IND vs IRE: ರುತುರಾಜ್ ಬದಲು ಹೂಡಾ ಓಪನಿಂಗ್ ಬಂದಿದ್ಯಾಕೆ? ಹಾರ್ದಿಕ್ ನೀಡಿದ ಕಾರಣವೇನು ಗೊತ್ತಾ?

| Updated By: ಪೃಥ್ವಿಶಂಕರ

Updated on: Jun 27, 2022 | 4:42 PM

IND vs IRE: ಮೊದಲ ಟಿ20 ಪಂದ್ಯದಲ್ಲಿ, ರುತುರಾಜ್ ಗಾಯಕ್ವಾಡ್ ಬದಲಿಗೆ ದೀಪಕ್ ಹೂಡಾ ಓಪನಿಂಗ್​ ಬಂದು 47 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿ ತಂಡವನ್ನು ಗೆಲ್ಲಿಸಿದರು.

IND vs IRE: ರುತುರಾಜ್ ಬದಲು ಹೂಡಾ ಓಪನಿಂಗ್ ಬಂದಿದ್ಯಾಕೆ? ಹಾರ್ದಿಕ್ ನೀಡಿದ ಕಾರಣವೇನು ಗೊತ್ತಾ?
ರುತುರಾಜ್
Follow us on

ಐರ್ಲೆಂಡ್ ಪ್ರವಾಸವನ್ನು ಭಾರತ ಪ್ರಬಲ ಗೆಲುವಿನೊಂದಿಗೆ ಆರಂಭಿಸಿದೆ. ಭಾನುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (Team India) 7 ವಿಕೆಟ್‌ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆದರೆ, ಈ ಪಂದ್ಯದಲ್ಲಿ ಟೀಂ ಇಂಡಿಯಾದ ಯಂಗ್ ಓಪನರ್ ರುತುರಾಜ್ ಗಾಯಕ್ವಾಡ್ (Rituraj Gaikwad) ಬ್ಯಾಟಿಂಗ್​ಗೆ ಬರದೇ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇದೀಗ ಇದಕ್ಕೆ ಕಾರಣ ಕೂಡ ಬಯಲಿಗೆ ಬಂದಿದ್ದು, ಸ್ವತಃ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರೇ ಇದಕ್ಕೆ ಕಾರಣ ತಿಳಿಸಿದ್ದಾರೆ. ಟೀಮ್ ಇಂಡಿಯಾದ ಸುಲಭ ವಿಜಯದ ನಂತರ ಮಾತನಾಡಿದ ಹಾರ್ದಿಕ್, ಪಂದ್ಯದ ಮಧ್ಯದಲ್ಲಿ ರುತುರಾಜ್​ ಕಾಲಿಗೆ ಗಾಯವಾಗಿತ್ತು, ಇದರಿಂದಾಗಿ ಅವರು ಓಪನಿಂಗ್ ಬ್ಯಾಟಿಂಗ್‌ಗೆ ಬರಲಿಲ್ಲ ಎಂದು ಹೇಳಿದರು.

12-12 ಓವರ್​ಗಳ ಪಂದ್ಯ

ಜೂನ್ 26 ರ ಭಾನುವಾರದಂದು ಡಬ್ಲಿನ್‌ನಲ್ಲಿ ನಡೆದ ಮೊದಲ T20 ಪಂದ್ಯದಲ್ಲಿ, ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಿ ಐರ್ಲೆಂಡ್ ತಂಡವನ್ನು 108 ರನ್‌ಗಳಿಗೆ ಸೀಮಿತಗೊಳಿಸಿತು. 12-12 ಓವರುಗಳ ಈ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಆರಂಭಿಸಿದಾಗ ಇಶಾನ್ ಕಿಶನ್ ಜೊತೆ ಓಪನಿಂಗ್​ಗೆ ಬಂದಿದ್ದ ದೀಪಕ್ ಹೂಡಾ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದರು. ರುತುರಾಜ್ ಗಾಯಕ್ವಾಡ್ ಅವರನ್ನು ಓಪನಿಂಗ್‌ಗೆ ಏಕೆ ಕಣಕ್ಕಿಳಿಸಲಿಲ್ಲ ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದರು. ಹೀಗಾಗಿ ಪಂದ್ಯದ ನಂತರ, ಈ ಪ್ರಶ್ನೆಗೆ ಹಾರ್ದಿಕೆ ಉತ್ತರ ನೀಡಿದ್ದಾರೆ.

