ತಿದ್ದರು ಮತ್ತು ಉತ್ತಮ ಎಸೆತಗಳನ್ನು ಗೌರವಿಸುತ್ತಿದ್ದರು. ಹೀಗಾಗಿ ಎದುರಾಳಿ ನಾಯಕ ಬೆನ್ ಸ್ಟೋಕ್ಸ್‌ಗೆ ಸರ್ಫರಾಜ್‌ರನ್ನು ಹೇಗೆ ಔಟ್ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಸರ್ಫರಾಜ್ ವೇಗವಾಗಿ ರನ್ ಗಳಿಸಲು ಪ್ರಾರಂಭಿಸಿದರು. ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸಲಾರಂಭಿಸಿದರು. ಹೀಗಾಗಿ ಚೊಚ್ಚಲ ಟೆಸ್ಟ್‌ನಲ್ಲಿ ಸರ್ಫರಾಜ್ ಸುಲಭವಾಗಿ ಶತಕ ಬಾರಿಸುತ್ತಾರೆ ಎಂದು ತೋರುತ್ತಿದ್ದರೂ ರವೀಂದ್ರ ಜಡೇಜಾ ಮಾಡಿದ ತಪ್ಪಿನಿಂದಾಗಿ ರನ್ ಔಟ್ ಆದರು. ಅಂತಿಮವಾಗಿ ಸರ್ಫರಾಜ್ 66 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 62 ರನ್ ಗಳಿಸಿ ಪೆವಿಲಿಯನ್​ಗೆ ಮರಳುತ್ತಿದ್ದಾಗ ಅವರ ಕುಟುಂಬ ಹಾಗೂ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂ ಮಾತ್ರವಲ್ಲ ಇಡೀ ಭಾರತವೇ ದುಃಖಿತವಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:12 pm, Thu, 15 February 24

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