ಹಾರ್ದಿಕ್ ಪಾಂಡ್ಯ ಬದಲು ಈ ಆಟಗಾರನಿಗೆ ಟೀಂ ಇಂಡಿಯಾದ ಉಪನಾಯಕತ್ವ!
Team India: ಐರ್ಲೆಂಡ್ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಬುಮ್ರಾಗೆ ಟೀಂ ಇಂಡಿಯಾದ ಏಕದಿನ ತಂಡದ ಉಪನಾಯಕತ್ವ ಸಿಗಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಸ್ತುತ ಏಕದಿನ ತಂಡದ ಉಪನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಮತ್ತು ಬುಮ್ರಾ ನಡುವೆ ಈ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ.
ಏಷ್ಯಾಕಪ್ (Asia Cup 2023) ಹಾಗೂ ವಿಶ್ವಕಪ್ಗೆ (ODI World Cup 2023) ಟೀಂ ಇಂಡಿಯಾ ಭರದ ಸಿದ್ದತೆ ಮಾಡಿಕೊಳ್ಳುತ್ತಿದೆ. ಎಲ್ಲಾ ವಿಭಾಗದಲ್ಲೂ ತಂಡವನ್ನು ಸಮರ್ಥಗೊಳಿಸಲು ಪ್ರಯತ್ನಿಸುತ್ತಿದೆ. ಅದಕ್ಕೆ ಪೂರಕವಾಗಿ ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿದ್ದ ಆಟಗಾರರು ಇದೀಗ ಒಬ್ಬೋಬ್ಬರಾಗಿ ತಂಡ ಸೇರಿಕೊಳ್ಳುತ್ತಿದ್ದಾರೆ. ಇದು ತಂಡಕ್ಕೆ ಆನೆಬಲವನ್ನು ತಂದುಕೊಟ್ಟಿದೆ. ಇದರೊಂದಿಗೆ ಇದೀಗ ಹೊಸ ವಿಚಾರವೊಂದು ಮುನ್ನಲೆಗೆ ಬಂದಿದ್ದು, ತಂಡದ ಉಪನಾಯಕ ಬದಲಾಗಲಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ (PTI) ವರದಿ ಮಾಡಿದೆ. ಪ್ರಸ್ತುತ ಟೀಂ ಇಂಡಿಯಾದ (Team India) ಏಕದಿನ ತಂಡದ ನಾಯಕತ್ವ ರೋಹಿತ್ ಶರ್ಮಾ (Rohit Sharma) ಅವರ ಕೈಯಲ್ಲಿದ್ದು, ಹಾರ್ದಿಕ್ ಪಾಂಡ್ಯ (Hardik Pandya) ಉಪನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಕೇಳಿಬರುತ್ತಿರುವ ಹೊಸ ಸುದ್ದಿಯ ಪ್ರಕಾರ, ಏಷ್ಯಾಕಪ್ ಹಾಗೂ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಉಪನಾಯಕನಾಗಿ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಕಾಣಿಸಿಕೊಳ್ಳಬಹುದು ಎಂದು ಪಿಟಿಐ ವರದಿ ಮಾಡಿದೆ.
ವರ್ಷದ ಬಳಿಕ ಟೀಂ ಇಂಡಿಯಾಗೆ ವಾಪಸಾದ ಬುಮ್ರಾಗೆ ಐರ್ಲೆಂಡ್ ಪ್ರವಾಸದಲ್ಲಿ ತಂಡದಲ್ಲಿ ಅವಕಾಶ ನೀಡಿದ್ದಲ್ಲದೆ ನಾಯಕತ್ವವನ್ನೂ ಹಸ್ತಾಂತರಿಸಲಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಬುಮ್ರಾ ಅವರ ಬಯಕೆ ಎಂದು ಊಹಿಸಲಾಗಿದೆ. ವರದಿ ಪ್ರಕಾರ ಬುಮ್ರಾ ಅವರೇ ನಾಯಕತ್ವದಲ್ಲಿ ಆಸಕ್ತಿ ಹೊಂದಿದ್ದು, ಈ ಕಾರಣದಿಂದಾಗಿ ಅವರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
IND vs IRE: 2ನೇ ಟಿ20 ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ? ಇಲ್ಲಿದೆ ಭಾರತ ಸಂಭಾವ್ಯ ತಂಡ
ಇಲ್ಲದಿದ್ದರೆ ರುತುರಾಜ್ ಗಾಯಕ್ವಾಡ್ ಅವರನ್ನು ಐರ್ಲೆಂಡ್ ಪ್ರವಾಸಕ್ಕೆ ತಂಡದ ನಾಯಕನನ್ನಾಗಿ ಮಾಡಿ, ಇದರೊಂದಿಗೆ ಏಷ್ಯನ್ ಗೇಮ್ಸ್‌ಗೆ ರುತುರಾಜ್ರನ್ನು ಪೂರ್ಣ ಸಿದ್ದಗೊಳಿಸುವುದು ಮಂಡಳಿಯ ಉದ್ದೇಶವಾಗಿತ್ತು. ಆದರೆ ತಂಡವನ್ನು ಮುನ್ನಡೆಸುವ ಇಚ್ಚೆಯನ್ನು ಬುಮ್ರಾ ವ್ಯಕ್ತಪಡಿಸಿದ್ದರಿಂದ ಅವರಿಗೆ ಈ ಜವಬ್ದಾರಿಯನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ಬುಮ್ರಾ ಹೊಸ ಉಪನಾಯಕ?
