Sarfaraz Khan: ಚೊಚ್ಚಲ ಟೆಸ್ಟ್​ನಲ್ಲಿಯೇ ಅನುಭವಿ ರೀತಿ ಸರ್ಫರಾಜ್ ಖಾನ್ ಬ್ಯಾಟಿಂಗ್ ಮಾಡಿದ್ದು ಹೇಗೆ?

India vs England Test, Sarfaraz Khan: ಸರ್ಫರಾಜ್ ಖಾನ್ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲೇ ದಿಟ್ಟ ಪ್ರದರ್ಶನ ತೋರಿದರು. ಮೂರನೇ ಟೆಸ್ಟ್​ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಅದ್ಭುತ ಅರ್ಧಶತಕಗಳನ್ನು ಗಳಿಸಿದರು. ಈ ಪಂದ್ಯದ ನಂತರ, ಸರ್ಫರಾಜ್ ಬಗ್ಗೆ ಕೆಲ ವಿಚಾರಗಳು ಬಹಿರಂಗ ಆಗುತ್ತಿವೆ. ಟೀಮ್ ಇಂಡಿಯಾ ಪ್ರವೇಶಕ್ಕೆ ಸರ್ಫರಾಜ್ ಖಾನ್ ಮಾಡಿದ ಕಸರತ್ತು ಏನೆಲ್ಲ ನೋಡಿ.

Sarfaraz Khan: ಚೊಚ್ಚಲ ಟೆಸ್ಟ್​ನಲ್ಲಿಯೇ ಅನುಭವಿ ರೀತಿ ಸರ್ಫರಾಜ್ ಖಾನ್ ಬ್ಯಾಟಿಂಗ್ ಮಾಡಿದ್ದು ಹೇಗೆ?
sarfaraz khan
Follow us
Vinay Bhat
|

Updated on: Feb 20, 2024 | 10:00 AM

ಸರ್ಫರಾಜ್ ಖಾನ್ (Sarfaraz Khan) ಹೆಸರು ಇಂದು ಕ್ರೀಡಾ ಲೋಕದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಟೀಮ್ ಇಂಡಿಯಾದ ಈ ಬಲಗೈ ಬ್ಯಾಟ್ಸ್‌ಮನ್‌ಗೆ ರಾಜ್‌ಕೋಟ್ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡುವ ಅವಕಾಶವನ್ನು ದಕ್ಕಿತು. ಮೊದಲ ಪಂದ್ಯದಲ್ಲಿ ಸರ್ಫರಾಜ್ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿ ಬಿಟ್ಟರು. ಮೊದಲ ಇನ್ನಿಂಗ್ಸ್‌ನಲ್ಲಿ 62 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 67 ರನ್ ಗಳಿಸಿದರು. ಎರಡೂ ಇನ್ನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ ಅದ್ಭುತ ಅರ್ಧಶತಕಗಳು ಬಂದವು. ಇವರು ಇಂಗ್ಲೆಂಡ್‌ನ ಸ್ಪಿನ್ನರ್‌ಗಳನ್ನು ಎದುರಿಸಿದ ರೀತಿ ನಿಜಕ್ಕೂ ಶ್ಲಾಘನೀಯ. ಆದರೆ, ತನ್ನ ಚೊಚ್ಚಲ ಟೆಸ್ಟ್‌ನಲ್ಲಿಯೇ ಸರ್ಫರಾಜ್ ಈರೀತಿ ಹೇಗೆ ಅದ್ಭುತ ಮತ್ತು ಆತ್ಮವಿಶ್ವಾಸದಿಂದ ಪ್ರದರ್ಶನ ತೋರಿದರು?.

ಸರ್ಫರಾಜ್ ಖಾನ್ ದೇಶೀಯ ಕ್ರಿಕೆಟ್‌ನಲ್ಲಿ ಸಾವಿರಾರು ರನ್ ಗಳಿಸಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರು. ಅವರ ಬ್ಯಾಟ್‌ನಿಂದ ಹಲವು ಶತಕಗಳು ಬಂದಿವೆ. ಆದರೆ ಈ ರೀತಿ ಬ್ಯಾಟಿಂಗ್ ಮಾಡಲು ಅವರು ಪಟ್ಟ ಶ್ರಮ ನಿಜಕ್ಕೂ ಶ್ಲಾಘನೀಯ. ಪಿಟಿಐ ವರದಿಯ ಪ್ರಕಾರ, ಸರ್ಫರಾಜ್ ಕಳೆದ 15 ವರ್ಷಗಳಿಂದ ಪ್ರತಿದಿನ 500 ಎಸೆತಗಳನ್ನು ಆಡುತ್ತಿದ್ದಾರೆ. ಸ್ಪಿನ್ನರ್‌ಗಳ ವಿರುದ್ಧ ಅವರು ಉತ್ತಮವಾಗಿ ಬ್ಯಾಟ್ ಮಾಡಲು ಇದೇ ಕಾರಣ.

ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ: ಪಂದ್ಯ ಎಷ್ಟು ಗಂಟೆಗೆ?, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಸರ್ಫರಾಜ್ ಅವರ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಮುಂಬೈ ಕೋಚ್, ”ಮುಂಬೈನ ಓವಲ್, ಕ್ರಾಸ್ ಮತ್ತು ಆಜಾದ್ ಮೈದಾನಗಳಲ್ಲಿ ಪ್ರತಿನಿತ್ಯ 500 ಎಸೆತಗಳನ್ನು ಆಫ್, ಲೆಗ್ ಮತ್ತು ಎಡಗೈ ಸ್ಪಿನ್ನರ್‌ಗಳನ್ನು ಆಡುವ ಮೂಲಕ ಅವರು ಸ್ಪಿನ್ನರ್‌ಗಳ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು,” ಎಂದು ಹೇಳಿದರು.

