IND vs NZ: ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮುಂದಿನ ಪಂದ್ಯವೂ ಸೋತರೆ ಏನಾಗಲಿದೆ?: ಇಲ್ಲಿದೆ ಮಾಹಿತಿ

| Updated By: Vinay Bhat

Updated on: Oct 26, 2021 | 12:01 PM

India's next match in T20 World Cup: ಐಸಿಸಿ ನಿಯಮದ ಪ್ರಕಾರ ಟಿ20 ವಿಶ್ವಕಪ್​ನ ಸೂಪರ್ 12 ನಲ್ಲಿರುವ ಪ್ರತಿ ಗ್ರೂಪ್​ನಿಂದ 2 ತಂಡಗಳು ಮಾತ್ರ ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತಿದೆ. ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಸೋತರೆ ಇದು ಕೊಂಚ ಕಷ್ಟ ಎಂದು ಹೇಳಬಹುದು.

IND vs NZ: ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮುಂದಿನ ಪಂದ್ಯವೂ ಸೋತರೆ ಏನಾಗಲಿದೆ?: ಇಲ್ಲಿದೆ ಮಾಹಿತಿ
India vs New Zealand T20 World Cup
Follow us on

ಟಿ20 ವಿಶ್ವಕಪ್ ಟೂರ್ನಿಯ (T20 World Cup) ಚೊಚ್ಚಲ ಪಂದ್ಯದಲ್ಲಿ ಪಾಕಿಸ್ತಾನ (India vs Pakistan) ವಿರುದ್ಧ 10 ವಿಕೆಟ್​ಗಳ ಸೋಲು ಕಂಡಿರುವ ಟೀಮ್ ಇಂಡಿಯಾ (Team India) ತನ್ನ ಮುಂದಿನ ಪಂದ್ಯಕ್ಕಾಗಿ ಆರು ದಿನಗಳ ಬ್ರೇಕ್​ನಲ್ಲಿದೆ. ಸೋಲಿನೊಂದಿಗೆ ಅಭಿಯಾನ ಆರಂಭಸಿರುವ ವಿರಾಟ್ ಕೊಹ್ಲಿ (Virat Kohli) ಪಡೆ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 31 ರಂದು ನ್ಯೂಜಿಲೆಂಡ್ (India vs New Zealand) ವಿರುದ್ಧ ಆಡಲಿದೆ. ಭಾರತಕ್ಕೆ ಈ ಪಂದ್ಯ ಬಹುಮುಖ್ಯವಾಗಿದ್ದು, ಎಲ್ಲಾದರು ಸೋತರೆ ಟಿ20 ವಿಶ್ವಕಪ್​ನ ಮುಂದಿನ ಹಾದಿ ಕಬ್ಬಿಣದ ಕಡಲೆಯಂತಾಗಲಿದೆ. ಸೆಮಿ ಫೈನಲ್​ಗೆ ಕ್ವಾಲಿಫೈಯಾಗಲು ತುಂಬಾನೆ ಕಷ್ಟ ಅನುಭವಿಸಬೇಕಾಗುತ್ತಿದೆ. ಅಲ್ಲದೆ ಇತರೆ ತಂಡಗಳ ಫಲಿತಾಂಶದ ಮೇಲೆ ಭಾರತದ ಭವಿಷ್ಯ ನಿರ್ಧಾರವಾಗುತ್ತದೆ. ಹೀಗೆ ಮೊದಲ ಪಂದ್ಯ ಸೋತ ಭಾರತಕ್ಕೆ (India) ಮುಂದಿನ ದಿನಗಳಲ್ಲಿ ಸಾಲು ಸಾಲು ಸವಾಲೆದುರಾಗಲಿದೆ.

ಐಸಿಸಿ ನಿಯಮದ ಪ್ರಕಾರ ಸೂಪರ್ 12 ನಲ್ಲಿರುವ ಪ್ರತಿ ಗ್ರೂಪ್​ನಿಂದ ಕೇವಲ ಎರಡು ತಂಡಗಳು ಮಾತ್ರ ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತಿದೆ. ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಸೋತರೆ ಇದು ಕೊಂಚ ಕಷ್ಟ ಎಂದು ಹೇಳಬಹುದು. ಅಲ್ಲದೆ ಮಂಗಳವಾರ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಪಂದ್ಯವಿದೆ. ಇಲ್ಲಿ ಪಾಕ್ ಕೇನ್ ಪಡೆಗೆ ಸೋಲುಣಿಸಿದರೆ, ನಂತರ ಭಾರತ ಮುಂದಿನ ಪಂದ್ಯದಲ್ಲಿ ಗೆದ್ದರೆ ಕೊಹ್ಲಿ ಪಡೆಯ ಹಾದಿ ಸುಗಮವಾಗಲಿದೆ.

ಭಾರತ ತನ್ನ ಮುಂದಿನ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ. ಇದೇ ಸ್ಟೇಡಿಯಂನಲ್ಲಿ ಕೊಹ್ಲಿ ಪಡೆ ಪಾಕ್ ವಿರುದ್ಧ ಸೋತಿರುವುದು. ಹೀಗಾಗಿ ಪಿಚ್ ಬಗ್ಗೆ, ಅಲ್ಲಿನ ವಾತಾವರಣದ ಬಗ್ಗೆ ಚೆನ್ನಾಗಿ ಅರಿತಿರುವ ಟೀಮ್ ಇಂಡಿಯಾ ಸದ್ಯದ ಬಿಡುವಿನ ಸಮಯದಲ್ಲಿ ಗೇಮ್ ಪ್ಲಾನ್ ರೂಪಿಸಬೇಕಿದೆ.

ಭಾರತಕ್ಕಿದು ಸೇಡಿನ ಪಂದ್ಯಕೂಡ ಆಗಿದ್ದು, ಐಸಿಸಿ 2019 ಏಕದಿನ ವಿಶ್ವಕಪ್​ನ ಸೆಮಿ ಫೈನಲ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್​ನಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ, ಕೇನ್ ವಿಲಿಯಮ್ಸನ್, ಟಿಮ್ ಸೌಥೀ ಮತ್ತು ಟ್ರೆಂಟ್ ಬೌಲ್ಟ್ ಸ್ಟಾರ್ ಆಟಗಾರರಾಗಿದ್ದಾರೆ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ.

ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್.

ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೇಮೀಸನ್, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಟಿಫರ್ಟ್ (ವಿಕೆಟ್ ಕೀಪರ್).

ಮೀಸಲು ಆಟಗಾರ: ಆಯಡಮ್ ಮಿಲ್ನೆ.

Hardik Pandya: ವಿರಾಟ್ ಪಡೆಗೆ ಬಂತು ಆನೆಬಲ: ಎರಡನೇ ಪಂದ್ಯಕ್ಕೂ ಮುನ್ನ ಸಿಕ್ತು ಭರ್ಜರಿ ಗುಡ್ ನ್ಯೂಸ್

PAK vs NZ, T20 World Cup: ಪಾಕಿಸ್ತಾನಕ್ಕೆ ಸೇಡಿನ ಪಂದ್ಯ: ಬಾಬರ್-ಕೇನ್ ನಡುವಣ ಕಾದಾಟದ ಮೇಲೆ ಎಲ್ಲರ ಕಣ್ಣು

(IND vs NZ What happens if Team India loose upcoming match against New Zealand in T20 World Cup)