ಇದೀಗ ಕೇಳಿಬರುತ್ತಿರುವ ಹೊಸ ವಿಚಾರದ ಪ್ರಕಾರ, ಐರ್ಲೆಂಡ್ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಬುಮ್ರಾಗೆ ಟೀಂ ಇಂಡಿಯಾದ ಏಕದಿನ ತಂಡದ ಉಪನಾಯಕತ್ವ ಸಿಗಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಸ್ತುತ ಏಕದಿನ ತಂಡದ ಉಪನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಮತ್ತು ಬುಮ್ರಾ ನಡುವೆ ಈ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಇದೀಗ ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ತನ್ನ ವರದಿಯಲ್ಲಿ ಹೇಳಿರುವಂತೆ ಬುಮ್ರಾ ಹಾಗೂ ಪಾಂಡ್ಯ ಪೈಪೋಟಿಯಲ್ಲಿ ಜಸ್ಪ್ರೀತ್ ಮೇಲುಗೈ ಸಾಧಿಸುವುದು ಖಚಿತ ಎಂದು ವರದಿಯಾಗಿದ್ದು, ಏಷ್ಯಾಕಪ್ ಮತ್ತು ವಿಶ್ವಕಪ್‌ನಲ್ಲಿ ಬುಮ್ರಾ ಅವರನ್ನು ಟೀಂ ಇಂಡಿಯಾದ ಉಪನಾಯಕನನ್ನಾಗಿ ಮಾಡಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಬುಮ್ರಾ ನಾಯಕತ್ವದ ಪಾತ್ರದಲ್ಲಿ ಹಿರಿಯರಾಗಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ವಾಸ್ತವವಾಗಿ, ಬುಮ್ರಾ ಅವರು 2022 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಉಪನಾಯಕರಾಗಿದ್ದರು. ಇದರ ನಂತರ, ಜುಲೈ 2022 ರಲ್ಲಿ, ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತಂಡದ ನಾಯಕತ್ವವನ್ನೂ ವಹಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅವರು ಏಷ್ಯಾಕಪ್‌ನಲ್ಲಿ ಈ ಅವಕಾಶ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಹಾರ್ದಿಕ್ಗೆ ಎಚ್ಚರಿಕೆಯ ಗಂಟೆ
ಇದೇ ವೇಳೆ ಏಕದಿನದಲ್ಲಿ ಹಾರ್ದಿಕ್ ಪಾಂಡ್ಯ ಅವರಿಂದ ಈ ಜವಾಬ್ದಾರಿಯನ್ನು ಕಸಿದುಕೊಳ್ಳುವುದಲ್ಲದೆ, ವಿಶ್ವಕಪ್ ನಂತರ ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ರೋಹಿತ್ ನಂತರ ಬುಮ್ರಾರನ್ನು ಏಕದಿನ ತಂಡದ ನಾಯಕನನ್ನಾಗಿ ನೇಮಿಸುವ ಸಾಧ್ಯತೆಗಳಿವೆ. ಹಾರ್ದಿಕ್ ಪ್ರಸ್ತುತ ಟಿ20 ತಂಡದ ನಾಯಕರಾಗಿದ್ದು, ಈ ಮಾದರಿಯಲ್ಲಿ ಅವರು ಉತ್ತಮ ಆರಂಭ ಪಡೆದುಕೊಂಡಿದ್ದರು. ಆದಾಗ್ಯೂ, ದುರ್ಬಲ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿನ ಸೋಲಿನಲ್ಲಿ ಅವರ ನಾಯಕತ್ವವೂ ಪ್ರಶ್ನಾರ್ಹವಾಗಿದ್ದು, ಅದರಲ್ಲಿ ಅವರ ಕೆಲವು ನಿರ್ಧಾರಗಳು ಎಲ್ಲರನ್ನು ಆಶ್ಚರ್ಯಗೊಳಿಸಿದ್ದವು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