IND vs IRE: ಮೊದಲ ಪಂದ್ಯದಂತೆ ಎರಡನೇ ಪಂದ್ಯಕ್ಕೂ ಅಡ್ಡಿಯಾಗುತ್ತಾ ಮಳೆ? ಇಲ್ಲಿದೆ ಡಬ್ಲಿನ್ ಹವಾಮಾನ ವರದಿ
Dublin Weather Forecast: ಟಿ20 ಸರಣಿಯ ಎಲ್ಲಾ ಮೂರು ಪಂದ್ಯಗಳು ಡಬ್ಲಿನ್ ಬಳಿಯ ಮಲಾಹೈಡ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿದ್ದು, ಆಗಸ್ಟ್ 20 ರ ಭಾನುವಾರದಂದು ನಡೆಯುತ್ತಿರುವ ಎರಡನೇ ಟಿ20 ಪಂದ್ಯಕ್ಕೆ ಮಳೆ ಕಾಟ ಇರುವುದರಿಲ್ಲ ಎಂಬ ಶುಭ ಸುದ್ದಿ ಹೊರಬಿದ್ದಿದೆ.
ಏಷ್ಯಾಕಪ್‌ಗೂ (Asia Cup 2023) ಮುನ್ನ ಟೀಂ ಇಂಡಿಯಾ ತನ್ನ ಯುವ ಆಟಗಾರರೊಂದಿಗೆ ಐರ್ಲೆಂಡ್ (India vs Ireland) ಪ್ರವಾಸದಲ್ಲಿದ್ದು, ಉಭಯ ತಂಡಗಳ ನಡುವೆ ಟಿ20 ಸರಣಿ ಆರಂಭವಾಗಿದೆ. ಮೂರು ಪಂದ್ಯಗಳ ಈ ಸರಣಿಯೊಂದಿಗೆ ಜಸ್ಪ್ರೀತ್ ಬುಮ್ರಾ (Jasprit Bumrah) ಕೂಡ ತಂಡಕ್ಕೆ ಮರಳಿದ್ದಾರೆ. ಈ ಸರಣಿಯಲ್ಲಿ ಬುಮ್ರಾ ಟೀಂ ಇಂಡಿಯಾ (Team India) ನಾಯಕತ್ವ ವಹಿಸಿದ್ದು, ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಆದರೆ, ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದೀಗ ಎರಡನೇ ಟಿ20 ಪಂದ್ಯಕ್ಕೂ ಮಳೆಯ ಕಾಟ ಎದುರಾಗಲಿದೆಯಾ ಎಂಬ ಚಿಂತೆ ಕಾಡಲಾರಂಭಿಸಿದೆ.
ಟಿ20 ಸರಣಿಯ ಎಲ್ಲಾ ಮೂರು ಪಂದ್ಯಗಳು ಡಬ್ಲಿನ್ ಬಳಿಯ ಮಲಾಹೈಡ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿದ್ದು, ಆಗಸ್ಟ್ 20 ರ ಭಾನುವಾರದಂದು ನಡೆಯುತ್ತಿರುವ ಎರಡನೇ ಟಿ20 ಪಂದ್ಯಕ್ಕೆ ಮಳೆ ಕಾಟ ಇರುವುದರಿಲ್ಲ ಎಂಬ ಶುಭ ಸುದ್ದಿ ಹೊರಬಿದ್ದಿದೆ. ಐರ್ಲೆಂಡ್‌ನ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮಲಾಹೈಡ್ನಲ್ಲಿ ಭಾನುವಾರ ಮಳೆಯಾಗುವ ಸಾಧ್ಯತೆಯಿಲ್ಲ. ಇದರ ಪ್ರಕಾರ, ಹವಾಮಾನವು ಸಂಪೂರ್ಣವಾಗಿ ಸ್ಪಷ್ಟವಾಗಿರುತ್ತದೆ ಮತ್ತು ದಿನವಿಡೀ ಬಿಸಿಲು ಇರುತ್ತದೆ ಎಂದು ವರದಿಯಾಗಿದೆ.
IND vs IRE: ಭಾರತ- ಐರ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ಯಾವಾಗ? ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ವಿವರ
ಪಂದ್ಯದ ವೇಳೆ ಮೋಡ ಕವಿದ ವಾತಾವರಣ
ಐರ್ಲೆಂಡ್ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3 ಗಂಟೆಗೆ (ಭಾರತದಲ್ಲಿ ರಾತ್ರಿ 7.30) ಆರಂಭವಾಗಲಿದೆ. ಆದಾಗ್ಯೂ, ಸಂಜೆ 4 ರಿಂದ 5 ಗಂಟೆಯ ನಡುವೆ ಸ್ವಲ್ಪ ಸಮಯದವರೆಗೆ ಮೋಡ ಕವಿದ ವಾತಾವರಣವಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಹವಾಮಾನ ತಿರುವು ಪಡೆದರೆ ಪಂದ್ಯಕ್ಕೆ ಮಳೆ ಸ್ವಲ್ಪ ಅಡ್ಡಿಯಾಗಬಹುದು. ಹೀಗಾಗಿ ಭಾನುವಾರದಂದು ಸ್ಪಷ್ಟ ಹವಾಮಾನದ ಮುನ್ಸೂಚನೆಯ ಹೊರತಾಗಿಯೂ ಮಳೆಯಾದರೆ ಆಶ್ಚರ್ಯಪಡಬೇಕಾಗಿಲ್ಲ.
ಮಳೆಯ ನಡುವೆಯೂ ಗೆದ್ದ ಭಾರತ
ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಮಳೆ ಎಂಟ್ರಿಕೊಟ್ಟಿತ್ತು. ಹೀಗಾಗಿ ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಟೀಂ ಇಂಡಿಯಾದ ಬೌಲಿಂಗ್ ಸಮಯದಲ್ಲಿ ಮಳೆಯಾಗದ ಕಾರಣದಿಂದಾಗಿ, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಅವರ ಅದ್ಭುತ ಪ್ರದರ್ಶನ ನೋಡಲು ಸಾಧ್ಯವಾಯಿತು. ಅಂತಿಮವಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಎರಡು ರನ್‌ಗಳ ಜಯ ಸಾಧಿಸಿತು. ಇದೀಗ ಭಾನುವಾರದಂದು ನಡೆಯುವ ಎರಡನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನ ಖಾತೆಗೆ ಹಾಕಿಕೊಳ್ಳಲು ಎದುರು ನೋಡುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:54 am, Sun, 20 August 23