ಇದನ್ನೂ ಓದಿ
Virat Kohli: ಸಹ ಆಟಗಾರನನ್ನು ನಿಂಧಿಸಿದ ಭಾರತದ ಅಭಿಮಾನಿಗಳ ಬೆವರಿಳಿಸಿದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ
ENG vs IND: ಮಂಡಳಿಯ ಸಲಹೆ ತಿರಸ್ಕರಿಸಿದ ರೋಹಿತ್ ಶರ್ಮಾ ಮೇಲೆ ಕೆಂಡಕಾರಿದ ಬಿಸಿಸಿಐ..!
IRE vs IND: ಪವರ್‌ಪ್ಲೇಯಲ್ಲಿ ಪವರ್​ಫುಲ್ ಬೌಲಿಂಗ್; ಟಿ20 ಕ್ರಿಕೆಟ್​ನಲ್ಲಿ ಭುವಿ ಈಗ ನಂ.1 ಬೌಲರ್..!

ಇದನ್ನೂ ಓದಿ: IRE vs IND: ಪವರ್‌ಪ್ಲೇಯಲ್ಲಿ ಪವರ್​ಫುಲ್ ಬೌಲಿಂಗ್; ಟಿ20 ಕ್ರಿಕೆಟ್​ನಲ್ಲಿ ಭುವಿ ಈಗ ನಂ.1 ಬೌಲರ್..!

ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ, ಗೆಲುವಿನ ನಂತರ ಇದನ್ನು ಸ್ಪಷ್ಟಪಡಿಸಿದ್ದು, ರುತುರಾಜ್ ಅವರಿಗೆ ಸಣ್ಣ ಗಾಯವಾಗಿದೆ. ಹಾಗಾಗಿ ಅವರು ಓಪನಿಂಗ್​ ಬ್ಯಾಟಿಂಗ್​ಗೆ ಬರಲಿಲ್ಲ. ಅಲ್ಲದೆ ಅವರ ಫಿಟ್ನೆಸ್ ಬಗ್ಗೆ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ನಾವು ಬಯಸುವುದಿಲ್ಲ ಎಂದು ಹೇಳಿದರು. ಕೇವಲ ಒಂದು ಸಣ್ಣ ಬದಲಾವಣೆಯನ್ನು ಮಾಡಲಾಗಿದೆ. ಅಲ್ಲದೆ ಹೂಡಾ 2ನೇ ಕ್ರಮಾಂಕದ ಬದಲು ಓಪನರ್ ಆಗಿ ಕಣಕ್ಕಿಳಿದಿದ್ದಾರೆ ಅಷ್ಟೆ ಎಂದು ಎಂದು ಹಾರ್ದಿಕ್ ಹೇಳಿದರು.

ಪಾಂಡ್ಯ ದಾಖಲೆ

ಪಾಂಡ್ಯ ಎರಡನೇ ಓವರ್ ಬೌಲಿಂಗ್ ಮಾಡಿ ಪೌಲ್ ಸ್ಟಿರ್ಲಿಂಗ್ ವಿಕೆಟ್ ಕಿತ್ತರು. ಈ ಮೂಲಕ ವಿಶೇಷ ದಾಖಲೆ ಮಾಡಿದ್ದಾರೆ. ಟಿ20 ಕ್ರಿಕೆಟ್​​ನಲ್ಲಿ ಭಾರತ ಪರ ನಾಯಕರಾದ 9 ಆಟಗಾರರ ಪೈಕಿ ವಿಕೆಟ್ ಪಡೆದುಕೊಂಡ ಮೊದಲ ನಾಯಕ ಹಾರ್ದಿಕ್ ಪಾಂಡ್ಯ ಎನಿಸಿಕೊಂಡರು. ಈ ಹಿಂದೆ ವಿರೇಂದ್ರ ಸೆಹ್ವಾಗ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ರಿಷಭ್ ಪಂತ್ ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಆದರೆ, ಇವರು ಯಾರೂ ನಾಯಕನಾಗಿ ವಿಕೆಟ್ ಪಡೆದುಕೊಂಡಿರಲಿಲ್ಲ. ಇದೀಗ ಹಾರ್ದಿಕ್ ಭಾರತ ಪರ ಯಾರೂ ಮಾಡಿರದ ಸಾಧನೆ ಮಾಡಿದ್ದಾರೆ.