ಐವರು ತರಬೇತುದಾರರು

ಸರ್ಫರಾಜ್ ಖಾನ್ ಯಶಸ್ಸಿನ ಹಿಂದೆ ಒಬ್ಬರಲ್ಲ ಇಬ್ಬರಲ್ಲ ಐವರು ಕೋಚ್ ಗಳಿದ್ದಾರೆ. ಸರ್ಫರಾಜ್ ಅವರನ್ನು ತಯಾರು ಮಾಡಿದ ಕೀರ್ತಿ ಅವರ ತಂದೆ ನೌಶಾದ್‌ಗೆ ಮಾತ್ರ ಸಲ್ಲುವುದಿಲ್ಲ. ವರದಿಗಳ ಪ್ರಕಾರ, ಭುವನೇಶ್ವರ್ ಕುಮಾರ್ ಕೋಚ್ ಸಂಜಯ್ ರಸ್ತೋಗಿ, ಮೊಹಮ್ಮದ್ ಶಮಿ ಕೋಚ್ ಬದ್ರುದ್ದೀನ್ ಶೇಖ್, ಕುಲ್ದೀಪ್ ಯಾದವ್ ಕೋಚ್ ಕಪಿಲ್ ದೇವ್ ಪಾಂಡೆ, ಗೌತಮ್ ಗಂಭೀರ್ ಅವರ ಕೋಚ್ ಸಂಜಯ್ ಭಾರದ್ವಾಜ್ ಮತ್ತು ಭಾರತ ಎ ತಂಡದ ನಾಯಕ ಅಭಿಮನ್ಯು ಈಶ್ವರನ್ ಅವರ ತಂದೆ ಆರ್‌ಪಿ ಈಶ್ವರನ್ ಅವರು ಉತ್ತಮ ಕೊಡುಗೆ ನೀಡಿದ್ದಾರೆ.

ಈವರೆಗೆ ಟಿ20ಐ ಕ್ರಿಕೆಟ್ ಆಡದ 3 ಭಾರತೀಯ ದಂತಕಥೆಗಳು ಯಾರು ಗೊತ್ತೇ?

ಸರ್ಫರಾಜ್ ಖಾನ್ ಅವರು ಕೋವಿಡ್ ಲಾಕ್‌ಡೌನ್ ಸಮಯದಲ್ಲಿಯೂ ಬ್ಯಾಟಿಂಗ್ ಅಭ್ಯಾಸವನ್ನು ಬಿಟ್ಟಿರಲಿಲ್ಲವಂತೆ. ಮುಂಬೈನಿಂದ 1600 ಕಿ.ಮೀ. ಪ್ರಯಾಣಿಸಿ ತರಬೇತಿ ಪಡೆಯುತ್ತಿದ್ದರಂತೆ. ಸದ್ಯ ಸರ್ಫರಾಜ್ ವರ್ಷಗಟ್ಟಲೆ ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ, ಫಲ ಸಿಗುತ್ತಿದೆ. ಮೊದಲ ಟೆಸ್ಟ್​ನಲ್ಲಿಯೇ ಭರವಸೆ ಮೂಡಿಸಿ ತನ್ನ ಎರಡನೇ ಟೆಸ್ಟ್​ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್‌ನಲ್ಲಿ ಸರ್ಫರಾಜ್ ಹೇಗೆ ಆಟವಾಡುತ್ತಾರೆ ನೋಡಬೇಕು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
ಅಪ್ಪಾಜಿ ಕಿಡ್ನಾಪ್ ಆಗಿ ವಾಪಸ್ ಬಂದಾಗ ಆದಷ್ಟು ಸಂತೋಷ ಈಗ ಆಗಿದೆ: ರಾಘಣ್ಣ
ಅಪ್ಪಾಜಿ ಕಿಡ್ನಾಪ್ ಆಗಿ ವಾಪಸ್ ಬಂದಾಗ ಆದಷ್ಟು ಸಂತೋಷ ಈಗ ಆಗಿದೆ: ರಾಘಣ್ಣ
ಪತ್ನಿ ಗೀತಾ ನೀಡಿದ ಬೆಂಬಲದ ಬಗ್ಗೆ ಶಿವಣ್ಣ ಭಾವುಕ ಮಾತು
ಪತ್ನಿ ಗೀತಾ ನೀಡಿದ ಬೆಂಬಲದ ಬಗ್ಗೆ ಶಿವಣ್ಣ ಭಾವುಕ ಮಾತು
ಶಿವಣ್ಣನಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
ಶಿವಣ್ಣನಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
ಗಣರಾಜ್ಯೋತ್ಸವ: ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ
ಗಣರಾಜ್ಯೋತ್ಸವ: ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ
ಸೇಬಿನ ಹಾರ ಹಾಕಿ ಶಿವಣ್ಣನನ್ನು ಅದ್ಧೂರಿ ಸ್ವಾಗತಿಸಿದ ಅಭಿಮಾನಿಗಳು
ಸೇಬಿನ ಹಾರ ಹಾಕಿ ಶಿವಣ್ಣನನ್ನು ಅದ್ಧೂರಿ ಸ್ವಾಗತಿಸಿದ ಅಭಿಮಾನಿಗಳು