ಭಾರತ- ಐರ್ಲೆಂಡ್ ಟಿ20 ಸರಣಿ; ತಂಡಗಳು, ವೇಳಾಪಟ್ಟಿ, ಸಮಯ, ಲೈವ್ ಸ್ಟ್ರೀಮಿಂಗ್ ಪೂರ್ಣ ವಿವರ ಇಲ್ಲಿದೆ

|

Updated on: Aug 17, 2023 | 8:55 AM

India vs Ireland T20 series: ವೆಸ್ಟ್ ಇಂಡೀಸ್ ಪ್ರವಾಸದ ನಂತರ ಇದೀಗ ಟೀಂ ಇಂಡಿಯಾ,  ಐರ್ಲೆಂಡ್ ಪ್ರವಾಸ ಮಾಡಿದೆ. ಈ ಪ್ರವಾಸದಲ್ಲಿ ಭಾರತ ತಂಡವು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ. ತಂಡದ ಕಮಾಂಡ್ ಜಸ್ಪ್ರೀತ್ ಬುಮ್ರಾ ಕೈಯಲ್ಲಿದ್ದು, ಬಹಳ ದಿನಗಳ ನಂತರ ಫಿಟ್ ಆಗಿರುವ ಬುಮ್ರಾ ತಂಡಕ್ಕೆ ಮರಳುತ್ತಿದ್ದಾರೆ.

ಭಾರತ- ಐರ್ಲೆಂಡ್ ಟಿ20 ಸರಣಿ; ತಂಡಗಳು, ವೇಳಾಪಟ್ಟಿ, ಸಮಯ, ಲೈವ್ ಸ್ಟ್ರೀಮಿಂಗ್ ಪೂರ್ಣ ವಿವರ ಇಲ್ಲಿದೆ
ಭಾರತ- ಐರ್ಲೆಂಡ್ ಟಿ20 ಸರಣಿ
Image Credit source: insidesport
Follow us on

ವೆಸ್ಟ್ ಇಂಡೀಸ್ ಪ್ರವಾಸದ ನಂತರ ಇದೀಗ ಟೀಂ ಇಂಡಿಯಾ,  ಐರ್ಲೆಂಡ್ (India vs Ireland) ಪ್ರವಾಸ ಮಾಡಿದೆ. ಈ ಪ್ರವಾಸದಲ್ಲಿ ಭಾರತ ತಂಡವು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ. ತಂಡದ ಕಮಾಂಡ್ ಜಸ್ಪ್ರೀತ್ ಬುಮ್ರಾ (Jasprit Bumrah) ಕೈಯಲ್ಲಿದ್ದು, ಬಹಳ ದಿನಗಳ ನಂತರ ಫಿಟ್ ಆಗಿರುವ ಬುಮ್ರಾ ತಂಡಕ್ಕೆ ಮರಳುತ್ತಿದ್ದಾರೆ. ಏಷ್ಯಾಕಪ್ 2023 (Asia Cup 2023) ಕ್ಕೂ ಮೊದಲು ಇದು ಬುಮ್ರಾಗೆ ಅತ್ಯಂತ ಪ್ರಮುಖ ಸರಣಿಯಾಗಿದೆ. ಇವರಲ್ಲದೇ ಹಲವು ಯುವ ಆಟಗಾರರಿಗೆ ತಮ್ಮನ್ನು ತಾವು ಸಾಬೀತುಪಡಿಸುವ ಅವಕಾಶ ಪಡೆದಿದ್ದರೆ, ಇನ್ನು ಕೆಲವು ಆಟಗಾರರು ಭಾರತದ ಜೆರ್ಸಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.

3 ಆಟಗಾರರಿಗೆ ಚೊಚ್ಚಲ ಅವಕಾಶ

ಐರಿಶ್ ಟಿ20 ಸರಣಿಗೆ ಟೀಂ ಇಂಡಿಯಾ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಇವರಲ್ಲಿ ಮೂವರು ಆಟಗಾರರು ಚೊಚ್ಚಲ ಅವಕಾಶ ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಇವರಲ್ಲಿ ಪ್ರಸಿದ್ಧ ಕೃಷ್ಣ, ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಸೇರಿದ್ದಾರೆ. ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಐಪಿಎಲ್ 2023 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಇಬ್ಬರೂ ಆಟಗಾರರು ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದರೆ, ರಿಂಕು ಸಿಂಗ್ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು ಪ್ರಸಿದ್ಧ್ ಕೃಷ್ಣ ಭಾರತದ ಪರ ಏಕದಿನ ಕ್ರಿಕೆಟ್ ಆಡಿದ್ದು, ಇದೀಗ ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯಲ್ಲಿದ್ದಾರೆ.

