AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಜೈಪುರದಲ್ಲಿ ಮಿತಿಮೀರಿದ ವಾಯು ಮಾಲಿನ್ಯ; ಮೊದಲ ಟಿ20ಗಾಗಿ ಪಿಂಕ್ ಸಿಟಿ ತಲುಪಿದ ಕಿವೀಸ್ ಪಡೆ

IND vs NZ: ಜೈಪುರದ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, ಕಳೆದ ವಾರದಿಂದ ನಗರದ ಗಾಳಿಯಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಿದೆ. ಭಾನುವಾರ, ಜೈಪುರದ ಗಾಳಿಯಲ್ಲಿ ಮಲಿನತೆ ಅತ್ಯಂತ ಕಲುಷಿತಗೊಂಡಿರುವುದು ವರದಿಯಾಗಿತ್ತು.

IND vs NZ: ಜೈಪುರದಲ್ಲಿ ಮಿತಿಮೀರಿದ ವಾಯು ಮಾಲಿನ್ಯ; ಮೊದಲ ಟಿ20ಗಾಗಿ ಪಿಂಕ್ ಸಿಟಿ ತಲುಪಿದ ಕಿವೀಸ್ ಪಡೆ
ಪಿಂಕ್ ಸಿಟಿ ತಲುಪಿದ ಕಿವೀಸ್ ಪಡೆ
TV9 Web
| Edited By: |

Updated on: Nov 15, 2021 | 6:11 PM

Share

ದೆಹಲಿಯಲ್ಲಿ ಪ್ರಾಣವಾಯು ಈಗ ಸಾಕಷ್ಟು ಕಲುಷಿತಗೊಂಡಿದೆ. ಇದರ ಪ್ರಭಾವ ಈಗ ಅಕ್ಕಪಕ್ಕದ ನಗರಗಳಲ್ಲೂ ತನ್ನ ಪರಿಣಾಮವನ್ನು ತೋರಿಸಲಾರಂಭಿಸಿದೆ. ಪಿಂಕ್ ಸಿಟಿ ಜೈಪುರ ಕೂಡ ಇದಕ್ಕೆ ಹೊರತಾಗಿಲ್ಲ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಸರಣಿಗಾಗಿ ನ್ಯೂಜಿಲೆಂಡ್ ತಂಡ ಇಂದು ದುಬೈನಿಂದ ಜೈಪುರ ತಲುಪಲಿದೆ. ಆದರೆ ಅದಕ್ಕೂ ಮುನ್ನ ಜೈಪುರದ ಹವಾ ಹದಗೆಟ್ಟಿದೆ. ಅಲ್ಲಿನ ಗಾಳಿಯಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಿದ್ದು ಪಂದ್ಯದ ಆರಂಭಕ್ಕೆ ದೊಡ್ಡ ಹಿನ್ನಡೆ ನೀಡಿದೆ.

ಜೈಪುರದ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, ಕಳೆದ ವಾರದಿಂದ ನಗರದ ಗಾಳಿಯಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಿದೆ. ಭಾನುವಾರ, ಜೈಪುರದ ಗಾಳಿಯಲ್ಲಿ ಮಲಿನತೆ ಅತ್ಯಂತ ಕಲುಷಿತಗೊಂಡಿರುವುದು ವರದಿಯಾಗಿತ್ತು. ಇದು ದೀಪಾವಳಿಯ ನಂತರ ಎರಡನೇ ಕಲುಷಿತ ಮಟ್ಟವಾಗಿದೆ. ದೀಪಾವಳಿಯ ದಿನದಂದು ಜೈಪುರದ ಗಾಳಿಯ AQI 364 ಆಗಿತ್ತು.

ನ್ಯೂಜಿಲೆಂಡ್ ಇಂದು ಜೈಪುರ ತಲುಪಲಿದೆ ಇದೀಗ ಈ ವಾತಾವರಣದಲ್ಲಿ ನ್ಯೂಜಿಲೆಂಡ್ ತಂಡ ಜೈಪುರ ತಲುಪುತ್ತಿದೆ. ಅದೇ ಸಮಯದಲ್ಲಿ, ಭಾರತ ತಂಡವು ಈಗಾಗಲೇ ಅಲ್ಲಿ ಹಾಜರಿದೆ. ನ್ಯೂಜಿಲೆಂಡ್ 2021 ರ T20 ವಿಶ್ವಕಪ್‌ನ ಫೈನಲ್‌ಗೆ ತಲುಪಿತ್ತು, ಇದರಿಂದಾಗಿ ಜೈಪುರ ತಲುಪಲು ವಿಳಂಬವಾಯಿತು. ನವೆಂಬರ್ 14 ರಂದು ಐಸಿಸಿ ಟೂರ್ನಿಯ ಫೈನಲ್ ಪಂದ್ಯವನ್ನು ಆಡಿದ ಕಿವೀಸ್ ತಂಡ ಇಂದು ಭಾರತದ ಗುಲಾಬಿ ನಗರವನ್ನು ತಲುಪಲಿದೆ. ಕಿವೀ ತಂಡವು ನವೆಂಬರ್ 17 ರಂದು ಭಾರತ ವಿರುದ್ಧ ಮೊದಲ ಟಿ20 ಆಡಬೇಕಾಗಿದೆ.

ಜೈಪುರದಲ್ಲಿ 8 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಜೈಪುರದಲ್ಲಿ ಭಾರತ-ನ್ಯೂಜಿಲೆಂಡ್ ಟಿ20 ಪಂದ್ಯದ ಮೂಲಕ 8 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಲಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಇದು ಭಾರತದ ಮೊದಲ ಟಿ20 ಪಂದ್ಯವಾಗಿದೆ. ಇದಕ್ಕೂ ಮೊದಲು ಅವರು ಇಲ್ಲಿ 13 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ 12 ODI ಮತ್ತು 1 ಟೆಸ್ಟ್ ಸೇರಿದೆ. ಭಾರತ 12 ಏಕದಿನ ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದೆ. ಆದರೆ ಇಲ್ಲಿ ಆಡಿದ ಏಕೈಕ ಟೆಸ್ಟ್ ಪಂದ್ಯ ಡ್ರಾ ಆಗಿತ್ತು.

ಭಾರತದ ನ್ಯೂಜಿಲೆಂಡ್ ಪ್ರವಾಸದ ವೇಳಾಪಟ್ಟಿ ಭಾರತ ಪ್ರವಾಸದಲ್ಲಿ ನ್ಯೂಜಿಲೆಂಡ್ 3 ಟಿ20 ಸರಣಿಗಳನ್ನು ಆಡಬೇಕಿದೆ. ಮೊದಲ ಟಿ20 ನವೆಂಬರ್ 17 ರಂದು ಜೈಪುರದಲ್ಲಿ ನಡೆದ ನಂತರ ಎರಡನೇ ಪಂದ್ಯ ನವೆಂಬರ್ 19 ರಂದು ರಾಂಚಿಯಲ್ಲಿ ನಡೆಯಲಿದೆ. ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಟಿ20 ಸರಣಿ ಮುಗಿದ ಬಳಿಕ ಕಿವೀಸ್ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯನ್ನೂ ಆಡಬೇಕಿದೆ. ಮೊದಲ ಟೆಸ್ಟ್ ಪಂದ್ಯ ನವೆಂಬರ್ 25 ರಿಂದ ಕಾನ್ಪುರದಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 3 ರಿಂದ ಮುಂಬೈನಲ್ಲಿ ನಡೆಯಲಿದೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