IND vs NZ: ಮತ್ತೊಮ್ಮೆ ‘ನರ್ವಸ್ 90’ಗೆ ಬಲಿಯಾದ ರಿಷಬ್ ಪಂತ್; 99 ರನ್​ಗೆ ಔಟ್

Rishabh Pant: ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೇವಲ 1 ರನ್​ನಿಂದ ಶತಕ ವಂಚಿತರಾಗಿದ್ದಾರೆ. 99 ರನ್​ಗಳಿಸಿ ಆಡುತ್ತಿದ್ದ ಪಂತ್ ಕಿವೀಸ್ ವೇಗಿ ವಿಲಿಯಂ ಓ'ರೂರ್ಕ್ ಅವರ ಎಸೆತವನ್ನು ಡಿಫೆಂಡ್ ಮಾಡುವ ಯತ್ನದಲ್ಲಿ ಬೌಲ್ಡ್ ಆದರು.

IND vs NZ: ಮತ್ತೊಮ್ಮೆ ‘ನರ್ವಸ್ 90’ಗೆ ಬಲಿಯಾದ ರಿಷಬ್ ಪಂತ್; 99 ರನ್​ಗೆ ಔಟ್
ರಿಷಬ್ ಪಂತ್
Follow us
| Updated By: ಪೃಥ್ವಿಶಂಕರ

Updated on:Oct 19, 2024 | 3:55 PM

ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೇವಲ 1 ರನ್​ನಿಂದ ಶತಕ ವಂಚಿತರಾಗಿದ್ದಾರೆ. 99 ರನ್​ಗಳಿಸಿ ಆಡುತ್ತಿದ್ದ ಪಂತ್, ಕಿವೀಸ್ ವೇಗಿ ವಿಲಿಯಂ ಓ’ರೂರ್ಕ್ ಅವರ ಎಸೆತವನ್ನು ಡಿಫೆಂಡ್ ಮಾಡುವ ಯತ್ನದಲ್ಲಿ ಬೌಲ್ಡ್ ಆದರು. ಮೊದಲು ಚೆಂಡು ಪಂತ್ ಅವರ ಬ್ಯಾಟ್​ನ ಅಂಚಿಗೆ ತಾಗಿ ಆ ಬಳಿಕ ವಿಕೆಟ್​ಗೆ ಬಡಿಯಿತು. ಈ ಮೂಲಕ ಪಂತ್ ಕೇವಲ ಒಂದೇ ಒಂದು ರನ್​ನಿಂದ ಸ್ಮರಣೀಯ ಶತಕವನ್ನು ಮಿಸ್ ಮಾಡಿಕೊಂಡರು. ಪಂತ್ ಔಟಾಗುತ್ತಿದ್ದಂತೆ ಇಡೀ ಕ್ರೀಡಾಂಗಣದಲ್ಲಿ ಮೌನ ಆವರಿಸಿತು. ನಾನ್ ಸ್ಟ್ರೈಕ್​ನಲ್ಲಿದ್ದ ಕೆಎಲ್ ರಾಹುಲ್ ಕೂಡ ಈ ಆಘಾತವನ್ನು ನಂಬಲು ಸಾಧ್ಯವಾಗದೆ ಹಾಗೆ ಕೆಳಗೆ ಕುಳಿತುಬಿಟ್ಟರು. ಡಗೌಟ್​ನಲ್ಲಿ ಕುಳಿತಿದ್ದ ತಂಡದ ಸಹ ಆಟಗಾರರು ಕೆಲ ಸಮಯ ಶಾಕ್​ಗೆ ಒಳಗಾಗಿ ಕೆಲವರು ಬಾಯ್ ಮೇಲೆ ಕೈ ಇಟ್ಟುಕೊಂಡರೆ, ಇನ್ನು ಕೆವಲರು ಹತಾಶೆಯಿಂದ ತಲೆ ತಗ್ಗಿಸಿ ಕುಳಿತರು. ಅಂತಿಮವಾಗಿ ಪಂತ್ ಭಾರದ ನೋವಿನಿಂದಲೇ ಮೈದಾನದಿಂದ ಪೆವಿಲಿಯನ್​ತ್ತ ಹೆಜ್ಜೆ ಹಾಕಿದರು.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಅವರ ವೃತ್ತಿಜೀವನದುದ್ದಕ್ಕೂ ಕಾಡಿದ್ದ ನರ್ವಸ್ 90 ಎಂಬ ಭೂತ ಇದೀಗ ರಿಷಬ್ ಪಂತ್ ಅವರ ಹೆಗಲೆರಿದೆ. ಸಚಿನ್ ಅವರು ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀನವದಲ್ಲಿ ಒಟ್ಟು 10 ಬಾರಿ ನರ್ವಸ್ 90ಗೆ ಬಲಿಯಾಗಿದ್ದರೆ, ರಿಷಬ್ ಪಂತ್ ಈಗಾಗಲೇ 7 ಬಾರಿ ಶತಕದಂಚಿನಲ್ಲಿ ಎಡವಿದ್ದಾರೆ. ಇದಕ್ಕೂ ಮುನ್ನ ಪಂತ್ 97 ರನ್, 96 ರನ್, 93 ರನ್, 92 ರನ್, 92 ರನ್ ಮತ್ತು 91 ರನ್​ಗಳಿಗೆ ಔಟಾಗಿದ್ದರು.