IND vs IRE 1st T20: ಸಂಜುಗೆ ಕೊನೆಯ ಅವಕಾಶ? ಐರ್ಲೆಂಡ್ ವಿರುದ್ಧ ಭಾರತ ಸಂಭಾವ್ಯ ತಂಡ ಹೀಗಿದೆ

ಸ್ಯಾಮ್ಸನ್‌ಗೆ ಈ ಸರಣಿ ಬಹಳ ಮುಖ್ಯ

ಮತ್ತೊಂದೆಡೆ, ಈ ಸರಣಿಯು ಸಂಜು ಸ್ಯಾಮ್ಸನ್‌ಗೆ ಬಹಳ ಮುಖ್ಯವಾಗಿದೆ. ಈ ಆಟಗಾರ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಸ್ಯಾಮ್ಸನ್ ಟೀಂ ಇಂಡಿಯಾ ಪರ ಇದುವರೆಗೆ 19 ಟಿ20 ಇನ್ನಿಂಗ್ಸ್ ಆಡಿದ್ದು, ಅವರ ಸರಾಸರಿ 19ಕ್ಕಿಂತ ಕಡಿಮೆ ಇದೆ. ಇದುವರೆಗೆ ಅವರ ಬ್ಯಾಟ್‌ನಿಂದ ಕೇವಲ ಒಂದು ಅರ್ಧಶತಕ ಮಾತ್ರ ಹೊರಹೊಮ್ಮಿದೆ. ಈಗ ಅವರು ಐರ್ಲೆಂಡ್ ವಿರುದ್ಧವೂ ಮಿಂಚದಿದ್ದರೆ, ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಗಳು ಹೆಚ್ಚಿವೆ.

ಐರ್ಲೆಂಡ್ ಸರಣಿ ವೇಳಾಪಟ್ಟಿ

ಮೊದಲ ಟಿ20 – ಆಗಸ್ಟ್ 18, ಮಲಾಹೈಡ್

2 ನೇ ಟಿ20 – 20 ಆಗಸ್ಟ್, ಮಲಾಹೈಡ್

ಮೂರನೇ ಟಿ20 – ಆಗಸ್ಟ್ 23, ಮಲಾಹೈಡ್

ಸರಣಿಯ ಬಗ್ಗೆ ಮಾಹಿತಿ

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿ ಯಾವಾಗ ಪ್ರಾರಂಭವಾಗುತ್ತದೆ?

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಯು ಆಗಸ್ಟ್ 18 ರಂದು ಪ್ರಾರಂಭವಾಗಲಿದೆ

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಯನ್ನು ಎಲ್ಲಿ ಆಡಲಾಗುತ್ತದೆ?

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಯನ್ನು ಐರ್ಲೆಂಡ್‌ನಲ್ಲಿ ಆಡಲಾಗುತ್ತದೆ

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿ ಯಾವ ಮೈದಾನದಲ್ಲಿ ನಡೆಯಲ್ಲಿದೆ?

ಭಾರತ ಮತ್ತು ಐರ್ಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಪಂದ್ಯಗಳಿಗೆ ಡಬ್ಲಿನ್‌ನ ವಿಲೇಜ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಪಂದ್ಯಗಳನ್ನು JioCinema ಅಪ್ಲಿಕೇಶನ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಕ್ರಿಕೆಟ್ ಅಭಿಮಾನಿಗಳು Sports18 ನಲ್ಲಿ ಲೈವ್ ಆಕ್ಷನ್ ಅನ್ನು ವೀಕ್ಷಿಸಬಹುದಾಗಿದೆ.

ಟೀಂ ಇಂಡಿಯಾ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಯಶಸ್ವಿ ಜೈಸ್ವಾಲ್ , ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವಿ ಬಿಷ್ಣೋಯ್, ಅರ್ಶ್​ದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್.

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ರಾಸ್ ಅಡೈರ್, ಹ್ಯಾರಿ ಟೆಕ್ಟರ್, ಗರೆಥ್ ಡೆಲಾನಿ, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಲೋರ್ಕನ್ ಟಕರ್ (ವಿಕೆಟ್ ಕೀಫರ್), ಮಾರ್ಕ್ ಅಡೈರ್, ಜೋಶುವಾ ಲಿಟಲ್, ಬ್ಯಾರಿ ಮೆಕಾರ್ಥಿ, ಥಿಯೋ ವ್ಯಾನ್‌ಕೋಮ್, ಬೆಂಜಮಿನ್ ವೈಟ್, ಕ್ರೇಗ್ ಯಂಗ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:48 am, Thu, 17 August 23