12 ವರ್ಷಗಳ ನಂತರ ಇತಿಹಾಸ ಪುನಾರವರ್ತನೆ

ರಿಷಬ್ ಪಂತ್ ಟೆಸ್ಟ್ ವೃತ್ತಿಜೀವನದಲ್ಲಿ 99 ರನ್ ಗಳಿಸಿ ಔಟಾಗಿರುವುದು ಇದೇ ಮೊದಲು. ಅದೇ ಸಮಯದಲ್ಲಿ, ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 12 ವರ್ಷಗಳ ನಂತರ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಒಬ್ಬ 99 ರನ್ ಗಳಿಸಿ ಔಟಾಗಿರುವ ಘಟನೆ ನಡೆದಿದೆ. ಇದಕ್ಕೂ ಮುನ್ನ 2012 ರಲ್ಲಿ ಎಂಎಸ್ ಧೋನಿ 99 ರನ್ ಗಳಿಸಿ ಔಟಾಗಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಧೋನಿ 99 ರನ್ ಗಳಿಸಿ ರನೌಟ್ ಆಗಿದ್ದರು. ಈಗ 12 ವರ್ಷಗಳ ನಂತರ ಪಂತ್ ವಿಷಯದಲ್ಲಿ ಇದು ಸಂಭವಿಸಿದೆ. ಇದಲ್ಲದೇ ಟೆಸ್ಟ್‌ನಲ್ಲಿ 99 ರನ್‌ಗಳಿಗೆ ಔಟಾದ ಭಾರತದ 5ನೇ ಬ್ಯಾಟ್ಸ್‌ಮನ್ ಎಂಬ ಬೇಡದ ದಾಖಲೆ ರಿಷಬ್ ಪಂತ್ ಪಾಲಾಗಿದೆ. ಪಂತ್ ಮತ್ತು ಧೋನಿ ಹೊರತುಪಡಿಸಿ, ಮುರಳಿ ವಿಜಯ್, ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಕೂಡ 99 ರನ್​ಗೆ ಔಟಾಗಿ ಕೇವಲ 1 ರನ್​ನಿಂದ ಶತಕವಂಚಿತರಾಗಿದ್ದರು.

ಭಾರತಕ್ಕೆ 82 ರನ್ ಮುನ್ನಡೆ

ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಕೇವಲ 46 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರೋಹಿತ್ ಪಡೆ, ನಾಲ್ಕನೇ ದಿನದ ಚಹಾ ವಿರಾಮದ ವೇಳೆಗೆ 6 ವಿಕೆಟ್ ಕಳೆದುಕೊಂಡು 438 ರನ್ ಗಳಿಸಿ 82 ರನ್ ಮುನ್ನಡೆ ಸಾಧಿಸಿದೆ. ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾದರೆ ಪಂದ್ಯವನ್ನೂ ಗೆಲ್ಲಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Sat, 19 October 24

ಮತ್ತೊಂದು ಭೂಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ, ವಿವರ ನೀಡಿದ ಗಂಗರಾಜು
ಮತ್ತೊಂದು ಭೂಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ, ವಿವರ ನೀಡಿದ ಗಂಗರಾಜು
ತಪ್ಪು ನಡೆಯಿತೇ? ಕಟಕಟೆಯಲ್ಲಿ ಬಿಗ್​ಬಾಸ್: ವಿಚಾರಣೆ ನಡೆಸಲಿರುವ ಸುದೀಪ್
ತಪ್ಪು ನಡೆಯಿತೇ? ಕಟಕಟೆಯಲ್ಲಿ ಬಿಗ್​ಬಾಸ್: ವಿಚಾರಣೆ ನಡೆಸಲಿರುವ ಸುದೀಪ್
ಕಾರ್ಯಕರ್ತನಾಗಿ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿಖಿಲ್
ಕಾರ್ಯಕರ್ತನಾಗಿ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿಖಿಲ್
ಅರಚುತ್ತಾ, ಕಿರುಚುತ್ತಾ, ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್
ಅರಚುತ್ತಾ, ಕಿರುಚುತ್ತಾ, ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರು!
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರು!
ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ
ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ
ಇಡಿ ದಾಳಿ: ಮೈಸೂರು ಮುಡಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್
ಇಡಿ ದಾಳಿ: ಮೈಸೂರು ಮುಡಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್